ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಭೆಯಲ್ಲಿ ಮೈತ್ರಿಯಾ ಗೌಡ: 5 ಪ್ರಶ್ನೆಗಳು

|
Google Oneindia Kannada News

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಯಲ್ಲಿ (ಏ 3) ಮೈತ್ರಿಯಾ ಗೌಡ ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಸ್ವಲ್ವ ಹೊತ್ತು ಅಲ್ಲಿ ಗೊಂದಲದ ವಾತಾವರಣ ಮೂಡಿತ್ತು.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ನಡುವೆ ಅದಕ್ಕಿಂತ ಪ್ರಮುಖವಾಗಿ ಬಹುತೇಕ ರಾಷ್ಟ್ರ ಮಟ್ಟದ ನಾಯಕರು ಭಾಗವಹಿಸಿದ್ದ ಈ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಕೂಡಾ ಭಾಗಿಯಾಗಿದ್ದರು.

ನನಗೆ ಸದಾನಂದ ಗೌಡ್ರ ಪುತ್ರ ಕಾರ್ತಿಕ್ ಜೊತೆ ಮದುವೆಯಾಗಿದ್ದು, ಅವರು ಬೇರೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಬಾಂಬ್ ಸಿಡಿಸಿ ಸದ್ಯ ಕಾನೂನು ಹೋರಾಟ ನಡೆಸುತ್ತಿರುವ ಮೈತ್ರಿಯಾ, ಸದಾನಂದ ಗೌಡ್ರನ್ನು ಸಂಪುಟದಿಂದ ಕೈಬಿಡಬೇಕೆಂದು ಪ್ರಧಾನಿಗೆ, ರಾಷ್ಟ್ರಪತಿಗಳಿಗೆ ಪತ್ರ ಕೂಡಾ ಬರೆದಿದ್ದಾಗಿದೆ. (ರಾಷ್ಟ್ರಪತಿಗೆ ಮೈತ್ರಿಯಾ ಪತ್ರ)

ನನಗೆ ಅನ್ಯಾಯವಾಗಿದೆ, ನಾನು ಪ್ರಧಾನಿಯವರನ್ನು ಭೇಟಿಯಗಲೇ ಬೇಕೆಂದು ಮೋದಿ ಸಾರ್ವಜನಿಕ ಸಭೆಯ ವೇಳೆ ಹಠಹಿಡಿದು ಮೈತ್ರಿಯಾ ಗೌಡ ವಿಐಪಿ ಗೇಟಿನ ಮೂಲಕ ಬೃಹತ್ ವೇದಿಕೆ ಹತ್ತಲು ಮುಂದಾಗಿದ್ದರು.

ಆದರೆ ಇದಕ್ಕೆ ಅವಕಾಶ ನೀಡದ ಮಹಿಳಾ ಪೊಲೀಸರು ಅವರನ್ನು ಅಲ್ಲಿಂದ ಕರೆತರುವಲ್ಲಿ ಯಶಸ್ವಿಯಾದರು. ಪೊಲೀಸರ ಜೊತೆ ಮೈತ್ರಿಯಾ ವಾಗ್ವಾದಕ್ಕಿಳಿದರೂ ಖಾಕಿಪಡೆಗಳ ನಿರ್ಧಾರ ಸಮರ್ಥನೀಯವಾಗಿತ್ತು.

ಆದರೆ ಆ ಸಂದರ್ಭದಲ್ಲಿ ಸದಾನಂದ ಗೌಡ್ರ ಬೆಂಬಲಿಗರು ಮತ್ತು ಬಿಜೆಪಿಯ ಸದಸ್ಯರು ಮೈತ್ರಿಯಾ ಜೊತೆ ನಡೆದುಕೊಂಡ ರೀತಿ ಮಾತ್ರ ತಪ್ಪು, ಮಹಿಳೆಯರ ಜೊತೆ ಅವರು ನಡೆದುಕೊಂಡ ರೀತಿ ಪಕ್ಷದ ಸಿದ್ದಾಂತಕ್ಕೆ ಒಪ್ಪುವಂತದಲ್ಲ. (ಕಾರ್ತಿಕ್ ಗೌಡಗೆ ಮತ್ತೆ ವಿಚಾರಣೆಯ ಭೀತಿ)

ಆದರೆ ಮೈತ್ರಿಯಾ ಆ ಬೃಹತ್ ಸಭೆಯಲ್ಲಿ ಮೋದಿ ಭೇಟಿಯಾಗಲು ನಿರ್ಧರಿಸಿದ್ದು ಸರಿಯೇ? ಮೈತ್ರಿಯಾ ಗೌಡಗೆ 5 ಪ್ರಶ್ನೆಗಳು, ಮುಂದೆ ಸ್ಲೈಡಿನಲ್ಲಿ..

ಸಾರ್ವಜನಿಕ ಸಭೆಯಲ್ಲಿ ಇದು ಸಾಧ್ಯವೇ?

ಸಾರ್ವಜನಿಕ ಸಭೆಯಲ್ಲಿ ಇದು ಸಾಧ್ಯವೇ?

