ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲ ಹುದ್ದೆ ಬೇಡ ಎನ್ನುವ ಯಡಿಯೂರಪ್ಪ ಮಾತಿನ ಹಿಂದಿನ ಒಳಸುಳಿವು

|
Google Oneindia Kannada News

ರಾಜಕಾರಣದಲ್ಲಿ ಸಾಧಿಸಲು ಹೊರಟವನಿಗೆ ವಯಸ್ಸು ನಗಣ್ಯ, ಛಲ ಮುಖ್ಯ ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಋಜುವಾತು ಪಡಿಸಿದ್ದಾರೆ. ಅದಕ್ಕೆ, 76ರ ವಯಸ್ಸಿನಲ್ಲೂ, ಎಚ್.ಡಿ.ಕುಮಾರಸ್ವಾಮಿಯವರ ಸರಕಾರವನ್ನು ಬುಡಮೇಲು ಮಾಡಿ ಅಧಿಕಾರಕ್ಕೆ ಬಂದಿದ್ದು ಉದಾಹರಣೆಯಾಗಬಲ್ಲದು.

ಮುಖ್ಯಮಂತ್ರಿಯಾಗಿ ಅವಧಿ ಪೂರೈಸುವ ಎಲ್ಲಾ ಶಕ್ತಿ, ಇಚ್ಚಾಶಕ್ತಿ ಯಡಿಯೂರಪ್ಪನವರಿಗೆ ಇದ್ದರೂ, ಬಿಜೆಪಿಯ ಸಿದ್ದಾಂತ ಇದಕ್ಕೆ ಅವಕಾಶವನ್ನು ಮಾಡಿಕೊಡಲಿಲ್ಲ. ವರಿಷ್ಠರ ಒತ್ತಡವಿರಲಿಲ್ಲ ಎಂದು ಯಡಿಯೂರಪ್ಪನವರು ಹೇಳಿದ್ದರೂ, ಅವರ ವಿದಾಯ ಭಾಷಣದ ವೇಳೆಯ ಕಣ್ಣೀರು, ಬೇರೊಂದು ಕಥೆಯನ್ನು ಹೇಳುತ್ತಿತ್ತು.

ಈಗ ತಾನೇ ಸಿಎಂ ಆಗಿದ್ದಾರೆ, ಅಶುಭ ನುಡಿಯಲಾರೆ: ಕೋಡಿಶ್ರೀಗಳ ಭವಿಷ್ಯದ ಅರ್ಥವೇನು?ಈಗ ತಾನೇ ಸಿಎಂ ಆಗಿದ್ದಾರೆ, ಅಶುಭ ನುಡಿಯಲಾರೆ: ಕೋಡಿಶ್ರೀಗಳ ಭವಿಷ್ಯದ ಅರ್ಥವೇನು?

ಅಧಿಕಾರಕ್ಕೆ ಬಂದ ಆರಂಭದ ದಿನದಿಂದಲೂ ಪ್ರತೀದಿನ ಅಗ್ನಿಪರೀಕ್ಷೆ, ಎರಡು ತಿಂಗಳು ಸಂಪುಟ ರಚನೆ ಮಾಡಲು ಹೈಕಮಾಂಡ್ ಅನುಮತಿಯನ್ನು ನೀಡಿರಲಿಲ್ಲ ಎನ್ನುವುದು ಬಿಎಸ್ವೈ ಅವರ ಮಾತಾಗಿತ್ತು. ಆದರೂ, ಹೋದ ವರ್ಷದ ಅತಿವೃಷ್ಟಿಯ ಆ ವೇಳೆ ಅವರು ನಡೆಸಿದ ರಾಜ್ಯಭಾರವನ್ನು ಅವರು ರಾಜೀನಾಮೆ ನೀಡಿದ ನಂತರ ಅವರ ವಿರೋಧಿಗಳು ಸ್ಮರಿಸಿಕೊಂಡಿದ್ದು ಗೊತ್ತೇ ಇದೆ.

ಮುಂದಿನ ಅವಧಿಯನ್ನು ಪೂರ್ಣಗೊಳಿಸಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಮುಂದಿನ ಗುರಿ ಎಂದು ಯಡಿಯೂರಪ್ಪ ಅತ್ಯಂತ ಸ್ಪಷ್ಟವಾಗಿ ಸಾರಿದ್ದಾರೆ. ಆದರೆ, ಬಿಎಸ್ವೈ ಅವರ ಈ ಸೇವೆ, ಬಿಜೆಪಿಗೆ ಬೇಕಾಗಿಲ್ಲ ಎನ್ನುವುದು ಬಿಜೆಪಿ ವರಿಷ್ಠರು ಅವರಿಗೆ ನೀಡಿದ ಆಫರ್‌ನಿಂದ ಸ್ಪಷ್ಟವಾಗುತ್ತೆ.

