ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಲ್ ಮಾಡದ ಮೇಲೆ ಎಸ್ಎಸ್ಎಲ್ ಸಿ ಪರೀಕ್ಷೆ ಯಾಕೆ ಶಿಕ್ಷಣ ಸಚಿವರೇ ?

Array

|
Google Oneindia Kannada News

ಬೆಂಗಳೂರು, ಜೂ. 04: ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು..! ಆದ್ರೆ ಎಸ್ಎಎಸ್ ಎಲ್ ಸಿ ಪರೀಕ್ಷೆಯನ್ನು ಮಾಡ್ತೇವೆ. ಯಾರನ್ನೂ ಫೇಲ್ ಮಾಡುವುದಿಲ್ಲ. ಮೂರು ವಿಷಯ ಆಧರಿಸಿ ಎರಡು ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪರೀಕ್ಷೆ ನಡೆಸಲಾಗುವುದು. ಜುಲೈ 18 ರಂದು ಪರೀಕ್ಷೆ ನಡೆಯಲಿದೆ ಎಂಬುದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಎಸ್ಎಸ್ಎಲ್ ಸಿ ಪರೀಕ್ಷೆ ಕುರಿತು ಮಾಡಿರುವ ಘೋಷಣೆ. ಕೇವಲ ವಿದ್ಯಾರ್ಥಿಗಳ ಮೌಲ್ಯಂಕನ ನೆಪ ಮುಂದಿಟ್ಟುಕೊಂಡು ಪ್ರಶ್ನೆ ಪತ್ರಿಕೆ ಮುದ್ರಣದ ಲಾಬಿಗೆ ಮಣಿದು ಎಸ್ಎಸ್ಎಲ್ ಸಿ ಪರೀಕ್ಷೆ ಮಾಡುವ ಅವೈಜ್ಞಾನಿಕ ತೀರ್ಮಾನ ತೆಗೆದುಕೊಂಡಿದ್ದಾರೆ. ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡ ಶಿಕ್ಷಣ ಸಚಿವರ ಅರ್ಥಹೀನ ನಿರ್ಧಾರನಿಂದ ಎದುರಾಗಲಿರುವ ಸಮಸ್ಯೆಗಳ ವಿವರ ಇಲ್ಲಿದೆ ನೋಡಿ.

Recommended Video

SSLC ಪರೀಕ್ಷೆ ವಿಚಾರದಲ್ಲಿ ಸರ್ಕಾರ ಹೀಗೆ ಮಾಡಿದ್ದೇಕೆ | Oneindia Kannada
ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಅಜ್ಞಾನ ತೀರ್ಮಾನ

ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಅಜ್ಞಾನ ತೀರ್ಮಾನ

ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ ಐಚ್ಛಿಕ ವಿಷಯ ಆಧರಿಸಿ ತಲಾ 40 ಅಂಕದಂತೆ ಒಟ್ಟು 120 ಅಂಕಗಳಿಗೆ ಒಂದು ಪ್ರಶ್ನೆ ಪತ್ರಿಕೆ ಮಾಡಲಾಗುವುದು, ಗಣಿತ ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ 120 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಎಲ್ಲಾ ಪ್ರಶ್ನೆಗಳನ್ನು ಬಹು ಅಯ್ಕೆಗೆ ಅವಕಾಶ ಮಾಡಿಕೊಡಲಾಗುವುದು ಎಂಬುದು ಶಿಕ್ಷಣ ಸಚಿವರ ಹೇಳಿಕೆ. ಸಾಮಾನ್ಯ ಲಿಖಿತ ಪರೀಕ್ಷೆಗಿಂತಲೂ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ವಾಸ್ತವದಲ್ಲಿ ಕಠಿಣ ರೀತಿಯ ಪರೀಕ್ಷೆ. ವಿದ್ಯಾರ್ಥಿಗಳು ಈವರೆಗೂ ಓದಿದ್ದು ಸಾಮಾನ್ಯವಾಗಿ ನಡೆಯುತ್ತಿದ್ದ ಲಿಖಿತ ಪರೀಕ್ಷೆಗೆ. ಈ ಮಾದರಿಯ ಪರೀಕ್ಷೆಯಲ್ಲಿ ಎರಡು ಅಂಕದ ಪ್ರಶ್ನೆಗೆ ವಿದ್ಯಾರ್ಥಿಗಳು ಅರ್ಧ ಉತ್ತರ ಬರೆದರೂ ಒಂದು ಅಂಕ ಗಳಿಸಲು ಅವಕಾಶ ಇರುತ್ತದೆ.

