ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರದರ್ ಕುಮಾರಸ್ವಾಮಿ ಬೈಬಲ್‌ನ 'Judgement Day' ನೆನಪಿಸಿಕೊಂಡಿದ್ದೇಕೆ?

|
Google Oneindia Kannada News

Recommended Video

Karnataka Crisis : ಸದನ ಹೇಗೆ ನಡೆಸೋದು ಸ್ಪೀಕರ್‍ಗೆ ತಿಳಿದಿರತ್ತೆ

ಬೆಂಗಳೂರು, ಜುಲೈ 19: ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾವನೆ ಬಳಿಕ ಇಂದು(ಜುಲೈ 19) ಚರ್ಚೆಗೆ ಮುನ್ನುಡಿ ಬರೆದರು.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

"ಪಕ್ಷಾಂತರ ನಿಷೇಧ ಕಾನೂನು ಹೇಗೆ ಆರಂಭವಾಗಿದ್ದು, ಅದನ್ನು ಹೇಗೆ ಓವರ್ ಕಮ್ ಮಾಡಬಹುದು ಎಂಬುದನ್ನು ಓದಿದ್ದೇವೆ, ನೋಡಿದ್ದೇವೆ.." ಎಂದು ನಿನ್ನೆ ದಿನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎತ್ತಿದ ಪ್ರಶ್ನೆ ಹೇಗೆ ಪ್ರಸ್ತುತ ಎಂಬುದನ್ನು ಮತ್ತೊಮ್ಮೆ ಸದನದ ಮುಂದಿಟ್ಟರು.ನಂತರ ಸದನದ ಮುಂದೆ ಬಿಜೆಪಿ-ಜೆಡಿಎಸ್ ಟಿ20-20 ಸರ್ಕಾರ ಹುಟ್ಟಿದ್ದು ಹೇಗೆ? ತಾವು ರಾಜಕೀಯ ಪ್ರವೇಶ ಮಾಡಿದ್ದು, ತೆಗೆದುಕೊಂಡ ನಿರ್ಣಯಗಳ ಬಗ್ಗೆ ವಿವರಿಸಿದರು.

ವಿಶ್ವಾಸಮತ LIVE: ಸಿಎಂ ಭಾವುಕ ಭಾಷಣ; ಹೋಲ್'ಸೇಲ್' ಆರೋಪವಿಶ್ವಾಸಮತ LIVE: ಸಿಎಂ ಭಾವುಕ ಭಾಷಣ; ಹೋಲ್'ಸೇಲ್' ಆರೋಪ

"confession before the house

"2004ರಲ್ಲಿ ಅನಿವಾರ್ಯವಾಗಿ ನಾನು ರಾಜಕೀಯವಾಗಿ ಬಂದವನು ನಾನು, ನನಗೇನೂ ಸಿಎಂ ಆಗುವ ಆಸೆಯಿರಲಿಲ್ಲ. ಅಂದು ಬಿಜೆಪಿ ಜೊತೆ ಹೋದದ್ದು ದೊಡ್ಡ ತಪ್ಪು, ನನ್ನ ರಾಜಕೀಯ ಜೀವನದ ದೊಡ್ಡ ತಪ್ಪು, ಇದರಿಂದ ನನ್ನ ತಂದೆಗೆ ಆಘಾತವಾಯಿತು, ಜನತಾ ಪರಿವಾರದ ಸಿದ್ದರಾಮಯ್ಯ ಅವರು ದೂರಾದರು.

Why Kumaraswamy quote Judgement Day from Bible? What is the significance?

ಕಳೆದ ಒಂದೂವರೆ ತಿಂಗಳಿನಿಂದ ಸಾರ್ವಜನಿಕ ಅಭಿಪ್ರಾಯ, ಮಾಧ್ಯಮಗಳಿಂದ ಬಂದಿರುವ ವರದಿಗಳಲ್ಲಿ ನನ್ನ ಬಗ್ಗೆ ಬಂದಿರುವ ತಪ್ಪು ಭಾವನೆಗೆ ಸ್ಪಷ್ಟನೆ ನೀಡಬೇಕಿದೆ," ಎಂದರು.

 'ಆಯಾ ರಾಮ್, ಗಯಾ ರಾಮ್' ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ? 'ಆಯಾ ರಾಮ್, ಗಯಾ ರಾಮ್' ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ?

