ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ.ನರಸೀಪುರದಲ್ಲಿ ತೆನೆ ಹೊರಲು ಅವಕಾಶ ಸಿಗಲಿದೆಯೇ?

By ಕಿಕು
|
Google Oneindia Kannada News

ಮೈಸೂರು, ಫೆಬ್ರವರಿ 01 : ತಿರುಮಕೂಡಲು ನರಸೀಪುರ ಹಳೇ ಮೈಸೂರು ಭಾಗದ ಅತ್ಯಂತ ಪ್ರಸಿದ್ಧ ಧಾರ್ಮಿಕ ಹಾಗು ಪ್ರೇಕ್ಷಣೀಯ ಕ್ಷೇತ್ರ. ನರಸೀಪುರ ಕಾವೇರಿ, ಕಪಿಲಾ, ಸ್ಪಟಿಕ ಸರೋವರ ನದಿಗಳ ಸಂಗಮದ ಪುಣ್ಯ ಕ್ಷೇತ್ರ. ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದರೆ, ಗಂಗೆಯಲ್ಲಿ ಮಿಂದು ಕಾಶಿ ವಿಶ್ವನಾಥನ ದರ್ಶನ ಪಡೆದಷ್ಟೇ ಪುಣ್ಯ ಲಭಿಸುತ್ತದೆ ಎಂಬ ಮಾತಿದೆ.

ಯಾರಿಗೆ ಸಿಗಲಿದೆ ನಂಜನಗೂಡು ಶ್ರೀಕಂಠೇಶ್ವರನ ಕೃಪೆ?ಯಾರಿಗೆ ಸಿಗಲಿದೆ ನಂಜನಗೂಡು ಶ್ರೀಕಂಠೇಶ್ವರನ ಕೃಪೆ?

ಹಿರಿಯ ರಾಜಕಾರಿಣಿ ಎಂ.ರಾಜಶೇಖರ ಮೂರ್ತಿ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವಿದು. ರಾಜಶೇಖರ ಮೂರ್ತಿಯವರು ಲಿಂಗಾಯುತ ಸಮುದಾಯದ ಹಿರಿಯ ನಾಯಕರಾಗಿದ್ದರು. 1957 ರಿಂದ 5 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಒಮ್ಮೆ ಲೋಕಸಭಾ ಸದಸ್ಯರಾಗಿ, 3 ಬಾರಿ ರಾಜ್ಯಸಭಾ ಸದಸ್ಯರಾಗಿ, ಪಿ.ವಿ.ನರಸಿಂಹರಾಯರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು.

ಪಿರಿಯಾಪಟ್ಟಣ : ವೆಂಕಟೇಶ್‌ಗೆ 6ನೇ ಗೆಲುವು ಸಾಧ್ಯವೇ?ಪಿರಿಯಾಪಟ್ಟಣ : ವೆಂಕಟೇಶ್‌ಗೆ 6ನೇ ಗೆಲುವು ಸಾಧ್ಯವೇ?

ನಿಜಲಿಂಗಪ್ಪ ಹಾಗು ವೀರೇಂದ್ರ ಪಾಟೀಲರ ಆಪ್ತರಾಗಿದ್ದ ರಾಜಶೇಖರ ಮೂರ್ತಿ ಅವರು ನಿಜಲಿಂಗಪ್ಪ , ವೀರೇಂದ್ರ ಪಾಟೀಲ ಹಾಗು ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಹುಣಸೂರು ಕ್ಷೇತ್ರ : ಮಂಜುಗೆ ಹ್ಯಾಟ್ರಿಕ್ ಗೆಲುವಿಗೆ ತಡೆ ಸಾಧ್ಯವೇ?ಹುಣಸೂರು ಕ್ಷೇತ್ರ : ಮಂಜುಗೆ ಹ್ಯಾಟ್ರಿಕ್ ಗೆಲುವಿಗೆ ತಡೆ ಸಾಧ್ಯವೇ?

ಕ್ಷೇತ್ರದ ಹಾಲಿ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಮತ್ತು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ. ಆದರೆ, ಈ ಬಾರಿ ಅವರು ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟು, ಬೆಂಗಳೂರಿನತ್ತ ಹೊರಟಿದ್ದಾರೆ...

ಜೆಡಿಎಸ್ ಪ್ರಾಲಬ್ಯದ ಕ್ಷೇತ್ರ

ಜೆಡಿಎಸ್ ಪ್ರಾಲಬ್ಯದ ಕ್ಷೇತ್ರ

ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರಾಬಲ್ಯ ಹೆಚ್ಚಿದ್ದು, ಒಮ್ಮೆ ಮಾತ್ರ ಬಿಜಿಪಿ ಜಯಗಳಿಸಿದೆ. ಕಳೆದ ಚುನಾವಣೆಯಲ್ಲಿ ಡಾ.ಎಚ್.ಸಿ.ಮಹದೇವಪ್ಪ ಕೇವಲ 323 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮತಗಳ ಎಣಿಕೆ ಪ್ರಕ್ರಿಯೆ ವೇಳೆ ಗೊಂದಲ ಉಂಟಾಗಿತ್ತು.

