• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ಪದೇಪದೇ ಎಡವುತ್ತಿರುವುದು ಯಾಕೆ, ಪಕ್ಷದೊಳಗೇ ಇದ್ದಾರಾ ಗೂಢಚಾರಿಗಳು?

|
   ಬಿ ಎಸ್ ಯಡಿಯೂರಪ್ಪನವರ ಪಕ್ಷದಲ್ಲೇ ಗೂಢಾಚಾರಿಗಳಿದ್ದಾರಾ? | Oneindia Kannada

   ಮೇ 17ಕ್ಕೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ ಅದೆಷ್ಟು ಬಾರಿ ಸರಕಾರವನ್ನು ಉರುಳಿಸಲು ಪ್ರಯತ್ನಿಸಿದೆ ಎಂದು ಲೆಕ್ಕಹಾಕಲು ಹೊರಟರೆ, ಅದರ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ, ಬಿಜೆಪಿ ಪ್ರತೀಬಾರಿಯೂ ಹಿನ್ನಡೆ ಅನುಭವಿಸುತ್ತಿರುವುದು ಒಂದೆಡೆಯಾದರೆ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಮರ್ಯಾದೆಯೂ ಹರಾಜಾಗುತ್ತಿದೆ.

   ಬಿಜೆಪಿಯೊಳಗೆ ಏನು ನಡೆಯುತ್ತಿದೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಯಾವ ಯಾವ ಶಾಸಕರುಗಳಿಗೆ ಬಿಜೆಪಿ ಆಮಿಷವೊಡ್ಡುತ್ತಿದೆ, ಎಷ್ಟು ಕೋಟಿ ಆಫರ್ ಅನ್ನು ನೀಡಲಾಗುತ್ತಿದೆ ಎನ್ನುವ ಮಾಹಿತಿ ಕುಮಾರಸ್ವಾಮಿಗೆ ಮಿಂಚಿನಂತೆ ತಲುಪುತ್ತಿರುವುದರಿಂದಲೇ, ಯಡಿಯೂರಪ್ಪ ಸತತ ವೈಫಲ್ಯವನ್ನು ಕಾಣುತ್ತಿದ್ದಾರಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

   ಜನ ನಮ್ಮನ್ನು ಕಳ್ಳ ಕಳ್ಳ ಕಳ್ಳಾ ಅಂತಾ ಕರೀತಾ ಇದ್ದಾರೆ : ಡಿಕೆ ಶಿವಕುಮಾರ್

   ಬಿಜೆಪಿಯಲ್ಲೂ ನನಗೆ ಸ್ನೇಹಿತರಿದ್ದಾರೆ ಎನ್ನುವ ಮಾತನ್ನು ಕುಮಾರಸ್ವಾಮಿ ಹಲವು ಬಾರಿ ಹೇಳಿದ್ದುಂಟು. ಒಂದು ಪಕ್ಷದಲ್ಲಿರುವ ಮುಖಂಡರು, ಇನ್ನೊಂದು ಪಕ್ಷದ ನಾಯಕರ ಜೊತೆ ಸ್ನೇಹವನ್ನು ಹೊಂದಿರಬಾರದೆಂದೇನೂ ಇಲ್ಲ, ಆದರೆ ಈ ಸ್ನೇಹಿತರು ಎನ್ನುವ ಪದಕ್ಕೆ ಕುಮಾರಸ್ವಾಮಿಯವರ 'ಡೆಫಿನೇಶನ್' ಏನಿರಬಹುದು ಎನ್ನುವುದು ಸಹಜವಾಗಿ ಏಳುವ ಪ್ರಶ್ನೆ.

