• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಟೋಬರ್‌ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು?

|

ಬೆಂಗಳೂರು, ಅಕ್ಟೋಬರ್ 01 : ಅಕ್ಟೋಬರ್‌ನಿಂದ ಮೂರು ತಿಂಗಳ ಕಾಲ ರಾಜ್ಯದ ಜನರು ಹೆಚ್ಚುವರಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚುವರಿ ಬಿಲ್ ಸಂಗ್ರಹ ಮಾಡಲು ಅನುಮತಿ ನೀಡಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಾಜ್ಯದ 5 ಎಸ್ಕಾಂಗಳಿಗೆ ಡಿಸೆಂಬರ್

31ರ ತನಕ ಹೆಚ್ಚುವರಿ ಬಿಲ್ ಸಂಗ್ರಹ ಮಾಡಲು ಒಪ್ಪಿಗೆ ಕೊಟ್ಟಿದೆ. ಎಲ್ಲಾ ಎಸ್ಕಾಂಗಳು ಗ್ರಾಹಕರಿಂದ ಹೆಚ್ಚುವರಿ ಇಂಧನ ಹೊಂದಾಣಿಕೆ ಶುಲ್ಕ(ಎಫ್‌ಎಸಿ) ಸಂಗ್ರಹ ಮಾಡಲಿವೆ.

ವಿದ್ಯುತ್ ದರ ಎರಡನೇ ಬಾರಿ ಏರಿಕೆ

ಐದು ಎಸ್ಕಾಂಗಳ ಪೈಕಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಪ್ರತಿ ಯೂನಿಟ್‌ಗೆ 4 ರಷ್ಟು ಹೆಚ್ಚುವರಿ ಶುಲ್ಕ ಸಂಗ್ರಹ ಮಾಡುತ್ತಿದೆ. ಉಳಿದ ಕಂಪನಿಗಳಿಗೆ ಹೋಲಿಕೆ ಮಾಡಿದರೆ ಇದೇ ಕಡಿಮೆ ಶುಲ್ಕವಾಗಿದೆ.

ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರಕ್ಕಿದ್ದ ಅಡೆತಡೆ ನಿವಾರಣೆ

2018ರ ಡಿಸೆಂಬರ್ 18ರ ಬಳಿಕ ಇಂಧನ ಹೊಂದಾಣಿಕೆ ಶುಲ್ಕ ಕಡಿಮೆ ಅಥವ ಹೆಚ್ಚಾಗಬಹುದು. ಈ ದರ ಏರಿಕೆಯ ಪ್ರಮಾಣ ಒಂದು ಎಸ್ಕಾಂನಿಂದ ಮತ್ತೊಂದಕ್ಕೆ ಭಿನ್ನವಾಗಿರುತ್ತದೆ. ಬೆಸ್ಕಾಂ ಪ್ರತಿ ಯೂನಿಟ್‌ಗೆ 14 ಪೈಸೆ ಇಂಧನ ಹೊಂದಾಣಿಕೆ ಶುಲ್ಕ ಸಂಗ್ರಹ ಮಾಡಲಿದೆ.

ವಿದ್ಯುತ್ ಬೆಲೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ ಎಸ್ಕಾಂ

ಎಷ್ಟು ಬಿಲ್ ಹೆಚ್ಚಳ

ಎಷ್ಟು ಬಿಲ್ ಹೆಚ್ಚಳ

* ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) 14

* ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) 8

* ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಚೆಸ್ಕಾಂ) 5

* ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಗೆಸ್ಕಾಂ) 5

* ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) 4 ಪೈಸೆ ಪ್ರತಿ ಯೂನಿಟ್‌ಗೆ ಹೆಚ್ಚುವರಿ ಶುಲ್ಕ ಸಂಗ್ರಹ ಮಾಡಲಿವೆ.

