ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರಕಿಹೊಳಿ ಸಾಹೇಬ್ರ, ನಿಮ್ಮ ಸಮಸ್ಯೆ ಏನಂತ ಬರೊಬ್ಬರಿ ಹೇಳ್ರೀಪಾ

|
Google Oneindia Kannada News

Recommended Video

ರಮೇಶ್ ಜಾರಕಿಹೊಳಿಗೆ ಅಸಲಿ ಸಮಸ್ಯೆ ಏನು ಎನ್ನುವುದು ಯಾರಿಗೂ ಅರ್ಥವಾಗ್ತಿಲ್ಲ | Oneindia Kannada

ಮುಜರಾಯಿ ಖಾತೆ ಕೊಟ್ಟಿದ್ರೆ ಒಂದು ಲೆಕ್ಕ, ಕ್ಯಾಬಿನೆಟ್ ಸಚಿವ ಸ್ಥಾನದಲ್ಲಿ ಉತ್ತಮ ಎನ್ನಬಹುದಾದ ಪೌರಾಡಳಿತ ಸಚಿವ ಸ್ಥಾನ ಕೊಟ್ಟಿದ್ದರೂ, ಬೆಳಗಾವಿ ಸಾಹುಕಾರನ ಅಸಮಾಧಾನ ಕಮ್ಮಿಯಾಗಿರಲಿಲ್ಲ. ಕೊನೆಗೆ, ಅದನ್ನೂ ಕಳ್ಕೊಂಡ್ರು. ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ರೆಬೆಲ್ ಆಗಿಯೇ ರಮೇಶ್ ಜಾರಕಿಹೊಳಿ ಉಳಿದುಕೊಂಡರು, ಹಾಗೇ ಮುಂದುವರಿಯುತ್ತಿದ್ದಾರೆ ಕೂಡಾ..

ಅವರಿಗೆ ಅದೇನು ಸಮಸ್ಯೆನೋ ಏನೋ? ಹೋಗಲಿ, ಇಂತದ್ದೇ ಸಚಿವ ಸ್ಥಾನ ಬೇಕು, ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ನನಗೆ ಕಣ್ಣಿದೆ, ಇಲ್ಲಾ.. ನೋಡ್ರೀ.. ನಾನು ಮೋದಿ ಅಭಿಮಾನಿ, ಹಾಗಾಗಿ ಬಿಜೆಪಿ ಮೇಲೆ ಜಾಸ್ತಿ ಪ್ರೀತಿ ಎನ್ನುವುದನ್ನಾದರೂ ಬಾಯಿಬಿಟ್ಟು ಹೇಳಿದ್ರೆ, ಕಾಂಗ್ರೆಸ್ ಅಥವಾ ಬಿಜೆಪಿಯವರು ಒಂದು ನಿರ್ಧಾರಕ್ಕೆ ಬರುತ್ತಿದ್ದರೋ ಏನೋ?

ಸ್ವಲ್ಪ ದಿನದಲ್ಲೇ ಒಳ್ಳೆಯ ಸುದ್ದಿ ಕೊಡ್ತೀನಿ ಎಂದ ರಮೇಶ್ ಜಾರಕಿಹೊಳಿಸ್ವಲ್ಪ ದಿನದಲ್ಲೇ ಒಳ್ಳೆಯ ಸುದ್ದಿ ಕೊಡ್ತೀನಿ ಎಂದ ರಮೇಶ್ ಜಾರಕಿಹೊಳಿ

ಎರಡೆರಡು ಬಾರಿ ಯಡಿಯೂರಪ್ಪನವರಿಗೆ ಆಪರೇಶನ್ ಕಮಲದ ಆಸೆಯನ್ನು ಹುಟ್ಟಿಸಿದವರು ಇವರೇ.. ಅದನ್ನೇ ಆಧಾರವಾಗಿಟ್ಟುಕೊಂಡು, ಬಿಜೆಪಿಯವರು ಸಮ್ಮಿಶ್ರ ಸರಕಾರ ಉರುಳಿಸಲು ಪ್ರಯತ್ನಿಸಿದ್ದೂ ಹೌದು. ಆದರೆ, ಎರಡೂ ಬಾರಿ, ಬಿಜೆಪಿ ಬಕ್ರಾ ಆಗಿದ್ದೂ ಹೌದು. ಅದಕ್ಕೆ, ಬಿಜೆಪಿ ಈ ಬಾರಿ ಹುಷಾರಾಗಿದೆ.

