ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?

|
Google Oneindia Kannada News

ಬೆಂಗಳೂರು, ಜು.8 : ಕರ್ನಾಟಕದವರಾದ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು 2014-15ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದ್ದು ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾದ ಸದಾನಂದ ಗೌಡರು ತಮ್ಮ ಚೊಚ್ಚಲ ಬಜೆಟ್ ನಲ್ಲಿ ತವರು ರಾಜ್ಯಕ್ಕೆ ಕೊಟ್ಟ ಕೊಡುಗೆಗಳ ವಿವರಗಳು ಇಲ್ಲಿವೆ.

ಬೆಂಗಳೂರು ನಗರದ ಸುತ್ತಲಿನ ಊರುಗಳಿಗೆ ಸಂಪರ್ಕ ಕಲ್ಪಿಸಲು ಬೆಂಗಳೂರು ರೈಲು ವಿಕಾಸ ನಿಗಮ ಸ್ಥಾಪಿಸುವ ಚಿಂತನೆ ಇದೆ ಎಂದು ಹಿಂದೆ ರೈಲ್ವೆ ಖಾತೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದರು. ಬೆಂಗಳೂರಿಗೆ ಸಬ್​​ ಅರ್ಬನ್​ ಉಪನಗರಿ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಸದಾನಂದ ಗೌಡರು, ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. [ರೈಲ್ವೆ ಬಜೆಟ್ ಮುಖ್ಯಾಂಶಗಳನ್ನು ಇಲ್ಲಿ ನೋಡಿ]

ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ಮಾರ್ಗ, ಗದಗ-ಹರಪನಹಳ್ಳಿ ಮಧ್ಯೆ ಹೊಸ ಮಾರ್ಗ, ಬೆಂಗಳೂರಿಗೆ ಸಬ್ ಅರ್ಬನ್ ರೈಲು, ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಕೋಚಿಂಗ್‌ ಟರ್ಮಿನಲ್‌ ಸ್ಥಾಪನೆ ಸೇರಿದಂತೆ ಸದಾನಂದ ಗೌಡರು ಹಲವಾರು ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ಅವುಗಳ ವಿವರ ಇಲ್ಲಿದೆ. ['ಸದಾನಂದ' ಗೌಡ್ರು ಬಿಟ್ಟಿದ್ದು 58 ಹೊಸ ರೈಲುಗಳು]

ಎಕ್ಸ್‌ಪ್ರೆಸ್ ರೈಲುಗಳು

ಎಕ್ಸ್‌ಪ್ರೆಸ್ ರೈಲುಗಳು

* ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ (ಪ್ರತಿದಿನ)
* ಬೆಂಗಳೂರು-ಶಿವಮೊಗ್ಗ ಎಕ್ಸ್‌ಪ್ರೆಸ್ (2 ವಾರಕ್ಕೊಮ್ಮೆ)
* ಬೀದರ್-ಮುಂಬೈ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
* ಟಾಟಾನಗರ ಬೈಯಪ್ಪನಹಳ್ಳಿ (ಬೆಂಗಳೂರು) ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
* ಬೆಂಗಳೂರು-ಮೈಸೂರು-ಚೆನ್ನೂ ನಡುವೆ ಹೈಸ್ಪೀಡ್ ರೈಲು

ಪ್ಯಾಸೆಂಜರ್ ರೈಲುಗಳು

ಪ್ಯಾಸೆಂಜರ್ ರೈಲುಗಳು

* ಧಾರವಾಡ-ದಾಂಡೇಲಿ ಪ್ಯಾಸೆಂಜರ್ (ಪ್ರತಿದಿನ) ಅಳ್ನಾವರ ಮೂಲಕ
* ಬೈಂದೂರು-ಕಾಸರಗೋಡು ಪ್ಯಾಸೆಂಜರ್ (ಪ್ರತಿದಿನ)
* ಯಶವಂತಪುರ-ತುಮಕೂರು ಪ್ಯಾಸೆಂಜರ್ (ಪ್ರತಿದಿನ)

MEMU ಮತ್ತು DEMU ಸೇವೆಗಳು

MEMU ಮತ್ತು DEMU ಸೇವೆಗಳು

MEMU ಸೇವೆ [Mainline Electric Multiple Unit]
* ಬೆಂಗಳೂರು-ರಾಮನಗರ ವಾರಕ್ಕೆ 6 ದಿನ (3 ಜೋಡಿ)

DEMU ಸೇವೆ [Diesal electric multiple unit]
* ಬೆಂಗಳೂರು-ನೆಲಮಂಗಲ (ಪ್ರತಿದಿನ)
* ಯಶವಂತಪುರ-ಹೊಸೂರು (ವಾರಕ್ಕೆ 6 ದಿನ)