ಸಾವಿರಾರು ಜನ ಸೇರಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲೇ ಮೋದಿಯವರನ್ನು ಭೇಟಿ ಮಾಡುವ ಅವಶ್ಯಕತೆ ಮೈತ್ರಿಯಾಗೆ ಏನಿತ್ತು? ಮೈತ್ರಿಯಾ ಯಾವ ಕಾರಣಕ್ಕಾಗಿ ಅಲ್ಲಿ ಕಾಣಿಸಿಕೊಂಡು ರಂಪ ರಾಮಾಯಣ ಮಾಡಿದರು? ಇದರ ಹಿಂದೆ ಕಾಣದ 'ಕೈ'ಗಳ ಕೈವಾಡ ಏನಾದರೂ ಇತ್ತಾ?

ರಾಷ್ಟ್ರೀಯ ವಾಹಿನಿಗಳ ಅಟೆಂನ್ಸನ್

ರಾಷ್ಟ್ರೀಯ ವಾಹಿನಿಗಳ ಅಟೆಂನ್ಸನ್

ನರೇಂದ್ರ ಮೋದಿಯವರನ್ನು ಅಂತಹ ಬೃಹತ್ ಸಭೆಯಲ್ಲಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎನ್ನುವುದು ಯಾರಿಗಾದರೂ ಅರ್ಥವಾಗುವ ವಿಚಾರ. ಆದರೂ, ಅಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರೀಯ ವಾಹಿನಿಗಳ ಅಟೆಂನ್ಸನ್ ಪಡೆದುಕೊಳ್ಳುವ ಹುನ್ನಾರವಿತ್ತೇ?

ಗರಿಷ್ಠ ಭದ್ರತೆ ಇರುವ ರಾಜಕೀಯ ಮುಖಂಡ

ಗರಿಷ್ಠ ಭದ್ರತೆ ಇರುವ ರಾಜಕೀಯ ಮುಖಂಡ

ಜಗತ್ತಿನ ಅತ್ಯಂತ ಗರಿಷ್ಠ ಭದ್ರತೆವಿರುವ ರಾಜಕೀಯ ಮುಖಂಡರಲ್ಲಿ ಮೋದಿ ಮಂಚೂಣಿಯಲ್ಲಿ ನಿಲ್ಲುವವರು. ಮೋದಿ ಬಂದು ಹೋದ್ರೆ ಸಾಕಪ್ಪಾ ಎಂದು ರಾಜ್ಯ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರ ಬೇಕಾದರೆ, ಸಾರ್ವಜನಿಕ ಸಭೆಯಲ್ಲಿ ಮೋದಿ ಭೇಟಿಗೆ ಪೊಲೀಸರು ಅವಕಾಶ ನೀಡ್ಯಾರಾ, ಮೈತ್ರಿಯಾಗೆ ಇದರ ಅರಿವಿಲ್ಲವೇ?

ಅಶೋಕಾ ಹೋಟೇಲ್

ಅಶೋಕಾ ಹೋಟೇಲ್

ತಾನೇ ಹೇಳಿದಂತೆ ಮನವಿ ಪತ್ರ ಸಲ್ಲಿಸಲು ಬಂದಿದ್ದೇ ಆಗಿದ್ದಲ್ಲಿ, ನ್ಯಾಯ ಬೇಕು ಅದಕ್ಕೆ ಮೋದಿ ಭೇಟಿ ಮಾಡುವುದು ಆಕೆಯ ಉದ್ದೇಶವಾಗಿದ್ದರೆ ಮೂರು ದಿನದಿಂದ ಅಶೋಕ್ ಹೋಟೇಲ್ ನಲ್ಲಿ ನಡೆಯುತ್ತಿದ್ದ ಪಕ್ಷದ ಕಾರ್ಯಕಾರಿಣಿಯ ವೇಳೆ ಮೋದಿ ಭೇಟಿಗೆ ಪ್ರಯತ್ನಿಸಬಹುದಿತ್ತಲ್ಲವೇ?

ವಿಚಾರ ಕೋರ್ಟಿನಲ್ಲಿದೆ

ವಿಚಾರ ಕೋರ್ಟಿನಲ್ಲಿದೆ

ಅದಕ್ಕಿಂತ ಹೆಚ್ಚಾಗಿ ಈ ವಿಚಾರ ಸದ್ಯ ಕೋರ್ಟಿನಲ್ಲಿರುವಾಗ ಪ್ರಧಾನಿ ಮೋದಿಯಾಗಲಿ ಅಥವಾ ಇನ್ಯಾರೋ ಆಗಲಿ ಮಧ್ಯಪ್ರವೇಶಿಸಲು ಸಾದ್ಯವಿಲ್ಲ ಎನ್ನುವುದರ ಬಗ್ಗೆ ಮೈತ್ರಿಯಾಗೆ ಅರಿವಿಲ್ಲವೇ? ಮೈತ್ರಿಯಾ ಕಾನೂನು ಸಲಹೆಗಾರರು ಈ ಬಗ್ಗೆ ಆಕೆಗೆ ಹೇಳಿಲ್ಲವೇ?

English summary
Why Mythriya Gowda was in Prime Minister Narendra Modi public meeting at National college, Bengaluru on April 3. Five questions to Mythriya Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X