ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡಿಯೋ ಬಾಂಬ್: ನಳಿನ್ ಕುಮಾರ್ ಕಟೀಲ್ ಧ್ವನಿ ಪರೀಕ್ಷೆಗೆ ಒಳಗಾಗುವರೇ?

|
Google Oneindia Kannada News

ಬೆಂಗಳೂರು, ಜು. 19: ರಾಜ್ಯದಲ್ಲಿ ನಾಯಕತ್ವ ಬಲದಾವಣೆ ಕುರಿತ ಅಡಿಯೋ ಬಾಂಬ್ ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿದೆ. ರಾಜ್ಯದ ನಾಯಕತ್ವ ಬದಲಾವಣೆ ಕುರಿತು ಭಾನುವಾರ ಸಂಜೆ ವೈರಲ್ ಆಗಿರುವ ಅಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಸೇರಿದ್ದು ಎಂದೇ ಬಿಂಬಿತವಾಗಿದೆ. ಈ ಅಡಿಯೋ ನನ್ನದಲ್ಲ, ಇದನ್ನು ಯಾರು ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮಾತೇ ಇಲ್ಲ. ನನ್ನ ಅಡಿಯೋ ಫೇಕ್ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟು ತನಿಖೆಗೆ ಕೋರುತ್ತೇನೆ ಎಂದು ಕಟೀಲ್ ಮಾಧ್ಯಮಗಳಿಗೆ ನಳಿನ್ ಕುಮಾರ್ ಕಟೀಲು ಸ್ಪಷ್ಟನೆ ನೀಡಿದ್ದಾರೆ. ಸಿಎಂಗೆ ದೂರು ಕೊಟ್ಟು ತನಿಖೆಗೆ ಕೋರುತ್ತೇನೆ ಎಂಬುದೇ ದೊಡ್ಡ ನಾಟಕ ಎಂಬ ಅನುಮಾನ ವ್ಯಕ್ತವಾಗಿದೆ.

ಯಡಿಯೂರಪ್ಪರಿಗೆ ದೂರು ಕೊಟ್ಟು ಪ್ರಯೋಜನವೇನು?: ಬಿ.ಎಸ್. ಯಡಿಯೂರಪ್ಪ ಚುನಾಯಿತ ಜನ ಪ್ರತಿನಿಧಿ, ಮಿಗಿಲಾಗಿ ರಾಜ್ಯದ ಮುಖ್ಯಮಂತ್ರಿ. ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರು. ನಾಯಕತ್ವ ಬದಲಾವಣೆ ಬಗ್ಗೆ ಅವರದ್ದೇ ಎನ್ನಲಾದ ಅಡಿಯೋ ಬಿಡುಗಡೆಯಾಗಿದೆ. ಕಟೀಲು ಅವರಿಗೆ ಈ ಅಡಿಯೋ ಸೇರಿದ್ದು ಅಲ್ಲ ಎನ್ನುತ್ತಿದ್ದರೆ ಮೊದಲು ಅವರು ಮುಖ್ಯಮಂತ್ರಿಗೆ ದೂರು ನೀಡುವುದಲ್ಲ. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕಿತ್ತು.

 ಕಟೀಲ್ ಪೊಲೀಸ್ ದೂರು ಕೊಡಲು ಹಿಂದೇಟು

ಕಟೀಲ್ ಪೊಲೀಸ್ ದೂರು ಕೊಡಲು ಹಿಂದೇಟು

ನನ್ನ ಹೆಸರಿನಲ್ಲಿ ಯಾರೋ ಮಾತನಾಡಿದ್ದಾರೆ. ಈ ಅಡಿಯೋದಿಂದ ಮುಖ್ಯಮಂತ್ರಿಗಳ ಘನತೆಗೆ ಕುತ್ತು ಬಂದಿದೆ. ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ದೂರು ಕೊಡಬೇಕಿತ್ತು. ಮಾತ್ರವಲ್ಲ ತನ್ನ ಧ್ವನಿ ಮಾದರಿಯನ್ನು ಪೊಲೀಸರ ಮೂಲಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಒಳಪಡಿಸಿಕೊಳ್ಳಬೇಕಿತ್ತು. ಇದು ಕಾನೂನಾತ್ಮಕವಾಗಿ ತಾನು ತಪ್ಪೇ ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸಿಕೊಳ್ಳಲು ಇರುವ ಏಕೈಕ ದಾರಿ.

