• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ, ಶಾ ಬಂದು ಏನು ಮಾಡ್ತಾರೆ? ಪ್ರಿಯಾಂಕ್ ಖರ್ಗೆ ಸಂದರ್ಶನ

By ಬಾಲರಾಜ್ ತಂತ್ರಿ
|
   ಬಿಜೆಪಿಗೆ ಓವೈಸಿ ಬೆಂಬಲ ನೀಡುತ್ತಾರಾ? ಸಚಿವ ಪ್ರಿಯಾಂಕ್ ಖರ್ಗೆ ಸಂದರ್ಶನ | Oneindia Kannada

   ಕಲಬುರ್ಗಿ ಜಿಲ್ಲೆ, ಚಿತ್ತಾಪುರ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರಿಯಾಂಕ್ ಖರ್ಗೆ, ಸಚಿವರಾಗುವ ಮುನ್ನ ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕ NSUI ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಇದಾದ ನಂತರ ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿ ಪ್ರಿಯಾಂಕ್ ಕೆಲಸ ಮಾಡಿದ್ದರು.

   ನಂತರ ಕೆಪಿಸಿಸಿ ಯುವ ಘಟಕದ ಉಪಾಧ್ಯಕ್ಷರಾದ ಪ್ರಿಯಾಂಕ್ ಖರ್ಗೆ 2008ರಲ್ಲಿ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ದ 1600 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇದಾದ ನಂತರ ಅಂದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಮೂವತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಪ್ರಥಮಬಾರಿಗೆ ಅಸೆಂಬ್ಲಿಗೆ ಆಯ್ಕೆಯಾದರು.

   ಪ್ರಿಯಾಂಕ್ ಖರ್ಗೆ : ವಯಸ್ಸು ಕಿರಿದು ಜವಾಬ್ದಾರಿ ದೊಡ್ಡದು

   ಇನ್ನೇನು ಕೆಲವೇ ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ಎದುರಾಗುತ್ತಿರುವುದರಿಂದ, ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ರಾಜಕೀಯ, ಮೋದಿ, ಶಾ, ಕಲಬುರ್ಗಿಯಲ್ಲಿ ಪಕ್ಷಕ್ಕೆ ಯಾವ ರೀತಿಯ ವಾತಾವರಣವಿದೆ ಎನ್ನುವುದರ ಬಗ್ಗೆ 'ಒನ್ ಇಂಡಿಯಾ'ದ ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಮುಂದುವರಿದ ಭಾಗ..

   ಪ್ರ: ಕಳೆದ ಬಾರಿ ನಿಮ್ಮ ಕ್ಷೇತ್ರದಲ್ಲಿ ಕೆಜೆಪಿ-ಬಿಜೆಪಿಯಿಂದಾಗಿ ಮತವಿಭಜನೆಯಾಯಿತು. ಈ ಬಾರಿ ಹೇಗಿದೆ?

   ಪ್ರಿಯಾಂಕ: ನನ್ನ ಕ್ಷೇತ್ರದಲ್ಲಿ ಮಾತ್ರವಲ್ಲ, ರಾಜ್ಯದೆಲ್ಲಡೆ ಮತವಿಭಜನೆಯಾಯಿತು. ಜನ ಕೆಲಸ ನೋಡಿ ಮತ ಹಾಕುತ್ತಾರೆ, ಬೇಕಾದಷ್ಟು ಅಭಿವೃದ್ದಿ ಕೆಲಸವನ್ನು ಮಾಡಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹದಿನಾರು ಸಾವಿರ ಮತಗಳ ಅಂತರದಿಂದ ಗೆದ್ದೆವು. ಇದಾದ ನಂತರ ಜಿಲ್ಲಾ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಮತಗಳ ಅಂತರ ಈ ಬಾರಿ ಕಮ್ಮಿಯಾಗಬಹುದು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ.

   ಗುಲ್ಬರ್ಗ ರೂರಲ್ಗೆ ತಯ್ಯಾರಿ ನಡೆಸಿದ್ದೀರಂತೆ.. ಹೌದಾ..?

   ಗುಲ್ಬರ್ಗ ರೂರಲ್ಗೆ ತಯ್ಯಾರಿ ನಡೆಸಿದ್ದೀರಂತೆ.. ಹೌದಾ..?

   ಪ್ರ: ಕ್ಷೇತ್ರ ಬದಲಾಯಿಸ್ತಿರಂತೆ..! ಖರೆನೋ..? ಸುಳ್ಳೋ..!? ಚಿತ್ತಾಪುರದಲ್ಲಿ ಸಾಕಷ್ಟು ಕೆಲಸಾ ಮಾಡಿದ್ರೂ ಗುಲ್ಬರ್ಗ ರೂರಲ್ಗೆ ತಯ್ಯಾರಿ ನಡೆಸಿದ್ದೀರಂತೆ.. ಹೌದಾ..?

