ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಲಾರ ಲಿಂಗೇಶ್ವರ ಕಾರ್ಣಿಕ ದೈವವಾಣಿಯ ಅರ್ಥ: ಉಳಿದವರು ಕಂಡಂತೆ

|
Google Oneindia Kannada News

Recommended Video

ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಮೈಲಾರ ಕಾರ್ಣಿಕ ಭವಿಷ್ಯ | Oneindia Kannada

ರಾಜ್ಯದಲ್ಲೇ ಪ್ರಸಿದ್ದವಾದ ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲೂಕಿನ ಇತಿಹಾಸ ಪ್ರಸಿದ್ದ ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ನುಡಿಯಲಾದ ಕಾರ್ಣಿಕ ವಾಣಿಯ ಅಸ್ಪಷ್ಟತೆಯ ಸುತ್ತ ಗೊಂದಲ ಮುಂದುವರಿದಿದ್ದು, ಕಾರ್ಣಿಕದ ಧ್ವನಿಮುದ್ರಿಕೆಯ ಪರಿಶೀಲನೆಗಾಗಿ ಬೆಂಗಳೂರಿನ ಹೈಟೆಕ್ನಾಲಜಿಗೆ ಕಳುಹಿಸಲಾಗಿದೆ. ಈ ಶುಕ್ರವಾರದೊಳಗೆ (ಫೆ 9) ವರದಿ ಮುಜರಾಯಿ ಇಲಾಖೆಯ ಕೈಸೇರುವ ಸಾಧ್ಯತೆಯಿದೆ.

ಶನಿವಾರ (ಫೆ 3) ಜಾತ್ರೆಯಲ್ಲಿ ನುಡಿಯಲಾದ ದೈವವಾಣಿಯನ್ನು ಮೈಕ್ ಸಮಸ್ಯೆ ಮತ್ತು ಭಕ್ತರ ತೀವ್ರ ಗದ್ದಲದಿಂದಾಗಿ ಬೇರೆ ರೀತಿಯಲ್ಲಿ ಅರ್ಥೈಸಲಾಗಿತ್ತು. ನಂತರ, ನೆರೆದಿದ್ದ ಕೆಲವು ಭಕ್ತರು ಆಗಿರುವ ತಪ್ಪನ್ನು ದೇವಾಲಯದ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು.

ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌, ಮೈಲಾರ ಕಾರ್ಣಿಕ ಭವಿಷ್ಯಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌, ಮೈಲಾರ ಕಾರ್ಣಿಕ ಭವಿಷ್ಯ

ಕಾರ್ಣಿಕವನ್ನು ಆಕಾಶಕ್ಕೆ ಸಿಡಿಲು ಬಡಿತಲೇ ಪರಾಕ್ ಎಂದು ಮೊದಲು ವಿಶ್ಲೇಷಿಸಿ ನಂತರ, 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಎಂದು ಅಧಿಕೃತವಾಗಿ ಮುಜರಾಯಿ ಇಲಾಖೆ ಪ್ರಕಟಿಸಿತ್ತು. ಆದರೆ, ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ, ಕಾರ್ಣಿಕದ ಆಡಿಯೋವನ್ನು ಬೆಂಗಳೂರಿಗೆ ಪರಿಶೀಲನೆಗೆ ಕಳುಹಿಸಲಾಗಿದೆ.

ಹನ್ನೊಂದು ದಿನಗಳ ಕಟ್ಟುನಿಟ್ಟಿನ ಉಪವಾಸ ಆಚರಿಸಿ, ವಿಜಯನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ ಮೂರ್ತಿಗಳನ್ನು ಮೆರವಣಿಗೆ ಮೂಲಕ ಡೆಂಕನಮರಡಿಗೆ ತಂದು, ಧರ್ಮದರ್ಶಿಗಳ ಆಶೀರ್ವಾದ ಪಡೆದು ಗೊರವಪ್ಪ, ಹದಿನೈದು ಅಡಿ ಎತ್ತರದ ಬಿಲ್ಲನ್ನು ಏರಿ, ಕೆಲಕ್ಷಣ ಭಕ್ತಾದಿಗಳನ್ನು ದಿಟ್ಟಿಸಿ ನೋಡಿ ನುಡಿಯುವ ಕಾರ್ಣಿಕಕ್ಕೆ ಹಲವು ದಶಕಗಳ ಇತಿಹಾಸವಿದೆ.

ಈಶ್ವರನೇ ಗೊರವಪ್ಪನ ರೂಪದಲ್ಲಿ ದೈವವಾಣಿ ನುಡಿಯುತ್ತಾನೆಂದೇ ಈ ಭಾಗದಲ್ಲಿ ನಂಬಲಾಗುವ ಈ ಕಾರ್ಣಿಕದ ನಿಜವಾದ ಅರ್ಥ ಏನೇ ಇರಲಿ, ಭಕ್ತರು ತಮಗೆ ಬೇಕಾದ ಹಾಗೇ ಅರ್ಥೈಸಿಕೊಳ್ಳುತ್ತಿರುವುದಕ್ಕೂ ದಶಕಗಳ ಇತಿಹಾಸವಿದೆ. ಮುಂದೆ ಓದಿ..

