ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ರಾಷ್ಟ್ರಮಟ್ಟದಲ್ಲಿ ಏಕಾಏಕಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ : ಅಸಲಿ ಕಥೆ ಹುಟ್ಟಿದ್ದು ಎಲ್ಲಿ

|
Google Oneindia Kannada News

ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎನ್ನುವ ವದಂತಿ, ಕಟ್ಟುಕಥೆ ಅದೆಷ್ಟೋ ಬಾರಿ ಸುದ್ದಿಯಾಗಿ, ಅಷ್ಟೇ ಬೇಗ ಸೈಲೆಂಟಾಗಿದ್ದವು. ಈಗ ಮತ್ತೆ ಅದು ಪುನರಾವರ್ತಿತವಾಗಿದೆ, ಎಷ್ಟೋ ಬಾರಿ ಬಿಎಸ್ವೈ ಸ್ಪಷ್ಟನೆಯನ್ನು ನೀಡಿದ್ದರೂ, ರೆಕ್ಕೆಪುಕ್ಕವಿಲ್ಲದ ಇಂತಹ ಸುದ್ದಿಗಳು ಹರಿದಾಡುತ್ತಿವೆ.

ಕೆಲಸದ ನಿಮಿತ್ತ ಯಡಿಯೂರಪ್ಪನವರು ದೆಹಲಿ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಬಿಎಸ್ವೈ ಈಗಾಗಲೇ ಭೇಟಿಯಾಗಿದ್ದಾರೆ.

BREAKING: ರಾಜೀನಾಮೆ ಕುರಿತು ದೆಹಲಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ! BREAKING: ರಾಜೀನಾಮೆ ಕುರಿತು ದೆಹಲಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!

"ನನಗೆ ರಾಜೀನಾಮೆಗೆ ಯಾರೂ ಸೂಚಿಸಿಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆ ನನ್ನ ಮೇಲಿದೆ"ಎನ್ನುವ ಸ್ಪಷ್ಟ ಹೇಳಿಕೆಯನ್ನು ದೆಹಲಿಯಿಂದಲೇ ಬಿಎಸ್ವೈ ನೀಡಿದ್ದರು.

ಡಿಕೆಶಿ ಮನೆಯಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರ ಸಭೆ, ಒಬ್ಬರಿಗೆ ಮಾತ್ರ ಆಹ್ವಾನವಿಲ್ಲಡಿಕೆಶಿ ಮನೆಯಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರ ಸಭೆ, ಒಬ್ಬರಿಗೆ ಮಾತ್ರ ಆಹ್ವಾನವಿಲ್ಲ

ಆದರೆ, ಕೆಲವೊಂದು ರಾಷ್ಟ್ರೀಯ ಮಾಧ್ಯಮಗಳು ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಯನ್ನು ಬಿತ್ತರಿಸಿದ್ದರಿಂದ, ಈ ಸುದ್ದಿ, ಟ್ವಿಟ್ಟರ್ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದೆ.

 ಪ್ರಧಾನಿ ಮೋದಿಯವರನ್ನು ಯಡಿಯೂರಪ್ಪ ಭೇಟಿ

ಪ್ರಧಾನಿ ಮೋದಿಯವರನ್ನು ಯಡಿಯೂರಪ್ಪ ಭೇಟಿ

ಪ್ರಧಾನಿ ಮೋದಿಯವರನ್ನು ಯಡಿಯೂರಪ್ಪ ಭೇಟಿಯಾದ ನಂತರ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿತು. ಕೆಲವೊಂದು ಆಂಗ್ಲ ಮಾಧ್ಯಮಗಳು ಯಡಿಯೂರಪ್ಪನವರು ಆರೋಗ್ಯದ ದೃಷ್ಟಿಯಿಂದ ಪದತ್ಯಾಗ ಮಾಡಲಿದ್ದಾರೆ ಎನ್ನುವ ಸುದ್ದಿ ಬಿತ್ತರಿಸಲಾರಂಭಿಸಿದವು.

