ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಸಿಬಿ ಅಲೋಕ್ ಕುಮಾರ್ ರೌಡಿಗಳಿಗೆ 'ಸಿಂಹಸ್ವಪ್ನ' ಅನ್ನೋದು ಇದೇ ಕಾರಣಕ್ಕೆ

|
Google Oneindia Kannada News

ಮೇ 2015ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು ಬಹುಕೋಟಿ ಒಂದಂಕಿ ಲಾಟರಿ ಪ್ರಕರಣ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜ್ಯ ಸಚಿವರು ಇದರಲ್ಲಿ ಭಾಗಿಯಾಗಿದ್ದು, ಸರಕಾರಕ್ಕೆ 'ಕಾಣಿಕೆ' ಸಲ್ಲಿಕೆಯಾಗುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಸರಕಾರದ ವಿರುದ್ದ ತಿರುಗಿಬಿದ್ದ ನಂತರ ಪ್ರಕರಣವನ್ನು ಸಿಐಡಿಗೆ ನಂತರ ಸಿಬಿಐಗೆ ಸರಕಾರ ವಹಿಸಿತ್ತು.

ಸಿಐಡಿ ತನಿಖೆಯ ವರದಿ ಬಂದ ನಂತರ, ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರನ್ನು ಸರಕಾರ ಅಮಾನತುಗೊಳಿಸಿತು. ಜೂನ್ 2015ರ ಆದಿಯಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ವಾಟ್ಸಾಪ್ ಮೂಲಕ ತಮ್ಮ ಸಹದ್ಯೋಗಿಗಳು ಮತ್ತು 1994ರ ಬ್ಯಾಚ್ ಮೇಟ್ ಗಳಿಗೆ ಸಂದೇಶವೊಂದನ್ನು ಕಳುಹಿಸುತ್ತಾರೆ ಮತ್ತು ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ವಲಯದಲ್ಲಿ ಅಲೋಕ್ ಸಂದೇಶ ವೈರಲ್ ಆಗುತ್ತದೆ.

ಸಿಂಗಲ್ ನಂಬರ್ ಲಾಟರಿ ಹಗರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಕರ್ನಾಟಕದಲ್ಲಿ ನನ್ನದೇ ಬ್ಯಾಚಿನ ಐಪಿಎಸ್ ಅಧಿಕಾರಿ ಮತ್ತು ಇನ್ನೊಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಷಡ್ಯಂತ್ರಕ್ಕೆ ನಾನು ಸಿಲುಕಿದ್ದೇನೆ. ನನ್ನ ಏಳಿಗೆಯನ್ನು ಸಹಿಸಲಾಗದೇ, ಈ ಪ್ರಕರಣದಲ್ಲಿ ನನ್ನನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಸಿಐಡಿ ತನಿಖೆ ಅನ್ನೋದು ಬರೀ ಕಣ್ಣೊರೆಸುವ ತಂತ್ರ. ಬರೀ ಫೋನ್ ಕಾಲ್ ದಾಖಲೆಗಳನ್ನು ಆಧರಿಸಿ ನನ್ನನ್ನು ಅಮಾನತು ಮಾಡಲಾಗಿದೆ ಎಂದು ತಮ್ಮ ಸಂದೇಶದಲ್ಲಿ ಅಲೋಕ್ ನೋವು ತೋಡಿಕೊಂಡಿದ್ದರು.

