ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೌದು! ನಮ್ಮ ಜನ ಕೈಯಿಂದಲೇ ತಿನ್ನುವುದು ಏಕೆ?

By Srinath
|
Google Oneindia Kannada News

ಲೋಕಸಭಾ ಚುನಾವಣೆ ವೇಳೆ ಇದು ಕಾಂಗ್ರೆಸ್ ಪಕ್ಷ ಪರವಾದ paid news ಅಂದುಕೊಳ್ಳಬೇಡಿ. ಬದಲಿಗೆ ಅನಾದಿಕಾಲದಿಂದಲೂ ನಾವು ಭಾರತೀಯರು ಅನೂಚವಾಗಿ ಪಾಲಿಸಿಕೊಂಡು ಬಂದಿರುವ ಒಂದು ಶ್ರೇಷ್ಠ ಅಭ್ಯಾಸವಿದು.

ಆಯ್ತು ಹಳೆಯ ಕಾಲದ ಜನ ಕೈಯಿಂದಲೇ ತಿನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇದು ಅತ್ಯಾಧುನಿಕ ಯುಗ. ಇನ್ನಾದರೂ ಕೈಯನ್ನು ಬಳಸದೆ ಆಧುನಿಕ ಸಲಕರಣೆ/ಪರಿಕರಗಳೊಂದಿಗೆ ಬಾಯಿಗೆ ಆಹಾರ ಹಾಕಿಕೊಳ್ಳಬಹುದಲ್ಲಾ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನೋಡಿದಾಗ...

Why indians eat with their hands- banana leaf meals
ಕೈಯಿಂದ ಬಾಯಿಗೆ ಆಹಾರ ಹಾಕಿಕೊಂಡಾಗ ಅದು ಹೊಟ್ಟೆಗೆ ಸೇರಿ, ಮೈಗೆ ಹತ್ತುವುದಷ್ಟೇ ಅಲ್ಲ. ಮೆದುಳಿಗೂ ಹತ್ತುತ್ತದೆ ಮುಂದೆ ಆಧ್ಯಾತ್ಮಕ್ಕೂ ಸೋಪಾನವಾಗುತ್ತದೆ. ಜನ ಈಗಲೂ ಬಾಳೆ ಎಲೆ ಊಟ ಮಾಡುವುದು ಏಕೆಂದರೆ ಈ ರಸಸ್ವಾದಕ್ಕಾಗಿಯೆ. ಇದು ವೇದ ಕಾಲದಿಂದಲೂ ಬಂದಿರುವ ಪದ್ಧತಿ/ ಅಭ್ಯಾಸ. ಇದರ ಮುಂದೆ ಚಮಚ/ ಫೋರ್ಕು ಸಪ್ಪೆಯೇ.

ನಮ್ಮ ಕೈಗಳು ಮತ್ತು ಕಾಲುಗಳು ಐದು ಅಂಶಗಳಿಗೆ ಒತ್ತು ನೀಡುತ್ತವೆ: ಐದು ಬೆರಳುಗಳ ಪೈಕಿ ಒಂದೊಂದೂ ಮಹತ್ವ ಪಡೆದಿವೆ:
1. ಬೆಟ್ಟು- ಇದು ಅಗ್ನಿ. ಮಕ್ಕಳೂ ಬೆಟ್ಟು ಚೀಪುವುದು ಇದೇ ಕಾರಣಕ್ಕೆ. ಮಕ್ಕಳಲ್ಲಿ ಆಹಾರ ಜೀರ್ಣವಾಗದೆ ಇರುವಾಗ ಬೆಟ್ಟು ಚೀಪುವುದರಿಂದ ಅದು ಸಾಧ್ಯವಾಗುತ್ತದೆ.
2. ತೋರ್ಬೆರಳು - ಇದು ವಾಯು. 3. ಮಧ್ಯಬೆರಳು - ಇದು ಆಕಾಶ. 4. ಉಂಗುರ ಬೆರಳು - ಇದು ಭೂಮಿ ಮತ್ತು 5. ಕಿರುಬೆರಳು - ಇದು ಜಲ.

ಈ ವಿಚಾರದಲ್ಲಿ ಮಡಿಮೈಲಿಗೆಯ ಭಾರತೀಯರನ್ನು ವಿದೇಶಿಯರೂ ಅನುಸರಿಸುವುದುಂಟು. ಅದರಲ್ಲೂ ಭಾರತಕ್ಕೆ ಬಂದಾಗ ಕೈಯಿಂದಲೇ ಆಹಾರ ಸೇವನೆ ಮಾಡುವುದನ್ನು ರೂಢಿಮಾಡಿಕೊಳ್ಳುತ್ತಾರೆ. ಭಾರತೀಯ ಆಹಾರ ಪದ್ಧತಿಗಳಿಗೆ ಮಣೆ ಹಾಕುವ ತಾರಾ ಹೋಟೆಲುಗಳು ಸಹ ಈಗೀಗ ವಿದೇಶಿ ಅತಿಥಿಗಳಿಗೂ ಲಕ್ಷಣವಾಗಿ ಬಾಳೆ ಎಲೆ ಊಟ ಬಡಿಸುವುದುಂಟು. Vedic wisdom behind eating with your hands ಎಂದು ವಿದೇಶಿ ಅತಿಥಿಗಳಿಗೆ ತಿಳಿಯ ಹೇಳುತ್ತಾರೆ.

English summary
You may have often wondered why people eat with their hands. Eating food with your hands feeds not only the body but also the mind and the spirit. That is the Vedic wisdom behind the famous banana leaf meals whose pleasure can only be appreciated fully, it is said, if one eats with hands and not fork and spoon. Traditionally, Indians have always eaten with their hands but the experience and its virtues have been elevated to a gastronomic art.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X