ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳು ಏನಂದ್ರು?

|
Google Oneindia Kannada News

ಬೆಂಗಳೂರು, ಏಪ್ರಿಲ್ 21: ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಕೈಗೊಂಡಿರುವ ಮಕ್ಕಳಿಗ ತಾವೇ ನೇರವಾಗಿ ಫೋನ್ ಮಾಡಿ ಮಾತನಾಡುವ ದೈರ್ಯ ತುಂಬುವ ಕೆಲಸವನ್ನು ಮಂಗಳವಾರವೂ ಮುಂದುವರೆಸಿದರು.

Recommended Video

ಪಾದರಾಯನಪುರದಲ್ಲಿ ಸುಳ್ಳು ಸುದ್ದಿ ಹರಡಿಸಿದ್ದರು ಎಂದ ಯುವಕ | Padarayanapura | Oneindia Kannada

ತಮ್ಮ ಕಚೇರಿಯಲ್ಲಿ ಮಧ್ಯಾಹ್ನ ಮೈಸೂರು ವಿಭಾಗದ ಮೈಸೂರು, ಹಾಸನ, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು ಹಲವಾರು ವಿದ್ಯಾರ್ಥಿಗಳಿಗೆ ಕರೆ ಮಾಡಿ ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಿದ್ದೀರಿ, ಪರೀಕ್ಷೆ ಮಾಡಬೇಕೆ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಲ್ಲ ಮಕ್ಕಳು, ತಡವಾದ್ರೂ ಪರವಾಯಿಲ್ಲ ಪರೀಕ್ಷೆ ಮಾಡಲೇಬೇಕು ಎಂದು ಒತ್ತಾಯಿಸಿದರು.

ಮುಂಬೈನಲ್ಲಿ ಪತ್ರಕರ್ತರ ಮೇಲೆ ದಾಳಿ ಮಾಡಿದ ಕೊರೊನಾ!ಮುಂಬೈನಲ್ಲಿ ಪತ್ರಕರ್ತರ ಮೇಲೆ ದಾಳಿ ಮಾಡಿದ ಕೊರೊನಾ!

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆಗಳು ಮುಂದಕ್ಕೆ ಹೋಗಿದ್ದು, ಅಭ್ಯಾಸಕ್ಕೆ ಹೆಚ್ಚಿನ ಸಮಯ ದೊರೆತಿರುವುದು ಅನುಕೂಲವೇ ಆಗಿದೆ. ನಾವು ಪರೀಕ್ಷೆಗೆ ತಯಾರಾಗಿದ್ದೇವೆ ಎಂದು ಮಕ್ಕಳು ಶಿಕ್ಷಣ ಸಚಿವರೇ ಖುದ್ದಾಗಿ ಫೋನ್ ಮಾಡಿದಾಗ ಖುಷಿಯಿಂದಲೇ ಉತ್ತರಿಸಿದರು. ಸಚಿವರು ಮಕ್ಕಳ ತಂದೆ ತಾಯಿಯರೊಂದಿಗೂ ಮಾತನಾಡಿ, ಮಕ್ಕಳಿಗೆ ಧೈರ್ಯ ಹೇಳಿ, ಲಾಕ್ ಡೌನ್ ಮುಗಿದ ತಕ್ಷಣವೇ ಪರೀಕ್ಷೆ ಮಾಡುತ್ತೇವೆ ಎಂದರು.

What Is The Request Of SSLC Students For Education Minister Suresh Kumar

ಒಂದೆರೆಡು ದೂರದರ್ಶನ ಚಾನಲ್ ನಲ್ಲಿ ಎಸ್ ಎಸ್ ಎಲ್ ಸಿ ಪಠ್ಯದ ಪುನರಾವರ್ತನಾ ತರಗತಿಗಳು ನಡೆಯಲಿದ್ದು, ಅವುಗಳನ್ನು ಮಕ್ಕಳು ನೋಡಬೇಕೆಂದು ಸಚಿವರು ತಿಳಿಸಿದರು. ಚೆನ್ನಾಗಿ ಓದಿ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರಬೇಕೆಂದರು.

ಇದಲ್ಲದೇ ಬಾಗಲಕೋಟೆಯ ಇಳಕಲ್ ಕಂದಗಲ್ ನಇಬ್ಬರು, ಹೊನ್ನಾಳಿ ತಾಲೂಕು ಬೆನಕನಹಳ್ಳಿಯ ಮಕ್ಕಳೊಂದಿಗೂ ಸಚಿವರು ಮಾತನಾಡಿ ಧೈರ್ಯ ತುಂಬಿದರು. ಸಾರ್ ಕೊರೋನಾ ಸಾಧ್ಯವಾದಷ್ಟು ಬೇಗನೇ ಹೊರಟು ಹೋಗಲಿ ಎಂದು ನಾವೆಲ್ಲ ದಿನಂಪ್ರತಿ ಬೇಡಿಕೊಳ್ಳೋಣ ಎಂದು ವಿದ್ಯಾರ್ಥಿನಿಯೊಬ್ಬಳು ಸಚಿವರಿಗೆ ತಿಳಿಸಿದ್ದು ವಿಶೇಷವಾಗಿತ್ತು.

English summary
Education Minister Suresh Kumar Telephone Intraction With SSLC Students Ahead Of SSLC Exams. still exams postfoned due to lockdown. ಪ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X