• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಏಕೆ ಸ್ಪರ್ಧಿಸುತ್ತಿಲ್ಲ?

|

ಬೆಂಗಳೂರು, ಸೆಪ್ಟೆಂಬರ್ 24 : ವಿಧಾನ ಪರಿಷತ್ ಚುನಾವಣೆಯಿಂದ ಬಿಜೆಪಿ ಹಿಂದೆ ಸರಿದಿದೆ. ಕರ್ನಾಟಕ ವಿಧಾನಸಭೆಯಿಂದ ಮೂವರು ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಅಕ್ಟೋಬರ್ 3ರಂದು ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ.

ಅಗತ್ಯ ಸಂಖ್ಯಾಬಲವಿಲ್ಲದ ಕಾರಣ ವಿಧಾನ ಪರಿಷತ್ ಚುನಾವಣೆಯಿಂದ ಪಕ್ಷ ಹಿಂದೆ ಸರಿದಿದೆ. ಕಾಂಗ್ರೆಸ್‌ನಿಂದ ಎಂ.ಸಿ.ವೇಣುಗೋಪಾಲ್, ನಜೀರ್ ಅಹಮದ್ ಮತ್ತು ಜೆಡಿಎಸ್‌ನಿಂದ ರಮೇಶ್ ಗೌಡ ಅವರು ಸೋಮವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆ : ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ

ಕಾಂಗ್ರೆಸ್ ಪಕ್ಷದಲ್ಲಿನ ಶಾಸಕರ ಅಸಮಾಧಾನವನ್ನು ಬಳಸಿಕೊಂಡು ಅಡ್ಡ ಮತದಾನದ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸುವ ತಂತ್ರವನ್ನು ಬಿಜೆಪಿ ರೂಪಿಸಿತ್ತು. ಆದರೆ, ಈ ತಂತ್ರ ಫಲ ನೀಡದ ಹಿನ್ನಲೆಯಲ್ಲಿ ಚುನಾವಣೆಯಿಂದ ದೂರ ಸರಿಯಲಾಗಿದೆ. ಪ್ರತಿಪಕ್ಷದ ಅಭ್ಯರ್ಥಿಗಳೇ ಇಲ್ಲದಂತಾಗಿದೆ.

ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ಕೆ.ಎಸ್.ಈಶ್ವರಪ್ಪ, ಡಾ.ಜಿ.ಪರಮೇಶ್ವರ ಮತ್ತು ವಿ.ಸೋಮಣ್ಣ ಅವರ ಸ್ಥಾನ ತೆರವಾಗಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ 4 ಸೂತ್ರಗಳು!

ಬಿಜೆಪಿಯಲ್ಲಿ ಆಕಾಂಕ್ಷಿಗಳು

ಬಿಜೆಪಿಯಲ್ಲಿ ಆಕಾಂಕ್ಷಿಗಳು

ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಪರಿಷತ್ ಸ್ಥಾನದ ಆಕಾಂಕ್ಷಿಗಳಾಗಿದ್ದರು.

ಆದರೆ, ಸಂಖ್ಯಾಬಲದ ಕೊರತೆಯ ಕಾರಣ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಸದೇ ಇರಲು ಬಿಜೆಪಿ ನಿರ್ಧರಿಸಿದೆ. ಆದ್ದರಿಂದ, ಪ್ರಮುಖ ವಿರೋಧ ಪಕ್ಷ ಚುನಾವಣೆಯಿಂದ ದೂರವುಳಿಯಲಿದೆ.

ವಿಧಾನಸಭೆ ಸಂಖ್ಯಾಬಲ

ವಿಧಾನಸಭೆ ಸಂಖ್ಯಾಬಲ

ಕರ್ನಾಟಕ ವಿಧಾನಸಭೆಯ ಪ್ರಸ್ತುತ ಬಲ 222. (ರಾಮನಗರ, ಜಮಖಂಡಿ) ಉಪಚುನಾವಣೆ ನಡೆಯಬೇಕು.

* ಬಿಜೆಪಿ 104

* ಕಾಂಗ್ರೆಸ್ 79

* ಜೆಡಿಎಸ್ 37

* ಪಕ್ಷೇತರ 2 ಬಿಜೆಪಿ 104

ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು 112 ಮತಗಳ ಅಗತ್ಯವಿತ್ತು. ಆದ್ದರಿಂದ, ಬಿಜೆಪಿ ಅಭ್ಯರ್ಥಿ ಗೆಲುವಿಗೆ 8 ಮತಗಳ ಕೊರತೆ ಇತ್ತು.

ಗುಪ್ತ ಮತದಾನ

ಗುಪ್ತ ಮತದಾನ

ವಿಧಾನ ಪರಿಷತ್ ಚುನಾವಣೆಯಲ್ಲಿ ಗುಪ್ತ ಮತದಾ ನಡೆಯುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವು ಶಾಸಕರು ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಿಜೆಪಿ ತಂತ್ರಗಳು ಕೊನೆ ಕ್ಷಣದಲ್ಲಿ ಕೈ ಕೊಟ್ಟ ಕಾರಣ ಮ್ಯಾಜಿಕ್ ಸಂಖ್ಯೆ ಸಿಗುವುದಿಲ್ಲ ಎಂದು ಖಚಿತವಾಯಿತು. ಆದ್ದರಿಂದ, ಬಿಜೆಪಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರಲು ನಿರ್ಧರಿಸಿತು.

ಚಿತ್ರ : ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿಗಳು

ಜೆಡಿಎಸ್‌ನಿಂದ ನಾಮಪತ್ರ

ಜೆಡಿಎಸ್‌ನಿಂದ ನಾಮಪತ್ರ

ಜೆಡಿಎಸ್‌ನಿಂದ ರಮೇಶ್ ಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಯಾವುದೇ ಜೆಡಿಎಸ್ ನಾಯಕರು ಅವರ ಜೊತೆ ಬಂದಿರಲಿಲ್ಲ. ನಾಮಪತ್ರಕ್ಕೆ 10 ಜನ ಸೂಚಕರಾಗಿ ಸಹಿ ಹಾಕಿದ್ದರು.

ಕಾಂಗ್ರೆಸ್‌ನಿಂದ ಎಂ.ಸಿ.ವೇಣುಗೋಪಾಲ್, ನಜೀರ್ ಅಹಮದ್ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ಅಗತ್ಯವಿದ್ದರೆ ಅಕ್ಟೋಬರ್ 3ರಂದು ಚುನಾವಣೆ ನಡೆಯಲಿದೆ.

English summary
BJP candidates will not contest for Karnataka Legislative Council elections scheduled on October 3, 2018. Election will be held for elect 3 member to Legislative Council form legislative assembly. ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಏಕೆ ಸ್ಪರ್ಧಿಸುತ್ತಿಲ್ಲ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X