Judgment Day

ಈ ಸಮಯದಲ್ಲಿ ಕುಮಾರಸ್ವಾಮಿ ತಮ್ಮ ಅಮೆರಿಕಾ ಪ್ರವಾಸದ ವೇಳೆಯಲ್ಲಿ ಓದಿದ ಬೈಬಲ್‌ನ 'ಜಡ್ಜ್‌ಮೆಂಟ್ ಡೇ' ಪುಸ್ತಕದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಗಮನ ಸೆಳೆದರು.

"ಆತ್ಮಸಾಕ್ಷಿ ಎಂಬುದಿದೆಯಲ್ಲ, ಅದಕ್ಕೆ ನಾನು ಜಡ್ಜ್ಮೇಂಟ್ ಡೇ ಬಗ್ಗೆ ಹೇಳಿದ್ದು, ನಾವು ನೀವು ಇವತ್ತು ಇಲ್ಲಿ ಉತ್ತರ ಕೊಡೋದಿಕ್ಕೆ ಆಗದೆ ಇರಬಹುದು, ಆದರೆ, ಅಲ್ಲಿ (ದೇವರ ಮುಂದೆ ಎಂದು ಓದಿಕೊಳ್ಳಿ) ಉತ್ತರ ಕೊಡಬೇಕಾಗುತ್ತದೆ," ಎಂದರು. ಜತೆಗೆ ಪುಸ್ತಕ ಸಾಲುಗಳನ್ನು ಓದಿದ ಅವರು, "ನಾನು ಅಮೆರಿಕದ ಪ್ರವಾಸದ ವೇಳೆ ಬೈಬಲ್ ಪುಸ್ತಕದಲ್ಲಿ ಕೆಲಪು ಸಾಲುಗಳನ್ನು ಹೀಗೆ ಬರೆದಿದ್ದಾರೆ. "

"Only consolation is that, there is coming a day, even everyone will give an account of their life, as they stand before almighty God on Judgement Day. with no lawyer, no lies, no facade- just them and the true record of their life".

ತಪ್ಪಿದ ಬಿಜೆಪಿ ಲೆಕ್ಕಾಚಾರ ; 1 ದಿನ ಸರ್ಕಾರ ಉಳಿಸಿದ ಸಿದ್ದರಾಮಯ್ಯ!ತಪ್ಪಿದ ಬಿಜೆಪಿ ಲೆಕ್ಕಾಚಾರ ; 1 ದಿನ ಸರ್ಕಾರ ಉಳಿಸಿದ ಸಿದ್ದರಾಮಯ್ಯ!

"ಇದರ ತಾತ್ಪರ್ಯ, ನ್ಯಾಯ ನಿರ್ಣಯದ ಆ ದಿನ ಬಂದೇ ಬರುತ್ತದೆ, ಅಂದು ನಮ್ಮ ನಡವಳಿಕೆ, ಕಾಯಕಗಳಿಗೆ ನಾವೇ ಉತ್ತರಿಸಬೇಕು, ಆ ಮಹತ್ವದ ದಿನ ನಮ್ಮ ಪರ ವಾದಿಸಲು ನ್ಯಾಯವಾದಿಗಳು, ಬಂಧುಗಳು, ಅಭಿಮಾನಿಗಳು ಇರುವುದಿಲ್ಲ, ನಾವು ಪಾಲಿಸಿದ ಸತ್ಯ ಧರ್ಮಗಳೆ ನಮ್ಮನ್ನು ಕಾಯುತ್ತದೆ" ಎಂದರು.

ತಮ್ಮ ಭಾ‍ಷಣದ ಕೊನೆಯಲ್ಲಿ ಮತ್ತದೇ ಜಡ್ಜ್‌ಮೆಂಟ್ ಡೇ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ, ಎಲ್ಲವನ್ನೂ ನೋಡಲು ಒಬ್ಬ ಇರುತ್ತಾನೆ, ದೇವರು ಅಂತಿಮ ತೀರ್ಪು ನೀಡುತ್ತಾನೆ ಎನ್ನುವ ಮೂಲಕ ದೇವರ ತೀರ್ಪೇ ಅಂತಿಮ ಎಂಬುದನ್ನು ಪ್ರತಿಪಾದಿಸುವ ಪ್ರಯತ್ನ ಮಾಡಿದರು.

English summary
Karnataka trust vote: Why CM HD Kumaraswamy quote 'Judgement Day' from the Bible during the trust vote process discussion? What is the significance of it? how it is connected to political development? Get answer here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X