ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿಯನ್ನು ತಿಹಾರ್ ಜೈಲಿನಲ್ಲಿ ಭೇಟಿ ಮಾಡಿ ಸೋನಿಯಾ ಗಾಂಧಿ ಸಾರಿದ ಸಂದೇಶ

|
Google Oneindia Kannada News

ಬೆಂಗಳೂರು, ಅ 26: ಮನಿಲಾಂಡ್ರಿಂಗ್ ಕೇಸ್ ನಲ್ಲಿ ಬೇಲ್ ಮೇಲೆ ಹೊರಗೆ ಬಂದಿರುವ, ಡಿ.ಕೆ.ಶಿವಕುಮಾರ್ ಅವರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ, ಅಭೂತಪೂರ್ವ ಸ್ವಾಗತ ಸಿಕ್ಕಿದೆ.

"ನನ್ನ ಪಕ್ಷದ ಕಚೇರಿ, ದೇವಾಲಯವಿದ್ದಂತೆ" ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮವರೊಂದಿಗೆ ಮಾತನಾಡುತ್ತಾ ಡಿಕೆಶಿ ಹೇಳಿದರು. ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಗುಡುಗಿದ ಡಿಕೆಶಿ ಕೆಪಿಸಿಸಿ ಕಚೇರಿಯಲ್ಲಿ ಗುಡುಗಿದ ಡಿಕೆಶಿ

ಬಿಜೆಪಿಯವರು ಆಡಳಿತ ಯಂತ್ರವನ್ನು ಹೇಗೆ ದುರುಪಯೋಗ ಪಡಿಸಿಕೊಂಡರು ಎನ್ನುವುದರ ಬಗ್ಗೆ ವಿವರಿಸುತ್ತಾ ದಿನೇಶ್, "ಡಿ.ಕೆ.ಶಿವಕುಮಾರ್ ಅವರು ತನಿಖೆಯ ಎಲ್ಲಾ ಹಂತದಲ್ಲಿ ಪೂರ್ಣವಾಗಿ ಸಹಕರಿಸಿದರು" ಎಂದು ಹೇಳಿದರು.

ದಿನೇಶ್ ಗುಂಡೂರಾವ್ ಮತ್ತು ಡಿಕೆಶಿ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ತಿಹಾರ್ ಜೈಲಿಗೆ ಬಂದು ಭೇಟಿ ನೀಡಿದ್ದನ್ನು, ಶ್ಲಾಘನೀಯ ಎಂದು ವಿವರಿಸಿದರು.

ಇದುವರೆಗೆ ಬೆಳೆದು ಬಂದ ರೀತಿಯನ್ನು ಸ್ಮರಿಸಿಕೊಂಡ ಡಿಕೆಶಿ

ಇದುವರೆಗೆ ಬೆಳೆದು ಬಂದ ರೀತಿಯನ್ನು ಸ್ಮರಿಸಿಕೊಂಡ ಡಿಕೆಶಿ

ವಿದ್ಯಾರ್ಥಿ ಹಂತದಿಂದ ಇದುವರೆಗೆ ಬೆಳೆದು ಬಂದ ರೀತಿಯನ್ನು ಡಿಕೆಶಿ ವಿವರಿಸುತ್ತಾ, "ಗುಂಡೂರಾವ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ನನಗೆ ಬಹಳ ಸಹಾಯ ಮಾಡಿದರು. ದಿನೇಶ್ ಹುಟ್ಟಿದ್ದು ಸಾತನೂರಿನಲ್ಲಿ. ಕೆ.ಜೆ.ಜಾರ್ಜ್, ಗುಂಡೂರಾವ್, ಖರ್ಗೆ, ಸಿದ್ದರಾಮಯ್ಯ ಮುಂತಾದವರ ಸಹಾಯವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ" ಎಂದು ಡಿಕೆಶಿ ಹೇಳಿದರು.

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್ ಮಾತನಾಡುತ್ತಾ, "ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ, ತಿಹಾರ್ ಜೈಲಿನಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಇದು ಇಡೀ ದೇಶಕ್ಕೆ ಅವರು ನೀಡಿದ ಸಂದೇಶ. ಅವರ ಈ ನಡೆ ಶ್ಲಾಘನೀಯ" ಎಂದು ದಿನೇಶ್ ಹೇಳಿದರು.

