ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರಾಗಲಿದ್ದಾರೆ ಕರ್ನಾಟಕದ ರಾಜ್ಯಪಾಲರು? ಅಚ್ಚರಿಯ ಹೆಸರುಗಳು

|
Google Oneindia Kannada News

ಬೆಂಗಳೂರು, ಜೂನ್ 03: ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಂಪುಟ ರಚನೆ ಕಾರ್ಯವೂ ಆಗಿದ್ದು, ಆಡಳಿತ ಯಂತ್ರ ಪ್ರಾರಂಭಗೊಂಡಿದೆ.

ಕೇಂದ್ರದಲ್ಲಿ ಹೊಸದಾಗಿ ಸರ್ಕಾರ ರಚನೆ ಆದಾಗ ರಾಜ್ಯಗಳ ರಾಜ್ಯಪಾಲರುಗಳನ್ನು ಬದಲಾಯಿಸುವ ಪದ್ಧತಿ ಸಾಮಾನ್ಯವಾಗಿ ನಡೆಯುತ್ತಾ ಬಂದಿದೆ. ಇದು ನಿಯಮವಲ್ಲದಿದ್ದರೂ ಹೀಗೊಂದು ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಈ ಬಾರಿ ಕಳೆದ ಬಾರಿಯ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ರಾಜ್ಯಪಾಲರ ಬದಲಾವಣೆ ಸಾಧ್ಯತೆ ಕಡಿಮೆ.

ರಾಜಭವನಕ್ಕೆ ಪ್ರಜೆಗಳಿಗೆ ಮುಕ್ತ ಪ್ರವೇಶ, ನೀವು ನೋಡಿಬನ್ನಿ ರಾಜಭವನಕ್ಕೆ ಪ್ರಜೆಗಳಿಗೆ ಮುಕ್ತ ಪ್ರವೇಶ, ನೀವು ನೋಡಿಬನ್ನಿ

ಕರ್ನಾಟಕದ ರಾಜ್ಯಪಾಲರಾಗಿ ವಲುಭಾಯಿ ವಾಲಾ ಅವರು ಅಧಿಕಾರ ಸ್ವೀಕರಿಸಿ ಐದು ವರ್ಷವಾಗುತ್ತಾ ಬಂದಿದ್ದು, ಸೆಪ್ಟೆಂಬರ್‌ ತಿಂಗಳಿಗೆ ವಲುಭಾಯಿ ವಾಲಾ ಅವರ ಐದು ವರ್ಷ ಪೂರ್ಣಗೊಳ್ಳುತ್ತಿದ್ದು ಅದಕ್ಕೆ ಮುಂಚೆಯೇ ಮತ್ತೊಬ್ಬ ರಾಜ್ಯಪಾಲರನ್ನು ನೇಮಕ ಮಾಡಬೇಕಿದೆ.

ರಾಷ್ಟ್ರಪತಿಗಳಿಂದ ನೇಮಕವಾಗುವ ರಾಜ್ಯಪಾಲರು

ರಾಷ್ಟ್ರಪತಿಗಳಿಂದ ನೇಮಕವಾಗುವ ರಾಜ್ಯಪಾಲರು

ರಾಜ್ಯಪಾಲರ ನೇಮಕವನ್ನು ರಾಷ್ಟ್ರಪತಿಗಳು ಮಾಡುತ್ತಾರೆಯಾದರೂ ಅದನ್ನು ಸೂಚಿಸುವುದು ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರವೇ. ಹಾಗಾಗಿ ಈ ಬಾರಿ ರಾಜ್ಯದ ರಾಜಪಾಲರಾಗಿ ಯಾರನ್ನು ನೇಮಿಸುತ್ತಾರೆ ಎಂಬ ಕುತೂಹಲ ಇದೆ. ಕೆಲವು ಹೆಸರುಗಳು ತೇಲಿ ಬರುತ್ತಿದ್ದು, ಇವರಲ್ಲೇ ಒಬ್ಬರು ರಾಜ್ಯದ ರಾಜಪಾಲರಾಗುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರ: 400 ರಾಜಕಾರಣಿಗಳಿಗೆ ಮತ್ತೆ ಭದ್ರತೆ ನೀಡಿದ ಸರ್ಕಾರ ಜಮ್ಮು ಮತ್ತು ಕಾಶ್ಮೀರ: 400 ರಾಜಕಾರಣಿಗಳಿಗೆ ಮತ್ತೆ ಭದ್ರತೆ ನೀಡಿದ ಸರ್ಕಾರ

ರಾಜ್ಯಕ್ಕೆ ಬರಲಿದ್ದಾರಾ ಸುಷ್ಮಾ ಸ್ವರಾಜ್?

ರಾಜ್ಯಕ್ಕೆ ಬರಲಿದ್ದಾರಾ ಸುಷ್ಮಾ ಸ್ವರಾಜ್?