 ಸಂಪುಟ ವಿಸ್ತರಣೆ: ಮತ್ತೆ ತಮ್ಮ ಪಟ್ಟು ಸ್ಪಷ್ಟ ಪಡಿಸಿದ ಯಡಿಯೂರಪ್ಪ? ಸಂಪುಟ ವಿಸ್ತರಣೆ: ಮತ್ತೆ ತಮ್ಮ ಪಟ್ಟು ಸ್ಪಷ್ಟ ಪಡಿಸಿದ ಯಡಿಯೂರಪ್ಪ?

 ಬಿಎಸ್ವೈ ರಾಜೀನಾಮೆ ನೀಡಿದ ನಂತರ ಮತ್ತೆ ಮುನ್ನಲೆಗೆ ಬಂದಿದ್ದು, ಅದಕ್ಕೆ ಅವರು ಕೊಟ್ಟ ಸ್ಪಷ್ಟನೆ

ಬಿಎಸ್ವೈ ರಾಜೀನಾಮೆ ನೀಡಿದ ನಂತರ ಮತ್ತೆ ಮುನ್ನಲೆಗೆ ಬಂದಿದ್ದು, ಅದಕ್ಕೆ ಅವರು ಕೊಟ್ಟ ಸ್ಪಷ್ಟನೆ

ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿ, ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿ ಎನ್ನುವ ಆಫರ್ ಯಡಿಯೂರಪ್ಪನವರಿಗೆ, ಬಿಜೆಪಿ ಹೈಕಮಾಂಡ್ ಬಹಳ ಹಿಂದೆನೇ ನೀಡಿತ್ತು ಎನ್ನುವುದು ಮುಚ್ಚಿಡುವ ವಿಚಾರವೇನೂ ಅಲ್ಲ. ಆದರೆ, ಇದಕ್ಕೆ ಯಡಿಯೂರಪ್ಪನವರು ನೋ ಎಂದಿದ್ದೂ ಗೊತ್ತಿರುವ ವಿಚಾರ. ಇದು, ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ಮತ್ತೆ ಮುನ್ನಲೆಗೆ ಬಂದಿದ್ದು, ಅದಕ್ಕೆ ಅವರು ಕೊಟ್ಟ ಸ್ಪಷ್ಟನೆ ಈಗ ಚರ್ಚೆಯ ವಸ್ತುವಾಗಿದೆ.

 ನನಗೆ ಯಾವುದೇ ಹುದ್ದೆ ಬೇಡ, ರಾಜ್ಯಾದ್ಯಂತ ಪಕ್ಷವನ್ನು ಬಲ ಪಡಿಸಲು ರಾಜ್ಯ ಪ್ರವಾಸ ಮಾಡಲಿದ್ದೇನೆ

ನನಗೆ ಯಾವುದೇ ಹುದ್ದೆ ಬೇಡ, ರಾಜ್ಯಾದ್ಯಂತ ಪಕ್ಷವನ್ನು ಬಲ ಪಡಿಸಲು ರಾಜ್ಯ ಪ್ರವಾಸ ಮಾಡಲಿದ್ದೇನೆ

"ನನಗೆ ಯಾವುದೇ ಹುದ್ದೆ ಬೇಡ, ರಾಜ್ಯಾದ್ಯಂತ ಪಕ್ಷವನ್ನು ಬಲ ಪಡಿಸಲು ರಾಜ್ಯ ಪ್ರವಾಸವನ್ನು ಮಾಡಲಿದ್ದೇನೆ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ" ಎಂದು ಸಾರಿರುವ ಯಡಿಯೂರಪ್ಪನವರ ಉದ್ದೇಶ ಏನು ಎನ್ನುವುದೇ ಬಿಜೆಪಿ ಹೈಕಮಾಂಡಿಗೆ ಪ್ರಶ್ನೆಯಾಗಿದೆ. ಯಡಿಯೂರಪ್ಪನವರು, ಕರ್ನಾಟಕ ಬಿಜೆಪಿಯಲ್ಲಿ ಮೂಗು ತೂರಿಸುವುದು ವರಿಷ್ಠರಿಗೆ ಇಷ್ಟವಿಲ್ಲ ಎನ್ನುವುದು ಅವರಿಗೆ ಮನದಟ್ಟು ಮಾಡುವುದು ಹೇಗೆ ಎನ್ನುವುದು ಮೋದಿ/ಶಾ/ನಡ್ಡಾಗೂ ಪ್ರಶ್ನೆಯಾಗಿ ಉಳಿದಿದೆ.