   ಎಸ್‌ಐಟಿ ತನಿಖೆಯೇ ಸರಿ, ನ್ಯಾಯಾಂಗ ತನಿಖೆ ಸಾಧ್ಯವಿಲ್ಲ: ರಮೇಶ್ ಕುಮಾರ್ ಸ್ಪಷ್ಟನೆ

   ಈ ಹಿಂದಿನ ಮೂರು ಮತ್ತು ಈಗಿನ ಒಂದು, ಒಟ್ಟಿಗೆ, ಬಿಜೆಪಿಯ ನಾಲ್ಕೂ ಆಪರೇಷನ್ ಕಮಲ ಪ್ರಯತ್ನಗಳು ವಿಫಲವಾಗಿದ್ದು ಬಿಜೆಪಿಯ ಆಂತರಿಕ ವಿದ್ಯಮಾನಗಳ ಸೋರಿಕೆಯಿಂದ ಎನ್ನುವುದು ಬಿಜೆಪಿ ಕಾರ್ಯಕರ್ತರ ವಲಯದಲ್ಲೂ ಕೇಳಿಬರುತ್ತಿರುವ ಮಾತು. ಜಯನಗರ ಅಸೆಂಬ್ಲಿ ಉಪಚುನಾವಣೆಯ ವೇಳೆ, ಬಿಜೆಪಿಯ ಕೆಲವು ಹಿರಿಯ ಮುಖಂಡರ ' ಬೆಂಗಳೂರು adjustment ಪಾಲಿಟಿಕ್ಸ್' ಬಗ್ಗೆ ಕಾರ್ಯಕರ್ತರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ ಘಟನೆಯನ್ನೂ ಇಲ್ಲಿ ಸ್ಮರಿಸಿಕೊಳ್ಲಬಹುದು.

   ಪಕ್ಷದೊಳಗಿರಬಹುದಾದ ಗೂಢಾಚಾರಿಗಳ ಬಗ್ಗೆ ಬಿಎಸ್ವೈಗೆ ಅರಿವಿಲ್ಲವೇ?

   ಪಕ್ಷದೊಳಗಿರಬಹುದಾದ ಗೂಢಾಚಾರಿಗಳ ಬಗ್ಗೆ ಬಿಎಸ್ವೈಗೆ ಅರಿವಿಲ್ಲವೇ?

   ಹಾಗಾದರೆ, ಪಕ್ಷದೊಳಗಿರಬಹುದಾದ ಗೂಢಾಚಾರಿಗಳ ಬಗ್ಗೆ ಯಡಿಯೂರಪ್ಪನವರಿಗೆ ಅರಿವಿಲ್ಲವೇ? ಬಿಜೆಪಿಯ ಆಂತರಿಕ ಶಕ್ತಿಗಳ ಸಹಕಾರವಿಲ್ಲದೇ, ಆಮಿಷಕ್ಕೊಳಗಾದ ಶಾಸಕರನ್ನು ಕುಮಾರಸ್ವಾಮಿ ಅಷ್ಟು ಬೇಗ ಸಂಪರ್ಕಿಸಲು ಹೇಗೆ ಸಾಧ್ಯ? ಇದನ್ನೆಲ್ಲಾ ಅವಲೋಕಿಸಿದಾಗ, ಪಕ್ಷದೊಳಗೆ ಇರುವ ವ್ಯಕ್ತಿಯಿಂದಲೇ ಗೂಢಚರ್ಯೆ ನಡೆಯುತ್ತಿದೆ ಎನ್ನುವುದನ್ನು ಅರಿತುಕೊಳ್ಳಲು ಪಿಎಚ್ಡಿ ಮಾಡುವ ಅವಶ್ಯಕತೆಯಿದೆಯಾ?

   ಎಷ್ಟು ಡಿಮಾಂಡ್ ಮಾಡಲಾಗುತ್ತಿದೆ ಎನ್ನುವುದರ ಖಚಿತ ಮಾಹಿತಿ

   ಎಷ್ಟು ಡಿಮಾಂಡ್ ಮಾಡಲಾಗುತ್ತಿದೆ ಎನ್ನುವುದರ ಖಚಿತ ಮಾಹಿತಿ

   ಆಮಿಷಕ್ಕೊಳಗಾದ ಶಾಸಕರು ಎಲ್ಲಿದ್ದಾರೆ, ಯಾವ ಹೋಟೇಲ್ ನಲ್ಲಿದ್ದಾರೆ, ಅವರಿಗೆ ಎಷ್ಟು ಡಿಮಾಂಡ್ ಮಾಡಲಾಗುತ್ತಿದೆ ಎನ್ನುವುದರ ಖಚಿತ ಮಾಹಿತಿ ಪಡೆಯುತ್ತಿದ್ದ ಕುಮಾರಸ್ವಾಮಿ, ಡಿಕೆಶಿ ಎಂಡ್ ಕೋ, ಅಷ್ಟೇ ವೇಗದಲ್ಲಿ ಬಿಜೆಪಿಯ ಪ್ರಯತ್ನವನ್ನು ಫ್ಲಾಪ್ ಮಾಡಲು ಯಶಸ್ವಿಯಾಗುತ್ತಿರುವುದು ಗೊತ್ತಿರುವ ವಿಚಾರ.