   ಪ್ರಿಯಾಂಕ: ಇದೆಲ್ಲಾ ನಿಮ್ಮ ಮಾಧ್ಯಮದವರ ಸುದ್ದಿ, ಎರಡ್ಮೂರು ಸಾವಿರ ಬಂಡವಾಳ ಇಲ್ಲಿ ಹಾಕಿ, ಬೇರೆ ಕಡೆ ನಿಲ್ಲೋಕಾಗುತ್ತಾ? ಅಲ್ಲಿನ ಹಾಲೀ ಶಾಸಕರು ಅನಾರೋಗ್ಯದಿಂದಾಗಿ, ಜನ ಅಲ್ಲಿ ಬಂದು ಸ್ಪರ್ಧಿಸಿ ಅಂತಾ ಹೇಳುತ್ತಿದ್ದಾರೆ. ಆದರೆ ಚಿತ್ತಾಪುರದ ಜನ ನನ್ನ ಕೈಹಿಡಿದಿದ್ದಾರೆ, ಹಾಗಾಗಿ ಕ್ಷೇತ್ರ ಬದಲಾಯಿಸುವ ಚಿಂತನೆಯಿಲ್ಲ.

   ಮೋದಿ ಮೋಡಿ, ಶಾ ತಂತ್ರಗಾರಿಕೆ ವರ್ಕೌಟ್ ಆಗುತ್ತಾ?'

   ಮೋದಿ ಮೋಡಿ, ಶಾ ತಂತ್ರಗಾರಿಕೆ ವರ್ಕೌಟ್ ಆಗುತ್ತಾ?'

   ಪ್ರ: ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ, ಕಾಂಗ್ರೆಸ್ ಪರಿಸ್ಥಿತಿ ಉತ್ತಮವಾಗಿದೆಯಾ? ಮೋದಿ ಮೋಡಿ, ಶಾ ತಂತ್ರಗಾರಿಕೆ ವರ್ಕೌಟ್ ಆಗುತ್ತಾ?'

   ಪ್ರಿಯಾಂಕ: ಮೋದಿ, ಶಾ ಎಲ್ಲಾ ಇಲ್ಲಿಗೆ ಬಂದು ಏನು ಮಾಡುತ್ತಾರೆ, ನಮ್ಮ ಮೇಲೆ ಏನು ಆರೋಪವಿದೆ? ಭ್ರಷ್ಟಾಚಾರ, ಹಗರಣದ ಯಾವ ಆರೋಪವೂ ನಮ್ಮ ಮೇಲೆ ಇಲ್ಲ. ಇಲ್ಲಿಗೆ ಬಂದು ಗುಜರಾತ್ ಮಾಡೆಲ್ ಬಗ್ಗೆ ಮಾತನಾಡುತ್ತಾರಾ, ಕೇಂದ್ರ ಸರಕಾರದ ಸ್ಕೀಂ ಬಗ್ಗೆ ಮಾತನಾಡುತ್ತಾರಾ? ಅಮಿತ್ ಶಾ ಮೊನ್ನೆ ಮೈಸೂರಿಗೆ ಬಂದು ಏನು ಮಾತನಾಡಿದ್ರು, ಜಾತಿ ಒಡೆದು ಮತಬೇಟೆಗೆ ಬಿಜೆಪಿ ಮುಂದಾಗಿದೆ. ಅಭಿವೃದ್ದಿಯ ವಿಚಾರದಲ್ಲಿ ನಮ್ಮ ಜೊತೆ ಚರ್ಚೆಗೆ ಬರಲು ಅವರು ಸಿದ್ದರಿಲ್ಲ.

   ತುಂಬಾ ಕಾಂಗ್ರೆಸ್ ಲೀಡರ್ ಪಕ್ಷ ಬಿಟ್ಟು ಹೋಗ್ತಾ ಇದ್ದಾರಲ್ಲಾ

   ತುಂಬಾ ಕಾಂಗ್ರೆಸ್ ಲೀಡರ್ ಪಕ್ಷ ಬಿಟ್ಟು ಹೋಗ್ತಾ ಇದ್ದಾರಲ್ಲಾ

   ಪ್ರ: ಮಾಲಕರೆಡ್ಡಿ, ಗುತ್ತೇದಾರ್ ಅವ್ರಿಗೆಲ್ಲಾ ಯಾಕೆ ನಿಮ್ ಮೇಲೆ ಮುನಿಸು? ತುಂಬಾ ಕಾಂಗ್ರೆಸ್ ಲೀಡರ್ ಪಕ್ಷ ಬಿಟ್ಟು ಹೋಗ್ತಾ ಇದ್ದಾರಲ್ಲಾ?

