ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆ.ಸಿ.ಮಾಧುಸ್ವಾಮಿ 'ಬಾಯಿಚಪಲವೇ' ಪ್ರಮುಖ ಹುದ್ದೆ ಕೈತಪ್ಪಲು ಕಾರಣ?

|
Google Oneindia Kannada News

ಯಡಿಯೂರಪ್ಪನವರ ಸಂಪುಟ ವಿಸ್ತರಣೆಯ ನಂತರ ಖಾತೆ ಹಂಚಿಕೆಯಲ್ಲಿ ದೊಡ್ಡ ಹಿನ್ನಡೆಯಾಗಿರುವ ಮುಖಂಡರ ಪೈಕಿ, ಚಿಕ್ಕನಾಯಕನಹಳ್ಳಿ ಶಾಸಕ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಕೂಡಾ ಒಬ್ಬರು. ಇವರ ಬಳಿಯಿದ್ದ ಖಾತೆಯನ್ನು ಹೆಚ್ಚುವರಿಯಾಗಿ ಬಸವರಾಜ ಬೊಮ್ಮಾಯಿಯವರಿಗೆ ನೀಡಲಾಗಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಹೊಂದಿದ್ದ ಜೆ.ಸಿ.ಮಾಧುಸ್ವಾಮಿಯವರಿಗೆ ಈಗ ವೈದ್ಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ನೀಡಲಾಗಿದೆ. ಅವರ ಹಿಂದಿನ ಖಾತೆ ಬೊಮ್ಮಾಯಿ ಪಾಲಾಗಿದೆ.

ಬಿಎಸ್ವೈ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಸಮರ್ಥ ಸಚಿವರಿಗೆ ಯಾಕೀ ಹಿನ್ನಡೆ? ಬಿಎಸ್ವೈ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಸಮರ್ಥ ಸಚಿವರಿಗೆ ಯಾಕೀ ಹಿನ್ನಡೆ?

ಸಂಸದೀಯ ಇಲಾಖೆ ನೇರವಾಗಿ ಸಚಿವ ಸಂಪುಟ ಸಭೆಯ ತೀರ್ಮಾನವನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವಂತಹ ಇಲಾಖೆ. ಜೊತೆಗೆ ಅಧಿವೇಶನದ ವೇಳೆಯೂ ಈ ಇಲಾಖೆಯ ಪಾತ್ರ ಮಹತ್ವದ್ದು. ಸರಕಾರದ ಕಾರ್ಯಕ್ರಮಗಳನ್ನು ಅಧಿವೇಶನದಲ್ಲಿ ಮೊದಲು ಮಂಡಿಸುವುದು, ಅಲ್ಲದೇ, ವಿರೋಧ ಪಕ್ಷಗಳ ವಿಶ್ವಾಸವನ್ನೂ ಗಳಿಸುವುದು ಪ್ರಮುಖವಾಗಿರುತ್ತದೆ.

ಆದರೆ, ಇದನ್ನೆಲ್ಲಾ ಮಾಧುಸ್ವಾಮಿಯವರು ಸಮರ್ಥವಾಗಿ ನಿಭಾಯಿಸಿಕೊಂಡು ಬಂದರು ಎಂದು ಹೇಳಲು ಕೆಲವೊಂದು ಅಪವಾದಗಳಿವೆ. ಸಾರ್ವಜನಿಕವಾಗಿ ಅವರ ಭಾಷೆ, ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಅದರೆ ಕೆಲವೊಂದು ಸ್ಯಾಂಪಲ್..

ಮತ್ತೆ ಮಾತಿನಿಂದಲೇ ಸುದ್ದಿಯಾದ ಮಾಧುಸ್ವಾಮಿ! ಮತ್ತೆ ಮಾತಿನಿಂದಲೇ ಸುದ್ದಿಯಾದ ಮಾಧುಸ್ವಾಮಿ!

ವಿಧಾನಮಂಡಲದ ಅಧಿವೇಶನ

ವಿಧಾನಮಂಡಲದ ಅಧಿವೇಶನ

ವಿಧಾನಮಂಡಲದ ಅಧಿವೇಶನದಲ್ಲಿ ಹಲವು ಬಾರಿ ಸರಕಾರ, ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಮುಜುಗರದಿಂದ ಮಾಧುಸ್ವಾಮಿ ಪಾರು ಮಾಡಿದ್ದರು. ಜೊತೆಗೆ, ವಿರೋಧ ಪಕ್ಷದವರ ಟೀಕೆಗೂ ಕೌಂಟರ್ ನೀಡುವಲ್ಲಿ ಇವರು ಯಶಸ್ವಿಯಾಗಿದ್ದರು. ಆದರೆ, ಸಾರ್ವಜನಿಕವಾಗಿ ಇವರು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ, ಇವರಿಗೆ ಸಂಸದೀಯ ವ್ಯವಹಾರ ಖಾತೆ ಕೈತಪ್ಪಿ ಹೋಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