ಬಾಗಲಕೋಟೆಯಿಂದ ಪಂಡರಾಪುರಕ್ಕೆ ರೈಲು

ಬಾಗಲಕೋಟೆಯಿಂದ ಪಂಡರಾಪುರಕ್ಕೆ ರೈಲು

* ರಾಮೇಶ್ವರದಿಂದ ಬೆಂಗಳೂರು ಮಾರ್ಗವಾಗಿ ಹರಿದ್ವಾರಕ್ಕೆ ರೈಲು
* ಬಾಗಲಕೋಟೆಯಿಂದ ಪಂಡರಾಪುರಕ್ಕೆ ರೈಲು ವ್ಯವಸ್ಥೆ
* ವಾರಕ್ಕೊಮ್ಮೆ ಪಾಟ್ನಾ ಬೆಂಗಳೂರು ಎಕ್ಸ್ ಪ್ರೆಸ್ ರೈಲು
* ಹೌರಾ-ಯಶವಂತಪುರ ಎಸಿ ಎಕ್ಸ್ ಪ್ರೆಸ್ ವಾರಕ್ಕೊಮ್ಮೆ
* ಬೆಂಗಳೂರು ವಾರಣಾಸಿ ಮಾರ್ಗವಾಗಿ ಹರಿದ್ವಾರಕ್ಕೆ ರೈಲು
* ಬೆಂಗಳೂರು-ಚೆನ್ನೈ ಪ್ರತಿದಿನ ಬಂಗಾರಪೇಟೆ ಮಾರ್ಗ
* ಹುಬ್ಬಳ್ಳಿ-ಬೆಳಗಾವಿ ಫಾಸ್ಟ್ ಪ್ಯಾಸೆಂಜರ್ ಪ್ರತಿದಿನ

ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಹೊಸ ರೈಲು

ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಹೊಸ ರೈಲು

* ತಿಪಟೂರು-ದುದ್ದಾ ನಡುವೆ ಹೊಸ ಮಾರ್ಗ
* ಬೀದರ್-ಯಶವಂತಪುರ ಪ್ರತಿದಿನ
* 18 ಕಿಮೀ ಬೀರೂರು-ಅಜ್ಜಂಪುರಕ್ಕೆ ಜೋಡಿ ಮಾರ್ಗ
* ಬೈಂದೂರು-ಕಾಸರಗೋಡು ಪ್ಯಾಸೆಂಜರ್ ರೈಲು
* ಬೈಯಪ್ಪನಹಳ್ಳಿಯಲ್ಲಿ ಕೋಚಿಂಗ್ ಸೆಂಟರ್
* ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ಮಾರ್ಗ
* ಬೆಂಗಳೂರು-ನೆಲಮಂಗಲ ಪ್ಯಾಸೆಂಜರ್ ರೈಲು
* ಬೆಂಗಳೂರು-ಮಂಗಳೂರು ಹೊಸ ಎಕ್ಸ್ ಪ್ರೆಸ್ ರೈಲು

ಗದಗ-ಹರಪನಹಳ್ಳಿ ಮಧ್ಯೆ ಹೊಸ ಮಾರ್ಗ

ಗದಗ-ಹರಪನಹಳ್ಳಿ ಮಧ್ಯೆ ಹೊಸ ಮಾರ್ಗ

* ಗದಗ-ಹರಪನಹಳ್ಳಿ ಮಧ್ಯೆ ಹೊಸ ಮಾರ್ಗ
* ಬೆಂಗಳೂರು ಸುತ್ತಮುತ್ತ ಲೋಕಲ್ ರೈಲು
* ಬೆಂಗಳೂರು-ರಾಮನಗರ ವಾರಕ್ಕೆ 6 ದಿನ
* ಗಬ್ಬೂರು-ಬಳ್ಳಾರಿ ಹೊಸ ರೈಲು
* ಬಾಗಲಕೋಟೆ-ವಿಜಾಪುರ-ಸೊಲ್ಲಾಪುರ ಟೂರಿಸ್ಟ್ ರೈಲು
* ಕಾಮಾಕ್ಯ - ಬೆಂಗಳೂರು ನಡುವೆ ಪ್ರೀಮಿಯಂ ರೈಲು
* ಬೆಂಗಳೂರು - ಮಂಡ್ಯ ನಡುವೆ ಪ್ರತಿದಿನ ರೈಲು

ಮಂಗಳೂರು-ಉಳ್ಳಾಲ-ಸುರತ್ಕಲ್‌ ಜೋಡಿ ಮಾರ್ಗ

ಮಂಗಳೂರು-ಉಳ್ಳಾಲ-ಸುರತ್ಕಲ್‌ ಜೋಡಿ ಮಾರ್ಗ

* ರಾಮೇಶ್ವರ -ಬೆಂಗಳೂರು-ಅಯೋಧ್ಯೆ ನಡುವೆ ಹೊಸ ರೈಲು
* ವಾರಕ್ಕೊಮ್ಮೆ ಜೈಪುರ-ಬೆಂಗಳೂರು ನಡುವೆ ಹೈಸ್ಪೀಡ್ ರೈಲು
* ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೊಸ ರೈಲು
* ಮಂಗಳೂರು-ಉಳ್ಳಾಲ-ಸುರತ್ಕಲ್‌ ಜೋಡಿ ಮಾರ್ಗ

 ಚನ್ನರಾಯಪಟ್ಟಣಕ್ಕೆ ಹೊಸ ಮಾರ್ಗ

ಚನ್ನರಾಯಪಟ್ಟಣಕ್ಕೆ ಹೊಸ ಮಾರ್ಗ

* ಚನ್ನರಾಯಪಟ್ಟಣಕ್ಕೆ ಹೊಸ ಮಾರ್ಗ
* ಬೆಂಗಳೂರು - ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲು ವಾರಕ್ಕೆ ಎರಡು ಬಾರಿ
* ಯಶವಂತಪುರ - ಜೈಪುರ ಸಿಟಿ ನಡುವೆ ಹವಾನಿಯಂತ್ರಿತ ರೈಲು
* ಏರ್‌ಪೋರ್ಟ್‌ ಮಾದರಿಯಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ

English summary
Railway Budget 2014 : Railway Minister D.V.Sadananda Gowda presented Railway Budget 2014-15. What's in the railway budget for Karnataka here is details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X