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ

ಇದಾದ ಕೆಲವೇ ದಿನಗಳಲ್ಲಿ ಅಲೋಕ್ ಕುಮಾರ್ ಅವರನ್ನು ಆಂತರಿಕ ಭದ್ರತೆಯ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಯಿತು, ಆದರೆ ಅಲೋಕ್, ಆ ಹುದ್ದೆಯನ್ನು ನಿರ್ವಹಿಸಿರಲಿಲ್ಲ. ಇದಾದ ನಂತರ, ಅಕ್ಟೋಬರ್ 2015ರಲ್ಲಿ ಅಲೋಕ್ ಕುಮಾರ್ ಅಮಾನತು ರದ್ದಾಗಿ, ಅವರನ್ನು ತರಬೇತಿ ವಿಭಾಗದ ಐಜಿಪಿಯನ್ನಾಗಿ ನೇಮಿಸಲಾಗಿತ್ತು. ಅಲ್ಲಿಂದ ಈಶಾನ್ಯ ವಲಯಕ್ಕೆ ಅಲ್ಲಿಂದ ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ, ಮತ್ತೀಗ ಬೆಂಗಳೂರು ಸಿಟಿ ಕ್ರೈಂ ಬ್ರಾಂಚಿನ ಐಜಿಪಿ, ಜಂಟಿ ಕಮಿಷನರ್ ಆಗಿ ಅಲೋಕ್ ಅವರನ್ನು ಸರಕಾರ ನೇಮಕ ಮಾಡಿದೆ.

ಇದಿಷ್ಟು, ಒಂದಂಕಿ ಲಾಟರಿ ಹಗರಣದಿಂದ ಇದುವರೆಗಿನ ಅಲೋಕ್ ಕುಮಾರ್ ಅವರ ಜರ್ನಿ. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ಪೊಲೀಸ್ ಇಲಾಖೆಯ ಅಧಿಕಾರಿಗಳು ಲಾಟರಿ ದಂಧೆಯಲ್ಲಿ ಶಾಮೀಲಾಗಿದ್ದಾರೆಂದು ಕುಮಾರಸ್ವಾಮಿ ಏನು ಆರೋಪಿಸಿದ್ದರೋ, ಅದರಂತೆ ಅಲೋಕ್ ಕುಮಾರ್ ಅವರ ತಲೆದಂಡ ಏನಾಗಿತ್ತೋ, ಅದೇ ಅಲೋಕ್ ಕುಮಾರ್ ಮೇಲೆ, ಸಿಎಂ ಕುಮಾರಸ್ವಾಮಿ ನಂಬಿಕೆಯಿಟ್ಟು ಸಿಸಿಬಿಗೆ ಕರೆಸಿರುವುದು. ಅಲೋಕ್ ಅವರನ್ನು ಸಿಂಹಸ್ವಪ್ನ, ಸಿಂಗಂ ಎಂದು ಯಾಕೆ ಕರೆಯುವುದು ಎನ್ನುವ ಕೆಲವರ ಪ್ರಶ್ನೆಗ ಇಲ್ಲಿದೆ ಕೆಲವೊಂದು ಹೈಲೆಟ್ಸ್:

Array

Array

ಗದಗ ನಗರ ಪೊಲೀಸ್‌ ಠಾಣೆ ಆವರಣದಲ್ಲಿ ರೌಡಿ ಶೀಟರುಗಳಿಗೆ ಭರ್ಜರಿ ಲೆಫ್ಟ್ & ರೈಟ್‌ ಕ್ಲಾಸ್. 69 ರೌಡಿಗಳನ್ನು ಕರೆಸಿ, ಎಲ್ಲರ ಬಳಿಯೂ ವೈಯಕ್ತಿಕವಾಗಿ ಮಾತನಾಡಿಸಿ, ಪ್ರತಿಯೊಬ್ಬರಿಗೂ ಖಡಕ್‌ ಸೂಚನೆ, ತಿಳಿವಳಿಕೆ, ಎಚ್ಚರಿಕೆ. ತೋಳುಗಳು ಕಾಣುವಂತೆ ಅಂಗಿಯನ್ನು ಸರಿಸಿಕೊಳ್ಳುವಂತೆ ಸೂಚನೆ, ನ್ಯಾಯವಾಗಿ ಬದುಕಿ, ನಿಮಗೂ ಕುಟುಂಬ ಇದೆ ಎನ್ನುವುದು ನೆನಪಿರಲಿ, ನನ್ನ ವರ್ಕಿಂಗ್ ಸ್ಟೈಲೇ ಬೇರೆ ಎಂದು ರೌಡಿಗಳಿಗೆ ಎಚ್ಚರಿಕೆ.

