• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಯಾಂಕ್‌ ವ್ಯವಹಾರ: ಭಾಷೆ ಬಗ್ಗೆ ಆರ್‌ಬಿಐ ಮಾರ್ಗದರ್ಶಿ ಹೇಳುವುದೇನು?

|

ಬೆಂಗಳೂರು, ಆಗಸ್ಟ್ 11: ರಾಜ್ಯದ ಬ್ಯಾಂಕುಗಳಲ್ಲಿ ಕನ್ನಡ ಬಾರದ ಸಿಬ್ಬಂದಿ ನೇಮಕದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಇಲ್ಲಿಗೆ ನಿಯೋಜಿತರಾಗುವ ಸಿಬ್ಬಂದಿ, ಕನ್ನಡ ಕಲಿಯದೆ ಹಿಂದಿಯಲ್ಲಿಯೇ ಮಾತನಾಡಿ ಎಂದು ಕನ್ನಡಿಗರ ಮೇಲೆಯೇ ದಬ್ಬಾಳಿಕೆ ನಡೆಸುವ ಸ್ಥಿತಿ ಉಂಟಾಗಿದೆ. ಅಲ್ಲದೆ, ಗ್ರಾಹಕರಿಗೆ ಚಲನ್‌ಗಳನ್ನು ಭರ್ತಿ ಮಾಡಲು ಕನ್ನಡದ ಆಯ್ಕೆಯೇ ಇಲ್ಲದಿರುವುದು ಕನ್ನಡ ಪ್ರೇಮಿಗಳನ್ನು ಕೆರಳಿಸಿದೆ.

ಇತ್ತೀಚೆಗೆ ಕೋಲಾರದ ಬಂಗಾರಪೇಟೆಯ ಕೆನರಾ ಬ್ಯಾಂಕ್‌ನಲ್ಲಿ ಚಲನ್ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇದ್ದು, ಕನ್ನಡದಲ್ಲಿ ಮುದ್ರಿಸಿರುವ ಚಲನ್ ನೀಡುವಂತೆ ಕೇಳಿದ ಗ್ರಾಹಕನ ಮೇಲೆ ಉತ್ತರ ಭಾರತದ ಅಧಿಕಾರಿ ದರ್ಪ ತೋರಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಕನ್ನಡಿಗರಿಗೆ ಉದ್ಯೋಗ : ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ ಹನುಮಂತಯ್ಯಕನ್ನಡಿಗರಿಗೆ ಉದ್ಯೋಗ : ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ ಹನುಮಂತಯ್ಯ

'ಹಿಂದಿ ರಾಷ್ಟ್ರಭಾಷೆ. ಅದರಲ್ಲಿಯೇ ಮಾತನಾಡಿ' ಎನ್ನುವ ಮಾತುಗಳನ್ನು ಬ್ಯಾಂಕ್ ಅಧಿಕಾರಿಗಳು ಆಡುತ್ತಿದ್ದಾರೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾವಾರು ಆಧಾರದಲ್ಲಿ ವಿಭಜನೆಗೊಂಡ ರಾಜ್ಯಗಳ ಜನರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂಬ ಕಾನೂನು ಇದ್ದರೂ ಅದನ್ನು ಪರಿಗಣಿಸುತ್ತಿಲ್ಲ ಎಂದು ಇತ್ತೀಚೆಗೆ ಸಾಹಿತಿ ಡಾ. ಎನ್. ಹನುಮಂತಯ್ಯ ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದರು.

ಕನ್ನಡದಲ್ಲಿ ಸೇವೆ ಕೇಳಿದ್ದಕ್ಕೆ ಹೊರದಬ್ಬಿದ್ದನಂತೆ ಬ್ಯಾಂಕ್ ಮ್ಯಾನೇಜರ್ಕನ್ನಡದಲ್ಲಿ ಸೇವೆ ಕೇಳಿದ್ದಕ್ಕೆ ಹೊರದಬ್ಬಿದ್ದನಂತೆ ಬ್ಯಾಂಕ್ ಮ್ಯಾನೇಜರ್

