• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪೇಂದ್ರ ರಾಜಕೀಯಕ್ಕೆ ಬರಲು ಕಾರಣ ಏನು?

By ಭಾಸ್ಕರ ಶೆಟ್ಟಿ
|

ಬೆಂಗಳೂರು, ಏಪ್ರಿಲ್ 04 : ಕನಿಷ್ಠ ಎಂದರೂ 100 ಕೋಟಿ ಆಸ್ತಿ ಸಂಪಾದಿಸಿರುವ ನಟ, ನಿರ್ದೇಶಕ ಉಪೇಂದ್ರ ಅವರಿಗೆ ರಾಜಕೀಯದಿಂದ ಆಗಬೇಕಾದ ಲಾಭವೇನು ಇಲ್ಲ. ರಾಜಕೀಯಕ್ಕೆ ಅವರು ಬಾರದಿದ್ದರೂ ಭಾರತದಂತಹ ದೇಶದಲ್ಲಿ ನೆಮ್ಮದಿಯಾಗಿ ಬದುಕಬಹುದಿತ್ತು.

ಉಪೇಂದ್ರ ಅವರಿಗೆ ಇರುವ ಜನಪ್ರಿಯತೆಯಿಂದ ರಾಜಕೀಯ ಪಕ್ಷವೊಂದರ ಟಿಕೆಟ್ ಪಡೆದು ಗೆಲ್ಲಬಹುದಿತ್ತು. ಗೆದ್ದ ನಂತರ ಸಚಿವರಾಗಿ ಅಧಿಕಾರವನ್ನು ಅನುಭವಿಸಬಹುದಿತ್ತು. ಆದರೆ, ಉಪೇಂದ್ರ ಅವರು ಹಾಗೆ ಮಾಡಲಿಲ್ಲ. ಪ್ರಜಾಕೀಯ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.

ಮಂಡ್ಯದಿಂದ ಪ್ರಚಾರ ಆರಂಭಿಸಿದ ರಿಯಲ್ ಸ್ಟಾರ್ ಉಪೇಂದ್ರ

ಕಾರ್ಮಿಕ ಈ ಪ್ರಜಾಪ್ರಭುತ್ವದ ರಾಜ. ಇದು ರಾಜಕೀಯವಲ್ಲ ಇದು ಪ್ರಜಾಕೀಯ ಎಂದು ಜನ ಸಾಮಾನ್ಯರ ಜೊತೆಗೆ ಈ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ಬಗ್ಗೆ ಪಣತೊಟ್ಟು ಅಖಾಡಕ್ಕಿಳಿದಿದ್ದಾರೆ.
ತಮ್ಮ ಆಲೋಚನೆಗಳಿಗೆ ಈ ಸಮಾಜ ಒಗ್ಗಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ಅವರಿಗೆ ತಿಳಿದಿದೆ.

ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪೇಂದ್ರ

ಉಪೇಂದ್ರ ಅವರ ಪ್ರಜಾಕೀಯ ಕಲ್ಪನೆಗೆ ಪಕ್ಷದ ಕೆಲವರು ಅಡ್ಡಗಾಲು ಹಾಕಿದರು. ಈಗ ಅವರು ಉತ್ತಮ ಪ್ರಜಾಕೀಯ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ, ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷದ ತಯಾರಿ ಬಗ್ಗೆ ಉಪ್ಪಿ ಹಂಚಿಕೊಂಡ ಇಂಚಿಂಚೂ ಮಾಹಿತಿ

ರಾಜಕೀಯ ವ್ಯವಸ್ಥೆಯಲ್ಲಿಯೇ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಪರೀಕ್ಷೆಗಳ ಮೂಲಕ ಉಪೇಂದ್ರ ಆಯ್ಕೆ ಮಾಡಿದ್ದಾರೆ. ಪರೀಕ್ಷೆಯಲ್ಲಿ ಪಾಸಾದವರು ಟಿಕೆಟ್ ಪಡೆದಿದ್ದಾರೆ. ಉಪೇಂದ್ರ ಅವರು ತಮ್ಮ ಸ್ವಂತ ಹಣವನ್ನು ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಖರ್ಚು ಮಾಡುತ್ತಿದ್ದಾರೆ.

ಮಂಡ್ಯದಿಂದ ಪ್ರಚಾರ ಆರಂಭ

ಮಂಡ್ಯದಿಂದ ಪ್ರಚಾರ ಆರಂಭ

ನಿಖಿಲ್ ಕುಮಾರಸ್ವಾಮಿ, ಸುಮಲತಾ ಅಂಬರೀಶ್ ಸ್ಪರ್ಧೆಯಿಂದ ಗಮನ ಸೆಳೆದಿರುವ ಮಂಡ್ಯದಿಂದ ಉಪೇಂದ್ರ ಅವರು ಪ್ರಚಾರ ಆರಂಭಿಸಿದ್ದಾರೆ. ಜನರು ಬದಲಾಗುತ್ತಾರೆ, ಇಂದಲ್ಲ ನಾಳೆ ದೇಶ ಬದಲಾಗುತ್ತದೆ ಎಂಬ ವಿಶ್ವಾಸದಲ್ಲಿ ಜನಸಾಮಾನ್ಯನ ಜೊತೆ ನಿಂತು ತಮ್ಮ ಚಿಂತನೆಗಳನ್ನು ಉಪೇಂದ್ರ ಹಂಚಿಕೊಳ್ಳುತ್ತಿದ್ದಾರೆ.