ಸೋನಿಯಾ ಭೇಟಿಯಾದ ಬಗ್ಗೆ ವಿವರಣೆ ನೀಡುತ್ತಾ ಡಿಕೆಶಿ

ಸೋನಿಯಾ ಭೇಟಿಯಾದ ಬಗ್ಗೆ ವಿವರಣೆ ನೀಡುತ್ತಾ ಡಿಕೆಶಿ

ಸೋನಿಯಾ ಭೇಟಿಯಾದ ಬಗ್ಗೆ ವಿವರಣೆ ನೀಡುತ್ತಾ ಡಿಕೆಶಿ, "ತಿಹಾರ್ ಜೈಲಿನಲ್ಲಿ ಮೇಡಂ ಅವರು ನನ್ನನ್ನು ಭೇಟಿಯಾದರು. ಸುಮಾರು ನಲವತ್ತು ನಿಮಿಷ ನನ್ನ ಜೊತೆ ಚರ್ಚೆ ನಡೆಸಿದರು. ಈ ಮೂಲಕ, ದೇಶದ ಇಡೀ ಕಾಂಗ್ರೆಸ್ ಕಾರ್ಯಕರ್ತರಿಗೆ ಸೋನಿಯಾ ಮೇಡಂ ಕಳುಹಿಸಿದ ಸಂದೇಶ ಏನಂದರೆ, ಕಷ್ಟದ ಸಮಯದಲ್ಲಿ ಕೈಬಿಡುವುದಿಲ್ಲ" ಎಂದು ಡಿಕೆಶಿ ಹೇಳಿದರು.

ತಿಹಾರ್ ಜೈಲಿನಲ್ಲಿ ಚರ್ಚೆಯ ವೇಳೆ ಸೋನಿಯಾ ನನಗೆ ಬಲ, ಧೈರ್ಯ ತುಂಬಿದರು

ತಿಹಾರ್ ಜೈಲಿನಲ್ಲಿ ಚರ್ಚೆಯ ವೇಳೆ ಸೋನಿಯಾ ನನಗೆ ಬಲ, ಧೈರ್ಯ ತುಂಬಿದರು

"ನನ್ನ ಜೊತೆ ತಿಹಾರ್ ಜೈಲಿನಲ್ಲಿ ಚರ್ಚೆಯ ವೇಳೆ ಸೋನಿಯಾ ನನಗೆ ಬಲ, ಧೈರ್ಯ ತುಂಬಿದರು. ನಿಮ್ಮ ಈ ಕಷ್ಟದ ಸಮಯದಲ್ಲಿ ಪಕ್ಷ ನಿಮ್ಮ ಜೊತೆ ನಿಲ್ಲುತ್ತದೆ. ಎಲ್ಲಾ ರೀತಿಯ ಸಹಕಾರ ನಿಮಗೆ ಸಿಗಲಿದೆ" ಎನ್ನುವ ಭರವಸೆಯನ್ನು ಸೋನಿಯಾ ನೀಡಿದರು.

ಸಾದಹಳ್ಳಿ ಗೇಟ್‌ನಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್

ಸಾದಹಳ್ಳಿ ಗೇಟ್‌ನಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್

ವಿಮಾನ ನಿಲ್ದಾಣದಿಂದ, ಕೆಪಿಸಿಸಿ ಕಚೇರಿಯ ದಾರಿಯಲ್ಲಿ, ಸಾದಹಳ್ಳಿ ಗೇಟ್‌ನಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್, "ಇದು ಅಂತ್ಯ ಅಲ್ಲ, ಅಂತ್ಯ ಅಲ್ಲ... ಆರಂಭ,'' ಎನ್ನುವ ಮೂಲಕ ಜೈಲುವಾಸದ ನಂತರವೂ ತಮ್ಮ ಖದರ್ ಕಡಿಮೆಯಾಗಿಲ್ಲ ಎಂಬುದನ್ನು ಬಿಡಿಸಿಟ್ಟರು.

English summary
What Is The Message AICC Interim President Sonia Gandhi Given By Meeting DK Shivakumar At Tihar Jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X