ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಕಚೇರಿಗಿಂತ ಗೌಡ್ರ ಮನೆಯಂಗಣದಲ್ಲೇ ರೋಷನ್ ಬೇಗ್ ಓಡಾಟ?

|
Google Oneindia Kannada News

ಇತ್ತೀಚಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ಯಾರೇ ತಿರುಗಿ ನಿಂತರೂ, ಅದರ ಎಫೆಕ್ಟ್ ದೇವೇಗೌಡ್ರ ಅಂಗಣದಲ್ಲಿ ಸುತ್ತಲಾರಂಭಿಸಿದೆ. ಅದು ಉದ್ದೇಶಪೂರ್ವಕವೋ ಅಥವಾ ವೃಥಾ ದೇವೇಗೌಡರನ್ನು ಎಳೆಯಲಾಗುತ್ತಿದೆಯೋ ಅದಕ್ಕೆ ಸದ್ಯಕ್ಕೆ ಉತ್ತರ ಸಿಗುವುದು ಕಷ್ಟ.

ಸಿದ್ದರಾಮಯ್ಯ ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಸಿದ್ದರಾಮಯ್ಯ ರೀತಿಯಲ್ಲಿ ಸದ್ಯದ ಪಕ್ಷದ ಪರಿಸ್ಥಿತಿಯಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿರುವ ರೋಷನ್ ಬೇಗ್ ಹಿಂದೆ ಯಾರಿದ್ದಾರೆ? ಜೆಡಿಎಸ್ಸೋ ಅಥವಾ ಬಿಜೆಪಿಯೋ ಎನ್ನುವ ಚರ್ಚೆ, ಫಲಿತಾಂಶಕ್ಕೆ ಎರಡು ದಿನದ ಮುನ್ನ ಚಾಲ್ತಿಯಲ್ಲಿದೆ.

ಸಿದ್ದರಾಮಯ್ಯನವರಿಗೆ ಇರುವ ಅಹಂಕಾರ ಎಲ್ಲಿಗೆ ತೆಗೆದುಕೊಂಡು ಹೋಗುತ್ತೋ? ಶ್ರೀರಾಮುಲು ಸಿದ್ದರಾಮಯ್ಯನವರಿಗೆ ಇರುವ ಅಹಂಕಾರ ಎಲ್ಲಿಗೆ ತೆಗೆದುಕೊಂಡು ಹೋಗುತ್ತೋ? ಶ್ರೀರಾಮುಲು

ಸಂಪುಟದಲ್ಲಿ ಜಾಗಸಿಗಲಿಲ್ಲ ಎಂದು ಒಮ್ಮೆ,ಅದಾದ ಮೇಲೆ ಮಗನಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಪಕ್ಷದ ಟಿಕೆಟ್ ಸಿಗಲಿಲ್ಲ ಎಂದು ಪಕ್ಷದ ಮುಖಂಡರ ವಿರುದ್ದ ಬೇಸರಗೊಂಡಿದ್ದ ರೋಷನ್ ಬೇಗ್, ಎಕ್ಸಿಟ್ ಪೋಲ್ ಫಲಿತಾಂಶ ಬರುತ್ತಿದಂತೆಯೇ, ಪಕ್ಷದ ಮೂವರು ಮುಖಂಡರ ವಿರುದ್ದ ಕಿಡಿಕಾರಿದ್ದಾರೆ.

ಕೆಪಿಸಿಸಿ ಶೋಕಾಸ್ ನೋಟಿಸ್‌ಗೆ ರೋಷನ್ ಬೇಗ್ ಖಡಕ್ ಉತ್ತರ!ಕೆಪಿಸಿಸಿ ಶೋಕಾಸ್ ನೋಟಿಸ್‌ಗೆ ರೋಷನ್ ಬೇಗ್ ಖಡಕ್ ಉತ್ತರ!