ಕುರುಬ ಗೌಡ ಸಮುದಾಯದರು ಆರಾಧಿಸುವ ಶಿವನ ಸನ್ನಿಧಿ

ಕುರುಬ ಗೌಡ ಸಮುದಾಯದರು ಆರಾಧಿಸುವ ಶಿವನ ಸನ್ನಿಧಿ

ತುಂಗಭದ್ರಾ ನದಿ ತಟದಿಂದ ಎರಡು ಕಿ.ಮೀ ದೂರದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಕುರುಬ ಗೌಡ ಸಮುದಾಯದರು ಆರಾಧಿಸುವ ಈ ಶಿವನ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಕಾರ್ಣಿಕೋತ್ಸವ ಇತ್ತೀಚಿನ ದಿನಗಳಲ್ಲಂತೂ ಭಾರೀ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಒಂದೇ ವಾಕ್ಯದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ.

ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್

ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್

'ಆಕಾಶಕ್ಕೆ ಸಿಡಿಲು ಬಡಿತಲೇ ಪರಾಕ್' ಎಂದು ದೇವಸ್ಥಾನ ಆಡಳಿತ ಮಂಡಳಿ ಮೊದಲು ಪ್ರಕಟಿಸಿ, ನಂತರ ಮುಜರಾಯಿ ಇಲಾಖೆ 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್' ಎಂದು ಅಧಿಕೃತವಾಗಿ ಪ್ರಕಟಿಸಿತ್ತು. ಈ ಎಲ್ಲಾ ಗೊಂದಲಗಳ ನಡುವೆ, 'ಆಲದ ಗಿಡಕ್ಕೆ ಗಿಳಿ ಕುಕ್ಕಿತಲೇ ಪರಾಕ್' ಇದು ನಿಜವಾದ ಕಾರ್ಣಿಕ ವಾಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದ್ದರಿಂದ, ಬಳ್ಳಾರಿ ಡಿಸಿ ಅಧಿಕೃತ ಸ್ಪಷ್ಟನೆಗೆ ತಡೆನೀಡಿದ್ದರು.

ದುರಾಡಳಿತ ನಡೆಸುವವರು ಅಧಿಕಾರದಲ್ಲಿ ಕೂರುತ್ತಾರೆ

ದುರಾಡಳಿತ ನಡೆಸುವವರು ಅಧಿಕಾರದಲ್ಲಿ ಕೂರುತ್ತಾರೆ

ಭಕ್ತರು ತಮ್ಮತಮ್ಮ ವೃತ್ತಿಗೆ ಅನುಗುಣವಾಗಿ ಕಾರ್ಣಿಕವನ್ನು ಅರ್ಥೈಸಿಕೊಂಡು, ಪ್ರಸಕ್ತ ರಾಜ್ಯ ರಾಜಕೀಯದಲ್ಲಿ ನಿಯತ್ತು ಉಳಿದುಕೊಂಡಿಲ್ಲ. ಪ್ರಾಮಾಣಿಕ ರಾಜಕಾರಣಿಗಳಿಂದ ಅಧಿಕಾರವನ್ನು ಕಿತ್ತುಕೊಂಡು, ದುರಾಡಳಿತ ನಡೆಸುವವರು ಅಧಿಕಾರದಲ್ಲಿ ಕೂರುತ್ತಾರೆಂದು ಭಕ್ತರು ಚರ್ಚಿಸುತ್ತಿದ್ದರು. 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಎಂದು ಅಧಿಕೃತವಾಗಿ ಮುಜರಾಯಿ ಇಲಾಖೆ ಪ್ರಕಟಿಸಿತ್ತು

ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗುವುದಿಲ್ಲ

ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗುವುದಿಲ್ಲ

ಖುದ್ದು ಕಾರ್ಣಿಕ ನುಡಿಯುವ ಗೊರವಪ್ಪನೇ ಗೊಂದಲದಲ್ಲಿದ್ದ, ಹಾಗಾಗಿ ಅವನು ನುಡಿದ ದೈವವಾಣಿಯೂ ಗೊಂದಲದಿಂದ ಕೂಡಿದೆ. ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗುವುದಿಲ್ಲ, ಯಾರಿಗೆ ಅಧಿಕಾರ ಸಿಗುತ್ತದೆ ಎನ್ನುವ ಗೊಂದಲ ರಾಜ್ಯದ ಜನತೆಗೆ ಕಾಡಲಿದೆ ಎಂದೂ ಜಾತ್ರೆಯಲ್ಲಿ ವ್ಯಾಖ್ಯಾನಿಸಲಾಗುತ್ತಿತ್ತು.

ನಾಗಪಜ್ಜ ಉರ್ಮಿ ಕಾರ್ಣಿಕ ನುಡಿಯುವ ಪದ್ದತಿಯೂ ಇದೆ

ನಾಗಪಜ್ಜ ಉರ್ಮಿ ಕಾರ್ಣಿಕ ನುಡಿಯುವ ಪದ್ದತಿಯೂ ಇದೆ

ಹೂವಿನಹಡಗಲಿ ಮೈಲಾರ ಲಿಂಗೇಶ್ವರನ ಜಾತ್ರೆಯ ವೇಳೆಯಲ್ಲಿ ಗೊರವಯ್ಯ ನುಡಿಯುವ ಕಾರ್ಣಿಕದಂತೇ, ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮದ ಕರಿಯಾಲದಲ್ಲಿ ದಸರಾ ಪ್ರಯುಕ್ತ ನಾಗಪಜ್ಜ ಉರ್ಮಿ ಕಾರ್ಣಿಕ ನುಡಿಯುವ ಪದ್ದತಿಯೂ ಇದೆ.

English summary
What is the true meaning of Mylara Lingeshwara Annual Karnika seen by others? Mylara Lingeshwara temple in Hoovina Hadagali Tq in Bellary district of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X