ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗುಜರಾತ್ ಮಾಡೆಲ್' ಬಿಟ್ಟು ಮಹಾರಾಷ್ಟ್ರವನ್ನು ಅಪ್ಪಿಕೊಂಡರೇಕೆ ಮೋದಿ?

By Manjunatha
|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಅವರು ಹೋದಲ್ಲೆಲ್ಲಾ ಭಾಷಣದ ಮೂಲಕ ಮೋಡಿ ಮಾಡುತ್ತಿದ್ದಾರೆ. ಮಾತಿನ ಮೂಲಕ ಕಾಂಗ್ರೆಸ್‌ ಮೇಲೆ ಹರಿಹಾಯುತ್ತಿದ್ದಾರೆ. ಮೋದಿ ಅವರ ಪ್ರತಿ ಭಾಷಣದಲ್ಲಿ ಇದ್ದ ಪ್ರಮುಖ ಅಂಶವೆಂದರೆ ಕಾಂಗ್ರೆಸ್‌ನ ಕುಟುಂಬ ರಾಜಕಾರಣ, ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು.

ಮೋದಿ ಅವರ ಭಾಷಣದಲ್ಲಿನ ಈ ಮೇಲ್ಕಂಡ ಅಂಶಗಳ ಜೊತೆಗೆ ಇನ್ನೊಂದು ಅಂಶವನ್ನೂ ಅವರು ಮರೆಯದೇ ಪ್ರತಿ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಅದುವೇ ಮಹಾರಾಷ್ಟ್ರ ಸರ್ಕಾರದ ಸಾಧನೆ. ಗುಜರಾತ್‌ ಮಾಡೆಲ್‌ ಅನ್ನು ಹಿಂದೆ ಬಿಟ್ಟು ಮಹಾರಾಷ್ಟ್ರವನ್ನು ಅವರು ಹಾಡಿ ಹೊಗಳಿದ್ದಾರೆ.

ಕುದಿಯುವ ಕೊಪ್ಪಳದಲ್ಲಿ ಕಾಂಗ್ರೆಸ್ ನಾಯಕರ ಬೆವರಿಳಿಸಿದ ಮೋದಿ ಕುದಿಯುವ ಕೊಪ್ಪಳದಲ್ಲಿ ಕಾಂಗ್ರೆಸ್ ನಾಯಕರ ಬೆವರಿಳಿಸಿದ ಮೋದಿ

ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಎನಿಸಿಕೊಂಡಿದ್ದು 'ಗುಜರಾತ್ ಮಾದರಿ'. ಗುಜರಾತ್‌ ಅನ್ನು ಸತತ 15 ವರ್ಷಗಳ ಕಾಲ ಆಳಿದ್ದ ನರೇಂದ್ರ ಮೋದಿ ಅವರು ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳೇ ಅವರನ್ನು ಪ್ರಧಾನಿ ಖುರ್ಚಿಯ ಮೇಲೆ ಕೂರಿಸಿದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಮೋದಿ ಅವರು ತಮ್ಮ ಭಾಷಣಗಳಲ್ಲಿ 'ಗುಜರಾತ್‌ ಮಾಡೆಲ್‌'ನ ಉಲ್ಲೇಖವೇ ಮಾಡುತ್ತಿಲ್ಲ.

ಗುಜರಾತ್‌ ಮಾಡೆಲ್‌ ಬದಲಿಗೆ ಮೋದಿ ಅವರು ಮಹಾರಾಷ್ಟ್ರ ಸರ್ಕಾರದ ಸಾಧನೆ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ಅದರಲ್ಲಿಯೂ ಕರ್ನಾಟದಲ್ಲಿ ಅಂತೂ 'ಕರ್ನಾಟಕವು ಮಹಾರಷ್ಟ್ರವನ್ನು ನೋಡಿ ಕಲಿಯಲಿ' ಎಂಬ ವಾಕ್ಯ ಪ್ರತಿ ಭಾಷಣದಲ್ಲೂ ಪುನರ್‌ ಉಚ್ಛರಿಸುತ್ತಲೇ ಇದ್ದಾರೆ.