ಡಿಕೆಶಿ ಯಾವ ಲೆಕ್ಕ, ನಮ್ ರೇಂಜ್ ಏನಿದ್ರೂ ರಾಹುಲ್ ಗಾಂಧಿ: ಜಾರಕಿಹೊಳಿಡಿಕೆಶಿ ಯಾವ ಲೆಕ್ಕ, ನಮ್ ರೇಂಜ್ ಏನಿದ್ರೂ ರಾಹುಲ್ ಗಾಂಧಿ: ಜಾರಕಿಹೊಳಿ

ಒಂದು ಕಡೆ ರಾಜ್ಯ ಕಾಂಗ್ರೆಸ್ ಮುಖಂಡರ ವಿರುದ್ದ ವಾಗ್ದಾಳಿ ನಡೆಸುವ ರಮೇಶ್, ಇನ್ನೊಂದೆಡೆ ರಾಹುಲ್ ಗಾಂಧಿ ನನ್ನ ನಾಯಕ. ರಾಜೀನಾಮೆ ನೀಡುವುದರ ಬಗ್ಗೆ ಆವರ ಬಳಿಯೇ ಮಾತನಾಡುತ್ತೇನೆ ಎನ್ನುತ್ತಾರೆ. ಸದಾ ಗೊಂದಲದ ಹೇಳಿಕೆಯನ್ನು ನೀಡುವ ರಮೇಶ್ ಅವರ ಇದುವರೆಗಿನ ರಾಜಕೀಯ ಎರಡು ದೋಣಿಯ ಮೇಲಿನ ಪಯಣ ಎನ್ನುವುದಂತೂ ಸ್ಪಷ್ಟ.

ಕಾಂಗ್ರೆಸ್ ನಲ್ಲಿ ಹೋಗಲಿ, ಬಿಜೆಪಿಯವರೂ ನಂಬುವಂತಹ ಸ್ಥಿತಿಯಲ್ಲಿಲ್ಲ

ಕಾಂಗ್ರೆಸ್ ನಲ್ಲಿ ಹೋಗಲಿ, ಬಿಜೆಪಿಯವರೂ ನಂಬುವಂತಹ ಸ್ಥಿತಿಯಲ್ಲಿಲ್ಲ

ಇವರ ಇತ್ತೀಚಿನ ರಾಜಕೀಯ ನಡೆಗಳು ಕಾಂಗ್ರೆಸ್ ನಲ್ಲಿ ಹೋಗಲಿ, ಬಿಜೆಪಿಯವರೂ ನಂಬುವಂತಹ ಸ್ಥಿತಿಯಲ್ಲಿಲ್ಲ. ಲೋಕಸಭಾ ಚುನಾವಣೆಗೆ ಎರಡ್ಮೂರು ತಿಂಗಳ ಮುನ್ನ, ನಡೆದ ಬಜೆಟ್ ಅಧಿವೇಶನದಲ್ಲಿ, ರಮೇಶ್ ಜಾರಕಿಹೊಳಿ ಅತೃಪ್ತರನ್ನು ಒಗ್ಗೂಡಿಸಿ ಸರಕಾರ ಕೆಡವಲು ಇನ್ನೇನು ತಯಾರಾದರು ಎನ್ನುವಷ್ಟರಲ್ಲಿ ಮತ್ತೆ ಆಪರೇಶನ್ ಕಮಲ ವೈಫಲ್ಯ ಕಂಡಿತು. ಮುಂಬೈನಲ್ಲಿ ಯಾರ ಸಂಪರ್ಕಕ್ಕೂ ಸಿಗದೇ ಇದ್ದ ಜಾರಕಿಹೊಳಿ, ನಂತರ ಮಗಳ ಮದುವೆಗಾಗಿ ಮುಂಬೈನಲ್ಲಿದ್ದೆ. ನಾನ್ಯಾಕೆ ಸರಕಾರ ಬೀಳಿಸಲು ಹೋಗಲಿ ಎಂದು ಹೇಳಿ, ಮೊಸರನ್ನು ಯಡಿಯೂರಪ್ಪ ಮೂತಿಗೆ ಒರೆಸಿಬಿಟ್ಟರು.

