• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ರಾಮಣ್ಣ ಯಾರಿಗೆ ಏನು ಕೊಟ್ಟರು ಅನ್ನೋದರ ಪೈಸಾಪೈಸಾ ಲೆಕ್ಕ!

By ಒನ್ಇಂಡಿಯಾ ಡೆಸ್ಕ್
|

2018-19ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಯೋಜನೆಗಳನ್ನು ಘೋಷಿಸಿದ್ದಾರೆ. ಕೃಷಿಕರು, ವಿದ್ಯಾರ್ಥಿಗಳು, ಮಹಿಳೆಯರು, ಅಲ್ಪಸಂಖ್ಯಾತರು ಹೀಗೆ ಎಲ್ಲ ವರ್ಗ- ಸಮುದಾಯವನ್ನು ಗಮನದಲ್ಲಿಟ್ಟುಕೊಂಡೇ ಚುನಾವಣೆ ಬಜೆಟ್ ವೊಂದನ್ನು ಮಂಡಿಸಿದ್ದಾರೆ. ಯಾರಿಗೆ ಏನು ಕೊಟ್ಟಿದ್ದಾರೆ ಎಂಬುದೇ ಮೊದಲ ಪ್ರಶ್ನೆ ಅಲ್ಲವೆ?

ಅದಕ್ಕೆ ಉತ್ತರ ನೀಡುತ್ತದೆ ಈ ವರದಿ. ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ನೀಡಿದ ಕೊಡುಗೆಗಳು ಬಹಳ ಹೆಚ್ಚಿವೆ. ಅವುಗಳಲ್ಲಿ ಆಯ್ದ ಹಲವನ್ನು ಒಟ್ಟು ಮಾಡಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಲಾಗಿದೆ. ಆದರೆ ರಾಜ್ಯ ಸರಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಪ್ರಸ್ತಾವ ಮಾಡಬಹುದು ಎಂಬ ನಿರೀಕ್ಷೆಗೆ ಉತ್ತರ ಸಿಕ್ಕಿಲ್ಲ.

ಕರ್ನಾಟಕ ಬಜೆಟ್ 2018-19, ಮುಖ್ಯಾಂಶಗಳು

ಕೃಷಿಕ ವರ್ಗಕ್ಕೆ ನೀಡಿದ ಕೊಡುಗೆಗಳ ತೂಕ ಒಂದು ಮಟ್ಟದ್ದಾದರೆ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ನೀಡಿದ ಕೊಡುಗೆಗಳ ಲೆಕ್ಕವೇ ಮತ್ತೊಂದು. ಒಟ್ಟಿನಲ್ಲಿ ತಮ್ಮ ಈ ಬಾರಿಯ ಆಡಳಿತಾವಧಿಯ ಕೊನೆ ಬಜೆಟ್ ನಲ್ಲಿ ಜಾತಿ ಲೆಕ್ಕಾಚಾರಗಳಲ್ಲಿ ಉಸ್ತಾದ್ ಅನ್ನಿಸಿಕೊಂಡಿರುವ ಸಿದ್ದರಾಮಯ್ಯ ಭಾರೀ ದಾಳವನ್ನೇ ಉರುಳಿಸಿದ್ದಾರೆ. ಅದರ ವಿವರಗಳಿಗೆ ಮುಂದೆ ಓದಿ.