ಬಿಜೆಪಿಗೆ 135 ಸೀಟು ನೀಡಿದ್ದ ಬಿಬಿಸಿ ಸಮೀಕ್ಷೆ ಶುದ್ಧ ಸುಳ್ಳು! ಬಿಜೆಪಿಗೆ 135 ಸೀಟು ನೀಡಿದ್ದ ಬಿಬಿಸಿ ಸಮೀಕ್ಷೆ ಶುದ್ಧ ಸುಳ್ಳು!

ಮೋದಿ ಅವರು 'ಗುಜರಾತ್ ಮಾಡೆಲ್' ಕೈಬಿಡಲು ಕಾರಣವೇನು, ಮಹಾರಾಷ್ಟ್ರದ ಮೇಲೆ ಇದ್ದಕ್ಕಿಂದ್ದಂತೆ ಇಷ್ಟು ಪ್ರೀತಿ ಏಕೆ? ಎಂಬುದು ಈಗ ಚರ್ಚೆಯ ವಿಷಯ.

ಜಿಗ್ನೇಶ್, ಹಾರ್ದಿಕ್, ಅಲ್ಪೇಶ್ ಬೆಂಬಲ

ಜಿಗ್ನೇಶ್, ಹಾರ್ದಿಕ್, ಅಲ್ಪೇಶ್ ಬೆಂಬಲ

ಕಳೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಹುಮತ ಸಾಧಿಸಿದ್ದರೂ ಸಹ ಅದು ಪ್ರಯಾಸದ ಗೆಲುವಾಗಿತ್ತು. ಅಲ್ಲಿ ಕಾಂಗ್ರೆಸ್‌ ಅತ್ಯಂತ ಪ್ರಬಲ ಪೈಪೋಟಿಯನ್ನು ಬಿಜೆಪಿಗೆ ನೀಡಿತು ಕಾಂಗ್ರೆಸ್‌ಗೆ ಜಿಗ್ನೇಶ್‌ ಮೆವಾನಿ, ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್‌ ಅವರು ಬೆಂಬಲಿಸಿದ್ದರು.

ಗುಜರಾತ್ ಅಂಕಪಟ್ಟಿಯಲ್ಲ

ಗುಜರಾತ್ ಅಂಕಪಟ್ಟಿಯಲ್ಲ

ಬಿಜೆಪಿಗೆ ದೇಶದಲ್ಲಿ ಅಧಿಕಾರದ ಹೆಬ್ಬಾಗಿಲು ತೆರೆದಿದ್ದ ಗುಜರಾತ್‌ ಮತದಾರರು ಬಿಜೆಪಿ ಮೇಲೆ ಅಲ್ಪ ಅಸಮಾಧಾನ ತೋರಿದ್ದು ಬಿಜೆಪಿಯನ್ನು ಚಿಂತೆಗೀಡು ಮಾಡಿತ್ತು ಹಾಗಾಗಿ ಬಿಜೆಪಿ ಪ್ರಜ್ಞಾಪೂರ್ವಕವಾಗಿ ಗುಜರಾತ್‌ ಅನ್ನು ತಮ್ಮ ಸಾಧನೆಯ ಅಂಕಪಟ್ಟಿಯಂತೆ ತೋರಿಸಲು ಹಿಂಜರಿಯುತ್ತಿದೆ ಎಂದು ವಿಶ್ಲೇಷಿಸಬಹುದೇನೊ.

