ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಯಾತ್ರೆಯ ಆರಂಭದ ವೈಫಲ್ಯಕ್ಕೆ ಹೊಣೆ ಯಾರು?

By ನಮ್ಮ ಪ್ರತಿನಿಧಿ
|
Google Oneindia Kannada News

Recommended Video

ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ವಿಫಲ? | Oneindia Kannada

ಬಿಜೆಪಿ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ಯಾತ್ರೆ ಮುಂದುವರೆದಿದೆಯಾದರೂ ಮೊದಲ ದಿನ ಆದ ಕಹಿ ಅನುಭವಗಳು ಪಕ್ಷದ ನಾಯಕರಿಗೆ ಇರಿಸುಮುರಿಸನ್ನುಂಟು ಮಾಡಿದ್ದು ಅದರಿಂದ ಹೊರಬರಲು ಸಾಧ್ಯವಾಗಿಲ್ಲ.

ಯಾತ್ರೆಯ ಆರಂಭ ನಿರೀಕ್ಷಿತ ಮಟ್ಟದಲ್ಲಿ ನಡೆಯದಕ್ಕೆ ಈಗ ಕಾರಣರಾರು ಎಂಬ ಪ್ರಶ್ನೆಗೆ ಪಕ್ಷದ ಕೆಲವು ನಾಯಕರು ಯಾತ್ರೆಯ ಮುಖ್ಯ ಸಂಚಾಲಕಿ ಶೋಭಾ ಕರಂದ್ಲಾಜೆ ಹಾಗೂ ದಕ್ಷಿಣ ಕರ್ನಾಟಕ ಉಸ್ತುವಾರಿ ಹೊತ್ತಿರುವ ಆರ್.ಅಶೋಕ್ ಅವರತ್ತ ಬೊಟ್ಟು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ, ಮುಂದೇನು? ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ, ಮುಂದೇನು?

ಶೋಭಾ ಕರಂದ್ಲಾಜೆ ಮತ್ತು ಆರ್ ಅಶೋಕ್ ನಡುವೆ ಸಮನ್ವಯ ಮತ್ತು ಸಂವಹನದ ಕೊರತೆ, ಪಕ್ಷದ ನಾಯಕರನ್ನು ಕಡೆಗಣಿಸಿದ್ದು, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಬದಿಗೆ ಸರಿಸಿದ್ದು, ಬಹಳಷ್ಟು ನಾಯಕರ ಸಲಹೆ ಪಡೆಯದಿರುವುದು ವೈಫಲ್ಯತೆ ಕಾಣಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಬಿಜೆಪಿ ಪರಿವರ್ತನಾ ಯಾತ್ರೆ ಉದ್ಘಾಟನೆ ವಿಫಲತೆಗೆ 5 ಕಾರಣ<br>ಬಿಜೆಪಿ ಪರಿವರ್ತನಾ ಯಾತ್ರೆ ಉದ್ಘಾಟನೆ ವಿಫಲತೆಗೆ 5 ಕಾರಣ

ಮೇಲ್ನೋಟಕ್ಕೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ

ಮೇಲ್ನೋಟಕ್ಕೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ

ಮೇಲ್ನೋಟಕ್ಕೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಮಾತುಗಳನ್ನು ಆಡುತ್ತಿದ್ದರೂ ಒಳಗೊಳಗೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿರುವುದಕ್ಕೆ ಇದೇ ನಿದರ್ಶನ ಎಂದರೂ ತಪ್ಪಾಗಲಾರದು.

ಹಾಗೆ ನೋಡಿದರೆ ಕರ್ನಾಟಕ ಪರಿವರ್ತನಾ ಯಾತ್ರೆಯ ಉಸ್ತುವಾರಿಯನ್ನು ಶೋಭಾ ಕರಂದ್ಲಾಜೆ ಅವರಿಗೆ ವಹಿಸಿರುವುದು ಪಕ್ಷದ ಹಲವು ನಾಯಕರಿಗೆ ಇಷ್ಟವಿಲ್ಲ. ಜತೆಗೆ ಬಹಳಷ್ಟು ನಾಯಕರ ಮಾತಿಗೆ ಸೊಪ್ಪು ಹಾಕದೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದ್ದು ಇದು ಕೂಡ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾರ್ಯಕರ್ತರನ್ನು ಕರೆತರುವಲ್ಲಿ ಉದಾಸೀನತೆ