ಕಳೆದ ಅವಧಿಯಲ್ಲಿ ವಿದೇಶಾಂಗ ಮಂತ್ರಿಯಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಸುಷ್ಮಾ ಸ್ವರಾಜ್ ಅವರನ್ನು ಕರ್ನಾಟಕದ ರಾಜ್ಯಪಾಲೆಯಾಗಿ ನೇಮಿಸುವ ಸಾಧ್ಯತೆ ಇದೆ. ಸುಷ್ಮಾ ಸ್ವರಾಜ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿಲ್ಲ, ಅಲ್ಲದೆ ಈ ಬಾರಿ ಅವರು ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.

ಸುಷ್ಮಾ ಸ್ವರಾಜ್ ಆಗಬಹುದೇ ರಾಜ್ಯಪಾಲೆ?

ಸುಷ್ಮಾ ಸ್ವರಾಜ್ ಆಗಬಹುದೇ ರಾಜ್ಯಪಾಲೆ?

ಕರ್ನಾಟಕದಲ್ಲಿ ಒಮ್ಮೆ ಲೋಕಸಭೆ ಚುನಾವಣೆ ಎದುರಿಸಿ ಸೋಲನುಭವಿಸಿರುವ ಸುಷ್ಮಾ ಸ್ವರಾಜ್ ಅವರಿಗೆ, ರಾಜ್ಯದ ಬಗ್ಗೆ ಮಾಹಿತಿ ಇದೆ, ಇದು ಅವರ ಆಯ್ಕೆಗಿರುವ ಧನಾತ್ಮಕ ಅಂಶಗಳು. ಆದರೆ ಅವರು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರೊಂದಿಗೆ ಹತ್ತಿರದಿಂದ ಗುರುತಿಸಿಕೊಂಡಿದ್ದರು ಇದರಿಂದಾಗಿ ಅವರಿಗೆ ಹಿನ್ನಡೆ ಆಗುವ ಸಾಧ್ಯತೆಯೂ ಇದೆ.

ನೀತಿ ಸಂಹಿತೆ ಉಲ್ಲಂಘಿಸಿದ ರಾಜಸ್ಥಾನ ರಾಜ್ಯಪಾಲ: ಇತಿಹಾಸದಲ್ಲೇ ಮೊದಲು ನೀತಿ ಸಂಹಿತೆ ಉಲ್ಲಂಘಿಸಿದ ರಾಜಸ್ಥಾನ ರಾಜ್ಯಪಾಲ: ಇತಿಹಾಸದಲ್ಲೇ ಮೊದಲು

ಸುಮಿತ್ರಾ ಮಹಾಜನ್ ಆಗಬಹುದೇ ರಾಜ್ಯಪಾಲೆ?

ಸುಮಿತ್ರಾ ಮಹಾಜನ್ ಆಗಬಹುದೇ ರಾಜ್ಯಪಾಲೆ?

16ನೇ ಲೋಕಸಭೆಯಲ್ಲಿ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇರುವ ಸುಮಿತ್ರಾ ಮಹಾಜನ್ ಅವರನ್ನು ರಾಜ್ಯಕ್ಕೆ ರಾಜ್ಯಪಾಲೆಯಾಗಿ ನೇಮಿಸುವ ಸಾಧ್ಯತೆಯೂ ಇದೆ. ಸುಮಿತ್ರಾ ಅವರು ಅಜಾತ ಶತ್ರು ಎಂದು ಹೆಸರು ಮಾಡಿದವರು. ಪಕ್ಷಭೇದ ಬಿಟ್ಟು ಕರ್ತವ್ಯವನ್ನು ಇವರು ನಿರ್ವಹಿಸಬಲ್ಲರು.

ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲಾಗದ್ದಕ್ಕೆ ಕಾರಣ ಬಿಜೆಪಿ ಮತ್ತು ಫ್ಯಾಕ್ಸ್‌ ಮಷಿನ್‌! ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲಾಗದ್ದಕ್ಕೆ ಕಾರಣ ಬಿಜೆಪಿ ಮತ್ತು ಫ್ಯಾಕ್ಸ್‌ ಮಷಿನ್‌!

ಉಮಾಭಾರತಿ ಆಗುವರೇ ರಾಜ್ಯಪಾಲೆ?

ಉಮಾಭಾರತಿ ಆಗುವರೇ ರಾಜ್ಯಪಾಲೆ?

ಸಾದ್ವಿ ಉಮಾ ಭಾರತಿ ಅವರನ್ನು ಕರ್ನಾಟಕದ ರಾಜ್ಯಪಾಲೆಯನ್ನಾಗಿ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಅವರೂ ಸಹ ಈ ಬಾರಿ ಚುನಾವಣೆ ಸ್ಪರ್ಧಿಸಿಲ್ಲ, ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನವನ್ನೂ ಅವರಿಗೆ ನೀಡುವ ಸಾಧ್ಯತೆ ಕಡಿಮೆ ಇದೆ. ಆದರೆ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಬದಲಿಗೆ ಪಕ್ಷದ ಹುದ್ದೆಗೆ ನೇಮಿಸುವ ಸಾಧ್ಯತೆ ಇದೆ.

English summary
Three main names are in the list of probable Karnataka governor. Present governor Vajubhai wala's term will end by August 31. Susham Swaraj, Sumitra Mahajan, Umabharthi's name is in top of the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X