ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈನ ಧರ್ಮಕ್ಕೆ ಮಾನ್ಯತೆ ಪಡೆದ ಶಾ ರಿಂದ ಲಿಂಗಾಯತ ಧರ್ಮಕ್ಕೆ ವಿರೋಧವೇಕೆ?

By ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
|
Google Oneindia Kannada News

ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಬಹು ಮುಖ್ಯ ಅಂಶವಾಗುವಲ್ಲಿ ಯಾವುದೇ ಅನುಮಾನವಿಲ್ಲ. ಲಿಂಗಾಯತ ಧರ್ಮದ ವಿಷಯವಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಸ್ಪಷ್ಟವಾಗಿ ವಿರುದ್ಧ ದಿಕ್ಕಿಗೆ ನಿಂತಿದ್ದು, ಬಿಜೆಪಿಯ ಅಮಿತ್ ಶಾ ಅವರು ಸ್ಪಷ್ಟವಾಗಿ ಲಿಂಗಾಯತ ಪ್ರತ್ಯೇಕ ಧರ್ಮವಾಗಲು ಬಿಡೆವು ಅದು ರಾಷ್ಟ್ರದ ಐಕ್ಯತೆಗೆ ಧಕ್ಕೆ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಸ್ವತಃ ಜೈನ ಧರ್ಮದವರಾಗಿರುವ ಅಮಿತ್ ಶಾ ಅವರು ಲಿಂಗಾಯತ ಪ್ರತ್ಯೇಕ ಧರ್ಮ ವಿಷಯದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಗುಮಾನಿಯೂ ಇದೆ. ಅದು ಹೇಗೆಂದು ತಿಳಿಯಲು ಮುಂದೆ ಓದಿರಿ....

ಲಿಂಗಾಯತ ಪ್ರತ್ಯೇಕ ಧರ್ಮದ ಸಿದ್ದು ದಾಳಕ್ಕೆ ದಂಗಾದರೇ ಅಮಿತ್ ಶಾ?ಲಿಂಗಾಯತ ಪ್ರತ್ಯೇಕ ಧರ್ಮದ ಸಿದ್ದು ದಾಳಕ್ಕೆ ದಂಗಾದರೇ ಅಮಿತ್ ಶಾ?

ಹಿಂದೂ ಸಂಸ್ಕೃತಿಯ ಅಡಿಯಲ್ಲಿ ಬೌದ್ಧ, ಜೈನ, ಸಿಖ್ಖ, ಧರ್ಮಗಳಂತೆ ಲಿಂಗಾಯತವು ಒಂದು ಅವೈದಿಕ ಹಿಂದುಯೇತರ ಧರ್ಮವಾಗಿದೆ. ಭಾರತ ಜೈನ ಸಂಘವನ್ನು ಹುಟ್ಟಿ ಹಾಕಿಕೊಂಡ ಪುಣೆಯ ಉದ್ಯಮಿ ಶಾಂತಿನಾಥ ಮುಥಾ ಅವರು ಶ್ವೇತಂಬರ ಮತ್ತು ದಿಗಂಬರ ಹಗ್ಗ ಜಗ್ಗಾಟದ ಮಧ್ಯೆ ಜೈನ ಧರ್ಮಕ್ಕೆ ಮಾನ್ಯತೆಯನ್ನು 2013ರಲ್ಲಿ ಪಡೆದರು, ಅದೇ ರೀತಿ 2014 ರಲ್ಲಿ ಕೇಂದ್ರದಿಂದ ಅಲ್ಪ ಸಂಖ್ಯಾತ ಮಾನ್ಯತೆಯನ್ನೂ ಪಡೆದರು. ಇದರ ಸಾರಥ್ಯವನ್ನು ಇಂದಿನ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ ಶಾ ಅವರೇ ವಹಿಸಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವವನ್ನು ಭಾರತದ ಐಕ್ಯತೆಗೆ ಧಕ್ಕೆ ಎಂದು ವಿಶ್ಲೇಷಿಸಿರುವ ಅಮಿತ್ ಶಾ ಅವರು ಅಂದು ಜೈನ ಧರ್ಮಕ್ಕೆ ಮಾನ್ಯತೆ ಪಡೆದುಕೊಂಡಾದ ಭಾರತೀಯ ಐಕ್ಯತೆಗೆ ಭಂಗ ಬರಲಿಲ್ಲವೇ?

Why Amit Shah opposing Lingayata separate religion

ಇಂದು ಪಂಚ ಪೀಠ ಸ್ವಾಮಿಗಳ ಮಾತಿಗೆ ಮಹತ್ವ ಕೊಟ್ಟು ಅಮಿತ್ ಶಾ ಅವರು ಲಿಂಗಾಯತ ಮತ್ತು ವೀರಶೈವರ ರಣರಂಗ ಯುದ್ಧವನ್ನು ಓಟಿನ ರಾಜಕೀಯಕ್ಕೆ ಬಳಸುವುದು ಯಾವ ನ್ಯಾಯ?