ಅದೂ, ಒಂದು ಕಾಲದಲ್ಲಿ ಅವರ ಆಪ್ತವಲಯದಲ್ಲೇ ಗುರುತಿಸಿಕೊಂಡಿದ್ದ ಸಿದ್ದರಾಮಯ್ಯನವರ ವಿರುದ್ದ ರೋಷನ್ ಬೇಗ್ ತಿರುಗಿ ಬಿದ್ದಿದ್ದಾರೆಂದರೆ, ಅದರ ಹಿಂದೆ ರಾಜಕೀಯ ವಾಸನೆ ಬಡಿದೇ ಬಡಿಯುತ್ತೆ. ಇಲ್ಲೂ ಕೂಡಾ, ಪದ್ಮನಾಭನಗರದ ಅಂಗಣದಲ್ಲಿ ಚೆಂಡು ಓಡಾಡಲಾರಂಭಿಸಿದೆ.

ಕೆಪಿಸಿಸಿ ಕಚೇರಿಗಿಂತ ಹೆಚ್ಚಾಗಿ ರೋಷನ್ ಬೇಗ್, ದೇವೇಗೌಡ್ರ ಮನೆಯಲ್ಲಿ

ಕೆಪಿಸಿಸಿ ಕಚೇರಿಗಿಂತ ಹೆಚ್ಚಾಗಿ ರೋಷನ್ ಬೇಗ್, ದೇವೇಗೌಡ್ರ ಮನೆಯಲ್ಲಿ

ಕಳೆದ ಅಸೆಂಬ್ಲಿ ಚುನಾವಣೆಯ ಫಲಿತಾಂಶದ ನಂತರ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ, ಕೆಪಿಸಿಸಿ ಕಚೇರಿಗಿಂತ ಹೆಚ್ಚಾಗಿ ರೋಷನ್ ಬೇಗ್, ದೇವೇಗೌಡ್ರ ಮನೆಯಲ್ಲಿ ಕಾಣಿಸಿಕೊಂಡಿದ್ದದ್ದು ಗೊತ್ತಿರುವ ವಿಚಾರ. ಸಚಿವ ಸ್ಥಾನ ಸಿಗದ ಮೇಲಂತೂ ರೋಷನ್ ಬೇಗ್, ತಮ್ಮ ನೋವನ್ನು ಹಲವು ಬಾರಿ ಕಾಂಗ್ರೆಸ್ ಮುಖಂಡರಲ್ಲಿ ತೋಡಿಕೊಂಡಿದ್ದರು.

ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಕೆಲವು ತಿಂಗಳ ಹಿಂದೆ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೇವೇಗೌಡರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲೂ ರೋಷನ್ ಬೇಗ್ ಅಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ, ಸಿದ್ದರಾಮಯ್ಯನವರು ಕಳೆದ ಅಸೆಂಬ್ಲಿ ಚುನಾವಣೆಯ ಪ್ರಚಾರದ ವೇಳೆ, ದೇವೇಗೌಡ್ರು ಮತ್ತು ಕುಮಾರಸ್ವಾಮಿ ವಿರುದ್ದ ಟೀಕಿಸುತ್ತಲೇ ಬಂದರು, ಇದರಿಂದ ಒಕ್ಕಲಿಗರು ಕಾಂಗ್ರೆಸ್ ಮೇಲೆ ಸಿಟ್ಟಾದರು ಎನ್ನುವ ರೋಷನ್ ಬೇಗ್ ಹೇಳಿಕೆಗೆ ವಿಶೇಷ ಅರ್ಥ ಇರುವ ಸಾಧ್ಯತೆಯಿದೆ.