   ಆಪರೇಷನ್ ಕಮಲದ ಆಡಿಯೋ : ಬಿಜೆಪಿ ನೀಡಿದ ಸ್ಪಷ್ಟನೆ

   ಯಡಿಯೂರಪ್ಪನವರನ್ನು ಅನಾಯಾಸವಾಗಿ ಬಕ್ರಾ ಮಾಡಲಾಯಿತು

   ಯಡಿಯೂರಪ್ಪನವರನ್ನು ಅನಾಯಾಸವಾಗಿ ಬಕ್ರಾ ಮಾಡಲಾಯಿತು

   ಆಪರೇಷನ್ ಕಮಲದಿಂದ ಹಿಡಿದು, ಮೊನ್ನೆಮೊನ್ನೆಯ ಆಡಿಯೋ ಟೇಪ್ ಪ್ರಕರಣದವರೆಗೂ, ಯಡಿಯೂರಪ್ಪನವರನ್ನು ಅನಾಯಾಸವಾಗಿ ಬಕ್ರಾ ಮಾಡಲಾಯಿತು. ತಂತ್ರಜ್ಞಾನ ಇಷ್ಟೊಂದು ಅಭಿವೃದ್ದಿಯಾಗಿರುವ ಈ ಹೊತ್ತಿನಲ್ಲಿ ದೇವದುರ್ಗದ ಪ್ರವಾಸಿ ಮಂದಿರದಲ್ಲಿ ಮಾತುಕತೆಗೆ ಆಗಮಿಸಿದ್ದ ಶರಣಗೌಡ ಏನೇನು ಸಿದ್ದತೆ ಮಾಡಿಕೊಂಡು ಬಂದಿರಬಹುದು ಎನ್ನುವ ಕನಿಷ್ಟ ಮುಂದಾಲೋಚನೆಯನ್ನೂ ಮಾಡದೇ ತಗಾಲಾಕಿಕೊಂಡು ರಾಜ್ಯದ ಜನರ ಮುಂದೆ ನಗೇಪಾಟಲಿಕೆಗೆ ಗುರಿಯಾಗಬೇಕಾಯಿತು. ಯಡಿಯೂರಪ್ಪನವರಿಗೆ ಯಾಕಿಷ್ಟು ಕುರ್ಚಿಯ ಮೇಲೆ ಲಾಲಸೆ ಎಂದು ಜನ ಮಾತನಾಡಿಕೊಳ್ಳುವಂತಾಯಿತು.

   ಯಡಿಯೂರಪ್ಪ ಆಪರೇಷನ್ ಕಮಲ ಹಾಳುಗೆಡವಿದ್ದೇ ಈ ಪಂಚ ಪಾಂಡವರು!

   ಮೋದಿ, ಬಿಎಸ್ವೈ ಜೊತೆ ಮಾತನಾಡಲೇ ಇಲ್ಲ

   ಮೋದಿ, ಬಿಎಸ್ವೈ ಜೊತೆ ಮಾತನಾಡಲೇ ಇಲ್ಲ

   ಇದರ ಜೊತೆಗೆ, ಶರಣಗೌಡ ಅವರನ್ನು ಭೇಟಿಯಾಗಿದ್ದು ಹೌದು, ಆದರೆ ಆಡಿಯೋದಲ್ಲಿರುವ ಪ್ರಮುಖ ಭಾಗವನ್ನು ಮಾತ್ರ ಎಡಿಟ್ ಮಾಡಿ ತಮಗೆ ಬೇಕಾದ ಹಾಗೇ ಬಳಸಿಕೊಳ್ಳಲಾಗಿದೆ ಎನ್ನುವ ಮೂಲಕ, ಯಡಿಯೂರಪ್ಪ ಏನು ಸತ್ಯಹರಿಶ್ಚಂದ್ರ ಆಗಲು ಹೊರಟರೋ, ಅದರಿಂದ ಪಕ್ಷವನ್ನು ಮತ್ತು ಇದುವರೆಗಿನ ತಮ್ಮ ಹೋರಾಟದ ರಾಜಕೀಯ ಜೀವನಕ್ಕೆ ಅವರೇ ಕಪ್ಪುಚುಕ್ಕೆ ಎಳೆದು ತಂದುಕೊಂಡರು. ಹುಬ್ಬಳ್ಳಿ ಸಾರ್ವಜನಿಕ ಸಭೆಯಲ್ಲಿ ಅಕ್ಕಪಕ್ಕದಲ್ಲಿ ಕೂತಿದ್ದರೂ ಪ್ರಧಾನಿ ಮೋದಿ, ಬಿಎಸ್ವೈ ಜೊತೆ ಮಾತನಾಡಲೇ ಇಲ್ಲ.