ಜೆಡಿಎಸ್‌ನ ಸುಂದರೇಶನ್ ಜಯಶಾಲಿ ಎಂದೂ ಮಾಧ್ಯಮಗಳಲ್ಲಿ ವರದಿಯಾಯಿತು. ಮಾಧ್ಯಮಗಳ ಸುದ್ದಿ ಕಂಡು ಎಣಿಕೆ ಕೇಂದ್ರಕ್ಕೆ ಹೋದಾಗ ಸುಂದರೇಶನ್ ರವರಿಗೆ ಆಘಾತ ಕಾದಿತ್ತು. ನಂತರ ದೊಡ್ಡ ಕೋಲಾಹಲವೇ ನಡೆದು ಹೋಯಿತು. ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಚಿಕ್ಕಮಾದು ಮರುಎಣಿಕೆಗೆ ಆಗ್ರಹಿಸಿದರೂ, ಚುನಾವಣಾಧಿಕಾರಿ ಒಪ್ಪಲಿಲ್ಲ.

ಡಾ.ಎಚ್.ಸಿ.ಮಹದೇವಪ್ಪ

ಡಾ.ಎಚ್.ಸಿ.ಮಹದೇವಪ್ಪ

ಡಾ.ಎಚ್.ಸಿ.ಮಹದೇವಪ್ಪ ಟಿ.ನರಸೀಪುರವನ್ನು ಪ್ರತಿನಿಧಿಸುತ್ತಿದ್ದು, 7 ಬಾರಿ ಸ್ಪರ್ಧಿಸಿ 5 ಬಾರಿ ಗೆಲುವು ಸಾಧಿಸಿದ್ದಾರೆ. ಒಮ್ಮೆ ಜನತಾ ಪಕ್ಷ, ಒಮ್ಮೆ ಜೆಡಿಎಸ್, ಮತ್ತೊಮ್ಮೆ ಜನತಾ ಪರಿವಾರ ಹಾಗು ಕಳೆದೆರಡು ಬಾರಿ ಕಾಂಗ್ರೆಸ್ ನಿಂದ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಸಿದ್ದರಾಮಯ್ಯ ಆಪ್ತರೂ ಆಗಿರುವ ಮಹದೇವಪ್ಪ, ರಾಜ್ಯ ಸರ್ಕಾರದ ಪ್ರಭಾವಿ ಮಂತ್ರಿಯೂ ಹೌದು. ನಾಲ್ಕೂ ವರೆ ವರ್ಷಗಳಿಂದ ಲೋಕೋಪಯೋಗಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈ ಬಾರಿ ನರಸೀಪುರದಿಂದ ಸ್ಪರ್ಧಿಸುವ ಆಸಕ್ತಿ ತೋರುತ್ತಿಲ್ಲ.

ಹೊಸ ಅಭ್ಯರ್ಥಿ ಸುನೀಲ್ ಬೋಸ್

ಹೊಸ ಅಭ್ಯರ್ಥಿ ಸುನೀಲ್ ಬೋಸ್

ತನ್ನ ಮಗನ ರಾಜಕೀಯ ಬದುಕನ್ನು ಕಟ್ಟಿಕೊಡಲು, ತಂದೆಯಾಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತನ್ನ ಕ್ಷೇತ್ರವನ್ನು ಬಿಟ್ಟು ಕೊಡಲು ತಯಾರಾಗಿದ್ದು, 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿ.ನರಸೀಪುರದಿಂದ ಮಗನನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡುವುದು ಬಹುತೇಕ ಖಚಿತವಾಗಿದೆ. ಬೋಸ್, ಕಳೆದ ನಾಲ್ಕು ವರ್ಷಗಳಿಂದ ತಂದೆ ಸಚಿವರಾದ ನಂತರ ಕ್ಷೇತ್ರದ ಮೇಲ್ವಿಚಾರಣೆ ತಾವೇ ವಹಿಸಿಕೊಂಡಿದ್ದು, ಎಲ್ಲರಿಗೂ ಪರಿಚಿತರು.