ಅಮಿತ್ ಶಾ ಪಕ್ಕದಲ್ಲಿ ಯಡಿಯೂರಪ್ಪ, ಜಗದೀಶ ಶೆಟ್ಟರ್ ಅವರೂ ಮೌನವಾಗಿದ್ದನ್ನು ನೋಡಿದರೆ ಇವರು ಲಿಂಗಾಯತ ಬಸವ ತತ್ವಕ್ಕೆ ತಿಲಾಂಜಲಿ ಇಡುವ ಹುನ್ನಾರ ನಡೆಸಿದ್ದಾರೆ ಎಂದು ತಿಳಿದು ಬರುತ್ತದೆ. ಇಂದು ಇಡೀ ಜಗತ್ತೇ ಬಸವಣ್ಣನವರನ್ನು ಕೊಂಡಾಡುತ್ತಿರುವಾಗ ಕೆಲ ಅಜ್ಞಾನಿ ರಾಜಕಾರಣಿಗಳು ಬಸನವಣ್ಣನನ್ನು ಓಟಿನ ರಾಜಕಾರಣಕ್ಕೆ ಸೀಮಿತ ಮಾಡಲು ಹೊರಟಿದ್ದಾರೆ ಜೊತೆಗೆ ಅವರಿಗೆ ಸಂವಿಧಾನಕ ಕಾರ್ಯಕ್ಷಮತೆಯೂ ತಿಳಿದಿರುವಂತಿಲ್ಲ.

ಅಮಿತ್ ಶಾಗೆ ಧರ್ಮ ಸಂಕಟ ತಂದಿತ್ತ ಮುರುಘಾಶ್ರೀಗಳ ಮನವಿಅಮಿತ್ ಶಾಗೆ ಧರ್ಮ ಸಂಕಟ ತಂದಿತ್ತ ಮುರುಘಾಶ್ರೀಗಳ ಮನವಿ

ಕರ್ನಾಟಕ ಸರಕಾರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಲ್ಲಿ ಎಲ್ಲ ಶಾಸನ ಬದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ಸಂವಿಧಾನ ಪರಿಮಿತಿಯಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ ಅವರು ನೀಡಿದ ವರದಿಯ ಆಧಾರದ ಮೇಲೆ ರಾಜ್ಯ ಅಲ್ಪ ಸಂಖ್ಯಾತ ಮಾನ್ಯತೆಯನ್ನು ಅಲ್ಪಸಂಖ್ಯಾತ 2(D) ನೀಡಿದ್ದು ಕೇಂದ್ರಕ್ಕೂ ಶಿಫಾರಸು ಮಾಡಿದ್ದಾರೆ.

Why Amit Shah opposing Lingayata separate religion

ಬಾಗಲಕೋಟೆ ಜಿಲ್ಲೆಯ ಶಿವಯೋಗ ಮಂದಿರದ ಪಂಚ ಪೀಠ ಸ್ವಾಮಿಗಳ ಮುಂದೆ ರಾಷ್ಟ್ರೀಯ ಅಧ್ಯಕ್ಷರು ಅಮಿತ್‌ ಶಾ ಅವರು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನು ಮಾಡಲು ಬಿಡುವದಿಲ್ಲ ಎಂದು ಹೇಳಿಕೆ ನೀಡಿದ್ದು ಅಸಂವಿಧಾನಾತ್ಮಕ ಹೇಳಿಕೆಯಾಗುತ್ತದೆ ಹಾಗೂ ಒಂದು ಅರ್ಥದಲ್ಲಿ ನ್ಯಾಯಾಂಗ ಹಾಗೂ ಕಾರ್ಯಾಂಗ ವ್ಯವಸ್ಥೆಯ ನಿಂದನೆ ಮಾಡಿದಂತಾಗುತ್ತದೆ.

