ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಾಏಕಿ ಕಾಂಗ್ರೆಸ್ ಮುಖಂಡರ ಒಗ್ಗಟ್ಟು ಪ್ರದರ್ಶನ: ಸೋನಿಯಾ ಕೊಟ್ಟ ಮಾಸ್ಟರ್ ಸ್ಟ್ರೋಕ್

|
Google Oneindia Kannada News

ಮನೆಯೊಂದು ಊರೆಲ್ಲಾ ಬಾಗಿಲು ಎನ್ನುವ ಹಾಗಿದ್ದ ಕರ್ನಾಟಕ ಕಾಂಗ್ರೆಸ್ ಘಟಕದಲ್ಲಿ ಏಕಾಏಕಿ ಒಗ್ಗಟ್ಟಿನ ಮಂತ್ರ ಮೊಳಗುತ್ತಿದೆ. ನಮ್ಮ ನಡುವೆ ಎಲ್ಲವೂ ಸರಿಯಿದೆ ಎಂದು ಮುಖಂಡರು ಜಪಿಸುತ್ತಿದ್ದಾರೆ.

ನಮ್ಮಲ್ಲಿ ಬಣ ರಾಜಕೀಯವಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಂಡು ಬರುತ್ತಿದ್ದರೂ, ಖುದ್ದು ಕಾರ್ಯಕರ್ತರೇ ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ ಎನ್ನುವುದು ಗೊತ್ತಿರುವಂತಹ ವಿಚಾರ.

ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ನಂತರ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ಮತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಆದರೆ, ಆ ರಾಜೀನಾಮೆ ಆಂಗೀಕಾರದ ಕಥೆ ಎಲ್ಲಿ ತನಕ ಬಂತು ಎನ್ನುವುದು ಬಹುಷಃ ಸೋನಿಯಾ ಗಾಂಧಿಯವರಿಗೆ ಮಾತ್ರ ಗೊತ್ತಿರಬಹುದು.

ಕುತೂಹಲ ಮೂಡಿಸಿದ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಭೇಟಿ! ಕುತೂಹಲ ಮೂಡಿಸಿದ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಭೇಟಿ!

ಕೆಪಿಸಿಸಿಯಲ್ಲಿ ಸಿದ್ದರಾಮಯ್ಯನವರ ಬಣ ಒಂದು ಕಡೆ, ಅವರ ವಿರೋಧಿ ಬಣ ಇನ್ನೊಂದು ಕಡೆ ಎನ್ನುವುದು ವಾಸ್ತವತೆ. ಈಗ, ಅದನ್ನೆಲ್ಲಾ ಮೆಟ್ಟಿನಿಂತಿರುವ ಮುಖಂಡರು, ಒಂದೇ ಚಾವಡಿಯಲ್ಲಿ ಒಂದಾಗಿದ್ದಾರೆ. ಇದರ ಹಿಂದೆ, ಇನ್ನೂ, ಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿಯೇ ಮುಂದುವರಿದಿರುವ ಸೋನಿಯಾ ಗಾಂಧಿಯವರ ಖಡಕ್ ಸೂಚನೆ ಕಾರಣವೇ?

ಅಭ್ಯರ್ಥಿಗಳನ್ನು ಆಯ್ಕೆಮಾಡಿದ ವಿಚಾರದಲ್ಲಿ ಸಿದ್ದರಾಮಯ್ಯ ಮೇಲುಗೈ

ಅಭ್ಯರ್ಥಿಗಳನ್ನು ಆಯ್ಕೆಮಾಡಿದ ವಿಚಾರದಲ್ಲಿ ಸಿದ್ದರಾಮಯ್ಯ ಮೇಲುಗೈ

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಿದ್ದರಾಮಯ್ಯ ಬಯಸಿದ್ದಂತೇ ಆಗಿದ್ದು. ಹಾಗಾಗಿ, ಈ ಚುನಾವಣೆಯನ್ನು ಕಾಂಗ್ರೆಸ್ ಸೋಲಲಿ ಎಂದು ಖುದ್ದು ಆ ಪಕ್ಷದ ಮುಖಂಡರು ಬಯಸಿದ್ದರೇ.. ಗೊತ್ತಿಲ್ಲ! ಆದರೆ, ಈ ಸೋಲನ್ನು ಸಿದ್ದರಾಮಯ್ಯನವರ ವಿರುದ್ದ ಕತ್ತಿಮಸೆಯಲು ಕೆಲವು ಮುಖಂಡರು ಬಳಸಿಕೊಂಡಿದ್ದಂತೂ ಹೌದು.

