ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷರಾಗಲು ಡಿಕೆ ಶಿವಕುಮಾರ್ ಸೂಕ್ತ: ನಮ್ಮ ಓದುಗರು

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಲು ಯಾರು ಸೂಕ್ತ ಎಂದು ಒನ್ಇಂಡಿಯಾ ಕನ್ನಡದ ಫೇಸ್ ಬುಕ್ ಪುಟದಲ್ಲಿ ಕೇಳಲಾದ ಲೈವ್ ಸಮೀಕ್ಷೆಯ ಫಲಿತಾಂಶ ಇಲ್ಲಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 09 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಲು ಯಾರು ಸೂಕ್ತ ಎಂದು ಒನ್ಇಂಡಿಯಾ ಕನ್ನಡದ ಫೇಸ್ ಬುಕ್ ಪುಟದಲ್ಲಿ ಕೇಳಲಾದ ಲೈವ್ ಸಮೀಕ್ಷೆಯ ಫಲಿತಾಂಶ ಇಲ್ಲಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ? ಎಂಬ ಪ್ರಶ್ನೆಗೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಹಾಲಿ ಅಧ್ಯಕ್ಷ ಜಿ ಪರಮೇಶ್ವರ ಅವರ ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿದೆ ಎಂದ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸುಳಿವು ನೀಡಿದ್ದಾರೆ. ಆದರೆ, ಕರ್ನಾಟಕ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರು ಅಂತಿಮವಾಗಿ ಯಾರ ಹೆಸರನ್ನು ಘೋಷಿಸುತ್ತಾರೋ ಕಾದು ನೋಡಬೇಕಿದೆ.

ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ಕಳೆದ ಮೂರು ತಿಂಗಳಿನಿಂದ ಲಾಬಿ ನಡೆಯುತ್ತಿದೆ. ಲಿಂಗಾಯತ, ಒಕ್ಕಲಿಗ, ದಲಿತ ಮುಖಂಡರು ಈ ಹುದ್ದೆ ಮೇಲೆ ಕಣ್ಣಿಟ್ಟು ಲಾಬಿ ನಡೆಸುತ್ತಿದ್ದೆ. ಹಾಲಿ ಅಧ್ಯಕ್ಷ ಪರಮೇಶ್ವರ್ ಅವರು ಕೂಡ ಮತ್ತೊಂದು ಅವಧಿಗೆ ಮುಂದುವರಿಸುವಂತೆ ಹೈಕಮಾಂಡ್‍ಗೆ ಮನವಿ ಮಾಡಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡಾ ಒಲವು ತೋರಿದ್ದರು. ಆದರೆ, ಈಗ ಪರಮೇಶ್ವರ್ ಅವರು ಇನ್ನೊಂದು ಅವಧಿಗೆ ಮುಂದುವರೆಯುವುದಿಲ್ಲ ಎಂಬ ಸುದ್ದಿ ಬಂದಿದೆ.

ರೇಸಿನಲ್ಲಿ ಡಿಕೆಶಿ ಮುಂದೆ

ರೇಸಿನಲ್ಲಿ ಡಿಕೆಶಿ ಮುಂದೆ

ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಅಪ್ಪಾಜಿ ನಾಡಗೌಡ ಸೇರಿದಂತೆ ಹಲವು ಮುಖಂಡರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು. ಈ ಪೈಕಿ ಎಂಬಿ ಪಾಟೀಲ್ ಅವರು ನಾನು ರೇಸಿನಲ್ಲಿಲ್ಲ ಎಂದಿದ್ದಾರೆ, ಎಸ್ ಆರ್ ಪಾಟೀಲ್ ಅವರು ವಯಸ್ಸಿನ ಕಾರಣ ಹಿಂದೆ ಸರಿಯುವ ಸಾಧ್ಯತೆಯಿದೆ. ಕೊನೆಗೆ ಮುನಿಯಪ್ಪ ಹಾಗೂ ಶಿವಕುಮಾರ್ ನಡುವೆ ಪೈಪೋಟಿ ಬರಲಿದ್ದು, ಡಿಕೆಶಿ ಅವರು ಅಧ್ಯಕ್ಷ ಸ್ಥಾನಕ್ಕೇರುವ ಲಕ್ಷಣಗಳಿವೆ.

ವೇಣುಗೋಪಾಲ್ ರಿಂದ ನಿರ್ಧಾರ

ವೇಣುಗೋಪಾಲ್ ರಿಂದ ನಿರ್ಧಾರ

'ಪಕ್ಷದಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಹುದ್ದೆಗೂ ನಾನು ಸಿದ್ಧ' ಎಂದವರು ಹೇಳಿದ್ದಾರೆ. ಮೇ 8ಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ತಂಡ ಬೆಂಗಳೂರಿಗೆ ಬಂದಿದೆ. ಮೇ 10ರೊಳಗೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತಂತೆ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

ಸ್ಪರ್ಧೆಯಲ್ಲಿ ಯಾರು?

ಸ್ಪರ್ಧೆಯಲ್ಲಿ ಯಾರು?

ಡಿಕೆ ಶಿವಕುಮಾರ್ 1037, ಕೆಎಚ್ ಮುನಿಯಪ್ಪ 145, ಎಂಬಿ ಪಾಟೀಲ381 ಹಾಗೂ ಜಿ ಪರಮೇಶ್ವರ 108 ಸ್ಥಾನ ಸಿಕ್ಕಿದೆ.ಅಪ್ಪಾಜಿ ನಾಡಗೌಡ, ಎಸ್ ಆರ್ ಪಾಟೀಲ್ ಅವರ ಹೆಸರು ಗಳು ಕೂಡಾ ಕೇಳಿ ಬಂದಿತ್ತು.

ಲಕ್ಷಾಂತರ ಬಾರಿ ವೀಕ್ಷಣೆ

ಲಕ್ಷಾಂತರ ಬಾರಿ ವೀಕ್ಷಣೆ

ಸರಿ ಸುಮಾರು 2 ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಲೈವ್ ಸಮೀಕ್ಷೆಯಲ್ಲಿ ಬಹುತೇಕ ಮಂದಿ ಡಿಕೆ ಶಿವಕುಮಾರ್ ಅವರ ಪರ ಮತ ಹಾಕಿದ್ದಾರೆ. ಮಿಕ್ಕಂತೆ ಅಂಕಿ ಅಂಶ ನಿಮ್ಮ ಮುಂದಿದೆ.

English summary
Oneindia Kannada recently conducted Facebook live poll asking netizens to vote Who will become KPCC president? As per the results sheet Energy Minister DK Shivakumar has been chosen for the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X