ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಯಂತ್ರ ಸರಿಯಿಲ್ಲವೆಂದು ಸುಳ್ಳು ಹೇಳಿದರೆ ಏನು ಶಿಕ್ಷೆ?

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಚುನಾವಣೆಗಳು ಬಂದಾಗೆಲ್ಲಾ ಮತಯಂತ್ರದ ಬಗೆಗಿನ ಅನುಮಾನಗಳು ಏಳುತ್ತವೆ. ಅದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಚಿತ್ರಗಳು ಹರಿದಾಡಿ, ಮತಯಂತ್ರದ ಬಗೆಗಿನ ಅಪನಂಬಿಕೆ ಹುಟ್ಟುವಂತೆ ಮಾಡುತ್ತವೆ. ಆದರೆ ನೆನಪಿರಲಿ ಈ ವರೆಗೆ ಯಾರೂ ಮತಯಂತ್ರವನ್ನು ಹ್ಯಾಕ್ ಮಾಡಬಹುದು ಎಂಬುದನ್ನು ಸಾಬೀತು ಮಾಡಿಲ್ಲ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ನಾಳೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮತಯಂತ್ರ ಸರಿಯಿಲ್ಲವೆಂದು ಹುಯಿಲೆಬ್ಬಿಸುವವರೂ ಇರುತ್ತಾರೆ. ಆದರೆ ಹೀಗೆ ಸುಳ್ಳು ಹೇಳಿದರೆ ಭಾರಿ ಶಿಕ್ಷೆ ಕಾದಿದೆ.

ಮತದಾರರೇ, ಮತದಾನಕ್ಕೂ ಮುನ್ನ EVM, VVPAT ಬಗ್ಗೆ ತಿಳಿದುಕೊಳ್ಳಿಮತದಾರರೇ, ಮತದಾನಕ್ಕೂ ಮುನ್ನ EVM, VVPAT ಬಗ್ಗೆ ತಿಳಿದುಕೊಳ್ಳಿ

ಮತಯಂತ್ರ ಸರಿಯಿಲ್ಲವೆಂದು ಮತಗಟ್ಟೆಯ ಅಧ್ಯಕ್ಷಾಧಿಕಾರಿ (ಪ್ರಿಸೈಡಿಂಗ್ ಆಫೀಸರ್) ಬಳಿ ದೂರು ನೀಡಿದರೆ, ದೂರು ದಾರರು ಫಾರಂ 49ma ಯನ್ನು ಸಹಿ ಮಾಡಿ ನೀಡಬೇಕಾಗುತ್ತದೆ. ಅದರನ್ವಯ ಮತ್ತೊಂದು ಮತದಾನಕ್ಕೆ ಅವಕಾಶ ನೀಡುತ್ತಾರಾದರೂ ಆ ಮತವನ್ನು ಬಹಿರಂಗವಾಗಿ ಚಲಾಯಿಸಬೇಕಾಗುತ್ತದೆ. ಹಾಗೊಂದು ವೇಳೆ ಮತವು ದೂರುದಾರ ಮತ ಹಾಕಿದ ಪಕ್ಷಕ್ಕೇ ಹೋದರೆ ಕೂಡಲೇ ಆತನನ್ನು ಪೊಲೀಸರು ಬಂಧಿಸುತ್ತಾರೆ.

ಮತಯಂತ್ರದ ಬಗ್ಗೆ ಸುಳ್ಳು ಹೇಳಿದರೆ ಶಿಕ್ಷೆಯೇನು?

ಮತಯಂತ್ರದ ಬಗ್ಗೆ ಸುಳ್ಳು ಹೇಳಿದರೆ ಶಿಕ್ಷೆಯೇನು?

ಮತಯಂತ್ರದ ಬಗ್ಗೆ ಸುಳ್ಳು ಆಪಾದನೆ ಮಾಡಿ, ಮತದಾನಕ್ಕೆ ಅಡ್ಡಿ ಮಾಡಿದ ಕಾರಣಕ್ಕೆ ಆತನಿಗೆ ಆರು ತಿಂಗಳು ಜೈಲು ಮತ್ತು ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಮತಯಂತ್ರದಲ್ಲಿ ದೋಷ ವಿದ್ದರೆ ಏನು ಮಾಡಬೇಕು?

ಮತಯಂತ್ರದಲ್ಲಿ ದೋಷ ವಿದ್ದರೆ ಏನು ಮಾಡಬೇಕು?