ವಿವರ: ಕರ್ನಾಟಕದಲ್ಲಿ ಹೇಗೆ ನಡೆಸಲಾಗುತ್ತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ?ವಿವರ: ಕರ್ನಾಟಕದಲ್ಲಿ ಹೇಗೆ ನಡೆಸಲಾಗುತ್ತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ?

ಆದರೆ ಬಹು ಆಯ್ಕೆ ಪ್ರಶ್ನೆಗೆ ಸ್ವಲ್ಪ ತಪ್ಪು ಮಾಡಿದರೂ ಅಂಕ ಸಿಗುವುದಿಲ್ಲ! ಸಾಮಾನ್ಯವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಮಾತ್ರವಲ್ಲ ಒಂದೇ ದಿನ ಮೂರು ವಿಷಯದ ಬಗ್ಗೆ ಹತ್ತನೇ ತರಗತಿ ಮಕ್ಕಳು ಪರೀಕ್ಷೆ ಬರೆಯಬೇಕಾದರೆ, ಗೊಂದಲಕ್ಕೆ ಒಳಗಾಗುವುದಿಲ್ಲವೇ ? ಕಲಿಕೆ ಹಂತದಲ್ಲಿ ಓದು, ಬರವಣಿಗೆ, ವಿಷಯ ಗ್ರಹಿಕೆ, ವಾಕ್ಯ ರಚನೆ, ಭಾಷೆಗಳ ಮೇಲೆ ಹಿಡಿತ ಮುಖ್ಯ. ಹೀಗಾಗಿಯೇ ಶಿಕ್ಷಣ ತಜ್ಞರು ಬಹು ಆಯ್ಕೆ ರಹಿತ ಪರೀಕ್ಷೆ ಪದ್ಧತಿ ಪರಿಚಯಿಸಿದ್ದಾರೆ. ಈ ವಾಸ್ತವ ಅರಿಯದೇ ಶಿಕ್ಷಣ ಸಚಿವರು ಪರೀಕ್ಷೆ ನಡೆಸುವ ಉಸಾಬರಿಗೆ ಹೋಗಿದ್ದು ಯಾಕೆ ?

ಯಾರನ್ನೂ ಫೇಲ್ ಆಡಲ್ಲ ಅಂದ್ರೆ ಮತ್ಯಾಕೆ ಪರೀಕ್ಷೆ

ಯಾರನ್ನೂ ಫೇಲ್ ಆಡಲ್ಲ ಅಂದ್ರೆ ಮತ್ಯಾಕೆ ಪರೀಕ್ಷೆ

ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ಯಾವ ವಿದ್ಯಾರ್ಥಿಯನ್ನು ಫೇಲ್ ಮಾಡಲ್ಲ. A ಅಥವಾ A+ ಗ್ರೇಡ್ ಮಾಡಲಾಗುವುದು ಎಂಬುದು ಸುರೇಶ್ ಕುಮಾರ್ ಎಸ್ಎಸ್ಎಲ್ ಸಿ ಪರೀಕ್ಷೆ ಬಗ್ಗೆ ಪ್ರಕಟಿಸಿದ ಮತ್ತೊಂದು ತೀರ್ಮಾನ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಫೇಲ್ ಮಾಡುವುದಿಲ್ಲ ಎನ್ನುವುದು ಸತ್ಯವಾದರೆ ಪರೀಕ್ಷೆ ಮಾಡುವ ಅಗತ್ಯವೇನಿದೆ ? ಈಗಾಗಲೇ ಪಿಯುಸಿ ವಿದ್ಯಾರ್ಥಿಗಳನ್ನೇ ಪರೀಕ್ಷೆ ಇಲ್ಲದೇ ಪಾಸು ಮಾಡವುದಾದರೆ ಎಸ್ಎಸ್ಎಲ್ ಸಿ ಮಕ್ಕಳಿಗೆ ಪರೀಕ್ಷೆ ಯಾಕೆ ? ಫೇಲ್ ಮಾಡಲ್ಲ ಅನ್ನುವುದಾದರೆ ಆರು ಸಾವಿರ ಪರೀಕ್ಷಾ ಕೇಂದ್ರಗಳು, 8. 5 ಲಕ್ಷ ವಿದ್ಯಾರ್ಥಿಗಳ ಜೀವವನ್ನು ಪಣಕ್ಕೆ ಇಟ್ಟು ಪರೀಕ್ಷೆ ಬರೆಯಬೇಕಾ ? ಯಾರನ್ನೂ ಫೇಲ್ ಮಾಡಲ್ಲ ಎಂದರೆ, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಮುದ್ರಣ ಅದರ ವಹಿವಾಟು ನಡೆಸುವ ಅಗತ್ಯವೇನಿದೆ ? ಅದೇ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ, ಗ್ರಾಮೀಣ ಭಾಗದಲ್ಲಿ ಕನಿಷ್ಠ ಹತ್ತು ಕಾಲೇಜು ತೆರೆದಿದ್ದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು ಅಲ್ಲವೇ ? ಫೇಲ್ ಮಾಡದ ಪರೀಕ್ಷೆ ಯಾಕೆ ಬೇಕು ಸುರೇಶ್ ಕುಮಾರ್ ಅವರೇ ? ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಬೇಕಲ್ಲವೇ ?