ದೇವೇಗೌಡರ ಹೇಳಿಕೆಯಿಂದ ಚಂದ್ರಬಾಬು ನಾಯ್ಡುಗೆ ಶಾಕ್ದೇವೇಗೌಡರ ಹೇಳಿಕೆಯಿಂದ ಚಂದ್ರಬಾಬು ನಾಯ್ಡುಗೆ ಶಾಕ್

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಕೂಗಿನ ನಂತರ

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಕೂಗಿನ ನಂತರ

ಇಷ್ಟೆಲ್ಲಾ ಆರಂಭವಾಗಿದ್ದದು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಕೂಗನ್ನು ಅವರ ಆಪ್ತರು ಆರಂಭಿಸಿದ ನಂತರ. ಎಚ್ ವಿಶ್ವನಾಥ್ ಈ ವಿಚಾರದಲ್ಲಿ ತೀಕ್ಷ್ಣವಾಗಿ ಮೊದಲು ಪ್ರತಿಕ್ರಿಯಿಸಿದ್ದರು, ಇದು ಎರಡು ಪಕ್ಷಗಳ ನಡುವೆ ತಿಕ್ಕಾಟಕ್ಕೂ ಕಾರಣವಾಗಿತ್ತು. ಈಗ, ರೋಷನ್ ಬೇಗ್ ಅವರ ಸರದಿ.

ಸಿದ್ದರಾಮಯ್ಯ ವಿರುದ್ದದ ರೋಷನ್ ಬೇಗ್ ಟೀಕೆಯನ್ನು ಎಚ್ ವಿಶ್ವನಾಥ್ ಶ್ಲಾಘಿಸಿದ್ದಾರೆ

ಸಿದ್ದರಾಮಯ್ಯ ವಿರುದ್ದದ ರೋಷನ್ ಬೇಗ್ ಟೀಕೆಯನ್ನು ಎಚ್ ವಿಶ್ವನಾಥ್ ಶ್ಲಾಘಿಸಿದ್ದಾರೆ

ಸಿದ್ದರಾಮಯ್ಯ ವಿರುದ್ದದ ರೋಷನ್ ಬೇಗ್ ಟೀಕೆಯನ್ನು ಎಚ್ ವಿಶ್ವನಾಥ್ ಶ್ಲಾಘಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಪಕ್ಷದ ಮುಖಂಡರ ವಿರುದ್ದವೇ ಮಾತನಾಡಲು ಬೇಗ್ ಧೈರ್ಯ ಮಾಡಿರುವುದು ಗಮನಿಸಬೇಕಾದ ವಿಚಾರ ಎಂದಿದ್ದಾರೆ ವಿಶ್ವನಾಥ್. ಆದರೆ, ಇವರ ಈ ಧೈರ್ಯದ ಹಿಂದೆ ಯಾರಿದ್ದಾರೆ ಎನ್ನುವುದೇ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವುದು.

ರೋಷನ್ ಬೇಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಸಾಧ್ಯವಿಲ್ಲ

ರೋಷನ್ ಬೇಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಸಾಧ್ಯವಿಲ್ಲ

ಸಿದ್ದರಾಮಯ್ಯ ವಿರುದ್ದ ಧ್ವನಿ ಎತ್ತಿದ ಕೂಡಲೇ ರೋಷನ್ ಬೇಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಸಾಧ್ಯವಿಲ್ಲ, ಯಾಕೆಂದರೆ ಅವರು ಎಐಸಿಸಿ ಸದಸ್ಯರು, ಜೊತೆಗೆ ಅಲ್ಪಸಂಖ್ಯಾತ ಮುಖಂಡರು ಕೂಡಾ. ಇದನ್ನೆಲ್ಲಾ ಅರಿತೇ ರೋಷನ್ ಬೇಗ್ ಈ ಹೇಳಿಕೆ ನೀಡಿದ್ದಾರಾ ಅಥವಾ ಅವರಿಂದ ಹೇಳಿಕೆ ನೀಡಿಸಲಾಯಿತಾ ಎನ್ನುವುದೇ ಇಲ್ಲಿ ಪ್ರಶ್ನೆ.

English summary
Who is behind of Senior Congress leader Roshan Baig episode, Is JDS supremo Deve Gowda behind of this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X