ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಪಕ್ಷ ನಾಯಕನ ಸ್ಥಾನ ಯಾರಿಗೆ?; ಇದು ಓದುಗರ ತೀರ್ಪು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09 : ಕರ್ನಾಟಕದ ಪ್ರತಿಪಕ್ಷದ ನಾಯಕರು ಯಾರಾಗಬೇಕು?. ಕಾಂಗ್ರೆಸ್ ವಲಯದಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್‌ ಕಳಿಸಿದ ವೀಕ್ಷಕರು ರಾಜ್ಯ ನಾಯಕರ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದಾರೆ.

ಒನ್ ಇಂಡಿಯಾ ಕನ್ನಡ ವಿರೋಧ ಪಕ್ಷದ ನಾಯಕ ಯಾರಾಗಬೇಕು? ಎಂದು ಸಮೀಕ್ಷೆ ನಡೆಸಿತ್ತು. 2.9 ಸಾವಿರ ಜನರು ಈ ಪ್ರಶ್ನೆಗೆ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದಾರೆ. 235 ಜನರು ಈ ಫೋಸ್ಟ್‌ ಅನ್ನು ಶೇರ್ ಮಾಡಿದ್ದಾರೆ. ಪ್ರತಿಕ್ರಿಯೆ ನೀಡಿದ ಎಲ್ಲಾ ಓದುಗರಿಗೆ ಧನ್ಯವಾದಗಳು.

ನಿರ್ಣಾಯಕ ಘಟ್ಟದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ: ಅಸಲಿಗೆ ಅಂದು ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದೇನು! ನಿರ್ಣಾಯಕ ಘಟ್ಟದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ: ಅಸಲಿಗೆ ಅಂದು ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದೇನು!

ಸಿದ್ದರಾಮಯ್ಯ, ಎಚ್. ಕೆ. ಪಾಟೀಲ್, ಡಿ. ಕೆ. ಶಿವಕುಮಾರ್, ಜಿ. ಪರಮೇಶ್ವರ ಅವರಲ್ಲಿ ಯಾರು ಪ್ರತಿಪಕ್ಷ ನಾಯಕರಾಗಬೇಕು? ಎಂದು ಓದುಗರಿಗೆ ಆಯ್ಕೆ ನೀಡಲಾಗಿತ್ತು. ಹೆಚ್ಚಿನ ಓದುಗರು ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ನನಗೆ ಪ್ರತಿಪಕ್ಷ ನಾಯಕನ ಹುದ್ದೆ ಬೇಡ: ಡಿಕೆ ಶಿವಕುಮಾರ್ ನನಗೆ ಪ್ರತಿಪಕ್ಷ ನಾಯಕನ ಹುದ್ದೆ ಬೇಡ: ಡಿಕೆ ಶಿವಕುಮಾರ್

ಜಿ. ಪರಮೇಶ್ವರ, ಎಚ್. ಕೆ. ಪಾಟೀಲ್ ಪರವಾಗಿಯೂ ಜನರು ಕಮೆಂಟ್ ಮಾಡಿದ್ದಾರೆ. ಕೆ. ಆರ್. ರಮೇಶ್ ಕುಮಾರ್ ಆಗಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಓದುಗರು ಹಾಕಿದ ಕೆಲವು ಕಮೆಂಟ್‌ಗಳನ್ನು ಇಲ್ಲಿ ನೀಡಲಾಗಿದೆ.

ಸಿದ್ದರಾಮಯ್ಯ ಸೂಕ್ತ

ಸಿದ್ದರಾಮಯ್ಯ ಸೂಕ್ತ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಬೇಕು ಎಂದು ಹಲವು ಜನರು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದು ಜಿ. ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ. ಆದ್ದರಿಂದ, ಅವರಿಗೆ ಸ್ಥಾನ ನೀಡಬೇಕು ಎಂದು ಹಲವು ಜನರು ಕಮೆಂಟ್ ಮಾಡಿದ್ದಾರೆ.

ಎಚ್. ಕೆ. ಪಾಟೀಲ್, ಪರಮೇಶ್ವರ

ಎಚ್. ಕೆ. ಪಾಟೀಲ್, ಪರಮೇಶ್ವರ

ಎಚ್. ಕೆ. ಪಾಟೀಲ್ ವಿರೋಧ ಪಕ್ಷದ ನಾಯಕರಾಗಬೇಕು. ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಹಿಂದ ವರ್ಗದ ಶೋಷಿತರ ಅನ್ನದಾತ ಸಿದ್ದರಾಮಯ್ಯ ಆಗಬೇಕು ಎಂದು ಜನರು ಕಮೆಂಟ್ ಹಾಕಿದ್ದಾರೆ.

ಸಿದ್ದರಾಮಯ್ಯ ಸಮರ್ಥರು

ಸಿದ್ದರಾಮಯ್ಯ ಸಮರ್ಥರು

ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಲು ಸಮರ್ಥರು. 4 ಜನ ಶಾಸಕರನ್ನು ಕರೆದುಕೊಂಡು ಬರೋ ತಾಕತ್ತು ಇಲ್ಲದವರೆಲ್ಲ ವಿರೋಧ ಪಕ್ಷದ ನಾಯಕರು ಆಗುವುದು ಬೇಡ ಎಂದು ಓದುಗರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪರಮೇಶ್ವರ, ರಮೇಶ್ ಕುಮಾರ್

ಪರಮೇಶ್ವರ, ರಮೇಶ್ ಕುಮಾರ್

ಸಿದ್ದರಾಮಯ್ಯ, ಎಚ್. ಕೆ. ಪಾಟೀಲ್, ಡಿ. ಕೆ. ಶಿವಕುಮಾರ್, ಜಿ. ಪರಮೇಶ್ವರ ಅವರನ್ನು ಹೊರತುಪಡಿಸಿ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರನ್ನು ಸಹ ಹಲವು ಜನರು ಸೂಚಿಸಿದ್ದಾರೆ. ಬುಧವಾರ ಸಂಜೆ ಪ್ರತಿಪಕ್ಷ ನಾಯಕನ ಹೆಸರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

English summary
Who is opposition leader of Karnataka. Here are the poll survey result. Oneindia Kannada readers suggested Siddaramaiah name for the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X