ಕೆಲಸಗಾರರನನ್ನು ಕೊಡುತ್ತೇನೆ

ಕೆಲಸಗಾರರನನ್ನು ಕೊಡುತ್ತೇನೆ

'ರಾಜರ ಹೊಡೆದಾಟ, ಬೈದಾಟವನ್ನು ನೋಡಿ ಸಾಕಾಗಿದೆ. ನಾನು ನಿಮಗೆ ಸಂಬಳಕ್ಕೆ ಕೆಲಸ ಮಾಡೋ ಕೆಲಸಗಾರರನ್ನು ಕೊಡುತ್ತೇನೆ. ರಾಜರು ಬೇಕಾ? ಅಥವಾ ಸಂಬಳಕ್ಕೆ ಕೆಲಸ ಮಾಡುವ ಕೆಲಸಗಾರರು ಬೇಕಾ? ಇದನ್ನು ನೀವೇ ತೀರ್ಮಾನಿಸಿ' ಎಂದು ಉಪೇಂದ್ರ ಅವರು ಜನರ ಮುಂದೆ ತಮ್ಮ ಚಿಂತನೆಗಳನ್ನು ಬಿಚ್ಚಿಟ್ಟಿದ್ದಾರೆ.

ಸಮಾಜ ಬದಲಾಗಬಹುದು

ಸಮಾಜ ಬದಲಾಗಬಹುದು

ಉಪೇಂದ್ರ ಅವರ ಚಿಂತನೆ ಸಮಾಜಕ್ಕೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ಉಪೇಂದ್ರ ಓರ್ವ ಸರ್ವಾಧಿಕಾರಿಯಂತೆ ಚಿಂತಿಸುತ್ತಿದ್ದಾರೆ ಎಂದು ಹೇಳಿದವರೂ ಇದ್ದಾರೆ. ನನ್ನ ಒಂದು ಓಟಿನಿಂದ ಉಪೇಂದ್ರ ಗೆಲ್ಲಲು ಸಾಧ್ಯವೇ? ಎಂದು ಹೇಳುವವರಿದ್ದಾರೆ. ಈ ಸಮಾಜ ಬದಲಾಗಬಹುದು ಎಂಬ ನಂಬಿಕೆಯನ್ನು ಮರೆತು ಹಲವರು ಬದುಕುತ್ತಿದ್ದಾರೆ. ನಿಜ ಹೇಳಬೇಕು ಎಂದರೆ ಉಪೇಂದ್ರ ಅವರಿಗೆ ಈ ರಾಜಕೀಯ ವ್ಯವಸ್ಥೆಗೆ ಬರಲು ಇದ್ದ ಹೆದರಿಕೆಯೂ ಇದೆ ಆಗಿತ್ತು.

ಉಪೇಂದ್ರ ಅವರಿಗೆ ರಾಜಕೀಯ ಏಕೆ?

ಉಪೇಂದ್ರ ಅವರಿಗೆ ರಾಜಕೀಯ ಏಕೆ?

ಉಪೇಂದ್ರ ಅವರು ಹೊಸ ಚಿಂತನೆಯೊಂದಿಗೆ ರಾಜಕೀಯಕ್ಕೆ ಬರಲು ಕಾರಣಗಳೇನು ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
* ತಾನು ಹುಟ್ಟಿ ಬದುಕುತ್ತಿರುವ ಈ ನಾಡಿಗೆ ಅಳಿಲು ಸೇವೆಯನ್ನು ಸಲ್ಲಿಸಬೇಕು.
* ತನಗಿರುವಂತೆಯೇ ದೇಶದ ಎಲ್ಲಾ ಜನರಿಗೆ ಮೂಲಭೂತ ಸೌಕರ್ಯಗಳು ದೊರೆಯಬೇಕು.
* ಪಾಶ್ಚಾತ್ಯ ರಾಷ್ಟ್ರಗಳಂತೆ ಸುಸಜ್ಜಿತ ಅಭಿವೃದ್ದಿಯನ್ನು ಭಾರತದಲ್ಲಿ ತರಬೇಕು.
* ದಿಗ್ಗಜರ ಆಶಯದಂತೆ ಸಂವಿಧಾನವನ್ನು ಪರಿಣಾಮಕಾರಿಯಾಗಿ ಅಭಿವೃದ್ದಿಗೆ ಬಳಸಿಕೊಳ್ಳಬೇಕು.