ಕಲ್ಲಿದ್ದಲು ದರದ ಮೇಲೆ ಅವಲಂಬನೆ

ಕಲ್ಲಿದ್ದಲು ದರದ ಮೇಲೆ ಅವಲಂಬನೆ

ಇಂಧನ ಹೊಂದಾಣಿಕೆ ಶುಲ್ಕ(ಎಫ್‌ಎಸಿ) ವಿದ್ಯುತ್ ಸ್ಥಾವರಗಳಿಗೆ ಪೂರೈಕೆ ಆಗುವ ಕಲ್ಲಿದ್ದಲಿನ ದರದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಒಂದು ವಿದ್ಯುತ್ ಸರಬರಾಜು ಕಂಪನಿಯಿಂದ ಮತ್ತೊಂದಕ್ಕೆ ಎಫ್‌ಎಸಿ ಬದಲಾವಣೆಯಾಗುತ್ತದೆ. ಈಗಿರುವ ದರ ಡಿಸೆಂಬರ್ 31ರ ಬಳಿಕ ಹೆಚ್ಚು ಅಥವ ಕಡಿಮೆಯಾಗಲಿದೆ.

ಕಳೆದ ವರ್ಷದ ದರಗಳು

ಕಳೆದ ವರ್ಷದ ದರಗಳು

ಇಂಧನ ಹೊಂದಾಣಿಕೆ ಶುಲ್ಕ(ಎಫ್‌ಎಸಿ) ಕಳೆದ ವರ್ಷ ಕಡಿಮೆ ಇತ್ತು. 2017ರ ಏಪ್ರಿಲ್‌ನಿಂದ ಜೂನ್ ತನಕ 6 ಪೈಸೆ, 2017ರ ಜುಲೈನಿಂದ 2018ರ ಮಾರ್ಚ್‌ ತನಕ 15 ಪೈಸೆ ಶುಲ್ಕ ಸಂಗ್ರಹಣೆ ಮಾಡಲಾಗಿತ್ತು. ದೇಶದಲ್ಲಿ ಸದ್ಯ ಕಲ್ಲಿದ್ದಲು ಕೊರತೆ ಇದೆ. ಅಲ್ಲದೇ ಸಾಗಾಟಕ್ಕೂ ಅನೇಕ ಸಮಸ್ಯೆಗಳು ಎದುರಾಗಿವೆ. ಆದ್ದರಿಂದ, ಅದರ ಹೆಚ್ಚುವರಿ ಹೊರೆ ಜನರ ಮೇಲೆ ಬಿದ್ದಿದೆ.

ಮೆಸ್ಕಾಂನಲ್ಲಿ ಕಡಿಮೆ ಶುಲ್ಕ

ಮೆಸ್ಕಾಂನಲ್ಲಿ ಕಡಿಮೆ ಶುಲ್ಕ

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) 4 ಪೈಸೆ ಪ್ರತಿ ಯೂನಿಟ್‌ಗೆ ಹೆಚ್ಚುವರಿ ಶುಲ್ಕ ಸಂಗ್ರಹ ಮಾಡಲಿದೆ. ಬೇರೆ ಎಸ್ಕಾಂಗಳಿಗೆ ಹೋಲಿಕೆ ಮಾಡಿದರೆ ಮೆಸ್ಕಾಂ ಇಂಧನ ಹೊಂದಾಣಿಕೆ ಶುಲ್ಕವನ್ನು ಕಡಿಮೆ ಸಂಗ್ರಹ ಮಾಡಲಿದೆ.

ಆದರೆ, ಸೆಪ್ಟೆಂಬರ್‌ನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮೆಸ್ಕಾಂ 7.56 ಪೈಸೆ ಇಂಧನ ಹೊಂದಾಣಿಕೆ ಶುಲ್ಕ ಸಂಗ್ರಹಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು. ಈಗ ಹೆಚ್ಚಳವಾಗಿರುವ 4 ಪೈಸೆ ಪ್ರತಿ ಯೂನಿಟ್ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೂ ಅನ್ವಯವಾಗಲಿದೆ ಎಂದು ಮೆಸ್ಕಾಂ ಹೇಳಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Electricity Regulatory Commission (KERC) approved for five ESCOMS to collect fuel cost adjustment charges (FAC) in the electricity bills. Electricity bill generated for the next three month will not be the same, even if you have consumed the same number of units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more