ಸಂಸದ ಪಟುಗಳು ಹೀಗೆ ಬೇಕಾ ಬಿಟ್ಟಿ ಹೇಳಿಕೆ ಕೊಟ್ಟು ನ್ಯಾಯ ಸಮ್ಮತ, ಕಾನೂನು ಸಮ್ಮತ, ಲಿಂಗಾಯತ ಧರ್ಮ ಬೇಡಿಕೆ ಹಾಗೂ ಅಲ್ಪ ಸಂಖ್ಯಾತ ಮಾನ್ಯತೆಯನ್ನು ರಾಷ್ಟ್ರೀಯ ಪಕ್ಷವು ತನ್ನ ಒಳ ಅಜೆಂಡಾ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಪಕ್ಷವು ಕರ್ನಾಟಕ ಮಹಾರಾಷ್ಟ್ರ ಕೇರಳ ತಮಿಳುನಾಡು ಆಂಧ್ರ ತೆಲಂಗಾಣ ಮತ್ತು ಪುದುಚೇರಿ ಗೋವಾ ರಾಜ್ಯಗಳಲ್ಲಿ ಹಿನ್ನೆಡೆ ಅನುಭವಿಸಬೇಕಾಗುವ ಸಂಭವವನ್ನು ಅಲ್ಲಗಳೆಯುವಂತಿಲ್ಲ.

ಸಿದ್ದು ಪ್ರತ್ಯೇಕ ಲಿಂಗಾಯತ ತಂತ್ರಕ್ಕೆ ಅಮಿತ್ ಶಾ ವೀರಶೈವ ಪ್ರತಿತಂತ್ರ?ಸಿದ್ದು ಪ್ರತ್ಯೇಕ ಲಿಂಗಾಯತ ತಂತ್ರಕ್ಕೆ ಅಮಿತ್ ಶಾ ವೀರಶೈವ ಪ್ರತಿತಂತ್ರ?

ಇಂತಹ ಹೇಳಿಕೆಗಳನ್ನು ಯಾರೇ ಮಾಡಿದರು ಅದು ತಪ್ಪು. ತಪ್ಪೋ ಒಪ್ಪೋ ಕರ್ನಾಟಕದಲ್ಲಿ ಲಿಂಗಾಯತ ಧರ್ಮ ಮಾನ್ಯತೆಯನ್ನು ಸಾಕಷ್ಟು ಸಂಘರ್ಷ ವಿರೋಧದ ಮಧ್ಯೆ ಎಂ.ಬಿ.ಪಾಟೀಲ ಮತ್ತು ಅವರ ಮಂತ್ರಿ ಸಹೋದ್ಯೋಗಿಗಳು ಹಾಗೂ ಬಸವರಾಜ್ ಹೊರಟ್ಟಿ ಹಾಗೂ ಅನೇಕ ಲಿಂಗಾಯತ ಸಂಘಟನೆಗಳ ನಿರಂತರ ಹೋರಾಟಕ್ಕೆ ಒಂದು ತಾರ್ಕಿಕ ಹಾಗೂ ಅಷ್ಟೇ ಗಟ್ಟಿಮುಟ್ಟಾದ ನಿರ್ಣಯ ತೆಗೆದುಕೊಂಡಿದ್ದಾರೆ.

ಬಿಜೆಪಿ ಪಕ್ಷವು ಲಿಂಗಾಯತ ಚಳುವಳಿಯ ವಿಷಯವನ್ನು ಬದಿಗಿಟ್ಟು ಅಭಿವೃದ್ಧಿ ಪ್ರಣಾಳಿಕೆಯನ್ನು ಎತ್ತಿಕೊಂಡು ಮಾತನಾಡಲಿ. ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳು ಮೈಸೂರು ಭಾಗದ ಅನೇಕ ಜಿಲ್ಲೆಗಳಲ್ಲಿ ಅಭಿವೃದ್ಧಿಯ ಜೊತೆಗೆ ಲಿಂಗಾಯತ ಧಾರ್ಮಿಕ ಮಾನ್ಯತೆಗೆ ದುಡಿದ ಯಾವುದೇ ಪಕ್ಷದವರಿರಲಿ ಅವರನ್ನು ಲಿಂಗಾಯತರು ಬೆಂಬಲಿಸುವುದು ಖಚಿತ.

ಸಮಯ ಇನ್ನೂ ಮೀರಿಲ್ಲ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕೇಂದ್ರ ಸರಕಾರದ ಮುಂದಿದೆ ಅದನ್ನು ಪೂರೈಸಿ ಪ್ರಚಲಿತ ವಿಷಯದ ಲಾಭ ಪಡೆಯಲಿ. ಅದನ್ನು ಬಿಟ್ಟು ಖಡಾಖಂಡಿತವಾಗಿ ಲಿಂಗಾಯತ ಧರ್ಮವನ್ನು ಮಾನ್ಯತೆಗೆ ಮಾಡುವದಿಲ್ಲ ಎಂದು ಹೇಳುವುದು ಇವರ ಘನತೆಗೆ ಶೋಭೆ ತರುವ ಮಾತಲ್ಲ.

English summary
Why BJP President Amit Shah opposing Lingayat separate religion. He only got minority accredited to his Jain religion in 2014 but he is now opposing Lingayat separate religion status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X