ಚಡಚಣ ಹತ್ಯೆ ಬಗ್ಗೆ ಭಾರೀ ಚರ್ಚೆ, ರಜೆ ಮೇಲೆ ತೆರಳಿದ ಐಜಿಪಿ ಚಡಚಣ ಹತ್ಯೆ ಬಗ್ಗೆ ಭಾರೀ ಚರ್ಚೆ, ರಜೆ ಮೇಲೆ ತೆರಳಿದ ಐಜಿಪಿ

ಭೀಮಾ ತೀರದ ಪ್ರದೇಶಗಳ ಠಾಣೆಗಳ ರೌಡಿಗಳನ್ನು ಕರೆಸಿ ಸಕತ್ ಕ್ಲಾಸ್

ಭೀಮಾ ತೀರದ ಪ್ರದೇಶಗಳ ಠಾಣೆಗಳ ರೌಡಿಗಳನ್ನು ಕರೆಸಿ ಸಕತ್ ಕ್ಲಾಸ್

ಚಡಚಣ, ಇಂಡಿ, ಜಳಕಿ, ಆಲಮೇಲ, ಸಿಂದಗಿ, ಹೊರ್ತಿ (ಭೀಮಾ ತೀರದ ಪ್ರದೇಶಗಳು) ಠಾಣೆಗಳ ರೌಡಿಗಳನ್ನು ಕರೆಸಿ ಸಕತ್ ಕ್ಲಾಸ್. ಮುಂಬರುವ ಚುನಾವಣೆಯಲ್ಲಿ ಅಹಿತಕರ ಘಟನೆ ನಡೆದರೆ ಒಬ್ಬೊಬ್ಬರ ಚಳಿಬಿಡಿಸುವೆ ಎನ್ನುವ ಎಚ್ಚರ. ಭೀಮಾತೀರದ ಹಂತಕ ಮಹಾದೇವ ಸಾಹುಕಾರ ಭೈರಗೊಂಡ ಅವರಿಗೆ ಸೇರಿದ ಸುಮಾರು 5ಲಕ್ಷ ಮೌಲ್ಯದ ಅಕ್ರಮ ಮರಳು ಮತ್ತು ಮರಳಿಗೆ ಬಳಸುತ್ತಿರುವ ವಾಹನಗಳು ವಶಕ್ಕೆ. ಭೈರಗೊಂಡ ಮೇಲೆ ರೌಡಿಶೀಟರ್ ಕೇಸ್ ದಾಖಲು. ಭೈರಗೊಂಡನನ್ನು ಬಂಧಿಸದಿದ್ದಲ್ಲಿ ನಿಮ್ಮನ್ನು ಅಮಾನತು ಮಾಡುವುದಾಗಿ ಪಿಎಸೈಗೆ ವಾರ್ನಿಂಗ್.

ಗಂಗಾಧರ ಚಡಚಣ ಎನ್ಕೌಂಟರ್ ಬಗ್ಗೆ ತನಿಖೆ

ಗಂಗಾಧರ ಚಡಚಣ ಎನ್ಕೌಂಟರ್ ಬಗ್ಗೆ ತನಿಖೆ

ಭೀಮಾತೀರದ ಹಂತಕ ಗಂಗಾಧರ ಚಡಚಣ ಎನ್ಕೌಂಟರ್ ಬಗ್ಗೆ ತನಿಖೆ, ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದೇವೆ. ನಕಲಿ ಎನ್ಕೌಂಟರ್ ಬಗ್ಗೆ ನಾವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎನ್ನುವ ಹೇಳಿಕೆ. ರೌಡಿಗಳು ನಿಯಂತ್ರಣದಲ್ಲಿ ಇರಬೇಕು. ‌ಆ ನಿಟ್ಟಿನಲ್ಲಿ ಭೀಮಾತೀರದ ಭಾಗದಲ್ಲಿ ಅಪರಾಧ ತಡೆಯುವ ಕುರಿತು ಜಾಗೃತಿ. ಅನಾವಶ್ಯಕವಾಗಿ ಶಸ್ತ್ರಾಸ್ತ್ರ ಪಡೆದವರ ಪರವಾನಿಗೆ ರದ್ದು. (ಚಿತ್ರದಲ್ಲಿ, ಚಡಚಣ)