ರಾಜಕೀಯ ಏಕೆ ಬೇಕು?

ರಾಜಕೀಯ ಏಕೆ ಬೇಕು?

* ಜಾತಿ, ಧರ್ಮ ಮತ್ತು ಹಣದಿಂದ ನಿಯಂತ್ರಿತವಾಗಿರುವ ರಾಜಕೀಯವನ್ನು ಬದಲಾಯಿಸಬೇಕು.
* ದೇಶದಲ್ಲಿ ಸ್ವಸ್ಥ ಸಮಾಜವನ್ನು ರೂಪಿಸುವ ಆಡಳಿತ ಮತ್ತು ಕಾನೂನು ತರಬೇಕು.
* ರಾಜರ (ರೌಡಿ) ಹೊಡೆದಾಟದ ರಾಜಕೀಯವನ್ನು ಅಂತ್ಯಗೊಳಿಸಿ, ಸ್ವಸ್ಥ ಆಡಳಿತ ತರಬೇಕು.
* ಸರ್ಕಾರ ನೀಡುವ ಸಂಬಳಕ್ಕೆ ರಾಜಕೀಯದಲ್ಲಿ ಗೆದ್ದ ವ್ಯಕ್ತಿ ಉದ್ಯೋಗ ನಿರ್ವಹಿಸಬೇಕು.
* ಪರವಿರೋಧದ ರಾಜಕೀಯದ ಬದಲು ಅಭಿವೃದ್ದಿಗಾಗಿ ಸಹಬಾಳ್ವೆ ರಾಜಕೀಯ ತರಬೇಕು.
* ರಾಜಕೀಯ ಪಕ್ಷಗಳಿಗೆ ಮತ್ತು ವೆಚ್ಚಕ್ಕೆ ಪೋಲಾಗುತ್ತಿರುವ ಅಭಿವೃದ್ದಿಯ ಹಣವನ್ನು ಉಳಿಸಬೇಕು.

ಹೊಸ ಸಮಾಜ ನಿರ್ಮಾಣ

ಹೊಸ ಸಮಾಜ ನಿರ್ಮಾಣ

* ಪ್ರಜಾಕಾರ್ಮಿಕನೋರ್ವ ಸಿಎಂ ಮತ್ತು ಪಿಎಂ ಆಗಿ ಅಭಿವೃದ್ದಿಗೆ ಉದ್ಯೋಗ ನಿರ್ವಹಿಸಬೇಕು.
* ಅಭಿವೃದ್ದಿ ಕಾರ್ಯಗಳಲ್ಲಿ ಪೋಲಾಗುತ್ತಿರುವ ಕಮಿಷನ್ ಹಣವನ್ನು ಅಭಿವೃದ್ದಿಗೆ ಬಳಸಬೇಕು.
* ಸರ್ಕಾರಿ ಉದ್ಯೋಗಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಆಡಳಿತ ವ್ಯವಸ್ಥೆ ಸರಿದಾರಿಗೆ ತರಬೇಕು.
* ಲಂಚ ಮತ್ತು ಭ್ರಷ್ಟಾಚಾರವನ್ನು ಮಟ್ಟಹಾಕುವಂತಹ ಸಮಾಜವನ್ನು ನಿರ್ಮಿಸಬೇಕು.
* ಸಮಾಜದಲ್ಲಿ ನಡೆಯುತ್ತಿರುವ ಗಲಭೆಗಳು ಮತ್ತು ಅಪರಾಧಗಳನ್ನು ನಿಯಂತ್ರಿಸಬೇಕು.
* ಸಮಾಜದ ಕೊನೆಯ ವ್ಯಕ್ತಿಗೂ ಅವಕಾಶಗಳು ಕಾಣುವಂತೆ ಸರ್ಕಾರವನ್ನು ನಡೆಸಬೇಕು.
* ಮಾನವ ಸಮಾಜ ಎದುರಿಸುತ್ತಿರುವ ರೋಗರುಜಿನಗಳಿಂದ ಪಾರು ಮಾಡಬೇಕು.
* ಶೇ. 90 ರಷ್ಟು ಕ್ಕಿಂತ ಹೆಚ್ಚು ಸಾರ್ವಜನಿಕರ ತೆರಿಗೆ ಹಣ ಸದ್ಬಳಕೆಯಾಗಬೇಕು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada actor Upendra announced his party Uttama Prajakeeya candidates for Lok sabha elections 2019. Why Upendra joined politics.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+18338356
CONG+48488
OTH188098

Arunachal Pradesh

PartyLWT
BJP82331
JDU167
OTH279

Sikkim

PartyLWT
SKM31417
SDF6915
OTH000

Odisha

PartyLWT
BJD1076113
BJP22022
OTH11011

Andhra Pradesh

PartyLWT
YSRCP0150150
TDP02424
OTH011

-
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more