ರೈತ ಬೆಳಕು ಯೋಜನೆಗೆ ವರ್ಷಕ್ಕೆ 3500 ಕೋಟಿ

ರೈತ ಬೆಳಕು ಯೋಜನೆಗೆ ವರ್ಷಕ್ಕೆ 3500 ಕೋಟಿ

* ಒಣ ಭೂಮಿ ಇರುವ ಮಳೆ ಆಶ್ರಿತ ರೈತರಿಗೆ ಅಂತಲೇ 'ರೈತ ಬೆಳಕು' ಎಂಬ ಯೋಜನೆ ತರಲಾಗಿದೆ. ಈ ಯೋಜನೆಯಲ್ಲಿ ಪ್ರತಿ ವರ್ಷಕ್ಕೆ ಪ್ರತಿ ರೈತರಿಗೆ ಗರಿಷ್ಠ ಹತ್ತು ಸಾವಿರ ರುಪಾಯಿ ಎಂಬ ಮಿತಿ ಹಾಕಿಕೊಂಡು, ಹೆಕ್ಟೇರ್ ಗೆ ಐದು ಸಾವಿರ ರುಪಾಯಿಯನ್ನು ನೇರವಾಗಿ ವರ್ಗಾವಣೆ ಮಾಡುವ ಯೋಜನೆ ಇದು. ವರ್ಷಕ್ಕೆ 3500 ಕೋಟಿ ರುಪಾಯಿ ವೆಚ್ಚ ಆಗಬಹುದು ಎಂದು ಅಂದಾಜಿಸಿದ್ದು, 70 ಲಕ್ಷ ರೈತರಿಗೆ ಇದರಿಂದ ಅನುಕೂಲ ಆಗಲಿದೆ.

* ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ಪರವಾಗಿ ರಾಜ್ಯದ ಪಾಲು ಭರಿಸುವುದಕ್ಕೆ 845 ಕೋಟಿ ಅನುದಾನ

* ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಹಾವು ಕಡಿದು ಮೃತಪಟ್ಟ ರೈತರು ಹಾಗೂ ಕೃಷಿ ಕಾರ್ಮಿಕರ ಕುಟುಂಬಗಳಿಗೆ ಎರಡು ಲಕ್ಷ ರುಪಾಯಿ ಪರಿಹಾರ (ಸದ್ಯಕ್ಕೆ ಆ ಮೊತ್ತ ಒಂದು ಲಕ್ಷ ಇದೆ).

* ಚಾಮರಾಜನಗರ ಜಿಲ್ಲೆಯಲ್ಲಿ ಹೊಸ ಕೃಷಿ ಕಾಲೇಜು. ವಿಜಯಪುರದ ಮುದ್ದೇಬಿಹಾಳದಲ್ಲಿ ಹೊಸ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ.

ಕುರಿ ಮತ್ತು ಮೇಕೆ ಸಾಕಣೆದಾರರ ಸಾಲ ಮನ್ನಾ

ಕುರಿ ಮತ್ತು ಮೇಕೆ ಸಾಕಣೆದಾರರ ಸಾಲ ಮನ್ನಾ

* ಕುರಿ, ಆಡು ಸಾಕಣೆಗೆ ಪ್ರೋತ್ಸಾಹ. ಎನ್.ಸಿ.ಡಿ.ಸಿ ನೀಡುವ 187.50 ಕೋಟಿ ರುಪಾಯಿ ಸಾಲಕ್ಕೆ ಸರಕಾರದಿಂದ ಖಾತ್ರಿ.

* ಜಾನುವಾರುಗಳಿಗೆ ಮೇವಿನ ಆಗದಿರುವಂತೆ ಉತ್ಪಾದನೆ ಹೆಚ್ಚಳಕ್ಕೆ ಐದು ವರ್ಷ ಅವಧಿಯ ರಾಜ್ಯ ಮೇವು ಭದ್ರತಾ ನೀತಿ ರೂಪಿಸಿ, ಖಾಸಗಿ ಸಹಭಾಗಿತ್ವದಲ್ಲಿ ಜಾರಿ.

* ಹದಿನಾಲ್ಕು ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ಗುಣಮಟ್ಟದ ಹಾಲು ಶೇಖರಣೆ ಆಧಾರದ ಮೇಲೆ ಪ್ರತಿ ಲೀಟರ್ ಗೆ 20 ಪೈಸೆಯಂತೆ ಪ್ರೋತ್ಸಾಹ ಧನ.

* ಕುರಿ ಮತ್ತು ಮೇಕೆ ಸಾಕಣೆದಾರರು ಸಹಕಾರಿ ಬ್ಯಾಂಕ್ ಗಳಿಂದ 31.12.2017ವರೆಗೆ ಪಡೆದಿರುವ ಮಧ್ಯಮಾವಧಿ ಸಾಲದ ಪೈಕಿ ಐವತ್ತು ಸಾವಿರದವರೆಗೆ ಸಾಲ ಮನ್ನಾ.