ಬೀಸೋ ದೋಣ್ಣೆಯಿಂದ ತಪ್ಪಿಸಿಕೊಂಡರೇ ಕಟೀಲ್

ಬೀಸೋ ದೋಣ್ಣೆಯಿಂದ ತಪ್ಪಿಸಿಕೊಂಡರೇ ಕಟೀಲ್

ನಳಿನ್ ಕುಮಾರ್ ಕಟೀಲು ಅಡಿಯೋ ಬಾಂಬ್ ಬಗ್ಗೆ ಎಲ್ಲೂ ದೂರು ನೀಡಿಲ್ಲ. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದಷ್ಟೇ ಹೇಳಿದ್ದಾರೆ. ವಾಸ್ತವದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ, ಅವರು ಕೂಡ ಇದನ್ನು ತನಿಖೆ ಮಾಡಿ ಎಂದು ಪೊಲೀಸರಿಗೆ ದೂರು ನೀಡಬೇಕು. ಇಲ್ಲವೇ ಆ ಅಡಿಯೋ ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಮೊದಲ ಹಂತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅವರ ಧ್ವನಿ ಮಾದರಿಯನ್ನು ಸಂಗ್ರಹಿಸಿ ಅಡಿಯೋದಲ್ಲಿರುವ ಧ್ವನಿಗೆ ಹೋಲಿಕೆ ಮಾಡಿ ಪ್ರಯೋಗಾಲಯಕ್ಕೆ ಒಳಪಡಿಸಬೇಕು. ಅಲ್ಲಿ ನಿಜವಾಗಿಯೂ ಎರಡೂ ಧ್ವನಿಗೂ ಹೋಲಿಕೆಯಾಗುತ್ತಿಲ್ಲ ಎಂಬುದು ಸಾಬೀತಾದರೆ ಮಾತ್ರ ಬೇರೆ ಯಾರೋ ಕಟೀಲು ಅವರ ಧ್ವನಿ ಅನುಕರಣೆ ಮಾಡಿ ಮಾತನಾಡಿರುವ ಅಡಿಯೋ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಈ ವಾಸ್ತವ ಗೊತ್ತಿದ್ದರೂ ನಳಿನ್ ಕುಮಾರ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕಾರಣದಿಂದಲೋ ಏನೋ ಸಿಎಂ ಅವರಿಗೆ ಪತ್ರ ಬರೆದು ತನಿಖೆಗೆ ಕೋರುತ್ತೇನೆ ಎಂದು ಕಾಲ ಮುಂದೂಡುತ್ತಿದ್ದಾರೆ ಎಂಬ ಅನುಮಾನ ಕಾಡುತ್ತದೆ.