ಕಾರ್ಯಕರ್ತರನ್ನು ಕರೆತರುವಲ್ಲಿ ಉದಾಸೀನತೆ

ಬೆಂಗಳೂರಿನಲ್ಲಿರುವ ಶಾಸಕರೇ ತಮ್ಮ ಕ್ಷೇತ್ರದಿಂದ ಕಾರ್ಯಕರ್ತರನ್ನು ಕರೆತರುವಲ್ಲಿ ಉದಾಸೀನತೆ ತೋರಿದ್ದು, ಲಕ್ಷಾಂತರ ಕಾರ್ಯಕರ್ತರು ಬರಬಹುದೆಂಬ ನಿರೀಕ್ಷೆಯಲ್ಲಿ ಹಾಕಿದ್ದ ಖುರ್ಚಿಗಳು ಖಾಲಿ ಖಾಲಿಯಿದ್ದದ್ದು, ಪಕ್ಷದ ಮುಖಂಡರಿಗೆ ವರ್ಚಸ್ಸಿಗೆ ಕಪ್ಪುಚುಕ್ಕೆಯಾಗಿದೆ.

ಅಮಿತ್ ಶಾ ಅವರಿಗೂ ಮುಜುಗರ

ಅಮಿತ್ ಶಾ ಅವರಿಗೂ ಮುಜುಗರ

ತಾವು ಭೇಟಿ ನೀಡಿದಾಗಲೆಲ್ಲ ಕಿಕ್ಕಿರಿದು ಜನ ತುಂಬಿರುತ್ತಿದ್ದರಾದರೂ ಈ ಬಾರಿ ಖಾಲಿಯಾಗಿರುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಮುಜುಗರವನ್ನುಂಟು ಮಾಡಿದೆ.

ಬಿಬಿಎಂಪಿಯಲ್ಲಿ ಬಿಜೆಪಿಯ ಅತಿಹೆಚ್ಚು ಸದಸ್ಯರಿದ್ದು ಅವರ ಕಡೆಯಿಂದ ಒಂದಷ್ಟು ಕಾರ್ಯಕರ್ತರು ಬಂದಿದ್ದರೂ ಸಭಾಂಗಣ ತುಂಬಿಹೋಗುತ್ತಿತ್ತು. ಆದರೆ ಅವರೆಲ್ಲ ಏಕೆ ಕಾರ್ಯಕರ್ತರನ್ನು ಕರೆತರಲಿಲ್ಲ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಇಲ್ಲದಾಗಿದೆ.

ನಾಯಕರುಗಳ ಭಿನ್ನಾಭಿಪ್ರಾಯಗಳೇ ಕಾರಣ

ನಾಯಕರುಗಳ ಭಿನ್ನಾಭಿಪ್ರಾಯಗಳೇ ಕಾರಣ

ಎಲ್ಲದಕ್ಕೂ ಪಕ್ಷದೊಳಗಿನ ನಾಯಕರುಗಳ ಭಿನ್ನಾಭಿಪ್ರಾಯಗಳೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನೊಂದೆಡೆ ಸಂಘಟನಾ ಚತುರ ನಾಯಕ ಸಂತೋಷ್ ಅವರನ್ನು ಯಡಿಯೂರಪ್ಪ ದೂರವಿಟ್ಟಿದ್ದು ಕೂಡ ವೈಫಲ್ಯಕ್ಕೆ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು. ಇನ್ನು ಮುಂದೆಯಾದರೂ ಬಿಜೆಪಿ ನಾಯಕರು ಎಚ್ಚರಿಕೆಯ ಹೆಜ್ಜೆಯನ್ನಿಡದಿದ್ದರೆ ಪರಿವರ್ತನಾ ಯಾತ್ರೆಯುದ್ದಕ್ಕೂ ಇಂತಹ ಮುಜುಗರ ಎದುರಾಗುವುದರಲ್ಲಿ ಸಂಶಯವಿಲ್ಲ.

English summary
Karnataka BJP begins election campaign on November 2, 2017. Who is responsible for failure of BJPs Nava Karnataka Nirmana Parivartan Yatra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X