ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನದಂದು ಎಡಗೈ ತೋರುಬೆರಳಿಗೆ ಏಕೆ ಹಾಕುತ್ತಾರೆ ಶಾಯಿ?

|
Google Oneindia Kannada News

'ಇಂದು ಮತದಾನ ಮಾಡಿದೆ, ಈಗ ನನ್ನ ಮೈಮೇಲೊಂದು ಕಪ್ಪು ಕಲೆ' ಇದು ಯಾವುದೋ ಅಜ್ಞಾತ ಕವಿಯೊಬ್ಬನ ಸಾಲು. ಚಿಕ್ಕ ಸಾಲಾದರೂ ಅರ್ಥವತ್ತಾದದ್ದೆ. ಆದರೆ ಇಲ್ಲಿ ಒಳಾರ್ಥ ವಿಶ್ಲೇಷಣೆ ಮಾಡುವುದು ಬೇಡ. ಮತದಾನದ ದಿನ ಬೆರಳಿಗೆ ಹಾಕುವ ಶಾಯಿಯ ಬಗ್ಗೆ ಮಾತ್ರವೇ ಚರ್ಚೆ ಮಾಡೋಣ.

ಮತದಾನ ಮಾಡಿದವರದ್ದು ಈಗ ಹೊಸ ಪ್ಯಾಷನ್ ಎಂದರೆ ಶಾಯಿ ಹಾಕಿದ ಬೆರಳು ಮುಂದೆ ಮಾಡಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಲೈಕ್ಸ್‌ಗಳಿಗಾಗಿ ಕಾಯುವುದು. ಆದರೆ ಏಕೆ ಮತದಾನದ ಮಸಿಯನ್ನು ಎಡಗೈ ತೋರುಬೆರಳಿಗೇ ಹಾಕುತ್ತಾರೆ ಯೋಚಿಸಿದ್ದೀರಾ?. ಇಲ್ಲಿದೆ ನೋಡಿ ಕಾರಣ.

Why vote ink applied to the left index finger

* ಎಡಗೈ ತೋರು ಬೆರಳು ಬೇಗ ಗಮನ ಸೆಳೆಯುತ್ತದಂತೆ ಅದಕ್ಕೆಂದು ಸಾಮಾನ್ಯವಾಗಿ ಎಡಗೈ ತೋರುಬೆರಳಿಗೆ ಮತದಾನದ ಇಂಕ್ ಹಾಕುತ್ತಾರೆ.

2018 ಚುನಾವಣೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಪಟ್ಟಿ2018 ಚುನಾವಣೆ ಕಣದಲ್ಲಿರುವ ರಾಜಕೀಯ ಪಕ್ಷಗಳ ಪಟ್ಟಿ

* ನಮ್ಮ ದೇಶದಲ್ಲಿ ಎಡಚರಿಗಿಂತಲೂ ಬಲಗೈ ಬಳಸುವವರ ಸಂಖ್ಯೆಯೇ ಹೆಚ್ಚು, ಬಲಗೈಯನ್ನು ಕೆಲಗಳಳಿಗೆ ಬಳಸುವಷ್ಟು ಎಡಗೈಯನ್ನು ಬಳಸುವುದಿಲ್ಲ, ಹಾಗಾಗಿ ಎಡಗೈಗೆ ಹಾಕಿದ ಇಂಕು ಬೇಗ ಅಳಿಸುವುದಿಲ್ಲ ಹಾಗಾಗಿ ಎಡಗೈಗೆ ಇಂಕು ಹಾಕುವುದು ರೂಢಿ.