ಊನಾ ಚಳುವಳಿಯ ಚರ್ಚೆ

ಊನಾ ಚಳುವಳಿಯ ಚರ್ಚೆ

'ಗುಜರಾತ್‌ ಮಾಡೆಲ್‌'ಗೆ ಬಹುದೊಡ್ಡ ಪೆಟ್ಟು ಕೊಟ್ಟಿದ್ದು ಊನಾ ಘಟನೆ. ಊನಾದಲ್ಲಿ ಸತ್ತ ದನದ ಚರ್ಮ ಸುಲಿದರೆಂಬ ಕಾರಣಕ್ಕೆ ದಲಿತರನ್ನು ರಸ್ತೆಯಲ್ಲೇ ಚರ್ಮ ಹರುಯುವಂತೆ ಬಡಿದದ್ದು ಗುಜರಾತ್‌ನ ದಲಿತರು ಸರ್ಕಾರದ ಮೇಲೆ ಬಂಡಾಯ ಏಳುವಂತಾಯಿತು. ಅದೇ ಸಮಯಕ್ಕೆ ಜಿಗ್ನೇಶ್ ಮೆವಾನಿ ಪ್ರವರ್ಧಮಾನಕ್ಕೆ ಬಂದು ದಲಿತರನ್ನು ಸಂಘಟಿಸಿ ಊನಾ ಚಲೋ ಚಳುವಳಿ ನಡೆಸಿ. ದಲಿತರನ್ನು ಹೀನಾಯವಾಗಿ ಕಾಣುವುದಾ 'ಗುಜರಾತ್ ಮಾದರಿ' ಎಂದು ಪ್ರಶ್ನೆ ಮಾಡಿದ್ದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಯಿತು.

ಸಾಮಾಜಿಕ ಜಾಲತಾಣದಿಂದ ಕೆಟ್ಟ ಹೆಸರು

ಸಾಮಾಜಿಕ ಜಾಲತಾಣದಿಂದ ಕೆಟ್ಟ ಹೆಸರು

ದಲಿತರನ್ನು ನಡು ರಸ್ತೆಯಲ್ಲಿ ವಿವಸ್ತ್ರವನ್ನಾಗಿಸಿ ಬಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು 'ಗುಜರಾತ್ ಮಾಡೆಲ್' ಶೀರ್ಷಿಕೆಯೊಂದಿಗೆ. ಇದು ಸಹ ಬಿಜೆಪಿ 'ಗುಜರಾತ್ ಮಾಡೆಲ್' ಪದ ಬಳಸದಂತೆ ತಡೆಯಲು ಮುಖ್ಯ ಕಾರಣವೇ ಆಯಿತು.

ಹುಳುಕುಗಳು ಮುನ್ನೆಲೆಗೆ ಬಂದವು

ಹುಳುಕುಗಳು ಮುನ್ನೆಲೆಗೆ ಬಂದವು

ಮೋದಿ ಅವರು ಪ್ರಧಾನಿ ಖುರ್ಚಿಯಲ್ಲಿ ಕೂತ ನಂತರ 'ಗುಜರಾತ್ ಮಾಡೆಲ್‌' ವಿರೋಧ ಪಕ್ಷಗಳಿಗೆ ಮತ್ತು ಸುದ್ದಿ ಮಾಧ್ಯಮಗಳಿಗೆ ಪ್ರಮುಖ ಟೀಕೆಯ ವಿಷಯವೂ ಇದಾಯಿತು. ಮೋದಿ ಅವರು ಪ್ರಧಾನಿ ಆದ ನಂತರ 'ಗುಜರಾತ್‌ ಮಾಡೆಲ್‌'ನ ಹುಳುಕುಗಳನ್ನು ಹುಡುಕಲು ಕೆಲವು ಮಾಧ್ಯಮಗಳು ಮತ್ತು ವಿಪಕ್ಷಗಳು ಮುಂದಾದವು ಅದರಲ್ಲಿ ಕೆಲವು ಹುಳುಕಳೂ ಸಿಕ್ಕಿದವು ಇದೂ ಕೂಡಾ ಬಿಜೆಪಿ 'ಗುಜರಾತ್‌ ಮಾಡೆಲ್' ಘೋಷಣೆ ಬಳಸದಂತೆ ಮಾಡಿರಬಹುದು.

