ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಹೊಸ ಹೆಸರುಗಳು ಸೇರ್ಪಡೆ!

By Mahesh
|
Google Oneindia Kannada News

ಬೆಂಗಳೂರು, ಜೂನ್ 03: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ದಾಖಲೆಯ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಡಾ.ಜಿ.ಪರಮೇಶ್ವರ ಅವರು ರಾಜೀನಾಮೆ ನೀಡಿದ್ದಾರೆ. ಸದ್ಯ ಉಪ ಮುಖ್ಯಮಂತ್ರಿಯಾಗಿ ಮೈತ್ರಿ ಸರ್ಕಾರದಲ್ಲಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎಂಬ ಕುತೂಹಲ ಇದ್ದೇ ಇದೆ.

'ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಲಿದೆ. ನನಗಿಂತ ಉತ್ತಮರನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ' ಎಂದು ಡಾ.ಜಿ.ಪರಮೇಶ್ವರ ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಲು ಡಿಕೆ ಶಿವಕುಮಾರ್ ಸೂಕ್ತ: ನಮ್ಮ ಓದುಗರುಕೆಪಿಸಿಸಿ ಅಧ್ಯಕ್ಷರಾಗಲು ಡಿಕೆ ಶಿವಕುಮಾರ್ ಸೂಕ್ತ: ನಮ್ಮ ಓದುಗರು

ಈ ಬಾರಿ ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ವಿಷಯದಲ್ಲಿ ಜಾತಿ ಲೆಕ್ಕಾಚಾರ ಮುಖ್ಯವಾಗಲಿದೆ. ಇದೀಗ ಹೊಸದಾಗಿ ಹಿರಿಯ ಕಾಂಗ್ರೆಸ್ಸಿಗ ಆರ್ ವಿ ದೇಶಪಾಂಡೆ ಅವರ ಹೆಸರು ಕೇಳಿ ಬಂದಿರುವುದರಿಂದ ಬ್ರಾಹ್ಮಣ, ಲಿಂಗಾಯತ, ಲಿಂಗಾಯತ ಹೀಗೆ ವಿವಿಧ ಜಾತಿಯ ಮುಖಂಡರು ರೇಸಿನಲ್ಲಿದ್ದಾರೆ. ದಲಿತ ಖೋಟಾದಡಿಯಲ್ಲಿ ಜಿ ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದರಿಂದ ದಲಿತರಿಗೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಬಹುತೇಕ ಕ್ಷೀಣಿಸಿದೆ.. ಮಿಕ್ಕಂತೆ ಯಾರೆಲ್ಲ ಈ ಸ್ಥಾನಕ್ಕಾಗಿ ಹಂಬಲಿಸಿದ್ದಾರೆ? ಮುಂದೆ ಓದಿ...

ವೀರಶೈವರಿಗೆ ನಾಯಕತ್ವ ನೀಡಬೇಕು

ವೀರಶೈವರಿಗೆ ನಾಯಕತ್ವ ನೀಡಬೇಕು

ವೀರಶೈವರಿಗೆ ನಾಯಕತ್ವ ನೀಡಬೇಕು. ಬಿಜೆಪಿಯತ್ತ ವಾಲಿರುವ ಲಿಂಗಾಯತರನ್ನು ಪುನಃ ಕಾಂಗ್ರೆಸ್ ನತ್ತ ಒಲಿಸಿಕೊಳ್ಳಲು ಕೆಪಿಸಿಸಿಯಲ್ಲಿ ಬದಲಾವಣೆ ಅನಿವಾರ್ಯ ಎಂದು ಖಾಯಂ ಖಜಾಂಜಿಯೂ ಆಗಿರುವ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರು 2012ರಿಂದ ವರಾತ ಹಿಡಿದಿದ್ದಾರೆ. ಅದರೆ, ಅವರಿಗೆ ಅನುಭವವಿದ್ದರೂ ವಯೋವೃದ್ಧರಿಗೆ ಪಟ್ಟ ತಪ್ಪಿ ಮತ್ತೊಬ್ಬ ನಾಯಕರಿಗೆ ಸಿಗುವ ಸಾಧ್ಯತೆಯೇ ಹೆಚ್ಚು. ಡಿಸಿಎಂ ಹುದ್ದೆಯನ್ನು ಲಿಂಗಾಯತರಿಗೆ ನೀಡಬೇಕು ಎಂದು ಮಠಾಧೀಶರಾದಿಯಾಗಿ, ಲಿಂಗಾಯತ ಮುಖಂಡರು ಲಾಬಿ ನಡೆಸಿ ಸೋತಿದ್ದಾರೆ. ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುವ ಸಾಧ್ಯತೆಯಿದೆ.