* ಬೆಂಗಳೂರು, ಮೈಸೂರು ಕಾರಿಡಾರ್ ನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿ. ಚನ್ನಪಟ್ಟಣದ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಲೈವ್ ಮ್ಯೂಸಿಯಂ ಸ್ಥಾಪನೆ.

ಮೀನುಗಾರಿಕೆ ಕೈಗೊಳ್ಳುವ ಮಹಿಳೆಯರಿಗೆ ಸಾಲ

ಮೀನುಗಾರಿಕೆ ಕೈಗೊಳ್ಳುವ ಮಹಿಳೆಯರಿಗೆ ಸಾಲ

* ಮಾರಾಟ ಆಗದೆ ಉಳಿಯುವ ಮೀನನ್ನು ಮೀನು ಮಾರುಕಟ್ಟೆಯಲ್ಲಿ ಸಂಗ್ರಹಿಸಲು 'ಮತ್ಸ್ಯ ಜೊಪಾಸನೆ ಯೋಜನೆ' ಅಡಿಯಲ್ಲಿ ಹತ್ತು ಶೀತಲಿಕೃತ ಘಟಕ ಸ್ಥಾಪನೆ.

* ಮೀನುಗಾರಿಕೆ ಚಟುವಟಿಕೆ ಕೈಗೊಳ್ಳಲು ಮಹಿಳಾ ಮೀನುಗಾರರಿಗೆ ವಾಣಿಜ್ಯ/ ಗ್ರಾಮೀಣ ಪ್ರಾದೇಶಿಕ ಬ್ಯಾಂಕ್ ಗಳಿಂದ ನೀಡುವ ಐವತ್ತು ಸಾವಿರದವರೆಗಿನ ಸಾಲದ ಮೇಲಿನ ಬಡ್ಡಿದರ ಶೂನ್ಯಕ್ಕೆ ಇಳಿಕೆ.

* ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತ ಸದಸ್ಯರು ಮೃತಪಟ್ಟಲ್ಲಿ ಅವರ ಒಂದು ಲಕ್ಷದವರೆಗಿನ ಸಾಲ ಮನ್ನಾ.

* 2018-19ನೇ ಸಾಲಿಗೆ 2276.81 ಕೋಟಿ ರುಪಾಯಿಯಲ್ಲಿ ವಿವಿಧ ನೀರಾವರಿ ಯೋಜನೆಗೆ ಅನುಮೋದನೆ. ಅಂತರ್ಜಲದ ಅತಿಯಾದ ಬಳಕೆ ತಾಲೂಕೆಂದು ವರ್ಗೀಕರಿಸಲಾದ ನಲವತ್ಮೂರು ತಾಲೂಕುಗಳಲ್ಲಿ ಅಂತರ್ಜಲ ಅಭಿವೃದ್ಧಿಗೆ 50 ಕೋಟಿ ಅನುದಾನ.

ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ

ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ

* ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಐದು ಲಕ್ಷ ರುಪಾಯಿ ಎಕ್ಸ್ ಗ್ರೇಷಿಯಾ ಜೊತೆಗೆ 5 ವರ್ಷಗಳವರೆಗೆ 2 ಸಾವಿರ ರುಪಾಯಿ ಮಾಸಾಶನ ಸೌಲಭ್ಯ.

* ಮಕ್ಕಳ ಸುರಕ್ಷತೆಗಾಗಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಂತ ಹಂತವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಕೆ. ನೂರು ವರ್ಷಗಳನ್ನು ಪೂರೈಸಿರುವ 100 ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು 'ಪಾರಂಪರಿಕ ಶಾಲೆ'ಗಳೆಂದು ಗುರುತಿಸಿ, ನವೀಕರಿಸಲು ಕ್ರಮ.

* ಎಲ್ಲಾ ಸರಕಾರಿ ಕಾಲೇಜುಗಳಲ್ಲಿ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ; ಇದರಿಂದ 95 ಕೋಟಿ ರುಪಾಯಿ ವೆಚ್ಚದಲ್ಲಿ 3.7 ಲಕ್ಷ ವಿದ್ಯಾರ್ಥಿನಿಯರಿಗೆ ಅನುಕೂಲ.

* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2503 ಮೇಲ್ವಿಚಾರಕಿಯರಿಗೆ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸ್ಕೂಟರ್ ಖರೀದಿಸಲು 50,000 ರುಪಾಯಿ ಬಡ್ಡಿ ರಹಿತ ಸಾಲ ಸೌಲಭ್ಯ ಹಾಗೂ ಮಾಸಿಕ 1000 ರುಪಾಯಿಗಳ ಇಂಧನ ವೆಚ್ಚ ಸೌಲಭ್ಯ.

* ಉದ್ಯೋಗಿನಿ ಯೋಜನೆಯಡಿ ವಿಶೇಷ ವರ್ಗ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿ ಒಂದು ಲಕ್ಷ ರುಪಾಯಿಯಿಂದ 3 ಲಕ್ಷಕ್ಕೆ, ಸಹಾಯಧನದ ಮೊತ್ತ ಸಾಲದ ಮೊತ್ತದ ಶೇ 30ರಷ್ಟಕ್ಕೆ, ಕುಟುಂಬದ ವಾರ್ಷಿಕ ಆದಾಯದ ಮಿತಿ 1.5 ಲಕ್ಷ ರುಪಾಯಿಗಳಿಗೆ ಹಾಗೂ ವಯೋಮಿತಿ ಎಲ್ಲ ವರ್ಗದವರಿಗೂ 45 ವರ್ಷದಿಂದ 55 ವರ್ಷಕ್ಕೆ ಹೆಚ್ಚಳ.

* ಬೆಂಗಳೂರು ನಗರಕ್ಕೆ ಉದ್ಯೋಗ ಸಂದರ್ಶನ, ಪ್ರವೇಶ ಪರೀಕ್ಷೆ ಇತ್ಯಾದಿಗಳಿಗೆ ಹಾಜರಾಗಲು ಬರುವ ಯುವತಿಯರಿಗಾಗಿ ಟ್ರಾನ್ಸಿಟ್ ಹಾಸ್ಟೆಲ್ ಪ್ರಾರಂಭ.

ಎಸ್ಸಿ ಯುವಕ-ಯುವತಿಯರಿಗೆ 3 -5 ಲಕ್ಷ ರುಪಾಯಿ ಪ್ರೋತಾಹ ಧನ

ಎಸ್ಸಿ ಯುವಕ-ಯುವತಿಯರಿಗೆ 3 -5 ಲಕ್ಷ ರುಪಾಯಿ ಪ್ರೋತಾಹ ಧನ

* ಐ.ಐ.ಟಿ / ಐ.ಐ.ಎಂ / ಐ.ಎಂ.ಎ. / ಐ.ಐ.ಎಸ್.ಸಿ / ಎನ್.ಐ.ಟಿ ಮುಂತಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪ.ಜಾತಿ / ಪ.ಪಂಗಡ ವಿದ್ಯಾರ್ಥಿಗಳಿಗೆ ಒಂದು ಬಾರಿ ನೀಡುವ ಪ್ರೋತ್ಸಾಹಧನ 2 ಲಕ್ಷ ರುಪಾಯಿಗಳಿಗೆ ಹೆಚ್ಚಳ.

* ಪರಿಶಿಷ್ಟ ಜಾತಿ ಹುಡುಗ ಬೇರೆ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಂಡರೆ, ಹಾಲಿ ನೀಡುತ್ತಿರುವ ಪ್ರೋತ್ಸಾಹಧನ 3 ಲಕ್ಷ ರುಪಾಯಿಗಳಿಗೆ ಹಾಗೂ ಪರಿಶಿಷ್ಟ ಜಾತಿಯ ಹುಡುಗಿ ಬೇರೆ ಜಾತಿಯ ಹುಡುಗನನ್ನು ಮದುವೆ ಮಾಡಿಕೊಂಡರೆ ನೀಡುವ ಪ್ರೋತ್ಸಾಹಧನ 5 ಲಕ್ಷ ರುಪಾಯಿಗಳಿಗೆ ಹೆಚ್ಚಳ. ಇದೇ ಮಾದರಿಯಲ್ಲಿ ದೇವದಾಸಿಯರ ಮಕ್ಕಳ ಮದುವೆಗೂ ಸೌಲಭ್ಯ.