ಜೆಡಿಎಸ್‌ನ ಸುಂದರೇಶನ್ ಅಕಾಲಿಕ ಮರಣ

ಜೆಡಿಎಸ್‌ನ ಸುಂದರೇಶನ್ ಅಕಾಲಿಕ ಮರಣ

ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋತಿದ್ದ ಸುಂದರೇಶನ್ ಕಳೆದ 2017 ಆಗಸ್ಟ್‌ನಲ್ಲಿ ಮರಣ ಹೊಂದಿದ್ದಾರೆ. ಜೆಡಿಎಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸುಂದರೇಶನ್ ರ ಪತ್ನಿ , ತನಗೆ ಅಥವಾ ತನ್ನ ಮಗ ಸಾಮ್ರಾಟ್ ಸುಂದರೇಶನ್ ಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದಾರೆ. 'ನಾವು ಎಲ್ಲಿ ಕಳೆದು ಕೊಂಡೆವೋ, ಅಲ್ಲೇ ಹುಡುಕಬೇಕು. ದಲಿತ ಮಹಿಳೆಯೊಬ್ಬಳಿಗೆ ಟಿಕೆಟ್ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಹೇಳುತ್ತಾರೆ' ಅವರು. ಹಾಗೆಯೇ, ಜಿಲ್ಲಾ ಪಂಚಾಯಿತಿ ಸದಸ್ಯ ಅಶ್ವಿನ್ ಕುಮಾರ್ ಮತ್ತೋರ್ವ ಆಕಾಂಕ್ಷಿ.

ಬಿಜೆಪಿಯಿಂದ ಡಾ.ಭಾರತಿ ಶಂಕರ್?

ಬಿಜೆಪಿಯಿಂದ ಡಾ.ಭಾರತಿ ಶಂಕರ್?

2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಡಾ.ಭಾರತಿ ಶಂಕರ್ ಅವರು ಡಾ.ಎಚ್.ಸಿ.ಮಹದೇವಪ್ಪರನ್ನು ಸೋಲಿಸಿದ್ದರು. ಈ ಬಾರಿಯೂ ತನಗೇ ಟಿಕೆಟ್ ಸಿಗುವುದೆಂಬ ಆಶಾಭಾವದೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಭ್ಯರ್ಥಿಯ ಹೆಸರು ಇನ್ನೂ ಅಂತಿಮವಾಗಿಲ್ಲ.

ಅಪ್ಪ,ಮಗನ ಆಡಳಿತ ವಿರೋಧಿ ಅಲೆ?

ಅಪ್ಪ,ಮಗನ ಆಡಳಿತ ವಿರೋಧಿ ಅಲೆ?

ಡಾ.ಎಚ್.ಸಿ.ಮಹದೇವಪ್ಪ ಹಾಗು ಮಗ ಸುನಿಲ್ ಬೋಸ್‌ ರ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ನಡೆಸುತ್ತಿದ್ದ ಪ್ರಯತ್ನಗಳು, ಮರಳಿಗಾಗಿ ಕಾವೇರಿ ಒಡಲಿಗೆ ಕೈ ಹಾಕಿ, ಮರಳು ವ್ಯವಹಾರದಲ್ಲಿ ಬೋಸ್ ರ ಅಧಿಪತ್ಯ ಸಾರ್ವಜನಿಕ ವಲಯದಲ್ಲಿ ಕಳೆದ ನಾಲ್ಕು ವರೆ ವರ್ಷಗಳು ಅತಿಯಾಗಿ ಕೇಳಿಬಂದ ಮಾತುಗಳು.

ಮಂಡ್ಯ ಮೂಲದ ತಹಶೀಲ್ದಾರ್ ಶಂಕರಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಶಂಕರಯ್ಯ ಆತ್ಮಹತ್ಯೆ ವಿಚಾರವಾಗಿ ಸಚಿವ ಮಹದೇವಪ್ಪ ಹಾಗು ಸುನೀಲ್ ಬೋಸ್ ವಿರುದ್ಧ ಅನೇಕ ಸಂಘಟೆನಗಳು ಪ್ರತಿಭಟನೆ ನಡೆಸಿದ್ದವು.

ಜೆಡಿಎಸ್ ಮಡಿಲಿಗೆ ಕ್ಷೇತ್ರ?

ಜೆಡಿಎಸ್ ಮಡಿಲಿಗೆ ಕ್ಷೇತ್ರ?

ಮೇಲ್ನೋಟಕ್ಕೆ ಜೆಡಿಎಸ್ ಗೆ ಅನುಕಂಪದ ಅಲೆ ಇದ್ದು, ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಜೆಡಿಎಸ್ ತಿರುಮಲಕೂಡು ನರಸೀಪುರ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು.

English summary
Who will get JDS ticket? and Who will win T.Narasipura assembly constituency, Mysuru. Minister for Public Works Department H.C.Mahadevappa is sitting MLA of the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X