ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಗ-ಬೀಗತಿ ಸಂಬಂಧ: ಬಿಜೆಪಿ ಹೇಳಿದ ಕಾಂಗ್ರೆಸ್ಸಿನ ಅಘೋಷಿತ 'ಅಧ್ಯಕ್ಷೆ': ಯಾರು ಆ ಮಹಿಳೆ?

|
Google Oneindia Kannada News

ಪ್ರಬಲ ಸಾಮಾಜಿಕ ಜಾಲತಾಣವನ್ನು ಒಬ್ಬರ ಮೇಲೋಬ್ಬರು ಕತ್ತಿ ಮಸೆಯಲು ಯಾವರೀತಿ ಬಳಸಿಕೊಳ್ಳಬಹುದು ಎನ್ನುವುದನ್ನು ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿನ ರಾಜ್ಯ ಸೋಶಿಯಿಲ್ ಮಿಡಿಯಾ ಘಟಕಗಳು ತೋರಿಸಿಕೊಡುತ್ತಿವೆ.

ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕೆಸೆರೆರೆಚಾಟ ನಡೆಸಿದ್ದ ಈ ಎರಡು ಪಕ್ಷಗಳ ಟ್ವಿಟ್ಟರ್ ಸಮರದಲ್ಲಿ ಮಹಾನ್ ನಾಯಕ ಪದಗಳು ಬಹಳಷ್ಟು ಬಳಕೆಯಾಗಿತ್ತು. ಈಗ, ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆಪಿಸಿಸಿ ನಡೆಸಿದ್ದ ಶಿವಮೊಗ್ಗ ಚಲೋ ಬಗ್ಗೆ ಪ್ರಸ್ತಾವಿಸಿದೆ.

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಅಬ್ಬರಿಸಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ತಪ್ಪೊಪ್ಪಿಗೆ!ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಅಬ್ಬರಿಸಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ತಪ್ಪೊಪ್ಪಿಗೆ!

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಸ್ಥಳೀಯ ಕಬಡ್ಡಿ ಕೂಟದಲ್ಲಿ ನಡೆದ ಗಲಾಟೆಯ ವಿಚಾರದಲ್ಲಿ ಇಲ್ಲಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಮೇಲೆ ಕೇಸ್ ದಾಖಲಾಗಿ, ಅವರನ್ನು ಬಂಧನವಾಗಿತ್ತು.

ಇದರ ಜೊತೆಗೆ, ಸಂಗಮೇಶ್ವರ್ ಅವರು ಸದನದಲ್ಲಿ ಅಂಗಿ ತೆಗೆದು ಪ್ರತಿಭಟನೆ ನಡೆಸಿದ್ದಾಗಿ, ಸ್ಪೀಕರ್ ಕಾಗೇರಿಯವರು ಅವರನ್ನು ಒಂದು ವಾರ ಕಾಲ ಸಸ್ಪೆಂಡ್ ಮಾಡಿದ್ದರು. ಈ ಎರಡು ವಿಚಾರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಶಿವಮೊಗ್ಗದಲ್ಲಿ ಬೃಹತ್ ಜಾಥಾ ನಡೆಸಿ, ಜನಾಕ್ರೋಶ ಸಮಾವೇಶ ನಡೆಸಿತ್ತು. ಇದನ್ನು ಬಿಜೆಪಿ ಲೇವಡಿ ಮಾಡಿದ್ದು ಹೀಗೆ..

 ಜಾರಕಿಹೊಳಿ ಸಿಡಿ ಪ್ರಕರಣದ ಹಿಂದಿನ ರೂವಾರಿ? ಬಿಎಸ್ವೈ, ಡಿಕೆಶಿ ಹೆಸರು ಪ್ರಸ್ತಾವಿಸಿದ 2 ಪಕ್ಷಗಳು! ಜಾರಕಿಹೊಳಿ ಸಿಡಿ ಪ್ರಕರಣದ ಹಿಂದಿನ ರೂವಾರಿ? ಬಿಎಸ್ವೈ, ಡಿಕೆಶಿ ಹೆಸರು ಪ್ರಸ್ತಾವಿಸಿದ 2 ಪಕ್ಷಗಳು!

ಬೀಗ-ಬೀಗತಿ ಸಂಬಂಧಕ್ಕಾಗಿ ಶಿವಮೊಗ್ಗ ಚಲೋ: ಕಾಂಗ್ರೆಸ್ಸಿನ ಅಘೋಷಿತ ಅಧ್ಯಕ್ಷೆ!