* ಬಿ.ಬಿ.ಎಂ.ಪಿ / ಮಹಾನಗರಪಾಲಿಕೆ / ನಗರಸಭೆ / ಪುರಸಭೆಗಳ ಸದಸ್ಯನಾಗಿ ಪೌರ ಕಾರ್ಮಿಕರಿಗೆ ಸೇರಿದ ಒಬ್ಬ ವ್ಯಕ್ತಿಯ ನಾಮನಿರ್ದೇಶನಕ್ಕೆ ಕ್ರಮ.

* ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನೆಪದರ ಆದಾಯ ಮಿತಿ 8 ಲಕ್ಷ ರುಪಾಯಿಗೆ ಹೆಚ್ಚಳ.

* ಪೂರ್ಣಾವಧಿ ಪಿ.ಎಚ್ ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ 10,000 ರುಪಾಯಿಗೆ ಹೆಚ್ಚಳ.

ಪ್ರೋತ್ಸಾಹ ಧನ, ಭತ್ಯೆ, ಸಾಲ ಸೌಲಭ್ಯ

ಪ್ರೋತ್ಸಾಹ ಧನ, ಭತ್ಯೆ, ಸಾಲ ಸೌಲಭ್ಯ

* ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರ ಸ್ವಯಂ ಉದ್ಯೋಗಕ್ಕಾಗಿ ವಾರ್ಷಿಕ ಶೇ. 6ರಷ್ಟು ಬಡ್ಡಿ ದರದಲ್ಲಿ 10 ಲಕ್ಷ ರುಪಾಯಿಗಳವರೆಗೆ ಸಾಲ ಸೌಲಭ್ಯ.

* ಬಿ.ಎಡ್. ಹಾಗೂ ಡಿ.ಎಡ್. ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 25,000 ರುಪಾಯಿ ವಿಶೇಷ ಪ್ರೋತ್ಸಾಹ ಧನ.

* ಅಲ್ಪ ಸಂಖ್ಯಾತ ವರ್ಗಕ್ಕೆ ಸೇರುವ ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆ 5000 ರುಪಾಯಿಗೆ ಹೆಚ್ಚಳ.

* ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವಿದ್ಯಾರ್ಥಿನಿಲಯಗಳಲ್ಲಿರುವ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸಿ.ಇ.ಟಿ., NEET ಪಠ್ಯಪುಸ್ತಕ ಪೂರೈಕೆ.

20 ಲಕ್ಷ ಮನೆಗಳ ನಿರ್ಮಾಣದ ಗುರಿ

20 ಲಕ್ಷ ಮನೆಗಳ ನಿರ್ಮಾಣದ ಗುರಿ

* ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ 800 ಕೋಟಿ ರುಪಾಯಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ.

* ಮುಂದಿನ 5 ವರ್ಷಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 20 ಲಕ್ಷ ಮನೆಗಳ ನಿರ್ಮಾಣದ ಗುರಿ.

* ಬೆಂಗಳೂರು ನಗರ ಪ್ರದೇಶಕ್ಕೆ ಜಾರಿಗೆ ತರಲಾದ ಬಹುಮಹಡಿ ಕಟ್ಟಡ ನಿರ್ಮಾಣದ ಯೋಜನೆಯನ್ನು 'ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ' ಎಂಬ ಹೆಸರಿನಲ್ಲಿ ರಾಜ್ಯದ ಎಲ್ಲಾ ನಗರ ಪ್ರದೇಶಗಳಿಗೂ ವಿಸ್ತರಣೆ.

* ನಗರ ಪ್ರದೇಶದಲ್ಲಿ ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2000 ಎಕರೆ, ಮಹಾನಗರ ಪಾಲಿಕೆಗಳಲ್ಲಿ 500 ಎಕರೆ, ನಗರಸಭೆ / ಪುರಸಭೆ ಪ್ರದೇಶಗಳಲ್ಲಿ 250 ಎಕರೆ ಹಾಗೂ ಇತರೆ ಪಟ್ಟಣ ಪ್ರದೇಶಗಳಲ್ಲಿ 100 ಎಕರೆ ಸರಕಾರಿ ಜಮೀನನ್ನು ಮೀಸಲಿಡಲು ಕ್ರಮ.

