ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಸಿಎಂ ಯಾರು? ಮೂವರು ಗೊರವಯ್ಯನವರು ಏಕಕಾಲದಲ್ಲಿ ನುಡಿದ ಭವಿಷ್ಯ

|
Google Oneindia Kannada News

ರಾಜ್ಯದಲ್ಲಿ ಮುಂಬರುವ ಅಸೆಂಬ್ಲಿ ಚುನಾವಣೆಗೆ ಇನ್ನೂ ಬರೋಬ್ಬರಿ ಇಪ್ಪತ್ತು ತಿಂಗಳ ಮೇಲಿದೆ. ಈಗಲೇ, ಯಾರು ಮುಂದಿನ ಮುಖ್ಯಮಂತ್ರಿ ಎನ್ನುವ ಚರ್ಚೆ ಕಾಂಗ್ರೆಸ್ಸಿನಲ್ಲಿ ಜೋರಾಗಿ ನಡೆಯುತ್ತಿದೆ.

ಪಕ್ಷದ ಹಿರಿಯ ಮುಖಂಡರ ಆದೇಶವಿದ್ದರೂ, ಕೆಲವು ಮುಖಂಡರು ಸಿದ್ದರಾಮಯ್ಯನವರ ಪರ, ಕೆಲವರು ಡಿ.ಕೆ.ಶಿವಕುಮಾರ್ ಪರ ಮಾತನಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯನವರ ಪರ ಮಾತನಾಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇದೆ.

 ಅಕ್ಟೋಬರ್ ನಲ್ಲಿ ರಾಷ್ಟ್ರ ನಾಯಕರೊಬ್ಬರ ಹತ್ಯೆ, ದೇಶದಲ್ಲಿ ದಂಗೆ: ಭವಿಷ್ಯವಾಣಿ ಅಕ್ಟೋಬರ್ ನಲ್ಲಿ ರಾಷ್ಟ್ರ ನಾಯಕರೊಬ್ಬರ ಹತ್ಯೆ, ದೇಶದಲ್ಲಿ ದಂಗೆ: ಭವಿಷ್ಯವಾಣಿ

ಕೊರೊನಾ ನಿರ್ವಹಣೆ, ಬಿಜೆಪಿ ದುರಾಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್ಸಿನವರ ಹೋರಾಟ ತೀವ್ರವಾಗಿಯೇ ನಡೆಯುತ್ತಿದೆ. ಇನ್ನೊಂದು ಕಡೆ, ಜೆಡಿಎಸ್ ಕೂಡಾ ಈ ವಿಚಾರದಲ್ಲಿ ಕಾರ್ಯೋನ್ಮುಖವಾಗಿದೆ.

ಇವೆಲ್ಲದರ ನಡುವೆ, ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ವಿಚಾರದ ಬಗ್ಗೆ ಮೂವರು ಗೊರವಯ್ಯನವರು ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ ಯಾರು ಸಿಎಂ ಆಗಲಿದ್ದಾರೆ?

ಬಾದಾಮಿ; ಮತ್ತೆ ಸಿದ್ದರಾಮಯ್ಯ, ಶ್ರೀರಾಮುಲು ಎದುರಾಳಿಗಳು? ಬಾದಾಮಿ; ಮತ್ತೆ ಸಿದ್ದರಾಮಯ್ಯ, ಶ್ರೀರಾಮುಲು ಎದುರಾಳಿಗಳು?

 ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿದ ಮೂವರು ಗೊರವಯ್ಯನವರು

ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿದ ಮೂವರು ಗೊರವಯ್ಯನವರು

ಮೂವರು ಗೊರವಯ್ಯನವರು ಆಷಾಢ ಶುಕ್ರವಾರದ ದಿನವಾದ ಜುಲೈ ಹದಿನಾರರಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮೂವರೂ ಒಟ್ಟಾಗಿ ಭವಿಷ್ಯ ನುಡಿದು ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.

 ಮುಂದಿನ ಮುಖ್ಯಮಂತ್ರಿಯೂ ಸಿದ್ದರಾಮಯ್ಯನವರೇ ಆಗಲಿದ್ದಾರೆ

ಮುಂದಿನ ಮುಖ್ಯಮಂತ್ರಿಯೂ ಸಿದ್ದರಾಮಯ್ಯನವರೇ ಆಗಲಿದ್ದಾರೆ

ಸಿದ್ದರಾಮಯ್ಯನವರನ್ನು ಭೇಟಿಯಾದ ನಂತರ ಮಾತನಾಡಿದ ಗೊರವಯ್ಯನವರು ಸಿದ್ದರಾಮಯ್ಯನವರು ಬಾದಾಮಿಯಿಂದ ಗೆಲುವು ಸಾಧಿಸಲಿದ್ದಾರೆ. ಜೊತೆಗೆ, ಮುಂದಿನ ಮುಖ್ಯಮಂತ್ರಿಯೂ ಸಿದ್ದರಾಮಯ್ಯನವರೇ ಆಗಲಿದ್ದಾರೆ ಎನ್ನುವ ಭವಿಷ್ಯವನ್ನು ಗೊರವಯ್ಯ ನುಡಿದಿದ್ದಾರೆ.

 ಸಿದ್ದರಾಮಯ್ಯನವರ ನಿವಾಸಕ್ಕೆ ಬಂದು ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯ

ಸಿದ್ದರಾಮಯ್ಯನವರ ನಿವಾಸಕ್ಕೆ ಬಂದು ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯ

ಸಾಮಾನ್ಯವಾಗಿ ಇಂತದನ್ನೆಲ್ಲಾ ನಂಬದ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಲಭ್ಯವಾಗಿಲ್ಲ. ಇತ್ತೀಚೆಗೆ, ಸುಮಾರು ಐನೂರು ಮುಖಂಡರು/ಕಾರ್ಯಕರ್ತರು ಸಿದ್ದರಾಮಯ್ಯನವರ ನಿವಾಸಕ್ಕೆ ಬಂದು ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದರು.

Recommended Video

ಭಾರತ ಪಾಕಿಸ್ತಾನ ಪಂದ್ಯ ವೀಕ್ಷಿಸೋ ದಿನ ದೂರ ಇಲ್ಲ | Oneindia Kannada
 ಮುಂದೆ ಎಲ್ಲಿಂದ ಸ್ಪರ್ಧೆ ಮಾಡಲಿದ್ದೇನೆ ಎನ್ನುವುದರ ಬಗ್ಗೆ ಇದ್ದ ಗೊಂದಲ

ಮುಂದೆ ಎಲ್ಲಿಂದ ಸ್ಪರ್ಧೆ ಮಾಡಲಿದ್ದೇನೆ ಎನ್ನುವುದರ ಬಗ್ಗೆ ಇದ್ದ ಗೊಂದಲ

ಮುಂದೆ ಎಲ್ಲಿಂದ ಸ್ಪರ್ಧೆ ಮಾಡಲಿದ್ದೇನೆ ಎನ್ನುವುದರ ಬಗ್ಗೆ ಇದ್ದ ಗೊಂದಲಕ್ಕೆ ಸಿದ್ದರಾಮಯ್ಯ ತೆರೆ ಎಳೆದಿದ್ದರು. ಚಾಮುಂಡೇಶ್ವರಿ, ಬಾದಾಮಿ, ಚಾಮರಾಜಪೇಟೆ, ಕೋಲಾರ ಈ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದ ಸಿದ್ದರಾಮಯ್ಯ, ಬಾದಾಮಿಯಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದರು.

English summary
Who Is The Next Chief Minister Of Karnataka, Goravaiah Prediction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X