   ನಾವೂ ಸದನದಲ್ಲಿ ಧ್ವನಿಸುರುಳಿಯನ್ನು ಬಿಡುಗಡೆ ಮಾಡುತ್ತೇವೆ

   ನಾವೂ ಸದನದಲ್ಲಿ ಧ್ವನಿಸುರುಳಿಯನ್ನು ಬಿಡುಗಡೆ ಮಾಡುತ್ತೇವೆ

   ಮಾಹಿತಿ ಸೋರಿಕೆಯಾಗುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಕೊಡುವುದಾದರೆ, ಆಡಿಯೋ ಟೇಪ್ ಪ್ರಕರಣದಲ್ಲಿ, ನಾವೂ ಸದನದಲ್ಲಿ ಧ್ವನಿಸುರುಳಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದಾಗ, ಕುಮಾರಸ್ವಾಮಿ ಹೇಳಿದ್ದು, ಅದ್ಯಾವುದೋ ನಲವತ್ತು ಕೋಟಿಯ ಹಳೇ ಸರಕನ್ನು ಬಿಡುಗಡೆ ಮಾಡಬಹುದು ಎಂದಿದ್ದರು. ಅದರಂತೆಯೇ, ರೇಣುಕಾಚಾರ್ಯ, ಎಚ್ಡಿಕೆ ಉಲ್ಲೇಖಿಸಿದ್ದ ಆಡಿಯೋ ಸಿಡಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದರು.

   ನಾಲ್ಕನೇ ಆಪರೇಷನ್ ಕಮಲವನ್ನು ಅತ್ಯಂತ ಗೌಪ್ಯ

   ನಾಲ್ಕನೇ ಆಪರೇಷನ್ ಕಮಲವನ್ನು ಅತ್ಯಂತ ಗೌಪ್ಯ

   ತಮ್ಮವರಿಂದಲೇ ಮಾಹಿತಿ ಸೋರಿಕೆಯಾಗುತ್ತಿದೆ ಎನ್ನುವ ಸತ್ಯ ತಿಳಿಯದಷ್ಟು ದಡ್ಡರೇನೂ ಯಡಿಯೂರಪ್ಪನವರಲ್ಲ. ಇದನ್ನು ಅರಿತೇ ನಾಲ್ಕನೇ ಆಪರೇಷನ್ ಕಮಲವನ್ನು ಅತ್ಯಂತ ಗೌಪ್ಯವಾಗಿ ಯಡಿಯೂರಪ್ಪ ನಡೆಸಿದರೂ ಮತ್ತೆ ಮುಖಭಂಗ ಅನುಭವಿಸಿದ್ದಾರೆ. ವಿರೋಧ ಪಾಳಯದ ಚಲನವಲನಗಳ ಬಗ್ಗೆ ಆಡಳಿತ ಪಕ್ಷದವರು ಅಷ್ಟೊಂದು ಕರಾರುವಕ್ಕಾಗಿ ತಿಳಿಯಲು ಹೇಗೆ ಸಾಧ್ಯ?

   ಪಕ್ಷದೊಳಗಿರುವ 'ಜಾಸೂಸ್' ಅನ್ನು ಯಡಿಯೂರಪ್ಪ ಮಟ್ಟಹಾಕಬೇಕಿದೆ

   ಪಕ್ಷದೊಳಗಿರುವ 'ಜಾಸೂಸ್' ಅನ್ನು ಯಡಿಯೂರಪ್ಪ ಮಟ್ಟಹಾಕಬೇಕಿದೆ

   ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಮುಂಬಾಗಿಲಿನಲ್ಲಿ ಬಿಜೆಪಿ ಮುಖಂಡರು ಹೇಳುತ್ತಿದ್ದರೂ, ಹಿಂಬಾಗಿಲಿನಲ್ಲಿ ಅವರನ್ನು ತೆರೆಮೆರೆಗೆ ಸರಿಸಲು ಪ್ರಯತ್ನ ನಡೆಯುತ್ತಿರುವುದು ಗೊತ್ತಿಲ್ಲದ ವಿಚಾರವೇನೂ ಅಲ್ಲ. ಹೀಗಿರುವಾಗ, ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಅದು ಫಲಕೊಡುವ ಸಾಧ್ಯತೆ ಕಮ್ಮಿ.

   English summary
   Why Karnataka Unit BJP President Yeddyurappa's Operation Kamala again and again failing? Is anybody in the party leaking the information to ruling party?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X