* ಅಸಂಘಟಿತ ಕಾರ್ಮಿಕರಲ್ಲಿ ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಹಾಗೂ ಭಟ್ಟಿ ಕಾರ್ಮಿಕರಿಗೆ ಸಹ 25 ಕೋಟಿ ರುಪಾಯಿ ವೆಚ್ಚದಲ್ಲಿ "ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ" ಯೋಜನೆಯಡಿ ಸ್ಮಾರ್ಟ್ ಕಾರ್ಡನ್ನು ವಿತರಣೆಯೊಂದಿಗೆ ವಂತಿಗೆ ಆಧಾರಿತ ಪಿಂಚಣಿ ಯೋಜನೆ ಜಾರಿಗೆ.

ಕುವೆಂಪು ಮೈಸೂರಿನ ನಿವಾಸ ಸ್ಮಾರಕವಾಗಿ ಅಭಿವೃದ್ಧಿ

ಕುವೆಂಪು ಮೈಸೂರಿನ ನಿವಾಸ ಸ್ಮಾರಕವಾಗಿ ಅಭಿವೃದ್ಧಿ

* ಮಹಾಕವಿ ಕುವೆಂಪು ಮೈಸೂರಿನ ನಿವಾಸ "ಉದಯರವಿ"ಯನ್ನು ರಾಷ್ಟ್ರಕವಿ ಸ್ಮಾರಕವಾಗಿ ಅಭಿವೃದ್ಧಿ.

* ಪುಸ್ತಕ ಸಂಸ್ಕೃತಿ ಬೆಳೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ 1.5 ಕೋಟಿ ರುಪಾಯಿ ವೆಚ್ಚದಲ್ಲಿ "ಪುಸ್ತಕ ಜಾಥಾ" ಕಾರ್ಯಕ್ರಮ ಆಯೋಜನೆ.

* ಕನ್ನಡದ ನವೋದಯ ಕಾವ್ಯದ ಪ್ರವರ್ತಕ ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವ ಪ್ರಯುಕ್ತ "ಕಟ್ಟುವೆವು ನಾವು ಹೊಸ ನಾಡೊಂದನ್ನು" ಎನ್ನುವ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ. ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ ಪ್ರಾರಂಭ.

* ‘ನಾಡಹಬ್ಬ ದಸರಾ' ಅಂಗವಾಗಿ ವಿವಿಧ ಹಂತಗಳಲ್ಲಿ ದಸರಾ ಕ್ರೀಡಾಕೂಟ ಆಯೋಜನೆ; ರಾಜ್ಯ ಮಟ್ಟದ ಕ್ರೀಡಾಕೂಟವನ್ನು ‘ದಸರಾ-ಸಿ.ಎಂ. ಕಪ್' ಆಗಿ ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜಿಸಲು 7 ಕೋಟಿ ರುಪಾಯಿಗಳ ಅನುದಾನ.

* ಗ್ರಾಮೀಣ ಮಣ್ಣಿನ ಕುಸ್ತಿ ಕ್ರೀಡೆಗೆ ಉತ್ತೇಜನಕ್ಕಾಗಿ ಜಾಗತಿಕ ಮಟ್ಟದ ವಾರ್ಷಿಕ 'ಕರ್ನಾಟಕ ಕುಸ್ತಿ ಹಬ್ಬ' ಆಯೋಜನೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೊರಾಂಗಣ ಜಿಮ್ ಸೌಕರ್ಯ.

30 ಲಕ್ಷ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ

30 ಲಕ್ಷ ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ

* 'ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ'ಯಡಿಯಲ್ಲಿ ರಾಜ್ಯ ಸರಕಾರದಿಂದ ಅಂದಾಜು 30 ಲಕ್ಷ ಫಲಾನುಭವಿಗಳಿಗೆ 1350 ಕೋಟಿ ರುಪಾಯಿ ವೆಚ್ಚದಲ್ಲಿ ಉಚಿತ ಅನಿಲ ಸಂಪರ್ಕ, 2 ಬರ್ನರ್ ಉಳ್ಳ ಗ್ಯಾಸ್ ಸ್ಟೌ ಮತ್ತು ಎರಡು ರೀಫಿಲ್ ವಿತರಣೆ.