   ಪ್ರಿಯಾಂಕ : ನೋಡಿ.. ಇಲೆಕ್ಷನ್ ಹತ್ತಿರ ಬಂದಾಗ ಮುಖಂಡರು ವಲಸೆ ಹೋಗುವುದು ಸಹಜ. ಅಲ್ಲಿಂದ ಇಲ್ಲಿಗೆ ಬರುತ್ತಾರೆ, ಇಲ್ಲಿಂದ ಅಲ್ಲಿಗೆ ಹೋಗುತ್ತಾರೆ. ಇದುವರೆಗೆ ಎಷ್ಟು ಜನ ಬಿಟ್ಟುಹೋಗಿದ್ದಾರೆ, ಬರೀ ಮೂರು ಜನ. ಪರಿವರ್ತನಾ ಸಮಾವೇಶ ಚಿತ್ತಾಪುರದಲ್ಲೂ ನಡೆಯಿತು, ಎಷ್ಟು ಜನ ಬಿಟ್ರು? ಮಾಲೀಕಯ್ಯ ಗುತ್ತೇದಾರ್, ಮಾಲಕರೆಡ್ಡಿಯವರ ಬಗ್ಗೆ ಏನೂ ಕಮೆಂಟ್ ಮಾಡುವುದಿಲ್ಲ. ನಾನು ನೇರನುಡಿಯವನಾಗಿರುವುದರಿಂದ, ಕೆಲವರಿಗೆ ಅದು ಇಷ್ಟವಾಗುವುದಿಲ್ಲ. ಎಲ್ಲರನ್ನೂ ಸಮಾಧಾನ ಮಾಡೋಕೆ ಆಗುತ್ತಾ?

   ಕಾಂಗ್ರೆಸ್ ಅದೇ ದಾರಿಯಲ್ಲಿ ಸಾಗುತ್ತಿದೆಯಲ್ಲಾ

   ಕಾಂಗ್ರೆಸ್ ಅದೇ ದಾರಿಯಲ್ಲಿ ಸಾಗುತ್ತಿದೆಯಲ್ಲಾ

   ಪ್ರ: ಬಿಜೆಪಿಯವರು ಹಿಂದುತ್ವವನ್ನು ಇಟ್ಟುಕೊಂಡು ಇಲೆಕ್ಷನ್ ಹೋಗಲು ಮುಂದಾಗಿದ್ದಾರೆ, ಕಾಂಗ್ರೆಸ್ ಅದೇ ದಾರಿಯಲ್ಲಿ ಸಾಗುತ್ತಿದೆಯಲ್ಲಾ?

   ಪ್ರಿಯಾಂಕ: ನಾವಾಗಿ ಯಾವುದನ್ನೂ ಆರಂಭಿಸಿಲ್ಲ. ಬಿಜೆಪಿಯವರು ನಮ್ಮ ಮೇಲೆ ಟಾರ್ಗೆಟ್ ಮಾಡುತ್ತಿದ್ದಾರೆ, ಅದಕ್ಕೆ ನಾವು ಉತ್ತರ ಕೊಡುತ್ತಿದ್ದೇವೆ. ಸಿದ್ದರಾಮಯ್ಯನವರಾಗಲಿ ನಮ್ಮ ಪಕ್ಷದ ಇತರ ಮುಖಂಡರಾಗಲಿ ಯಾರೂ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿಲ್ಲ. ನಾವು ದುಡಿದಿದ್ದೇವೆ, ಅದಕ್ಕೆ ಕೂಲಿ ಕೊಡಿ ಅಂತಾ ನಾವು ಕೇಳ್ತಾ ಇದ್ದೇವೆ. ಇದೇ ನಮ್ಮ ಹಿಂದಿನ ಪ್ರಧಾನಿಯ ಬಗ್ಗೆ ಮಾತನಾಡಿದಾಗ ಬಿಜೆಪಿಯವರಿಗೆ ನಯವಿನಯದ ಬಗ್ಗೆ ಗೊತ್ತಿರಲಿಲ್ಲವಾ?ಮನಮೋಹನ್ ಸಿಂಗ್ ಸಾಧಿಸಿದನ್ನು ಈಗಿನ ಪ್ರಧಾನಿಗೆ ಕನಸಲ್ಲೂ ನೆನೆಸಿಕೊಳ್ಳಲು ಸಾಧ್ಯವಿಲ್ಲ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   What PM Modi and BJP National President Amit Shah will come and do in Karnataka? An exclusive interview with State IT,BT, Science and Tourism Minister Priyank Kharge - Part 2.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more