ಮೌಲ್ಯಾಂಕನ ಸುಳ್ಳು ನೆಪ ಯಾಕೆ

ಮೌಲ್ಯಾಂಕನ ಸುಳ್ಳು ನೆಪ ಯಾಕೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಗ್ರೇಡ್ ಕೊಡಲು ಕಳೆದ ಬಾರಿ 9 ನೇ ತರಗತಿಗೆ ಪರೀಕ್ಷೆ ನಡೆದಿಲ್ಲ. ಹೀಗಾಗಿ ಮೌಲ್ಯಾಂಕನ ಇಲ್ಲದ ಕಾರಣಕ್ಕೆ ಬಹು ಆಯ್ಕೆ ಪ್ರಶ್ನೆ ಪ್ರಶ್ನೆ ಪತ್ರಿಕೆ ಮಾದರಿ ಪರೀಕ್ಷೆ ನಡೆಸುತ್ತಿರುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಇದರಿಂದ ಯಾವ ರೀತಿ ಮೌಲ್ಯಾಂಕನ ಮಾಡಲು ಸಾಧ್ಯ ? ಎಂಟನೇ ತರಗತಿಯಲ್ಲಿ ರಚನಾತ್ಮಕ ಪರೀಕ್ಷೆ ಬರೆದಿದ್ದಾರೆ. ಪೂರಕ ಪರೀಕ್ಷೆಗಳನ್ನು ಬರೆದಿದ್ದಾರೆ. 9ನೇ ತರಗತಿಗೆ ಪರೀಕ್ಷೆ ನಡೆದಿಲ್ಲ ಎನ್ನುವುದಾದರೆ, ಅದಕ್ಕಿಂತಲೂ ಹಿಂದಿನ ವರ್ಷ 8 ನೇ ತರಗತಿಯ ಪರೀಕ್ಷೆ ಅಂಕಗಳನ್ನು ಪರಿಗಣಿಸಬಹುದಲ್ಲವೇ ? ಅನುತ್ತೀರ್ಣ ಮಾಡದ ಫಲಿತಾಂಶ ಪ್ರಕಟಿಸುವುವುದೇ ಆದರೆ ಯಾವ ಪುರುಷಾರ್ಥಕ್ಕೆ ಪರೀಕ್ಷೆ ಮಾಡುತ್ತೀರಿ ?

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ರದ್ದುಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು

ಈಗಷ್ಟೇ ಪ್ರಶ್ನೆ ಪತ್ರಿಕೆ ಮಾದರಿ ಪ್ರಕಟ ಸರಿಯೇ

ಈಗಷ್ಟೇ ಪ್ರಶ್ನೆ ಪತ್ರಿಕೆ ಮಾದರಿ ಪ್ರಕಟ ಸರಿಯೇ

ಜುಲೈ 18 ರಂದು ಎಸ್ಎಸ್ ಎಲ್ ಸಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಆಧಾರಿತ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಅಂತ ಹೇಳಿದ್ದು ಜೂ. 4. ಇಲ್ಲಿಯವರೆಗೂ ಆರು ಪ್ರಶ್ನೆ ಪತ್ರಿಕೆಗಳಿಗೆ ಪರೀಕ್ಷೆ ನಡೆಯುತ್ತದೆ ಎಂದೇ ಹೇಳಿದ್ದ ಶಿಕ್ಷಣ ಇಲಾಖೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೂಡ ನೀಡಿರಲಿಲ್ಲ. ಇದೀಗ ಶಿಕ್ಷಣ ಸಚಿವರು ಈಗಷ್ಟೆ ಪ್ರಶ್ನೆ ಪತ್ರಿಕೆ ಮಾದರಿ ಪ್ರಕಟಿಸಿದ್ದಾರೆ. ಇನ್ನಷ್ಟೇ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟಿಸಬೇಕಿದೆ. ಇವರು ಎಷ್ಟು ವಿಷಯ ಆಧರಿಸಿ ಪ್ರಶ್ನೆ ಪತ್ರಿಕೆ ತಯಾರು ಮಾಡುತ್ತಾರೆ. ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಪರೀಕ್ಷೆ ಎದುರಿಸಲು ನಿಗದಿ ಪಡಿಸಿದ ಸಿಲಬಸ್ ಯಾವುದು ಎಂಬುದಕ್ಕೆ ಇಲ್ಲಿಯವರೆಗೂ ಸ್ಪಷ್ಟ ಉತ್ತರಗಳೇ ಇಲ್ಲ. ಈಗ ಮಾದರಿ ಪ್ರಶ್ನೆ ಪತ್ರಿಕೆ ಮುದ್ರಿಸಿ ಸಿಲಬಸ್ ತೀರ್ಮಾನಿಸಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಪರೀಕ್ಷೆ ಎದುರಿಸಲು ಇರುವ ಕಾಲಾವಕಾಶ ಕೇವಲ ಒಂದು ತಿಂಗಳು ಮಾತ್ರ !

ಕೊರೊನಾ ಮತ್ತೆ ಬಂದ್ರೆ ಪರೀಕ್ಷೆ ಮಾಡಲ್ವಂತೆ

ಕೊರೊನಾ ಮತ್ತೆ ಬಂದ್ರೆ ಪರೀಕ್ಷೆ ಮಾಡಲ್ವಂತೆ

ಎಸ್ಎಸ್ ಎಲ್ ಸಿ ಮಕ್ಕಳಿಗೆ ಎನ್ 95 ಮಾಸ್ಕ್ ಕೊಡಲಾಗುವುದು. ಪರೀಕ್ಷಾ ಕೇಂದ್ರಗಳ ಶಿಕ್ಷಕರಿಗೆ ಲಸಿಕೆ ಕಡ್ಡಾಯವಾಗಿ ಕೊಡಲಾಗುವುದು ಎಂಬುದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿರುವ ಇನ್ನೊಂದು ಹೇಳಿಕೆ. ಆರು ಸಾವಿರ ಪರೀಕ್ಷಾ ಕೇಂದ್ರಗಳನ್ನು ಸಾನಿಟೈಸ್ ಮಾಡಬೇಕು. ಪರೀಕ್ಷಾ ಸಿಬ್ಬಂದಿಗೆ ಲಸಿಕೆ ಜತೆಗೆ ಪರೀಕ್ಷೆಗೆ ವಿಶೇಷ ವೇತನ ಕೊಡಬೇಕು. ಮೌಲ್ಯಮಾಪನಕ್ಕೂ ಪ್ರತ್ಯೇಕ ವೆಚ್ಚ. ಇದಕ್ಕೆ ಕೋಟ್ಯಂಗತರ ರೂಪಾಯಿ ವೆಚ್ಚವಾಗಲಿದೆ. ಇಷ್ಟೆಲ್ಲಾ ಮಾಡಿ ಒಂದು ವೇಳೆ ಜುಲೈನಲ್ಲಿ ಕೊರೊನಾ ಸೋಂಕು ಮೂರನೇ ಅಲೆ ಉಲ್ಬಣಿಸಿದರೆ ಮತ್ತೆ ಪರೀಕ್ಷೆ ರದ್ದು ಮಾಡುವ ಅನಿವಾರ್ಯತೆ ಎದುರಾಗಲಿದೆ.ಕೊರೊನಾ ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಇಷ್ಟೊಂದು ಆರ್ಥಿಕ ಹೊರೆ ಹಾಕುವ ಅಗತ್ಯವೇನಿದೆ ? ಇದು ಪರೀಕ್ಷೆ ನಡೆಸುವ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಮೀಷನ್ ಪಡೆಯುವ ಅಧಿಕಾರಿಗಳ ಲಾಬಿಗೆ ಸುರೇಶ್ ಕುಮಾರ್ ಮಣಿದರೇ ?

English summary
Karnataka SSLC Exams 2021: Why Did Karnataka Govt Conducting SSLC exams even they not failing any students? Are they lose to Question paper printing lobby? Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X