* ಮಲೆನಾಡು ಅಭಿವೃದ್ಧಿ ಮಂಡಳಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಮತ್ತು ಕರಾವಳಿ ಪ್ರದೇಶಗಳ ಅಭಿವೃದ್ಧಿ ಮಂಡಳಿಗಳಿಗೆ ಕ್ರಮವಾಗಿ 70 ಕೋಟಿ, 55 ಕೋಟಿ, 25 ಕೋಟಿ ಅನುದಾನ.

* ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗಾಗಿ 600 ಕೋಟಿ ರುಪಾಯಿ ಅನುದಾನ.

* ಎಲ್ಲಾ 114 ಹಿಂದುಳಿದ ತಾಲೂಕುಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸುಧಾರಿಸಲು ವಿಶೇಷಾಭಿವೃದ್ಧಿ ಯೋಜನೆಯಡಿ 3000 ಕೋಟಿ ರುಪಾಯಿ ಅನುದಾನ; ಅಗತ್ಯಕ್ಕೆ ತಕ್ಕಂತೆ ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳ ಪ್ರಾರಂಭ.

ಬೆಂಗಳೂರು ಅಭಿವೃದ್ಧಿಗೆ 2500 ಕೋಟಿ ರುಪಾಯಿ

ಬೆಂಗಳೂರು ಅಭಿವೃದ್ಧಿಗೆ 2500 ಕೋಟಿ ರುಪಾಯಿ

* ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 2500 ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುವ ಕ್ರಿಯಾ ಯೋಜನೆಗಳಿಗೆ ಸಂಬಂಧಿಸಿದ ಪೂರ್ವಸಿದ್ಧತಾ ಕಾರ್ಯಗಳು.

* ಸಾಮಾಜಿಕ ಭದ್ರತಾ ಮಾಸಿಕ ಪಿಂಚಣಿ ಯೋಜನೆಗಳಾದ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಗಳಡಿ ನೀಡಲಾಗುತ್ತಿರುವ ಪಿಂಚಣಿ ಮೊತ್ತ 600 ರುಪಾಯಿಗೆ ಹೆಚ್ಚಳ; ಇದರಿಂದ 576 ಕೋಟಿ ರುಪಾಯಿಗಳನ್ನು ಹೆಚ್ಚುವರಿ ವೆಚ್ಚದಲ್ಲಿ 48 ಲಕ್ಷ ಫಲಾನುಭವಿಗಳಿಗೆ ಅನುಕೂಲ.

* ಕರ್ನಾಟಕ ಭೂ ಸುಧಾರಣಾ ಕಾಯ್ದೆ, 1961ರಿಂದ ಬಾಧಿತರಾದ 4110 ಅರ್ಹ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಇನಾಮು ರದ್ದತಿ ಅಧಿನಿಯಮದ ಪ್ರಕಾರ ತಸ್ತೀಕ್ ಮೊತ್ತ 48,000 ರುಪಾಯಿಗಳಿಗೆ ಅನುಗುಣವಾಗಿ ವರ್ಷಾಶನ (ವಾರ್ಷಿಕ) ಸಂದಾಯ ಮಾಡಲು 20 ಕೋಟಿ ರುಪಾಯಿ ಅನುದಾನ. ತಿರುಮಲದಲ್ಲಿ 20 ಕೋಟಿ ರುಪಾಯಿ ವೆಚ್ಚದಲ್ಲಿ ಒಂದು ಸುಸಜ್ಜಿತ ಅತಿಥಿ ಗೃಹ ನಿರ್ಮಾಣ.

* ರಾಜ್ಯದಲ್ಲಿ ಕೆ.ಎಸ್.ಎಫ್.ಸಿ. ಮೂಲಕ ಸಾಲ ಪಡೆದ ರಾಜ್ಯದ ಎಲ್ಲಾ ಸೂಕ್ಷ್ಮ ಮತ್ತು ಸಣ್ಣ ಉತ್ಪಾದನಾ ಕೈಗಾರಿಕೆಗಳನ್ನು ಪ್ರಾರಂಭಿಸುವ ಉದ್ದಿಮೆದಾರರಿಗೆ, ಸಾಲ ಬಿಡುಗಡೆಗೊಂಡ ದಿನಾಂಕದಿಂದ 5 ವರ್ಷಗಳವರೆಗೆ ಶೇ. 10ರಷ್ಟು ಬಡ್ಡಿ ಸಹಾಯಧನ.