ಗಂಗಾಧರ ಚಡಚಣ ಹತ್ಯೆ : ಪಿಎಸ್‌ಐ, ಮೂವರು ಪೇದೆಗಳ ಬಂಧನಗಂಗಾಧರ ಚಡಚಣ ಹತ್ಯೆ : ಪಿಎಸ್‌ಐ, ಮೂವರು ಪೇದೆಗಳ ಬಂಧನ

ಅಲೋಕ್ ಕುಮಾರ್ ವರ್ಗಾವಣೆಯಾದಾಗ ಸಾರ್ವಜನಿಕರಿಂದ ಭಾರೀ ಪ್ರತಿಭಟನೆ

ಅಲೋಕ್ ಕುಮಾರ್ ವರ್ಗಾವಣೆಯಾದಾಗ ಸಾರ್ವಜನಿಕರಿಂದ ಭಾರೀ ಪ್ರತಿಭಟನೆ

ಈಶಾನ್ಯ ವಲಯದಿಂದ ಅಲೋಕ್ ಕುಮಾರ್ ವರ್ಗಾವಣೆಯಾದಾಗ ಸಾರ್ವಜನಿಕರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಸಾರ್ವಜನಿಕರ ಪ್ರಕಾರ, ಅಲೋಕ್ ಹಲವು‌‌ ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಹೆಲ್ಮೆಟ್ ಜಾರಿ. ತಾವೇ ಸ್ವತಃ ರೋಡಿಗಳಿದು ಹೆಲ್ಮೆಟ್ ಧರಿಸಿ ಪ್ರಾಣ ರಕ್ಷಿಸಿಕೊಳ್ಳಿ ಎನ್ನುವ ಮನವಿ, ಇವರ ಅವಧಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ರೌಡಿಗಳ ಮೇಲೆ ಎನ್ ಕೌಂಟರ್, ‌ಶೂಟೌಟ್ ಗಳನ್ನು ನಡೆಸಿ, ರೌಡಿಗಳ ಹೆಡೆಮುರಿ‌ ಕಟ್ಟಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ರೌಡಿಗಳ ಮೇಲೆ ಕೋಕಾ ಅಸ್ತ್ರ ಪ್ರಯೋಗ. ಅಕ್ರಮ ನಾಡ ಬಂದೂಕು ಜಾಲವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ‌.

ಕಣಕುಂಬಿಯಲ್ಲಿ ಪೊಲೀಸ್ ಚೆಕ್ ಪೋಸ್ಟ್

ಕಣಕುಂಬಿಯಲ್ಲಿ ಪೊಲೀಸ್ ಚೆಕ್ ಪೋಸ್ಟ್

ಗೋವಾ ಸರಕಾರದ ಅಧಿಕಾರಿಗಳು ಕಣ್ಣುತಪ್ಪಿಸಿ ಕಳಸಾ ಬಂಡೂರಿ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ ಎನ್ನುವ ದೂರಿಗೆ ಕೂಡಲೇ ಸ್ಪಂದನೆ. ಕಣಕುಂಬಿಯಲ್ಲಿ ಪೊಲೀಸ್ ಚೆಕ್ ಪೋಸ್ಟ್. ಇದು ವಿವಾದಿತ ಪ್ರದೇಶವಾಗಿರುವುದರಿಂದ, ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಲ್ಲಿ ಈ ಕ್ರಮ ಎಂದು ಅಲೋಕ್ ಕುಮಾರ್ ಸ್ಪಷ್ಟನೆ. ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವಂತೆ ತಮ್ಮ ಸಿಬ್ಬಂದಿಗಳಿಗೆ ಸೂಚನೆ.