ಒಂದು ವೇಳೆ ನಿಜವಾಗಿಯೂ ಮತದಾರ ಹಾಕಿದ ಮತ ಬೇರೆ ಪಕ್ಷಕ್ಕೆ ಹೋಗಿರುವುದು ವಿವಿ-ಪ್ಯಾಟ್‌ನಲ್ಲಿ ಕಾಣಿಸಿದರೆ. ಕೂಡಲೇ ಪ್ರಿಸೈಡಿಂಗ್ ಆಫೀಸರ್‌ಗೆ ದೂರು ನೀಡಬೇಕಾಗುತ್ತದೆ. ಅವರು ನೀಡುವ ಫಾರಂ 41MA ಗೆ ಸಹಿ ಮಾಡಿ, ಪ್ರಿಸೈಡಿಂಗ್ ಅಧಿಕಾರಿ, ಬೂತ್ ಏಜೆಂಟ್‌ಗಳು ಪೊಲೀಸರ ಮುಂದೆಯೇ ತನಗೆ ಬೇಕಾದ ವ್ಯಕ್ತಿಗೆ ಮತ ಚಲಾಯಿಸಬೇಕಾಗುತ್ತದೆ. ಹೀಗೆ ಮತಚಲಾಯಿಸುವ ಮುನ್ನಾ ದೂರುದಾರನು ತಾನು ಯಾವ ಅಭ್ಯರ್ಥಿಗೆ ಮತಚಲಾಯಿಸುತ್ತಿದ್ದೇನೆ ಎಂದು ಬರೆದುಕೊಡಬೇಕಾಗುತ್ತದೆ.

‌VVPAT ಹೇಗೆ ಕೆಲಸಮಾಡುತ್ತದೆ? ಮತದಾನಕ್ಕೂ ಮುನ್ನ ಒಂದಷ್ಟು ಮಾಹಿತಿ ‌VVPAT ಹೇಗೆ ಕೆಲಸಮಾಡುತ್ತದೆ? ಮತದಾನಕ್ಕೂ ಮುನ್ನ ಒಂದಷ್ಟು ಮಾಹಿತಿ

ಮತಯಂತ್ರ ತಪ್ಪಾದರೆ ಮತದಾನ ಸ್ಥಗಿತ

ಮತಯಂತ್ರ ತಪ್ಪಾದರೆ ಮತದಾನ ಸ್ಥಗಿತ

ಪ್ರಿಸೈಡಿಂಗ್ ಆಫೀಸರ್ ಎದುರು ಚಲಾಯಿಸಿದ ಮತವು ತಪ್ಪು ಅಭ್ಯರ್ಥಿಗೆ ಹೋದರೆ ಕೂಡಲೇ ಮತದಾನವನ್ನು ನಿಲ್ಲಿಸಲಾಗುತ್ತದೆ. ಮತದಾನದ ಆರಂಭದಲ್ಲಿಯೇ ಈ ತಪ್ಪು ಕಂಡು ಬಂದರೆ ಮತಯಂತ್ರವನ್ನು ಸರಿಮಾಡಿದ ನಂತರ ಮತಚಲಾವಣೆ ನಡೆಯುತ್ತದೆ.

ನಾಳೆ 2 ನೇ ಹಂತದ ಮತದಾನ, ಕರ್ನಾಟಕವೂ ರೆಡಿ: ತಿಳಿಯಬೇಕಾದ ಕೆಲ ಸಂಗತಿ ನಾಳೆ 2 ನೇ ಹಂತದ ಮತದಾನ, ಕರ್ನಾಟಕವೂ ರೆಡಿ: ತಿಳಿಯಬೇಕಾದ ಕೆಲ ಸಂಗತಿ

ಮತಯಂತ್ರ ಹಲವು ಪರೀಕ್ಷೆಗಳನ್ನು ದಾಟಿರುತ್ತದೆ

ಮತಯಂತ್ರ ಹಲವು ಪರೀಕ್ಷೆಗಳನ್ನು ದಾಟಿರುತ್ತದೆ

ಮತಯಂತ್ರವನ್ನು ಮತಗಟ್ಟೆ ಅಧಿಕಾರಿಗಳು ಹಲವು ರೀತಿಯ ಪರೀಕ್ಷೆಗಳಿಗೆ ಒಳಪಡಿಸಿರುತ್ತಾರೆ. ಮತಗಟ್ಟೆಗೆ ಯಂತ್ರಗಳು ಬರುವ ಮುನ್ನಾ ಸಹ ಹಲವು ರೀತಿಯ ಪರೀಕ್ಷೆಗಳಿಗೆ ಒಳಪಟ್ಟೇ ಬಂದಿರುತ್ತದೆ. ಹಾಗಾಗಿ ಮತಯಂತ್ರವು ತಪ್ಪಾಗುವುದು ಅಪರೂಪ. ಹಾಗೆಂದು ಮತಯಂತ್ರದಲ್ಲಿ ದೋಷ ಇರುವುದೇ ಇಲ್ಲವೆಂದು ಹೇಳುವ ಹಾಗೂ ಇಲ್ಲ, ಕೆಲವೊಮ್ಮೆ ತಾಂತ್ರಿಕ ದೋಷದಿಂದಲೂ ಹೀಗೆ ಆಗುತ್ತದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿ

English summary
There is a punishment for lying about voting machine. If some voter complaint about voting machine then he should prove it there only, if he fails he should face the punishment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X