"ಇತ್ತೀಚೆಗೆ @INCKarnataka ನಡೆಸಿದ ಶಿವಮೊಗ್ಗ ಚಲೋ ಜಾಥಾದ ಹಿಂದೆ ಕೆಪಿಸಿಸಿಯ ಅಘೋಷಿತ ಅಧ್ಯಕ್ಷೆ #ಮಹಾನಾಯಕಿಯ ಕೈವಾಡವಿದೆ. #ಮಹಾನಾಯಕನೊಬ್ಬರು ಅಘೋಷಿತ ಅಧ್ಯಕ್ಷೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಬೀಗ-ಬೀಗತಿ ಸಂಬಂಧಕ್ಕಾಗಿ ಶಿವಮೊಗ್ಗ ಚಲೋ ಮಾಡಿದ ಕಾಂಗ್ರೆಸ್, ಜನತೆಗೆ ತಪ್ಪು ಮಾಹಿತಿ ನೀಡಿ, ಸದನದ ಸಮಯ ವ್ಯರ್ಥ ಮಾಡಿತ್ತು" ಇದು ಬಿಜೆಪಿ ಮಾಡಿದ ಟ್ವೀಟ್.

 ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಅವರು ಉಲ್ಲೇಖಿಸಿದ್ದ 'ಮಹಾನ್ ನಾಯಕ' ಯಾರು ಎನ್ನುವ ಪ್ರಶ್ನೆಗೆ ಉತ್ತರ ನೇರವಾಗಿ ಸಿಗದೇ ಇರುವ ಹೊತ್ತಿನಲ್ಲಿ, ಬಿಜೆಪಿ ಆರೋಪಿಸುತ್ತಿರುವ ಆ ಮಹಾನ್ ನಾಯಕಿ, ಕೆಪಿಸಿಸಿಯ ಅಘೋಷಿತ ಅಧ್ಯಕ್ಷೆ ಯಾರು ಎನ್ನುವ ಇನ್ನೊಂದು ಪ್ರಶ್ನೆ ಎದುರಾಗಿದೆ. ಬಿಜೆಪಿಯ ಈ ಟ್ವೀಟಿಗೆ, 'ಮಹಾ ನಾಯಕ/ ಮಹಾ ನಾಯಕಿಯ ಹೆಸರು ತಿಳಿಸಲು ಮುಜುಗರ ಎನಿಸಿದರೆ ಯಾವ ಊರಿಗೆ ಸಮೀಪದವರೆಂದು ತಿಳಿಸಿ' ಎನ್ನುವ ಪ್ರತಿಕ್ರಿಯೆ ಕೂಡಾ ಬಂದಿದೆ.

ಬಿಜೆಪಿಯ ಟ್ವೀಟಿಗೆ ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿತ್ತು

ಬಿಜೆಪಿಯ ಟ್ವೀಟಿಗೆ ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿತ್ತು, "ಶಿವಮೊಗ್ಗ & ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಪೋಟ & ಅಕ್ರಮ ಗಣಿಗಾರಿಕೆಯಲ್ಲಿ ನಿಮ್ಮ ಇಬ್ಬರು ಮಹಾನಾಯಕರದ್ದೇ ಕೈವಾಡವಲ್ಲವೇ
@BJP4Karnataka ಸ್ಫೋಟದ ತನಿಖೆ ಎಲ್ಲಿಗೆ ಬಂತು? ಅಕ್ರಮ, ಅನಾಚಾರ, ಗೂಂಡಾಗಿರಿ ನಡೆಸುವುದನ್ನೇ ಸಾಧನೆ ಎಂದುಕೊಂಡಿದ್ದೀರಿ. ಜನತೆಯ ದಿಕ್ಕು ತಪ್ಪಿಸುವುದನ್ನ ಬಿಟ್ಟು ನಿಮ್ಮ ಒಂದೇ ಒಂದು ಜನೋಪಯೋಗಿ ಯೋಜನೆ ತಿಳಿಸಿ" ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

Recommended Video

ಹೈ ಕಮಾಂಡ್ ಅವಕಾಶ ಕೊಟ್ಟರೆ ನಾನು ಸ್ಪರ್ಧೆ ಮಾಡ್ತೀನಿ | Sathish Jarakiholi | Oneindia Kannada
 ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರು ಈ ಜಾಥಾದಲ್ಲಿ ಭಾಗವಹಿಸಿದ್ದರು

ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರು ಈ ಜಾಥಾದಲ್ಲಿ ಭಾಗವಹಿಸಿದ್ದರು

ಶಿವಮೊಗ್ಗದಲ್ಲಿ ನಡೆದಿದ್ದ ಈ ಸಭೆಯಲ್ಲಿ ಕಾಂಗ್ರೆಸ್ಸಿನ ಎಲ್ಲಾ ಪ್ರಮುಖ ನಾಯಕರು ಭಾಗವಹಿಸಿದ್ದರು. ಮಾಜಿ ಸಚಿವರಾದ ಡಾ. ಜಿ.ಪರಮೇಶ್ವರ್, ರಾಮಲಿಂಗಾರೆಡ್ಡಿ, ಎಸ್.ಆರ್.ಪಾಟೀಲ್, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಯು.ಟಿ.ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧೃವನಾರಾಯಣ್, ಸಲೀಂ ಅಹಮದ್, ಪ್ರಮುಖರಾದ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರು ಈ ಜಾಥಾದಲ್ಲಿ ಭಾಗವಹಿಸಿದ್ದರು.

English summary
Which Congress Parties Women Leader Behind Of Parties Shivamogga Jatha, BJP Tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X