* ಯಾವುದಾದರೂ ವ್ಯಕ್ತಿಗೆ ಎಡಗೈ ತೋರುಬೆರಳು ಇಲ್ಲದಿದ್ದರೆ ಆತನ ಎಡಗೈನ ಇತರ ಯಾವುದಾದರೂ ಒಂದು ಬೆರಳಿಗೆ ಶಾಯಿ ಹಾಕುತ್ತಾರೆ, ಎಡಗೈ ಇಲ್ಲದೇ ಹೋದಲ್ಲಿ ಬಲಗೈನ ತೋರುಬೆರಳಿಗೆ ಶಾಯಿ ಹಾಕುತ್ತಾರೆ. ಎರಡೂ ಕೈ ಇಲ್ಲದ ವ್ಯಕ್ತಿಗೆ ಕಾಲಿನ ಬೆರಳಿಗೆ ಇಂಕು ಹಾಕುತ್ತಾರೆ.

ಮತದಾರರ ಗುರುತಿನ ಚೀಟಿ ಬದಲು ಪರಿಗಣಿಸುವ 12 ದಾಖಲೆಗಳು?ಮತದಾರರ ಗುರುತಿನ ಚೀಟಿ ಬದಲು ಪರಿಗಣಿಸುವ 12 ದಾಖಲೆಗಳು?

* ಚುನಾವಣೆಯಲ್ಲಿ ಈಗಾಗಲೇ ಮತ ಹಾಕಿ ಮತ್ತೆ ಉಪಚುನಾವಣೆಯಲ್ಲಿ ಅಥವಾ ಇನ್ನಾವುದೇ ಚುನಾವಣೆಯಲ್ಲಿ ಮತ ಹಾಕಬೇಕಾಗಿ ಬಂದಾಗ ಎಡಗೈಯ ಮಧ್ಯದ ಬೆರಳಿಗೆ ಇಂಕು ಹಾಕುತ್ತಾರೆ.

* ಮಾರ್ಕರ್‌ನಿಂದ ಮಾರ್ಕ್‌ ಮಾಡುವ, ಬೆರಳನ್ನು ಇಂಕಿನ ಬಾಟಲಿಯಲ್ಲಿ ಅದ್ದುವ ಪದ್ಧತಿಯೂ ಮುಂಚೆ ಇತ್ತು ಆದರೆ ಈಗ ಬೆರಳಿಗೆ ಇಂಕನ್ನು ಬಳಿಯುವ ಪದ್ಧತಿ ಚಾಲ್ತಿಯಲ್ಲಿದೆ.

ಮತದಾನ ದಿನದ ಒನ್ಇಂಡಿಯಾದಲ್ಲಿ ನೇರ ಅಪ್ಡೇಟ್ಸ್ ಪಡೆಯಿರಿಮತದಾನ ದಿನದ ಒನ್ಇಂಡಿಯಾದಲ್ಲಿ ನೇರ ಅಪ್ಡೇಟ್ಸ್ ಪಡೆಯಿರಿ

ಇಂಕು ತಯಾರಿಸುವುದು ಮೈಸೂರಿನಲ್ಲಿ
ಮತದಾನದ ದಿನ ಬೆರಳಿಗೆ ಹಚ್ಚುವ ಶಾಯಿ ತಯಾರಿಸುವುದು ಇಡೀ ಭಾರತದಲ್ಲಿ ಕರ್ನಾಟಕದ ಮೈಸೂರಿನಲ್ಲಿ ಮಾತ್ರ. ಹೌದು, ಮೈಸೂರಿನ 'ಮೈಸೂರು ಪೇಂಟ್ಸ್‌ ಆಂಡ್ ವಾರ್ನಿಷ್ ಲಿಮಿಟೆಡ್‌' ಸಂಸ್ಥೆಯು ಮಾತ್ರವೇ ಈ ಶಾಯಿಯನ್ನು ಉತ್ಪಾದಿಸುತ್ತದೆ. ದೇಶದ ಎಲ್ಲೇ ಚುನಾವಣೆ ನಡೆದರೂ ಶಾಯಿ ಇಲ್ಲಿನಿಂದಲೇ ಸರಬರಾಜಾಗುವುದು. ಈ ಸಂಸ್ಥೆ ಕರ್ನಾಟಕ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ.

English summary
Vote ink normally applied to left finger because very few people use left hand to do work, so stain of ink suppose to be more prominent for longer interval of time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X