ಬ್ಯಾಂಕ್ ಚಲನ್‌ಗಳು ಯಾವ ಭಾಷೆಯಲ್ಲಿ ಇರಬೇಕು? ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಇದ್ದರೆ ಸಾಕೇ? ಎಂಬ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶಿಯ ಕೊಂಡಿಯನ್ನು ಸಂಸದ ರಾಜೀವ್ ಚಂದ್ರಶೇಖರ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಆರ್‌ಬಿಐನ ಈ ಮಾರ್ಗದರ್ಶಿಯ ಪ್ರಕಾರ ಪ್ರಾದೇಶಿಕ ಭಾಷೆಯಲ್ಲಿಯೂ ಚಲನ್ ಮುದ್ರಿಸುವುದು ಕಡ್ಡಾಯವಾಗಿದೆ.
ಅದೇ ರೀತಿ ಆರ್‌ಬಿಐ 2015ರ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿಯೂ ತ್ರಿಭಾಷಾ ಸೂತ್ರದ ಬಳಕೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

ಎಲ್ಲ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಗ್ರಾಹಕ ಸೇವೆಯಲ್ಲಿ ಪ್ರಾದೇಶಿಕ ಭಾಷೆ ಬಳಕೆಯ ಬಗ್ಗೆ ಅದು ಮಹತ್ವದ ಸುತ್ತೋಲೆ ಹೊರಡಿಸಿತ್ತು.

ಸ್ಥಳೀಯ ಭಾಷೆ ವ್ಯವಹಾರ ಕಡ್ಡಾಯ

ಆರ್‌ಬಿಐನ ಈ ಮಾರ್ಗದರ್ಶಿಯನ್ನು ಹಂಚಿಕೊಂಡಿರುವ ರಾಜೀವ್ ಚಂದ್ರಶೇಖರ್, ಕನ್ನಡ ಚಲನ್ ಕೇಳಿದ ಗ್ರಾಹಕರನ್ನು ಅವಮಾನಿಸಿದ ಕೆನರಾ ಬ್ಯಾಂಕ್ ಅಧಿಕಾರಿಗಳ ವರ್ತನೆ ಖಂಡನೀಯ. ಆರ್‌ಬಿಐ ಗ್ರಾಹಕ ಸೇವೆ ಮಾಸ್ಟರ್ ಸುತ್ತೋಲೆಯ ನಿಯಮದಂತೆ ಬ್ಯಾಂಕ್‌ನ ಎಲ್ಲ ವ್ಯವಹಾರಗಳನ್ನು ಸ್ಥಳೀಯ ಭಾಷೆಯಲ್ಲಿ ನಡೆಸುವುದು ಕಡ್ಡಾಯ. ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಹಿಂದಿ ಏರಿಕೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷಿಕರಲ್ಲಿ ಗಣನೀಯ ಇಳಿಕೆಹಿಂದಿ ಏರಿಕೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷಿಕರಲ್ಲಿ ಗಣನೀಯ ಇಳಿಕೆ

ಎಲ್ಲ ಮುದ್ರಿತ ಅಂಶಗಳು

ಎಲ್ಲ ಮುದ್ರಿತ ಅಂಶಗಳು

ಬ್ಯಾಂಕಿಂಗ್ ವ್ಯವಸ್ಥೆಯು ಹೆಚ್ಚಿನ ಜನರಿಗೆ ತಲುಪುವ ಉದ್ದೇಶದಿಂದ ಬ್ಯಾಂಕುಗಳು, ಖಾತೆ ತೆರೆಯುವ ಫಾರ್ಮ್, ಪೇ ಇನ್ ಸ್ಲಿಪ್‌ಗಳು, ಪಾಸ್‌ಬುಕ್‌ ಸೇರಿದಂತೆ ಎಲ್ಲ ಮುದ್ರಿತ ಅರ್ಜಿ ಹಾಗೂ ಇತರೆ ಕಾಗದ ಪ್ರಕ್ರಿಯೆಗಳನ್ನು ಇಂಗ್ಲಿಷ್, ಹಿಂದಿ ಮತ್ತು ಸಂಬಂಧಿಸಿದ ಪ್ರಾದೇಶಿಕ ಭಾಷೆಯಲ್ಲಿಯೂ ಒದಗಿಸಬೇಕು ಎಂದು ಆರ್‌ಬಿಐನ ಮಾರ್ಗದರ್ಶಿ 4.3ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಪ್ರಾದೇಶಿಕ ಭಾಷೆಯಲ್ಲಿ ಫಲಕ