ಸ್ವಂತ ನೆಲೆ ಕಂಡುಕೊಳ್ಳುವ ತುರ್ತಿನಲ್ಲಿ ಬಿಜೆಪಿ

ಸ್ವಂತ ನೆಲೆ ಕಂಡುಕೊಳ್ಳುವ ತುರ್ತಿನಲ್ಲಿ ಬಿಜೆಪಿ

ಬಿಜೆಪಿಯು ಗುಜರಾತ್‌ ಕೈಬಿಟ್ಟು ಮಹಾರಾಷ್ಟ್ರವನ್ನು ಮುಂದೆ ತರಲು ಕಾರಣಗಳಿವೆ. ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಇದ್ದದ್ದು ಕಾಂಗ್ರೆಸ್‌ ಸರ್ಕಾರ ಈ ಬಾರಿ ಬಿಜೆಪಿಯು ಅಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ. ಆದರೆ ಶಿವಸೇನೆ ಬಿಜೆಪಿಯೊಂದಿಗೆ ಬಹಿರಂಗವಾಗಿಯೇ ಮುನಿಸು ವ್ಯಕ್ತಪಡಿಸಿದೆ. ಶಿವಸೇನೆಯನ್ನು ಎದುರು ಹಾಕಿಕೊಂಡು ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಹೋಗಬೇಕಿದೆ.

ತುರ್ತಿನಲ್ಲಿದೆ ಬಿಜೆಪಿ

ತುರ್ತಿನಲ್ಲಿದೆ ಬಿಜೆಪಿ

ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಸ್ವಂತ ನೆಲೆ ಕಂಡುಕೊಳ್ಳುವ ತುರ್ತು ಈಗ ಇದೆ. ಲೋಕಸಭೆ ಚುನಾವಣೆ ಸಮೀಪದಲ್ಲಿದ್ದು, ಅತಿ ಹೆಚ್ಚು ಲೋಕಸಭೆ ಸ್ಥಾನ ಹೊಂದಿರುವ ಮಹಾರಾಷ್ಟ್ರದ ಮೇಲೆ ಕೇಂದ್ರಕ್ಕೆ ವಿಶೇಷ ಮಮತೆ ಇದೆ ಎಂಬುದನ್ನು ಬಿಜೆಪಿ ತೋರಿಸಲೇ ಬೇಕಾದ ತುರ್ತಿರುವ ಕಾರಣ ಮೋದಿ ಅವರು ಮಹಾರಾಷ್ಟ್ರ ಜಪ ಮಾಡುತ್ತಿದ್ದಾರೆ ಎನ್ನುವ ವಾದವೂ ಇದೆ.

ದೇವೇಂದ್ರ ಪಡ್ಣವೀಸ್‌ ಮುನ್ನಲೆಗೆ

ದೇವೇಂದ್ರ ಪಡ್ಣವೀಸ್‌ ಮುನ್ನಲೆಗೆ

ಅಲ್ಲದೆ ಮಹಾರಾಷ್ಟ್ರದ ಪ್ರಸ್ತುತ ಮುಖ್ಯಮಂತ್ರಿ ದೇವೇಂದ್ರ ಪಡ್‌ನವೀಸ್‌ ಮೋದಿ ಅವರಿಗೆ ಆಪ್ತ ವ್ಯಕ್ತಿ ಅಲ್ಲದೆ ಅವರು ಕೆಲವಾರು ಉತ್ತಮ ಕಾರ್ಯಗಳನ್ನು ಮಾಡಿರುವುದೂ ಸುಳ್ಳಲ್ಲ. ಬಿಜೆಪಿಗೆ 2014ರ ಲೋಕಸಭೆಯಲ್ಲಿ ವಿಜಯ ದೊರಕಿಸಿದ್ದ 'ಗುಜರಾತ್ ಮಾಡೆಲ್‌'ಗೆ ಪರ್ಯಾಯವಾಗಿ ಈಗ ಮತ್ತೊಂದು ಮಾಡೆಲ್‌ ಎದುರಿಗಿಡಲೇ ಬೇಕಿರುವ ಕಾರಣ ಮಹಾರಾಷ್ಟ್ರವನ್ನು ಬಿಜೆಪಿ ಬಳಸುತ್ತಿದೆ.

English summary
In recent election speeches Narendra Modi did not mention Gujarat Model. Instead of Gujarat Model Modi mentioning Maharashtra Model government achievements in Karnataka election campaigns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X