 ಯಡಿಯೂರಪ್ಪನವರ ಸೇವೆಯನ್ನು ವರ್ಣಿಸಲು ಪದಗಳು ಸಾಲದು ಎಂದ ಮೋದಿ

ಯಡಿಯೂರಪ್ಪನವರ ಸೇವೆಯನ್ನು ವರ್ಣಿಸಲು ಪದಗಳು ಸಾಲದು ಎಂದ ಮೋದಿ

ಸಿಎಂ ಬಸವರಾಜ ಬೊಮ್ಮಾಯಿಯವರು ಪ್ರಧಾನಿ ಮೋದಿಯವರನ್ನು ಭೇಟಿಯಾದ ವೇಳೆ ಮತ್ತೆ ಬಿಎಸ್ವೈ ಗುಣಗಾನ ಮಾಡಿದ್ದಾರೆ. ಇದರ ಮೊದಲು ಕೂಡಾ, ಯಡಿಯೂರಪ್ಪನವರ ಸೇವೆಯನ್ನು ವರ್ಣಿಸಲು ಪದಗಳು ಸಾಲದು ಎಂದು ಮೋದಿ ಹೇಳಿದ್ದರು. ಆದರೆ, ಈ ಎಲ್ಲಾ ಮಾತಿನ ಹಿಂದೆ, ವಯಸ್ಸಾಗಿದೆ, ರಾಜ್ಯಪಾಲರ ಹುದ್ದೆಯನ್ನು ಕೊಡುತ್ತೇವೆ, ಕರ್ನಾಟಕ ರಾಜಕೀಯದ ತಲೆಕೆಡೆಸಿಕೊಳ್ಳಬೇಡಿ ಎನ್ನುವ ಸಂದೇಶವಿತ್ತು. ಆದರೆ, ರಾಜಾಹುಲಿ ಇದಕ್ಕೆ ಒಪ್ಪಿಕೊಳ್ಳಲಿಲ್ಲ ಎನ್ನುವ ಮಾಹಿತಿಯಿದೆ.

 ರಾಜ್ಯಪಾಲ ಹುದ್ದೆ ಬೇಡ ಎನ್ನುವ ಯಡಿಯೂರಪ್ಪ ಮಾತಿನ ಹಿಂದಿನ ಒಳಸುಳಿವು

ರಾಜ್ಯಪಾಲ ಹುದ್ದೆ ಬೇಡ ಎನ್ನುವ ಯಡಿಯೂರಪ್ಪ ಮಾತಿನ ಹಿಂದಿನ ಒಳಸುಳಿವು

ಎರಡು ದಿನಗಳ ಹಿಂದೆ, ಪಕ್ಷದ ಮಾತೃ ಸಂಘಟನೆಯ ಕಚೇರಿಗೆ ಬಿಎಸ್ವೈ ಆಗಮಿಸಿದ್ದರು. ಅಲ್ಲೂ, ರಾಜ್ಯ ಬಿಟ್ಟು ಹೋಗಲಾರೆ ಎನ್ನುವ ಖಡಕ್ ಸಂದೇಶವನ್ನು ಅವರು ರವಾನಿಸಿದ್ದಾರೆ. ರಾಜ್ಯಪಾಲರಾದರೆ, ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯರಾಗಿರಲು ಸಾಧ್ಯವಿಲ್ಲ ಎನ್ನುವುದು ಬಿಎಸ್ವೈಗೆ ಗೊತ್ತಿರದ ವಿಚಾರ ಏನೂ ಅಲ್ಲ.

ಒಟ್ಟಿನಲ್ಲಿ, ಒಂದಂತೂ ಸತ್ಯ, ನೇರವಾಗಿ ಯಡಿಯೂರಪ್ಪನವರನ್ನು ಎದುರು ಹಾಕಿಕೊಳ್ಳಲು ಬಿಜೆಪಿ ಹೈಕಮಾಂಡ್ ಅಸಮರ್ಥವಾಗಿದೆ. ಯಾಕೆಂದರೆ, ಅವರು ಜನನಾಯಕರ ಸಾಲಿಗೆ ಸೇರಿದ ರಾಜಕಾರಿಣಿ ಎನ್ನುವುದು ಅವರಿಗೂ ಗೊತ್ತಿರುವ ವಿಚಾರ.

Recommended Video

ಯುದ್ಧದಲ್ಲಿ ಸೈನಿಕ ಸಾವನ್ನಪ್ಪಿದ್ರೆ ಆ ಕುಟುಂಬಕ್ಕೆ ಸರ್ಕಾರ ಕೊಡುವ ನೆರವು ಎಂಥದ್ದು? | Oneindia Kannada

English summary
After resigning to CM post BS Yediyurappa rejected Governor post offer from BJP high command, here is the hidden reason behind that. Read on ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X