ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಮತ್ತು ಸಿಎಂ ಕುರ್ಚಿ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ

|
Google Oneindia Kannada News

Recommended Video

ಸಿದ್ದರಾಮಯ್ಯ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಎಚ್ ಡಿ ಕುಮಾರಸ್ವಾಮಿ | Oneindia Kannada

ವಿಜಯಪುರ, ಏಪ್ರಿಲ್ 20: ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುವುದರಲ್ಲಿ ತಪ್ಪೇನಿದೆ, ಯಾರ ಹಣೆಯಲ್ಲಿ ಏನು ಬರೆದಿದೆಯೋ ಯಾರಿಗೆ ಗೊತ್ತು ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇತ್ತೀಚೆಗೆ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಸಮಯದಲ್ಲಿ ತಾವು ಮತ್ತೊಮ್ಮೆ ಸಿಎಂ ಆದರೆ ರಾಜ್ಯದ ಯಾರೂ ಹಸಿವಿನಿಂದ ಬಳಲದಂತೆ ಮಾಡುತ್ತೇನೆ ಎಂದು ಹೇಳಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಷ್ಟು ದಿನ, ಕುಮಾರಸ್ವಾಮಿ ಐದು ವರ್ಷಗಳ ಸಿಎಂ ಆಗಿರುವುದು ನಿಶ್ಚಿತ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು, ಮೊದಲ ಬಾರಿಗೆ ತಾವು ಸಿಎಂ ಆದರೆ ಎಂಬ ಮಾತಾಡಿರುವುದು ಅದೂ ಸಹ ಚುನಾವಣೆ ಸಮಯದಲ್ಲಿ ಈ ಮಾತು ಬಂದಿರುವುದು ಕುತೂಹಲ ಕೆರಳಿಸಿದೆ.

ಮೋದಿಗಿಂತ ದೇವೇಗೌಡರೇ ಉತ್ತಮ ಪ್ರಧಾನಿ: ಎಚ್ ಡಿ ಕುಮಾರಸ್ವಾಮಿ ಮೋದಿಗಿಂತ ದೇವೇಗೌಡರೇ ಉತ್ತಮ ಪ್ರಧಾನಿ: ಎಚ್ ಡಿ ಕುಮಾರಸ್ವಾಮಿ

ಆಶ್ಚರ್ಯವೆಂಬಂತೆ ಕುಮಾರಸ್ವಾಮಿ ಸಹ ಸಿದ್ದರಾಮಯ್ಯ ಅವರ ಹೇಳಿಕೆಗೆ ಮೃಧುವಾಗಿ ಪ್ರತಿಕ್ರಿಯಿಸಿರುವುದು ರಾಜ್ಯದ ರಾಜಕಾರಣದಲ್ಲಿ ಮಹತ್ವದ ತಿರುವುಗಳೇನಾದರೂ ಘಟಿಸುತ್ತವೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಹಿಂದೊಮ್ಮೆ ಎಚ್‌ಡಿಕೆ ಇದೇ ವಿಷಯಕ್ಕೆ ಉರಿದು ಬಿದ್ದಿದ್ದರು

ಹಿಂದೊಮ್ಮೆ ಎಚ್‌ಡಿಕೆ ಇದೇ ವಿಷಯಕ್ಕೆ ಉರಿದು ಬಿದ್ದಿದ್ದರು

ಈ ಹಿಂದೆ ಸಿದ್ದರಾಮಯ್ಯ ಬೆಂಬಲಿಗರಾದ ಸುಧಾಕರ್, ಎಂಟಿಬಿ ನಾಗರಾಜು, ಎಚ್‌.ಎಂ.ರೇವಣ್ಣ, ಇನ್ನೂ ಕೆಲವರು ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿದ್ದಾಗ ಇದೇ ಕುಮಾರಸ್ವಾಮಿ ಅವರು ಉರಿದು ಬಿದ್ದಿದ್ದರು. ಕಾಂಗ್ರೆಸ್‌ನವರು ತಮ್ಮ ಶಾಸಕರನ್ನು ನಿಯಂತ್ರಿಸಬೇಕು ಎಂದಿದ್ದರು ಆದರೆ ಈ ಬಾರಿ ಅವರ ಮಾತಿನ ಧಾಟಿ ಬೇರೆಯೇ ಆಗಿದೆ.