ಆಯಕಟ್ಟಿನ ಹುದ್ದೆಗೆ ಬಂದು ಹೋದ ಹೆಸರು ಒಂದಲ್ಲಾ ಎರಡಲ್ಲಾ

ಆಯಕಟ್ಟಿನ ಹುದ್ದೆಗೆ ಬಂದು ಹೋದ ಹೆಸರು ಒಂದಲ್ಲಾ ಎರಡಲ್ಲಾ

ಕೆಪಿಸಿಸಿ ಅಧ್ಯಕ್ಷ, ಶಾಸಕಾಂಗ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಂದು ಹೋದ ಹೆಸರು ಒಂದಲ್ಲಾ ಎರಡಲ್ಲಾ.. ಅದರಲ್ಲೂ ರಾಜ್ಯಾಧ್ಯಕ್ಷ ಹುದ್ದೆಗೆ ಡಿ.ಕೆ.ಶಿವಕುಮಾರ್ ಹೆಸರು ಅಂತಿಮವಾಯಿತು, ಇನ್ನೇನು ಅಧಿಕೃತ ಘೋಷಣೆ ಒಂದೇ ಬಾಕಿ ಎನ್ನುವ ಮಟ್ಟಿಗೆ ಸುದ್ದಿ ಹರಿದಾಡುತ್ತಿದ್ದವು.

ಬಿಎಸ್ವೈ ಸರಕಾರದ ಬಗ್ಗೆ ಕೇದಾರನಾಥ ಪೀಠದ ಜಗದ್ಗುರು ನುಡಿದ ಭವಿಷ್ಯಬಿಎಸ್ವೈ ಸರಕಾರದ ಬಗ್ಗೆ ಕೇದಾರನಾಥ ಪೀಠದ ಜಗದ್ಗುರು ನುಡಿದ ಭವಿಷ್ಯ

ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಗುಂಪುಗಾರಿಕೆ

ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಗುಂಪುಗಾರಿಕೆ

ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಗುಂಪುಗಾರಿಕೆಯ ಬಗ್ಗೆ ಸಂಪೂರ್ಣ ಮಾಹಿತಿ, ಅಹಮದ್ ಪಟೇಲ್, ವೇಣುಗೋಪಾಲ್ ಮೂಲಕ, ಸೋನಿಯಾ ಗಾಂಧಿಗೆ ತಲುಪಿದೆ. ಹಾಗಾಗಿಯೇ, ಯಾವ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಸೋನಿಯಾ ಗಡಿಬಿಡಿ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಒಗ್ಗಟ್ಟು ಪ್ರದರ್ಶಿಸಲು ಸೂಚನೆ

ಒಗ್ಗಟ್ಟು ಪ್ರದರ್ಶಿಸಲು ಸೂಚನೆ

ಮೂರು ಪ್ರಮುಖ ಹುದ್ದೆಗೆ ಯಾರನ್ನು ಆಯ್ಕೆ ಮಾಡಿದರೂ, ಇನ್ನೊಂದು ಬಣ ಬೇಸರಗೊಳ್ಳುವುದು ಖಚಿತ ಎಂದರಿತಿರುವ ಸೋನಿಯಾ ಗಾಂಧಿ, ಮೊದಲು, ಒಗ್ಗಟ್ಟು ಪ್ರದರ್ಶಿಸಲು ಸೂಚನೆ ನೀಡಿದ್ದಾರೆ. ಈ ಕಾರಣಕ್ಕಾಗಿಯೇ, ಒಂದೊಂದು ಕಡೆ ಮುಖ ಮಾಡಿಕೊಂಡಿದ್ದ ಮುಖಂಡರು ಕೆಪಿಸಿಸಿ ಕಚೇರಿಯಲ್ಲಿ ಒಂದಾಗಲು ಕಾರಣ ಎಂದು ಹೇಳಲಾಗುತ್ತಿದೆ.

ಸೋನಿಯಾ ಗಾಂಧಿಯ ಪ್ರಬುದ್ದ ರಾಜಕೀಯ ನಡೆ

ಸೋನಿಯಾ ಗಾಂಧಿಯ ಪ್ರಬುದ್ದ ರಾಜಕೀಯ ನಡೆ

ಒಗ್ಗಟ್ಟು ಪ್ರದರ್ಶಿಸಿ, ಎಲ್ಲರ ವಿಶ್ವಾಸವನ್ನು ಪಡೆದುಕೊಂದು ಅಂತಿಮವಾಗಿ ಹೆಸರನ್ನು ರೆಕೆಮೆಂಡ್ ಮಾಡಿದರೆ, ಆ ಹೆಸರನ್ನೇ ಅಂತಿಮಗೊಳಿಸುವ ನಿರ್ಧಾರಕ್ಕೆ ಸೋನಿಯಾ ಬಂದಿದ್ದಾರೆ ಎನ್ನುವ ಮಾಹಿತಿಯಿದೆ. ಗುಂಪುಗಾರಿಕೆ ಮುಂದುವರಿದರೆ, ಯಾವ ಹುದ್ದೆಗೂ ಹೆಸರು ಫೈನಲ್ ಆಗುವುದಿಲ್ಲ ಎಂದನ್ನರಿತ ಕಾಂಗ್ರೆಸ್ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದರ ಹಿಂದೆ, ಸೋನಿಯಾ ಗಾಂಧಿಯ ಪ್ರಬುದ್ದ ರಾಜಕೀಯ ನಡೆಯಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

English summary
Why Suddenly Karnataka Congess Leaders United: Is This Because Of Sonia Gandhi Direction
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X