 ಕಟೀಲ್ ಅಡಿಯೋ ಬಾಂಬ್ ವಿವರ

ಕಟೀಲ್ ಅಡಿಯೋ ಬಾಂಬ್ ವಿವರ

''ಸಿಎಂ ಬದಲಾಗುತ್ತಾರೆ, ಇಲ್ಲಿಯವರು ಯಾರೂ ಸಿಎಂ ಆಗಲ್ಲ. ಸಚಿವ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಆ ಟೀಮನ್ನೇ ತೆಗೆಯುತ್ತೇವೆ. ಎಲ್ಲವೂ ದೆಹಲಿಯಿಂದಲೇ ಆಗಲಿದೆ. ಹೆದರಬೇಡಿ, ಎಲ್ಲವೂ ನಮ್ಮ ಕೈಯಲ್ಲಿದೆ,'' ಎಂದು ನಾಯಕತ್ವದ ಬದಲಾವಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತುಳು ಭಾಷೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಅಡಿಯೋ ಬಿಜೆಪಿ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಡಿಯೋ ಬಿಡುಗಡೆ ಬೆನ್ನಲ್ಲೇ " ಈ ಅಡಿಯೋ ನನ್ನದಲ್ಲ, ಇದರ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಿ ತನಿಖೆಗೆ ಕೋರುತ್ತೇನೆ. ನಾಯಕತ್ವ ಬದಲಾವಣೆ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆ ನಡೆದಿಲ್ಲ. ಯಾರು ಮಾತನಾಡಿದ್ದಾರೆ ಎಂಬುದರ ಬಗ್ಗೆ ನನಗೆ ಯಾರ ಮೇಲೂ ಅನುಮಾನ ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ಅಡಿಯೋ ಬಿಡುಗಡೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದಾರೆ. ನಳಿನ್ ಕುಮಾರ್ ಅವರದ್ದು ನಾಟಕವೇ? ಅಡಿಯೋ ವಿವಾದದ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರವೇ ಎಂಬ ಪ್ರಶ್ನೆ ಎದ್ದಿದೆ.

ವಿಧಿ ವಿಜ್ಞಾನ ತಜ್ಞರು ಹೇಳಿದ್ದೇನು?

ವಿಧಿ ವಿಜ್ಞಾನ ತಜ್ಞರು ಹೇಳಿದ್ದೇನು?

ಸಾಮಾನ್ಯವಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಿತ ಅಧಿಕಾರಿಯ ಧ್ವನಿಯನ್ನು ಧ್ವನಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಧ್ವನಿ ಪರೀಕ್ಷೆಯನ್ನು ಕೊಲಾಬ್ರೆಟಲ್ ಸಾಕ್ಷಿಯನ್ನಾಗಿ ಪರಿಗಣಿಸಬಹುದು. ಅದರ ಪ್ರಕಾರ ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿ ಓಡಾಡುತ್ತಿರುವ ಅಡಿಯೋ ಹಾಗೂ ಕಟೀಲ್ ಅವರ ಅಸಲಿ ಧ್ವನಿ ಎರಡು ಮಾದರಿ ಸಂಗ್ರಹಿಸಲಾಗುತ್ತದೆ. ಅದನ್ನು ಸ್ಪೆಕ್ಟ್ರೋಗ್ರಾಫ್ ಮೂಲಕ ಪರೀಕ್ಷೆಗೆ ಒಳಡಿಸಿದಾಗ ಧ್ವನಿಯ ಸಿಗ್ನಲ್, ಪಿಚ್, ಸೌಂಡ್ ವೇವ್ , ಫ್ರೀಕ್ವೆನ್ಸಿಯಲ್ಲಿ ಧ್ವನಿಯ ಮಾದರಿ ಗೊತ್ತಾಗುತ್ತದೆ. ಸಾಮಾನ್ಯವಾಗಿ ಒಬ್ಬರ ಧ್ವನಿ ಇದ್ದಂಗೆ ಇನ್ನೊಬ್ಬರ ಧ್ವನಿ ಇರಲ್ಲ. ನೂರಕ್ಕೆ ನೂರರಷ್ಟು ಧ್ವನಿ ಇವರದ್ದೇ ಎಂದು ವರದಿ ಕೊಡಲಾಗದಿದ್ದರೂ ಶೇ. 80 ರಷ್ಟು ಹೋಲಿಕೆಯಾಗುವುದನ್ನು ಪರಿಗಣಿಸಿ ವರದಿಯನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನೀಡಲಾಗುತ್ತದೆ ಎಂದು ನಿವೃತ್ತ ಸರ್ಕಾರದ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಅದರ ಪ್ರಕಾರ ಹೇಳುವುದಾದರೆ ನಳೀನ್ ಕುಮಾರ್ ಕಟೀಲ್ ಅವರ ಹೆಸರಿನಲ್ಲಿ ವೈರಲ್ ಆಗಿರುವ ಅಡಿಯೋ ಹಾಗೂ ಅವರ ಧ್ವನಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ನೀಡಿ ಪರೀಕ್ಷೆಗೆ ಒಳಪಡಿಸಬೇಕು. ಇದೀಗ ಕೆಲವು ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸುವ ಕಾರಣ ಸ್ವಯಂ ಪ್ರೇರಿತವಾಗಿ ಅವರೇ ಸ್ವತಃ ಧ್ವನಿ ಪರೀಕ್ಷೆಗೆ ಒಳಪಡಸಿಕೊಂಡು ಅಲ್ಲಿನ ವರದಿ ಸಮೇತ ಇದು ನಮ್ಮದಲ್ಲ ಎಂದು ಸಾಭೀತು ಮಾಡಲು ಅವಕಾಶವಿದೆ. ಆದರೆ, ವಾಸ್ತವ ಮಾರ್ಗಗಳನ್ನು ಬಿಟ್ಟು ಸಿಎಂಗೆ ದೂರು ನೀಡಿ ತನಿಖೆಗೆ ಒಳಪಡಿಸುತ್ತೇನೆ ಎಂದು ಹೇಳಿಕೆ ನೀಡುತ್ತಿರುವುದೇ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Recommended Video