ಪತ್ರಕರ್ತರಿಗೆ ‘ಮಾಧ್ಯಮ ಸಂಜೀವಿನಿ’

ಪತ್ರಕರ್ತರಿಗೆ ‘ಮಾಧ್ಯಮ ಸಂಜೀವಿನಿ’

* ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ವಿನಾಯಿತಿ ಸೌಲಭ್ಯ ಮಹಿಳೆಯರು ಹಾಗೂ ವಿಕಲಚೇತನ ಅರ್ಜಿದಾರರಿಗೂ ವಿಸ್ತರಣೆ.

* ಪತ್ರಕರ್ತರಿಗೆ ಅಪಘಾತ ಅಥವಾ ಅಕಾಲಿಕ ಮರಣದ ಸಂದರ್ಭದಲ್ಲಿ 5 ಲಕ್ಷ ರುಪಾಯಿವರೆಗಿನ ಸಮೂಹ ಜೀವ ವಿಮೆ ಸೌಲಭ್ಯದ ‘ಮಾಧ್ಯಮ ಸಂಜೀವಿನಿ' ಯೋಜನೆ ಜಾರಿಗೆ.

* ಕರ್ನಾಟಕ ಚಲನಚಿತ್ರ ಅಕಾಡೆಮಿಯ ‘ಜೇನುಗೂಡು' ಕಥಾ ಕಣಜದಿಂದ ಕಥೆಗಳನ್ನು ಆಯ್ದುಕೊಂಡು ಚಲನಚಿತ್ರ ನಿರ್ಮಿಸುವ ನಿರ್ಮಾಪಕರಿಗೆ ತಲಾ 20 ಲಕ್ಷ ರು. ಮತ್ತು ಕಥಾ ಲೇಖಕರಿಗೆ ತಲಾ 5 ಲಕ್ಷ ರು.ಗಳ ವಿಶೇಷ ಸಹಾಯಧನ; ಪ್ರತಿ ವರ್ಷ 8 ಚಲನಚಿತ್ರಗಳಿಗೆ ನೆರವು.

ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಗೆ ನೇಮಕಾತಿ

ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಗೆ ನೇಮಕಾತಿ

* ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳನ್ನು ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡುವ ಬಗ್ಗೆ ಹೊಸ ನೀತಿಯನ್ನು ರೂಪಿಸಿ ಜಾರಿಗೆ ತರಲು ಕ್ರಮ.

* ಪೊಲೀಸ್ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲು ಶಾಶ್ವತವಾದ ಪೊಲೀಸ್ ಸೇವೆಗಳ ನೇಮಕಾತಿ ಮಂಡಳಿ ಸ್ಥಾಪನೆ.

* ಸೈಬರ್ ಪೊಲೀಸ್ ಠಾಣೆಗಳಿಗೆ ನೆರವಾಗಲು 5 ಕೋಟಿ ರುಪಾಯಿ ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯ ಸ್ಥಾಪನೆ.

* ರಾಜ್ಯದ ಎಲ್ಲಾ ಪೊಲೀಸ್ ಕಮಿಷನರ್ ಕಚೇರಿಗಳಲ್ಲಿ ನಿರ್ಭಯ ಕೇಂದ್ರಗಳ ಸ್ಥಾಪನೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

* ಮಂಗಳೂರಿನಲ್ಲಿ 85 ಕೋಟಿ ರು. ವೆಚ್ಚದಲ್ಲಿ ಹೊಸ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಾಣ.

* ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ 2018-19ನೇ ಸಾಲಿನಿಂದ ಉಚಿತ ಬಸ್ ಪಾಸ್ ವಿತರಣೆ; ಇದರಿಂದ 19.60 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ.

* ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 1000 ಬಸ್ಸುಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ ಅಳವಡಿಕೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka CM Siddaramaiah presents last state budget of current period. Who gets what? Major details of Karnataka state budget 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more