ಎಲ್ಲ ಕೌಂಟರ್‌ಗಳಲ್ಲಿಯೂ ಇಂಗ್ಲಿಷ್, ಹಿಂದಿ ಮತ್ತು ಸಂಬಂಧಿತ ಪ್ರಾದೇಶಿಕ ಭಾಷೆಯಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು. ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿನ ಬ್ಯಾಂಕ್ ಶಾಖೆಗಳಲ್ಲಿ ಬ್ಯುಸಿನೆಸ್ ಪೋಸ್ಟರ್‌ಗಳು ಸಹ ಪ್ರಾದೇಶಿಕ ಭಾಷೆಯಲ್ಲಿ ಇರಬೇಕು.

ಗ್ರಾಹಕರೊಂದಿಗೆ ಸಂವಹನ

ಗ್ರಾಹಕರೊಂದಿಗೆ ಸಂವಹನ

ಬ್ಯಾಂಕುಗಳಲ್ಲಿ ವ್ಯವಹಾರಗಳು ಮತ್ತು ಗ್ರಾಹಕರೊಂದಿಗಿನ ಸಂವಹನಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆ ಬಳಸಬೇಕು.

ಸೇವೆಗಳ ಕೈಪಿಡಿ

ಬ್ಯಾಂಕುಗಳಲ್ಲಿ ನೀಡಲಾಗುವ ಎಲ್ಲ ಸೇವೆಗಳು ಹಾಗೂ ಸೌಲಭ್ಯಗಳ ಮಾಹಿತಿ ಕೈಪಿಡಿಯನ್ನು ಇಂಗ್ಲಿಷ್, ಹಿಂದಿ ಮತ್ತು ಸಂಬಂಧಿತ ಪ್ರಾದೇಶಿಕ ಭಾಷೆಯಲ್ಲಿ ಗ್ರಾಹಕರಿಗೆ ಒದಗಿಸಬೇಕು.

ಗ್ರಾಹಕರ ವಿವೇಚನೆ

ಗ್ರಾಹಕರ ವಿವೇಚನೆ

ಎಲ್ಲ ಚೆಕ್ ಫಾರ್ಮ್‌ಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮುದ್ರಿಸುವುದು ಕಡ್ಡಾಯ. ಆದರೆ ಗ್ರಾಹಕರು ಚೆಕ್‌ಗಳಲ್ಲಿ ಹಿಂದಿ, ಇಂಗ್ಲಿಷ್ ಅಥವಾ ಸಂಬಂಧಿಸಿದ ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದು.

ಚೆಕ್ ಪಾವತಿ ನಿರಾಕರಿಸುವಂತಿಲ್ಲ

ಚೆಕ್ ಪಾವತಿ ನಿರಾಕರಿಸುವಂತಿಲ್ಲ

ಡ್ರಾಪ್ ಬಾಕ್ಸ್ ಸೌಲಭ್ಯ ಹಾಗೂ ಚೆಕ್‌ಗಳ ಸಂಗ್ರಹದ ಪ್ರಕ್ರಿಯೆಯ ಎರಡೂ ಸೌಲಭ್ಯಗಳು ಗ್ರಾಹಕರಿಗೆ ದೊರಕಬೇಕು. ಗ್ರಾಹಕರು ಕೌಂಟರ್‌ನಲ್ಲಿಯೇ ಚೆಕ್ ಪಾವತಿ ಮಾಡುವುದಿದ್ದರೆ ಅದನ್ನು ಯಾವ ಶಾಖೆಯೂ ನಿರಾಕರಿಸುವಂತಿಲ್ಲ. ಈ ಸಂದೇಶವನ್ನು ಇಂಗ್ಲಿಷ್, ಹಿಂದಿ ಮತ್ತು ಆ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಅಳವಡಿಸಬೇಕು.

English summary
RBI Guidlines clearly suggested that the three language policy in banks with English, Hindi and concerned regional language is mandatory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X