ರಮೇಶ್ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್ - ಡಿ ಕೆ ಶಿವಕುಮಾರ್

ರಮೇಶ್ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್ - ಡಿ ಕೆ ಶಿವಕುಮಾರ್

ಪಿಎಲ್ಡಿ ಬ್ಯಾಂಕ್ ಚುನಾವಣೆಯ ವಿಚಾರದಲ್ಲೂ ರಮೇಶ್ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್ - ಡಿ ಕೆ ಶಿವಕುಮಾರ್ ನಡುವಿನ ಭಿನ್ನಮತ ಬೀದಿಗೆ ಬಂದಿತ್ತು. ಆಗಲೂ, ಸರಕಾರದ ಭವಿಷ್ಯ ತೂಗೊಯ್ಯಾಲೆಯಲ್ಲಿತ್ತು. ಕೊನೆಗೆ, ಸಿಎಂ ಕುಮಾರಸ್ವಾಮಿಯವರೇ ನೇರ ಅಖಾಡಕ್ಕೆ ಇಳಿದು, ಒಂದು ಹಂತಕ್ಕೆ ರಮೇಶ್ ಅವರನ್ನು ಸಮಾಧಾನ ಪಡಿಸಿದ್ದರು. ಆಗಲೂ ಸ್ವಲ್ಪದಿನ ಮಾತ್ರ ಸುಮ್ಮನಿದ್ದರು.

ಸಹೋದರರ ಆರೋಪ-ಪ್ರತ್ಯಾರೋಪ: ಇಂದೇ ರಮೇಶ್ ಜಾರಕಿಹೊಳಿ ರಾಜೀನಾಮೆ?ಸಹೋದರರ ಆರೋಪ-ಪ್ರತ್ಯಾರೋಪ: ಇಂದೇ ರಮೇಶ್ ಜಾರಕಿಹೊಳಿ ರಾಜೀನಾಮೆ?

ಸುರೇಶ್ ಅಂಗಡಿ ಪರವಾಗಿ ಬಹಿರಂಗವಾಗಿಯೇ ಮತಯಾಚನೆ

ಸುರೇಶ್ ಅಂಗಡಿ ಪರವಾಗಿ ಬಹಿರಂಗವಾಗಿಯೇ ಮತಯಾಚನೆ

ಮೊನ್ನೆಮೊನ್ನೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯೂ, ರಮೇಶ್ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಪರವಾಗಿ ಬಹಿರಂಗವಾಗಿಯೇ ಮತಯಾಚಿಸಿದ್ದರು. ಇದು ಬೆಳಗಾವಿ ಕಾಂಗ್ರೆಸ್ ನಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಆದರೆ, ಎರಡನೇ ಹಂತದ ಚುನಾವಣೆ ಮುಗಿಯಲಿ, ಆಮೇಲೆ ನೋಡೋಣ ಎಂದಿದ್ದ ರಾಜ್ಯ ಕಾಂಗ್ರೆಸ್ ಮುಖಂಡರಿಗೆ, ಮತ್ತೆ ರಮೇಶ್ ರಾಜೀನಾಮೆ ವಿಚಾರ ತಲೆನೋವಾಗಿ ಕೂತಿದೆ. ಕಾಂಗ್ರೆಸ್ ಮುಖಂಡರು 'ಡೋಂಟ್ ಕೇರ್' ಎಂದಿದ್ದರೂ, ರಮೇಶ್ ಒಬ್ಬ ಪ್ರಭಾವಿ ಮುಖಂಡ ಎನ್ನುವ ಸತ್ಯವೂ ಅವರಿಗೆ ಅರಿತಿದೆ.

