ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮುಂದಿನ ನಡೆಯ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದೇನು?

|
Google Oneindia Kannada News

ತಮ್ಮ ಮುಖ್ಯಮಂತ್ರಿ ಹುದ್ದೆಯ ಅವಧಿ ಮುಗಿದ ನಂತರ ಆಡ್ವಾಣಿ, ಮುರಳಿ ಮನೋಹರ್ ಜೋಷಿಗೆ ಆದಂತೆ, ಯಡಿಯೂರಪ್ಪನವರಿಗೂ ಆಗಲಿದೆಯೇ? ಈ ರೀತಿಯ ಪ್ರಶ್ನೆ ಮತ್ತೆ ಹುಟ್ಟಿರುವುದು ಕಲ್ಲಡ್ಕ ಪ್ರಭಾಕರ ಭಟ್ ಅವರ ಹೇಳಿಕೆಯ ನಂತರ.

ನಿಮ್ಮನ್ನು ಗೌರವಯುತವಾಗಿ ಕಳುಹಿಸಿಕೊಡುತ್ತೇವೆ. ಯಾವುದಾದರೂ ಒಂದು ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡುತ್ತೇವೆ. ಮಗನಿಗೆ ಸಚಿವ ಸ್ಥಾನ ನೀಡುತ್ತೇವೆ.. ಈ ರೀತಿಯ ಆಫರ್ ಗಳು ಯಡಿಯೂರಪ್ಪನವರಿಗೆ ವರಿಷ್ಠರಿಂದ ಬಂದಿತ್ತು ಎನ್ನುವ ಸುದ್ದಿ ಹರಿದಾಡುತ್ತಿತ್ತು.

ಕಲ್ಲಡ್ಕ ಭಟ್ರೇ ಬೆಂಗಳೂರಿನವರಾದರೂ ನೆಮ್ಮದಿಯಿಂದ ಇರಲು ಬಿಡಿಕಲ್ಲಡ್ಕ ಭಟ್ರೇ ಬೆಂಗಳೂರಿನವರಾದರೂ ನೆಮ್ಮದಿಯಿಂದ ಇರಲು ಬಿಡಿ

ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ, ಕಲ್ಲಡ್ಕ ಪ್ರಭಾಕರ ಭಟ್ ನೀಡಿರುವ ಹೇಳಿಕೆ, ಇದನ್ನೆಲ್ಲಾ ಪುಷ್ಟೀಕರಿಸುವಂತಿದೆ. "ಯಡಿಯೂರಪ್ಪನವರು ನನ್ನಲ್ಲೇ ಈ ಮಾತನ್ನು ಹೇಳಿದ್ದಾರೆ" ಎನ್ನುವ ಹೇಳಿಕೆಯನ್ನೂ ಕಲ್ಲಡ್ಕ ಭಟ್ ನೀಡಿದ್ದಾರೆ.

ಫಾದರ್ ಮುಲ್ಲಾ, ಟ್ರಂಪ್ ಹೆಸರೆತ್ತಿ ಗೇಲಿ ಮಾಡಿದ ಡಿ.ಕೆ.ಸುರೇಶ್ಫಾದರ್ ಮುಲ್ಲಾ, ಟ್ರಂಪ್ ಹೆಸರೆತ್ತಿ ಗೇಲಿ ಮಾಡಿದ ಡಿ.ಕೆ.ಸುರೇಶ್

ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರ ಅವಧಿ (ಸರಕಾರ ಪತನಗೊಳ್ಲದಿದ್ದಲ್ಲಿ ಅಥವಾ ಯಾವುದೇ ಬದಲಾವಣೆ ಆಗದಿದ್ದಲ್ಲಿ) ಇನ್ನು ಮೂರುವರೆ ವರ್ಷವಿದೆ. ಕಲ್ಲಡ್ಕ ಭಟ್ ನುಡಿದದ್ದು, ಇದಾದ ಮೇಲೆ ಬಿಎಸ್ವೈ ಅವರ ಮುಂದಿನ ನಡೆಯ ಬಗ್ಗೆ:

ಡಿಸಿಎಂ ಹುದ್ದೆಯ ಬಗ್ಗೆಯೂ ನನಗೆ ಮಾಹಿತಿ ಇರಲಿಲ್ಲ ಎಂದಿದ್ದ ಯಡಿಯೂರಪ್ಪ

ಡಿಸಿಎಂ ಹುದ್ದೆಯ ಬಗ್ಗೆಯೂ ನನಗೆ ಮಾಹಿತಿ ಇರಲಿಲ್ಲ ಎಂದಿದ್ದ ಯಡಿಯೂರಪ್ಪ

ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ ಯಡಿಯೂರಪ್ಪನವರಿಗೆ ವರಿಷ್ಠರು ಪೂರ್ಣ ಸ್ವಾತಂತ್ರ್ಯವನ್ನು ನೀಡಿರಲಿಲ್ಲ. ಡಿಸಿಎಂ ಹುದ್ದೆಯ ಬಗ್ಗೆಯೂ ನನಗೆ ಮಾಹಿತಿ ಇರಲಿಲ್ಲ. ಭೇಟಿ ಮಾಡಲು ಅಪಾಯಿಟ್ಮೆಂಟ್ ಕೂಡಾ ನೀಡುತ್ತಿಲ್ಲ. ಹೀಗೆ, ಹಲವು ಬಾರಿ, ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದುಂಟು.

ಕಲ್ಲಡ್ಕ ಪ್ರಭಾಕರ ಭಟ್ ಹೇಳಿದಿಷ್ಟು

ಕಲ್ಲಡ್ಕ ಪ್ರಭಾಕರ ಭಟ್ ಹೇಳಿದಿಷ್ಟು

ಚಿಕ್ಕಬಳ್ಳಾಪುರದಲ್ಲಿ ಮಾತನಾಡುತ್ತಿದ್ದ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದಿಷ್ಟು, "ಮುಂಬರುವ ಯಾವುದೇ ಚುನಾವಣೆಯಲ್ಲಿ ಯಡಿಯೂರಪ್ಪನವರು ಸ್ಪರ್ಧಿಸುವುದಿಲ್ಲ. ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಉನ್ನತ ಹುದ್ದೆಯನ್ನೂ ಯಡಿಯೂರಪ್ಪನವರು ಅಲಂಕರಿಸಿದ್ದಾರೆ".

ಯಡಿಯೂರಪ್ಪನವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿಯಲಿದ್ದಾರೆ

ಯಡಿಯೂರಪ್ಪನವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿಯಲಿದ್ದಾರೆ

"ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿಯಲಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ, ಖುದ್ದು ಅವರೇ ನನಗೆ ಹಿಂದೆ ಹೇಳಿದ್ದಾರೆ" ಎನ್ನುವ ಮಾತನ್ನು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಮೂರುವರೆ ವರ್ಷದ ಅವಧಿಯವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ

ಮೂರುವರೆ ವರ್ಷದ ಅವಧಿಯವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ

"ಮುಂದಿನ ಮೂರುವರೆ ವರ್ಷದ ಅವಧಿಯವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿದ್ದಾರೆ. ಈ ಬಗ್ಗೆ ಯಾವ ಅನುಮಾನವೂ ಬೇಡ. ಅವರು ಉತ್ತಮವಾದ ಆಡಳಿತವನ್ನು ನೀಡಲಿದ್ದಾರೆ" ಎಂದು ಕಲ್ಲಡ್ಕ ಪ್ರಭಾಕರ ಭಟ್, ಬಿಎಸ್ವೈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

English summary
What Senior RSS Leader Kalladka Prabhakar Bhat Said About Chief Minister Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X