ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ರಾಜಕಾರಣಕ್ಕೆ ಸ್ಪೋಟಕ ತಿರುವು ನೀಡಿದ ಎಚ್ಡಿಕೆ ಹೇಳಿಕೆ: ಏನಿದರ ಅಸಲಿಯತ್ತು?

|
Google Oneindia Kannada News

Recommended Video

Will Not Try Remove BJP Government, says Kumaraswamy | Oneindia Kannada

ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ವಿಚಾರದಲ್ಲಿ ಜೆಡಿಎಸ್ಸಿನ ಹಾಲೀ ಶಾಸಕರೊಬ್ಬರು ನಾಗಮಂಗಲದಲ್ಲಿ ಕೊಂಚ ಸುಳಿವನ್ನು ನೀಡಿದ್ದರು. ಇದನ್ನು ಪುಷ್ಟೀಕರಿಸುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಹೇಳಿಕೆ ನೀಡುತ್ತಿದ್ದಾರೆ.

"ನಾನು ಬಯಸಿದಷ್ಟು ದಿನ ಬಿಜೆಪಿ ಸರಕಾರ ಇರುತ್ತದೆ" ಎಂದು ಹೇಳಿರುವ ಕುಮಾರಸ್ವಾಮಿ, "ಬಿಜೆಪಿ ಸರಕಾರ ಉರುಳಲು ಬಿಡುವುದಿಲ್ಲ" ಎನ್ನುವ ಹೇಳಿಕೆಯನ್ನೂ ಬ್ಯಾಕ್ ಟು ಬ್ಯಾಕ್ ನೀಡಿದ್ದಾರೆ.

'ಸರ್ಕಾರದ ಉಳಿವು ನನ್ನ ಕೈಯಲ್ಲಿದೆ, ಜನರ ದುಡ್ಡು ಸುಮ್ಮನೆ ಖರ್ಚು ಮಾಡಿಸಲ್ಲ''ಸರ್ಕಾರದ ಉಳಿವು ನನ್ನ ಕೈಯಲ್ಲಿದೆ, ಜನರ ದುಡ್ಡು ಸುಮ್ಮನೆ ಖರ್ಚು ಮಾಡಿಸಲ್ಲ'

ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗುರಿಯಾಗಿರುವ ಈ ಹೇಳಿಕೆಯ ಹಿಂದೆ ಕುಮಾರಣ್ಣನ ಹಲವು ಲೆಕ್ಕಾಚಾರವಿದೆ ಎನ್ನುವ ಮಾತು ಜೆಡಿಎಸ್ ಅಂಗಣದಲ್ಲಿ ತೇಲಾಡುತ್ತಿದೆ.

ಬಿಜೆಪಿ ಜೆಡಿಎಸ್ ಮತ್ತೆ ಒಂದಾಗುತ್ತಾ? ಸುರೇಶ್ ಅಂಗಡಿ ಅಂಥದ್ದೇನು ಹೇಳಿದ್ರು?ಬಿಜೆಪಿ ಜೆಡಿಎಸ್ ಮತ್ತೆ ಒಂದಾಗುತ್ತಾ? ಸುರೇಶ್ ಅಂಗಡಿ ಅಂಥದ್ದೇನು ಹೇಳಿದ್ರು?

ಇಲ್ಲಿ, ಬಿಜೆಪಿ ಮೇಲೆ ಒಮ್ಮಿಂದೊಮ್ಮೆಲೇ ಕುಮಾರಸ್ವಾಮಿಗೆ ಪ್ರೀತಿ ಹುಟ್ಟಿದೆ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾದರೆ, ಕುಮಾರಸ್ವಾಮಿ ಬದಲಾದ ನಿಲುವಿಗೆ ಕಾರಣವೇನು ಎಂದಾಗ, ಎರಡು ವಿಷಯಗಳು ಹೀಗೆ ಬಂದು ಹಾಗೇ ಹೋಗುತ್ತದೆ.

ರಾಜ್ಯ ರಾಜಕಾರಣಕ್ಕೆ ತಿರುವು ನೀಡುವಂಥ ಹೇಳಿಕೆ

ರಾಜ್ಯ ರಾಜಕಾರಣಕ್ಕೆ ತಿರುವು ನೀಡುವಂಥ ಹೇಳಿಕೆ

ರಾಜ್ಯ ರಾಜಕಾರಣಕ್ಕೆ ತಿರುವು ನೀಡುವಂಥ ಹೇಳಿಕೆಯೊಂದನ್ನು ಶನಿವಾರ (ಅ 26) ಬೆಳಗಾವಿಯಲ್ಲಿ ಎಚ್. ಡಿ. ಕುಮಾರಸ್ವಾಮಿ ನೀಡಿದ್ದರು. ಬಿಜೆಪಿಯು ರಾಜ್ಯದಲ್ಲಿ ಪೂರ್ಣಾವಧಿ ಅಧಿಕಾರ ಪೂರೈಸುತ್ತಾ ಎಂಬ ಪ್ರಶ್ನೆಗೆ, "ಬಿಜೆಪಿ ಸರ್ಕಾರ ಇರಬೇಕೋ ಬೇಡವೋ ಎಂಬುದು ನನ್ನ ಕೈಯಲ್ಲಿದೆ" ಎಂದಿದ್ದರು.

