ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆ

|
Google Oneindia Kannada News

ಬೆಂಗಳೂರು, ಜುಲೈ 05 : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಬಜೆಟ್ ಶುಕ್ರವಾರ ಮಂಡನೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಹಲವಾರು ಘೋಷಣೆಗಳನ್ನು ಮಾಡಿದರು.

ಶುಕ್ರವಾರ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದ ದೇಶದ ಜನರು ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.

ಕೇಂದ್ರ ಬಜೆಟ್ : ಪ್ರತಿ ಗ್ರಾಮ ಪಂಚಾಯಿತಿಗೂ ಇಂಟರ್‌ ನೆಟ್ ಸೌಲಭ್ಯಕೇಂದ್ರ ಬಜೆಟ್ : ಪ್ರತಿ ಗ್ರಾಮ ಪಂಚಾಯಿತಿಗೂ ಇಂಟರ್‌ ನೆಟ್ ಸೌಲಭ್ಯ

ಕರ್ನಾಟಕದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದ್ದರಿಂದ, ರಾಜ್ಯದ ಜನರಿಗೂ ಬಜೆಟ್ ಮೇಲೆ ಅಪಾರ ನಿರೀಕ್ಷೆ ಇತ್ತು.

ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?

'ಸೂರ್ಯನ ಕೆಳಗೆ ಎಲ್ಲವೂ ಇದೆ. ಆದರೆ ಹಿಡಿಯಲು ಹೋದರೆ ಏನೂ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಅನ್ನು ಲೇವಡಿ ಮಾಡಿದ್ದಾರೆ. ಬಜೆಟ್ ಬಗ್ಗೆ ಟ್ವೀಟರ್‌ನಲ್ಲಿ ಅವರು ಒಂದು ಸಾಲಿನ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕೇಂದ್ರ ಬಜೆಟ್ Liive Updates: ತೈಲ, ಚಿನ್ನ, ಮದ್ಯ ದುಬಾರಿಕೇಂದ್ರ ಬಜೆಟ್ Liive Updates: ತೈಲ, ಚಿನ್ನ, ಮದ್ಯ ದುಬಾರಿ

ಹುಸಿ ಹೆಗ್ಗಳಿಕೆಗಳ ಗುಚ್ಛ

ಹುಸಿ ಹೆಗ್ಗಳಿಕೆಗಳ ಗುಚ್ಛ

ಕರ್ನಾಟಕ ಕಾಂಗ್ರೆಸ್ ಕೇಂದ್ರ ಬಜೆಟ್‌ ಅನ್ನು ಹುಸಿ ಹೆಗ್ಗಳಿಕೆಗಳ ಗುಚ್ಛ ಎಂದು ಲೇವಡಿ ಮಾಡಿದೆ. ದೂರದೃಷ್ಟಿ ಇಲ್ಲದ, ನಿರಾಶಾದಾಯಕ ಕೇಂದ್ರ ಬಜೆಟ್ ನರೇಂದ್ರ ಮೋದಿ ಸರ್ಕಾರದ
ಹುಸಿ ಹೆಗ್ಗಳಿಕೆಗಳ ಮಹಾಪೂರದ ಗುಚ್ಚ. ರೈತರು, ಬಡವರು ಮಧ್ಯಮ ವರ್ಗಗಳಿಗೆ ಮತ್ತುದೇಶದ ಸಮಗ್ರ ಅಭಿವೃದ್ಧಿಗೆ ಗುರುತರ ಹೊಸ ಯೋಜನೆಗಳಿಲ್ಲ. 2030ಕ್ಕೆ ಏನಾಗಬಹುದೆಂಬ ಊಹೆಗಿಂತ 2019ರಲ್ಲಿ ಏನು ದೇಶಕ್ಕೆ ಕೊಡುವಿರಿ ಎಂಬುದರ ಸ್ಪಷ್ಟತೆ ಇಲ್ಲ' ಎಂದು ಪಕ್ಷ ಟ್ವೀಟ್ ಮಾಡಿದೆ.

ಡಿ.ಕೆ.ಸುರೇಶ್ ಪ್ರತಿಕ್ರಿಯೆ

ಡಿ.ಕೆ.ಸುರೇಶ್ ಪ್ರತಿಕ್ರಿಯೆ

ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಬಿಜೆಪಿಗೆ ಮತ ಹಾಕಿದವರು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು. ಆದರೆ, ಇಂದಿನ ಬಜೆಟ್ ಜನರ ನಿರೀಕ್ಷೆ ಹುಸಿಯಾಗಿಸಿದೆ. ಹಳೆಯದನ್ನೇ ಇಂದಿನ ಬಜೆಟ್‌ನಲ್ಲಿ ತಿರುಗಿಸಿ ಹೇಳಲಾಗಿದೆ. ಮಹಿಳಾ ಸಚಿವರು ದೇಶದ ಜನರ ದಾರಿ ತಪ್ಪಿಸಿದ್ದರೆ' ಎಂದು ಆರೋಪಿಸಿದ್ದಾರೆ.

ಕರ್ನಾಟಕಕ್ಕೆ ಅನ್ಯಾಯವಾಗಿದೆ

ಕರ್ನಾಟಕಕ್ಕೆ ಅನ್ಯಾಯವಾಗಿದೆ

'ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ಶಾಹಿಗಳಿಗೆ ಮಣೆ ಹಾಕಲಾಗಿದೆ. ಕರ್ನಾಟಕ ರಾಜ್ಯಕ್ಕೆ ಈ ಬಜೆಟ್‌ನಲ್ಲೂ ಅನ್ಯಾಯವಾಗಿದೆ. ಬಡವರು, ರೈತರು, ಕಾರ್ಮಿಕರ ವಿರೋಧಿ ಬಜೆಟ್ ಇದಾಗಿದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಪ್ರತಿಕ್ರಿಯೆ

ಸಿದ್ದರಾಮಯ್ಯ ಪ್ರತಿಕ್ರಿಯೆ

ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಸೂರ್ಯನ ಕೆಳಗೆ ಎಲ್ಲವೂ ಇದೆ. ಆದರೆ ಹಿಡಿಯಲು ಹೋದರೆ ಏನೂ ಇಲ್ಲ' ಎಂದು ಬಜೆಟ್ ಬಗ್ಗೆ ಟ್ವೀಟರ್‌ನಲ್ಲಿ ಅವರು ಒಂದು ಸಾಲಿನ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸುರೇಶ್ ಅಂಗಡಿ ಪ್ರತಿಕ್ರಿಯೆ

ಸುರೇಶ್ ಅಂಗಡಿ ಪ್ರತಿಕ್ರಿಯೆ

'ಇದು ಜನಸಾಮಾನ್ಯರ ಬಜೆಟ್ ಆಗಿದೆ. ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಮೂಲಭೂತ ಸೌಕರ್ಯಗಳನ್ನು ನೀಡುವುದಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಿ, ಅನುದಾ ಕೊಟ್ಟಿದ್ದಾರೆ' ಎಂದು ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಹೇಳಿದ್ದಾರೆ.

English summary
Finance Minister Nirmala Sitharaman presented 2019-20 budget on July 5, 2019. Karnataka leaders reaction for the budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X