ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಕಲಾವಿದನ ಕಲಾಕೃತಿ ಭಗ್ನಕ್ಕೆ ಯಾರು ಹೊಣೆ?

|
Google Oneindia Kannada News

ಬೆಂಗಳೂರು, ಜು. 27: ನೀವು ಒಂದು ಚಿತ್ರಕಲಾ ಪ್ರದರ್ಶನಕ್ಕೆ ನಿಮ್ಮ ಕಲಾಕೃತಿಯನ್ನು ಕಳುಹಿಸಿಕೊಡುತ್ತೀರಿ. ನಂತರ ಅದನ್ನು ವ್ಯಸ್ಥಿತವಾಗಿ ಹಿಂದಿರುಗಬೇಕಿಸುವ ಜವಾಬ್ದಾರಿ ಹೊಂದಿರುವ ಸಂಸ್ಥೆ ಬೇಕಾಬಿಟ್ಟಿಯಾಗಿ ಪೆಟ್ಟಿಗೆಯೊಂದರಲ್ಲಿ ತುರುಕಿ ಕಳಿಸಿದರೆ ಹೇಗಾಗಬೇಡ? ಇಂಥದ್ದೊಂದು ಪರಿಸ್ಥಿತಿ ಕಲಾವಿದ ರವಿ ಕುಮಾರ್ ಕಾಶಿ ಅನುಭವಿಸುತ್ತಿದ್ದಾರೆ.

ನಾಗ್ಪುರದಲ್ಲಿ ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್ (South Central Zone Cultural Centre-SCZCC) ಆಯೋಜಿಸಿದ್ದ 28ನೇ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಕ್ಕೆ ರವಿ ಕುಮಾರ್ ಕಾಶಿ ಅವರು ಕಲಾಕೃತಿಯೊಂದನ್ನು ಕಳುಹಿಸಿಕೊಟ್ಟಿದ್ದರು. ಆದರೆ ಪ್ರದರ್ಶನ ಮುಗಿದ ನಂತರ ಕಲಾವಿದರಿಗೆ ತಮ್ಮ ಕಲಾಕೃತಿಯನ್ನು ವಾಪಸ್ ಮಾಡಿದ ರೀತಿ ನೋಡಿದರೆ ಸಂಘಟಕರ ಬೇಜಾವಾಬ್ದಾರಿ ತಿಳಿಯುತ್ತದೆ.

art

ರವಿಕುಮಾರ್ ತಮ್ಮ ನೋವನ್ನು ಫೇಸ್ ಬುಕ್ ನಲ್ಲಿ ತೋಡಿಕೊಂಡಿದ್ದಾರೆ. ನಾನು ಸರಿಯಾಗಿಯೇ ಕಳುಹಿಸಿಕೊಟ್ಟಿದ್ದೆ. ಆದರೆ ವಾಪಸ್ ಬಂದ ರೀತಿ ಮಾತ್ರ ಅಚ್ಚರಿ ಮೂಡಿಸಿದೆ. ಇದಕ್ಕೆ ಶುಲ್ಕವನ್ನು ಸಹ ಪಾವತಿಸಿದ್ದೆ. ಯಾರ ಬಳಿ ನನ್ನ ನೋವನ್ನು ತೋಡಿಕೊಳ್ಳಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.

art

ಅನೇಕರು ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ತಮಗಾದ ಕರಾಳ ಅನುಭವವನ್ನು ಹೇಳಿಕೊಂಡಿದ್ದಾರೆ. ಆಯೋಜಕರ ಬಗ್ಗೆ ಕಿಡಿ ಕಾರಿದ್ದು ಅವರು ಯಾವ ಕಾರಣಕ್ಕೂ ವೃತ್ತಿ ನಿರತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಲಾವಿದನ ಅನೇಕ ದಿನಗಳ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

ರವಿಕುಮಾರ್ ಅವರ ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಿ

English summary
Bengaluru: Artist Ravikumar Kashi was shocked and disappointed with organizers of the 28th National Exhibition in Nagpur after his works were returned "dirty and irreparable". Kashi had sent his works for the Exhibition and were displayed on the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X