ರಾಹುಲ್ ಗಾಂಧಿ, ಕುಮಾರಸ್ವಾಮಿ ಜೋಕರ್ಸ್ ಎಂದ ಬೊಮ್ಮಾಯಿ!ರಾಹುಲ್ ಗಾಂಧಿ, ಕುಮಾರಸ್ವಾಮಿ ಜೋಕರ್ಸ್ ಎಂದ ಬೊಮ್ಮಾಯಿ!

ಫಲಿತಾಂಶ ಹೊರಬಿದ್ದ ಮೇಲೆ ರಾಜ್ಯದಲ್ಲಿ ಬದಲಾವಣೆ?

ಫಲಿತಾಂಶ ಹೊರಬಿದ್ದ ಮೇಲೆ ರಾಜ್ಯದಲ್ಲಿ ಬದಲಾವಣೆ?

ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಗಿದಿದ್ದು ಎರಡನೇ ಹಂತದ ಮತದಾನ ಏಪ್ರಿಲ್ 23ರಂದು ನಡೆಯುತ್ತಿದೆ. ಫಲಿತಾಂಶವು ಮೇ 23ರಂದು ಹೊರ ಬೀಳಲಿದ್ದು, ಅಂದಿನ ಫಲಿತಾಂಶ ಮೈತ್ರಿಗೆ ಮುಖಭಂಗವೇನಾದರೂ ತಂದಲ್ಲಿ ಸಿಎಂ ಕುರ್ಚಿ ಬದಲಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಮೊದಲ ಹಂತದಲ್ಲಿ ಮೈತ್ರಿಪಕ್ಷಕ್ಕೆ 10-12 ಕ್ಷೇತ್ರದಲ್ಲಿ ಗೆಲುವು: HDK ವಿಶ್ವಾಸ ಮೊದಲ ಹಂತದಲ್ಲಿ ಮೈತ್ರಿಪಕ್ಷಕ್ಕೆ 10-12 ಕ್ಷೇತ್ರದಲ್ಲಿ ಗೆಲುವು: HDK ವಿಶ್ವಾಸ

ಸಿಎಂ ಆಗುತ್ತೇನೆಂದ ಸಿದ್ದರಾಮಯ್ಯ

ಸಿಎಂ ಆಗುತ್ತೇನೆಂದ ಸಿದ್ದರಾಮಯ್ಯ

ಇಷ್ಟು ದಿನ 'ಕುಮಾರಸ್ವಾಮಿ ಅವರೇ ಐದು ವರ್ಷ ಸಿಎಂ' ಎನ್ನುತ್ತಿದ್ದ ಸಿದ್ದರಾಮಯ್ಯ ಅವರೇ ಈಗ ಅಚಾನಕ್ ಆಗಿ ನಾನು ಸಿಎಂ ಆಗುತ್ತೇನೆ ಎಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಚುನಾವಣೆ ಫಲಿತಾಶಂದ ಬಳಿಕ ಸಿಎಂ ಕುರ್ಚಿ ಏನಾದರೂ ಬದಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಿತ್ತು ಕಾಂಗ್ರೆಸ್‌

ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಿತ್ತು ಕಾಂಗ್ರೆಸ್‌

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಮೂರು ಪಕ್ಷಗಳಿಗೆ ಬಹುಮತ ಬಾರದೆ ಇದ್ದಾಗ ಕಾಂಗ್ರೆಸ್ ಪಕ್ಷವು ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಿ ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನ ನೀಡಿತ್ತು. ರಾಹುಲ್ ಗಾಂಧಿ ಅವರೇ 'ಕುಮಾರಸ್ವಾಮಿ ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ' ಎಂದು ಘೊಷಿಸಿದ್ದರು.

English summary
What is wrong if Siddaramaiah become CM again said HD Kumaraswamy. No one knows what is there in the future he also may become cm again he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X