ರಾಸ್ಕಲ್ ಕತ್ತೆ ಕಾಯೋಕೆ ಹೇಳಿದ್ನಾ ಇಲ್ಲಿ

ರಾಸ್ಕಲ್ ಕತ್ತೆ ಕಾಯೋಕೆ ಹೇಳಿದ್ನಾ ಇಲ್ಲಿ

"ಜಾಡ್ಸಿ ಒದ್ದುಬಿಟ್ರೆ ಎಲ್ಲಿಗೆ ಹೋಗಿ ಬೀಳ್ತಿಯಾ ಗೊತ್ತಾ ನೀನೀಗಾ?, ರಾಸ್ಕಲ್ ಕತ್ತೆ ಕಾಯೋಕೆ ಹೇಳಿದ್ನಾ ಇಲ್ಲಿ?, ಯಾವ ಸೋಪು ನಿನ್ನ ಹೆಂಡತಿ ಸೀರೆ ತೊಳೆಯೋಕೆ ತಗೋಂಡು ಹೋಗೋದು. ರಾಸ್ಕಲ್ಸ್ ಏನ್ ತಿಳಿದುಕೊಂಡಿದ್ದೀರಾ?, ರೆಸಲ್ಯೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ" - ಮಾಧುಸ್ವಾಮಿ ಈ ರೀತಿ ತುಮಕೂರು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಆ ಮೇಲೆ ವಿಷಾದ ವ್ಯಕ್ತ ಪಡಿಸಿದ್ದರು.

ಹುಳಿಯೂರು ವೃತ್ತಕ್ಕೆ ಕನಕದಾಸರ ಹೆಸರು

ಹುಳಿಯೂರು ವೃತ್ತಕ್ಕೆ ಕನಕದಾಸರ ಹೆಸರು

ಜಿಲ್ಲೆಯ ಹುಳಿಯೂರು ವೃತ್ತಕ್ಕೆ ಕನಕದಾಸರ ಹೆಸರು ಇಡುವ ಸಂಬಂಧ ನಡೆದ ಸಭೆಯಲ್ಲಿ ಮಾಧುಸ್ವಾಮಿ, ಕಾಗಿನೆಲೆ ಪೀಠದ ಈಶ್ವರಾನಂದಸ್ವಾಮಿಯವರನ್ನು ಅವಮಾನಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆ ವೃತ್ತಕ್ಕೆ ಲಿಂಗಾಯಿತ ಸಮುದಾಯದ ಕೆಲವು ಮುಖಂಡರು ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಯವರ ಹೆಸರು ಇಡಲು ಒತ್ತಾಯಿಸಿದ್ದರು. ಈ ಸಭೆಯಲ್ಲಿ ಮಾಧುಸ್ವಾಮಿ ನಡೆದುಕೊಂಡ ರೀತಿ ಕುರುಬ ಸಮುದಾಯದ ಕೋಪಕ್ಕೆ ಕಾರಣವಾಗಿತ್ತು.

ದೂರು ನೀಡಲು ಬಂದ ಮಹಿಳೆಯೊಬ್ಬರಿಗೆ ಮಾಧುಸ್ವಾಮಿ ಆವಾಜ್

ದೂರು ನೀಡಲು ಬಂದ ಮಹಿಳೆಯೊಬ್ಬರಿಗೆ ಮಾಧುಸ್ವಾಮಿ ಆವಾಜ್

"ಯೇ ಮುಚ್ಚೇ ಬಾಯಿ ರಾಸ್ಕಲ್" ಎಂದು ದೂರು ನೀಡಲು ಬಂದ ಮಹಿಳೆಯೊಬ್ಬರಿಗೆ ಮಾಧುಸ್ವಾಮಿ ಹೇಳಿದ್ದು, ಸರಕಾರಕ್ಕೆ ತೀವ್ರ ಮುಜುಗರ ತಂದಿತ್ತು. ಕೋಲಾರದಲ್ಲಿ ಕೆರೆ ವೀಕ್ಷಣೆಯ ಸಂಬಂಧ ಸಚಿವರು ಅಲ್ಲಿಗೆ ಭೇಟಿ ನೀಡಿದ್ದರು. ಆಗ, ಮಹಿಳೆಯೊಬ್ಬರು ಭೂಕಬಳಿಕೆ ಬಗ್ಗೆ ದೂರು ನೀಡಲು ಬಂದಿದ್ದರು.

English summary
Why JC Madhuswamy Removed From Parliamentary Affairs Portfolio In BSY Government,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X