CD ಕೇಸ್ ಹಿಂದೆ DKS ಕೈವಾಡ ಇದೆ ಅನ್ನೋದಕ್ಕೆ ಇಷ್ಟು ಸಾಕಲ್ವಾ?? : Ramesh Jarkiholi | Oneindia Kannada
ಮೂಲ ಅಡಿಯೋ ಎಲ್ಲಿದೆ ?

ಮೂಲ ಅಡಿಯೋ ಎಲ್ಲಿದೆ ?

ಒಂದು ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಮೂಲ ಅಡಿಯೋ ಪತ್ತೆ ಮಾಡಬೇಕು. ವೈರಲ್ ಅಗಿರುವ ಅಡಿಯೋದಲ್ಲಿ ಕಟೀಲ್ ಅವರ ಮಾತು ಮಾತ್ರ ಇದ್ದು, ಎದುರು ಮಾತನಾಡುವರ ಧ್ವನಿ ಇಲ್ಲ. ಮೂಲ ಅಡಿಯೋ ಸಿಕ್ಕಿದ್ದೇ ಆದಲ್ಲಿ ಬಹುತೇಕರು ಸ್ಮಾರ್ಟ್ ಪೋನ್ ಬಳಸುವ ಕಾರಣದಿಂದ ಕರೆ ಮಾಡಿ ಮಾತನಾಡಿರುವ ಅಡಿಯೋ ತರ ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ ಮೂಲ ಅಡಿಯೋ ಸಿಕ್ಕಿದರೆ ಅದರ ಜಾಡು ಹಿಡಿದು ಕೊಂಡು ಯಾವ ನಂಬರ್‌ನಿಂದ ಯಾವ ನಂಬರ್‌ಗೆ ಕರೆ ಮಾಡಿ ಮಾತನಾಡಲಾಗಿದೆ ಎಂಬ ವಿವರಗಳನ್ನು ಸಹ ತಾಂತ್ರಿಕವಾಗಿ ಕಲೆ ಹಾಕಲು ಸಾಧ್ಯವಿದೆ. ವೈರಲ್ ಆಗಿರುವ ಅಡಿಯೋ ಎಡಿಟಿಂಗ್ ಆಗಿದ್ದೇ ಆದಲ್ಲಿ ಸಾಕ್ಷ್ಯ ಸಂಗ್ರಹಿಸಲು ಕಷ್ಟವಾಗಬಹುದು. ಆಗ ಕೇವಲ ಇರುವ ಆಯ್ಕೆ ಧ್ವನಿ ಪರೀಕ್ಷೆ ಮಾತ್ರ. ಆದರೆ ಕಾನೂನು ದೃಷ್ಟಿಯಿಂದ ನೋಡಿದರೆ ಧ್ವನಿ ಪರೀಕ್ಷೆ ವರದಿಯನ್ನು ಕೇವಲ ಪೂರಕ ಸಾಕ್ಷಿಯನ್ನಾಗಿ ಪರಿಗಣಿಸಬಹುದಷ್ಟೇ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

English summary
Why did Nalin Kumar Kateel not complain to the police station about the controversial audio?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X