ರಾಜ್ಯಾಧ್ಯಕ್ಷ ಪಟ್ಟಕ್ಕೆ ಏಕೆ ಪ್ರಾಮುಖ್ಯತೆ

ರಾಜ್ಯಾಧ್ಯಕ್ಷ ಪಟ್ಟಕ್ಕೆ ಏಕೆ ಪ್ರಾಮುಖ್ಯತೆ

1989ರಲ್ಲಿ ವೀರೇಂದ್ರಪಾಟೀಲ್, 1999ರಲ್ಲಿ ಎಸ್.ಎಂ.ಕೃಷ್ಣ ಅವರ ಸಾರಥ್ಯದಲ್ಲಿ ಚುನಾವಣೆ ಎದುರಿಸಿದಾಗ ಪಕ್ಷಕ್ಕೆ ಬಹುಮತ ದೊರೆತು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಅದೇ ಕಾರ್ಯತಂತ್ರವನ್ನು ಅನುಸರಿಸಿ ಪ್ರಬಲ ವರ್ಗದ ನಾಯಕರೊಬ್ಬರಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕು ಎಂದು ವೀರಶೈವ ವರ್ಗ ಆಗ್ರಹಿಸಿದೆ. ಇದೇ ಅಂಶ ಹಿಡಿದುಕೊಂಡು ಒಕ್ಕಲಿಗರು ಕೂಡಾ ಲಾಬಿ ನಡೆಸಿದ್ದಾರೆ. ಹೀಗಾಗಿ, ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬುದು ಕುತೂಹಲಕಾರಿಯಾಗಿದ್ದು, ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಚುನಾವಣೆಗೆ ಮುಂದೆ ಕೇಳಿ ಬಂದ ಹೆಸರುಗಳು

ಚುನಾವಣೆಗೆ ಮುಂದೆ ಕೇಳಿ ಬಂದ ಹೆಸರುಗಳು

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ. ಎಂ.ಬಿ. ಪಾಟೀಲ್ ಹಾಗೂ ಹೆಚ್ ಸಿ. ಮಹಾದೇವಪ್ಪ ಹೆಸರುಗಳು ಕೇಳಿ ಬಂದಿತ್ತು, ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಯಾರೇ ಅಧ್ಯಕ್ಷರಾದರೂ ನನಗೆ ಬೇಸರವಿಲ್ಲ. ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಬೇಡ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಯನ್ನು ಇದುವರೆಗೂ ಸಮರ್ಥವಾಗಿ ನಾನು ನಿಭಾಯಿಸಿದ್ದೇನೆ. ಈಗಲೂ ನಿರ್ವಹಿಸುತ್ತೇನೆ ಎಂದು ಹೇಳಿದ್ದರು.

ಅಚ್ಚರಿಯ ಹೆಸರುಗಳು ಕೇಳಿ ಬಂದಿತ್ತು

ಅಚ್ಚರಿಯ ಹೆಸರುಗಳು ಕೇಳಿ ಬಂದಿತ್ತು

ಡಿ.ಕೆ.ಶಿವಕುಮಾರ್ ಅವರ ಹೆಸರು ಹೊರತುಪಡಿಸಿ, ದೆಹಲಿಯಲ್ಲಿ ರಾಜ್ಯದ ಪ್ರತಿನಿಧಿಯಾಗಿರುವ ಅಪ್ಪಾಜಿ ನಾಡಗೌಡ, ಮಾಜಿ ಐಟಿ ಬಿಟಿ ಸಚಿವ ಎಸ್.ಆರ್.ಪಾಟೀಲ್, ತುಮಕೂರು ಸಂಸದ ಮುದ್ದಹನುಮೇಗೌಡ, ಮೈತ್ರಿ ಸರ್ಕಾರದ ಸಂಪುಟ ಸೇರಲು ಸಿದ್ಧರಾಗಿರುವ ಎಂಬಿಪಾಟೀಲ ಅವರ ಹೆಸರು ಕೇಳಿ ಬಂದಿದೆ.

ಅಲ್ಲದೆ ಮಾಜಿ ಕೇಂದ್ರ ಸಚಿವ ಕೆ ಮುನಿಯಪ್ಪ ಅವರಿಗೆ ಈ ಮುಂಚೆ ಆಫರ್ ಸಿಕ್ಕಿತ್ತು. ದಲಿತ ವರ್ಗಕ್ಕೆ ಈಗಾಗಲೇ ಪ್ರಾತಿನಿಧ್ಯ ಸಿಕ್ಕಿರುವುದರಿಂದ ಈ ಬಾರಿ ಒಕ್ಕಲಿಗರಿಗೆ ಅವಕಾಶ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕೆಪಿಸಿಸಿ ಅಧ್ಯಕ್ಷರಾದವರ ಕಣ್ಣು ಸಿಎಂ ಕುರ್ಚಿ ಮೇಲೆ ಇರುತ್ತದೆ

ಹಿರಿಯ ನಾಯಕ ಆರ್​.ವಿ ದೇಶಪಾಂಡೆ

ಹಿರಿಯ ನಾಯಕ ಆರ್​.ವಿ ದೇಶಪಾಂಡೆ

ಹಿರಿಯ ನಾಯಕ ಆರ್​.ವಿ ದೇಶಪಾಂಡೆ ಅವರು ಎಚ್​.ಡಿ ಕುಮಾರಸ್ವಾಮಿ ಅವರ ಸಂಪುಟ ಸೇರಲು ನಿರಾಕರಿಸಿರುವ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಂಗತಿ ಹೊರ ಬಂದಿದೆ. ರಾಮಕೃಷ್ಣ ಹೆಗಡೆ ಮತ್ತು ಎಚ್​.ಡಿ ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ದೇಶಪಾಂಡೆ ಅವರು ನೇರವಾಗಿ ತಮ್ಮ ಇಚ್ಛೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದಾರೆ ಎಂಬ ಸುದ್ದಿಯಿದೆ.

English summary
Who will become KPCC President: List of Probables include DK Shivakumar, RV Deshpande, MB Patil, SR Patil, Shamnuru Shivashankarappa and many.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X