 ಯಡಿಯೂರಪ್ಪನವರು ನಡ್ಡಾ ಅವರನ್ನು ಭೇಟಿಯಾದ ಇವರ ಪದತ್ಯಾಗ ಸುದ್ದಿ

ಯಡಿಯೂರಪ್ಪನವರು ನಡ್ಡಾ ಅವರನ್ನು ಭೇಟಿಯಾದ ಇವರ ಪದತ್ಯಾಗ ಸುದ್ದಿ

ಇವೆಲ್ಲದರ ನಡುವೆ, ಯಡಿಯೂರಪ್ಪನವರು ನಡ್ಡಾ ಅವರನ್ನು ಭೇಟಿಯಾದ ನಂತರ ಇವರ ಪದತ್ಯಾಗದ ಸುದ್ದಿ ಇನ್ನಷ್ಟು ವೇಗ ಪಡೆದುಕೊಂಡಿತು. ಟ್ವಿಟ್ಟರ್ ನಲ್ಲಿ ಪರ/ವಿರೋಧ ಚರ್ಚೆಗಳು ತಾರಕಕ್ಕೇರಿದವು. ಹೀಗಾಗಿ, ಯಡಿಯೂರಪ್ಪನವರು ಈ ಸಂಬಂಧ ಸ್ಪಷ್ಟನೆಯನ್ನು ನೀಡಿದರು.

 ರಾಜೀನಾಮೆ ನೀಡುವಂತಹ ಯಾವುದೇ ಪರಿಸ್ಥಿತಿಯಿಲ್ಲ

ರಾಜೀನಾಮೆ ನೀಡುವಂತಹ ಯಾವುದೇ ಪರಿಸ್ಥಿತಿಯಿಲ್ಲ

ರಾಜೀನಾಮೆ ನೀಡುವಂತಹ ಯಾವುದೇ ಪರಿಸ್ಥಿತಿಯಿಲ್ಲ, ನನಗೆ ರಾಜೀನಾಮೆ ನೀಡುವಂತೆಯೂ ಸೂಚಿಸಿಲ್ಲ. ಈ ಸುದ್ದಿ ಎಲ್ಲಾ ಸುಳ್ಳು ಎಂದು ಯಡಿಯೂರಪ್ಪನವರು ಹೇಳಿದ ನಂತರ, ರಾಜೀನಾಮೆ ಸುದ್ದಿ ವೇಗ ಕಳೆದುಕೊಂಡಿತು. ಆದರೂ, ಟ್ವಿಟ್ಟರ್ ನಲ್ಲಿ ಈ ಸಂಬಂಧ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.

Recommended Video

ದಕ್ಷಿಣ ಆಫ್ರಿಕಾ ಮಾಜಿ ಪ್ರಧಾನಿ ಜುಮಾ ಬಂಧನದ ನಂತರ ಹಿಂಸಾಚಾರ | Oneindia Kannada
 ಯಡಿಯೂರಪ್ಪ ರಾಷ್ಟ್ರಮಟ್ಟದಲ್ಲಿ ಏಕಾಏಕಿ ಟ್ವಿಟ್ಟರ್ ಟ್ರೆಂಡಿಂಗ್

ಯಡಿಯೂರಪ್ಪ ರಾಷ್ಟ್ರಮಟ್ಟದಲ್ಲಿ ಏಕಾಏಕಿ ಟ್ವಿಟ್ಟರ್ ಟ್ರೆಂಡಿಂಗ್

ಅಷ್ಟರೊಳಗೆ, ಯಡಿಯೂರಪ್ಪ ರಾಜೀನಾಮೆ, ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಟ್ವಿಟ್ಟರ್ ನಲ್ಲಿ ಶುರುವಾಯಿತು. ಒಟ್ಟಿನಲ್ಲಿ, ಅಂತೆಕಂತೆ ಕಥೆಗಳಿಂದ, ಟ್ವಿಟ್ಟರ್ ನಲ್ಲಿ ಯಡಿಯೂರಪ್ಪ ರಾಷ್ಟ್ರಮಟ್ಟದಲ್ಲಿ ಏಕಾಏಕಿ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದ್ದರು.

English summary
Why Yediyurappa Trending in twitter at national level? Here is the real story behind this. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X