ವಾಯುವ್ಯ ಸಾರಿಗೆ ಸಂಸ್ಥೆ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ

ವಾಯುವ್ಯ ಸಾರಿಗೆ ಸಂಸ್ಥೆ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ

ಬಸ್ ಡೇ ಕಾರ್ಯಕ್ರಮದ ಅಂಗವಾಗಿ ಅಲೋಕ್ ಕುಮಾರ್ ಬಸ್ ನಲ್ಲಿ ಪ್ರಯಾಣ, ಪ್ರಯಾಣಿಕರಿಗೆ ಗುಲಾಬಿ ಕೊಟ್ಟು, ವಾಯುವ್ಯ ಸಾರಿಗೆ ಸಂಸ್ಥೆ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎನ್ನುವ ಶ್ಲಾಘನೆ. ಸಾರ್ವನಿಕರು ಸಾರಿಗೆ ಬಸ್ ಗಳಲ್ಲಿ ಸಂಚರಿಸುವ ಮೂಲಕ ಇದರ ಸದುಪಯೋಗ ಪಡೆಸಿಕೊಳ್ಳಬೇಕೆಂದು ಜನಜಾಗೃತಿ ಮೂಡಿಸುವ ಕೆಲಸ, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಮೀಸಲಿಟ್ಟ ಸ್ಥಳಗಳನ್ನು ಅವರಿಗೇ ಬಿಟ್ಟುಕೊಡಬೇಕೆಂದು ಯುವಕರಿಗೆ ಸೂಚನೆ. ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾರೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಸೂಚನೆ.

ಹೆಲ್ಮೆಟ್, ಸೀಟ್ ಬೆಲ್ಟ್, ಕೂಲಿಂಗ್ ಗ್ಲಾಸ್ ಪೇಪರ್, ಲೈಸೆನ್ಸ್ ಇಲ್ಲದವರಿಗೆ ಸ್ಥಳದಲ್ಲೇ ದಂಡ

ಹೆಲ್ಮೆಟ್, ಸೀಟ್ ಬೆಲ್ಟ್, ಕೂಲಿಂಗ್ ಗ್ಲಾಸ್ ಪೇಪರ್, ಲೈಸೆನ್ಸ್ ಇಲ್ಲದವರಿಗೆ ಸ್ಥಳದಲ್ಲೇ ದಂಡ

ಟ್ರಾಫಿಕ್ ರೂಲ್ಸ್ ಪಾಲನೆ ಮಾಡದವರಿಗೆ, ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ನೀದರ್ - ಶ್ರೀರಂಗ ಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ತಡೆದು ಸ್ವತಃ ತಾವೇ ಪರಿಶೀಲನೆ ನಡೆಸಿ, ಹೆಲ್ಮೆಟ್, ಸೀಟ್ ಬೆಲ್ಟ್, ಕೂಲಿಂಗ್ ಗ್ಲಾಸ್ ಪೇಪರ್, ಲೈಸೆನ್ಸ್ ಇಲ್ಲದವರಿಗೆ ಸ್ಥಳದಲ್ಲೇ ದಂಡ, ಎಚ್ಚರಿಕೆ. ಇನ್ನು ಮುಂದೆಯಾದರೂ ಟ್ರಾಫಿಕ್ ನಿಯಮ ಪಾಲಿಸಿ ಎನ್ನುವ ಖಡಕ್ ಸೂಚನೆ.

English summary
Couple of years back Siddaramaiah government suspended IPS Alok Kumar for allegedly his involvement in Single number lottery scam. Later government has given clean chit to him and now HD Kumaraswamy government called him back Belagavi North division to Bengaluru CCB as IGP and Additional Police Commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X