ಜಾರಕಿಹೊಳಿ ಕುಟುಂಬದಲ್ಲಿ ಏನಾದರೂ ಸಮಸ್ಯೆಯಿದೆಯೋ

ಜಾರಕಿಹೊಳಿ ಕುಟುಂಬದಲ್ಲಿ ಏನಾದರೂ ಸಮಸ್ಯೆಯಿದೆಯೋ

ರಾಜ್ಯ ಕಾಂಗ್ರೆಸ್ಸಿಗರ ಮೇಲೆ ರಮೇಶ್ ಗೆ ಕೋಪವೋ ಅಥವಾ ಜಾರಕಿಹೊಳಿ ಕುಟುಂಬದಲ್ಲಿ ಏನಾದರೂ ಸಮಸ್ಯೆಯಿದೆಯೋ ಎನ್ನುವುದೂ ಚರ್ಚೆಯ ವಿಷಯವಾಗಿದೆ. ಕೆಲವೊಂದು ಮೂಲಗಳ ಪ್ರಕಾರ, ಗೋಕಾಕ್ ನಲ್ಲಿ (ರಮೇಶ್ ಪ್ರತಿನಿಧಿಸುವ ಕ್ಷೇತ್ರ) ಸಹೋದರ ಸತೀಶ್ ತನ್ನ ಇನ್ನೊಬ್ಬ ತಮ್ಮ ಲಖನ್ ಅವರನ್ನು ಬೆಳೆಸಲು ನೋಡುತ್ತಿರುವುದು ರಮೇಶ್ ಸಿಟ್ಟಿಗೆ ಕಾರಣ ಎನ್ನುವ ಮಾತಿದೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ಧಮ್ಕಿ: ಮೈತ್ರಿ ನಾಯಕರಿಂದ ಪ್ರತಿತಂತ್ರರಮೇಶ್ ಜಾರಕಿಹೊಳಿ ರಾಜೀನಾಮೆ ಧಮ್ಕಿ: ಮೈತ್ರಿ ನಾಯಕರಿಂದ ಪ್ರತಿತಂತ್ರ

ಆಪರೇಶನ್ ಕಮಲ ಹೇಗೆ ನಗೆಪಾಟಲಿಗೆ ಗುರಿಯಾಗಿತ್ತೋ, ಹಾಗೇ ಆಗುವುದಂತೂ ಸತ್ಯ

ಆಪರೇಶನ್ ಕಮಲ ಹೇಗೆ ನಗೆಪಾಟಲಿಗೆ ಗುರಿಯಾಗಿತ್ತೋ, ಹಾಗೇ ಆಗುವುದಂತೂ ಸತ್ಯ

ಕುಟುಂಬದಲ್ಲಿ ಸಮಸ್ಯೆಯೋ, ರಾಜ್ಯ ಕಾಂಗ್ರೆಸ್ ಮುಖಂಡರು ಇವರಿಗೆ ಆಗಿಬರುತ್ತಿಲ್ಲವೋ ಅಥವಾ ಧೃಢ ನಿರ್ಧಾರ ತೆಗೆದುಕೊಳ್ಳಲು ಅಶಕ್ತರೋ, ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಪರ್ವ, ಕಳೆದ ಬಾರಿ ಆಪರೇಶನ್ ಕಮಲ ಹೇಗೆ ನಗೆಪಾಟಲಿಗೆ ಗುರಿಯಾಗಿತ್ತೋ, ಹಾಗೇ ಆಗುವುದಂತೂ ಸತ್ಯ. ಕಾಂಗ್ರೆಸ್ಸಿನಲ್ಲೇ ಉಳಿಯೋದಾ ಅಥವಾ ಬಿಜೆಪಿಗೆ ಸೇರೋದಾ ಎನ್ನುವುದನ್ನು ರಮೇಶ್ ಬೇಗ ನಿರ್ಧರಿಸಬೇಕಿದೆ.

English summary
What is the reason behind Gokak Congress MLA and rebel leader Ramesh Jarkiholi with State Congress leaders or family crisis. Why Ramesh not able to take firm decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X