ಹಳೇ ಮೈಸೂರು ಭಾಗದ ಜೆಡಿಎಸ್ ಶಾಸಕರು

ಹಳೇ ಮೈಸೂರು ಭಾಗದ ಜೆಡಿಎಸ್ ಶಾಸಕರು

ಪ್ರಮುಖವಾಗಿ ಹಳೇ ಮೈಸೂರು ಭಾಗದ ಜೆಡಿಎಸ್ ಶಾಸಕರು ಹೋಲ್ಸೇಲ್ ಬೇರೆ ಪಕ್ಷಕ್ಕೆ ಗುಳೇ ಹೋಗುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿತ್ತು. "ಹೋಗುವವರು ಹೋಗಲಿ" ಎನ್ನುವ ಹೇಳಿಕೆಯನ್ನು ದೇವೇಗೌಡ್ರು ನೀಡಿದ್ದರೂ, ಅದನ್ನು ತಡೆಯುವ ತಂತ್ರಗಾರಿಕೆಯನ್ನು ಗೌಡ್ರು ಮತ್ತು ಕುಮಾರಣ್ಣ ಮಾಡುತ್ತಲೇ ಇದ್ದಾರೆ ಎನ್ನುವ ಮಾತಿದೆ.

ಗೌಡ್ರ ಮತ್ತು ಎಚ್ಡಿಕೆ ಲೆಕ್ಕಾಚಾರ

ಗೌಡ್ರ ಮತ್ತು ಎಚ್ಡಿಕೆ ಲೆಕ್ಕಾಚಾರ

ಪಕ್ಷಕ್ಕೆ ಮುಜುಗರ ತಂದೊಡ್ಡುವ ಇಂತಹ ಕ್ಲಿಷ್ಟ ಸಮಯದಲ್ಲಿ ಬಿಜೆಪಿಗೆ ಬೆಂಬಲ ನೀಡಿದರೆ, ಜೆಡಿಎಸ್ ಬಿಟ್ಟು ಹೋಗುವ ಶಾಸಕರು ತಮ್ಮ ನಿರ್ಧಾರವನ್ನು ಬದಲಾಯಿಸಬಹುದು ಎನ್ನುವುದು ಗೌಡ್ರ ಮತ್ತು ಎಚ್ಡಿಕೆ ಲೆಕ್ಕಾಚಾರ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ, ತಮ್ಮ ಶಾಸಕರ ಮನವೊಲಿಸಲು ಸುಲಭವಾಗುತ್ತದೆ ಎನ್ನುವುದು ಇವರ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸಲು ಪ್ರಯತ್ನಿಸಿದಷ್ಟು ಬಲಾಢ್ಯ

ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸಲು ಪ್ರಯತ್ನಿಸಿದಷ್ಟು ಬಲಾಢ್ಯ

ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸಲು ಪ್ರಯತ್ನಿಸಿದಷ್ಟು ಅವರು ಕಾಂಗ್ರೆಸ್ಸಿನಲ್ಲಿ ಬಲಾಢ್ಯರಾಗುತ್ತಿದ್ದಾರೆ. ಬಯಸಿದ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿದ ನಂತರ, ಸಿದ್ದರಾಮಯ್ಯನವರು ಏನು ಯೋಜನೆಯಂತೇ ರಾಜಕೀಯ ಹೆಜ್ಜೆಯಿಡುತ್ತಿದ್ದಾರೋ ಅದೆಲ್ಲಾ ಸರಿದಾರಿಯಲ್ಲಿ ಸಾಗುತ್ತಿದೆ. ಬಿಜೆಪಿ ಸರಕಾರ ಉರುಳಿದರೆ, ಅವರ ಮುಂದಿನ ಗುರಿ ಸುಲಭವಾಗುತ್ತದೆ, ಅದನ್ನು ತಪ್ಪಿಸುವ ಲೆಕ್ಕಾಚಾರವೂ ಗೌಡ್ರು ಮತ್ತು ಕುಮಾರಸ್ವಾಮಿಯವರದ್ದು ಎನ್ನುವ ಮಾತಿದೆ.

ವಿರೋಧ ಪಕ್ಷದ ನಾಯಕ

ವಿರೋಧ ಪಕ್ಷದ ನಾಯಕ

ವಿರೋಧ ಪಕ್ಷದ ನಾಯಕನಾಗುವುದು, ಅದಾದ ಮೇಲೆ ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟುವುದು. ಮುಂದಿನ ಚುನಾವಣೆಯಲ್ಲಿ ತಾವೇ ಮುಖ್ಯಮಂತ್ರಿ ಎಂದು ಬಿಂಬಿಸಿ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ಇದು ಸಿದ್ದರಾಮನಯ್ಯನವರ ಲೆಕ್ಕಾಚಾರ. ಮುಂದೆ, ಸಿದ್ದರಾಮಯ್ಯ ಸಿಎಂ ಆಗದಂತೆ ತಡೆಯಲು, ಬಿಜೆಪಿ ಪೂರ್ಣಾವಧಿ ಅಧಿಕಾರ ಪೂರೈಸುವುದು ಮುಖ್ಯ. ಹಾಗಾಗಿ, ಬಿಜೆಪಿ ಪರವಾಗಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.

English summary
Why Former CM HD Kumaraswamy's Statement Coming Out Favoring BJP. What is the political equation?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X