ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು 'ಮಹಾ' ಮುಖಭಂಗದ ಸುದೀರ್ಘ ಕತೆ: ಏನಿದು ಉಭಯ ರಾಜ್ಯಗಳ ಗಡಿ ವಿವಾದ?

|
Google Oneindia Kannada News

ಬೆಂಗಳೂರು, ಜ. 19: ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು, ತನ್ನ ಸಿದ್ದಾಂತಕ್ಕೂ ತೀಲಾಂಜಲಿಯನ್ನಿಟ್ಟು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿರುವ ಶಿವಸೇನೆ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಸೇನೆ ಮುಖ್ಯಸ್ಥ, ಮಹಾರಾಷ್ಟ್ರದ ಹಾಲಿ ಸಿಎಂ ಉದ್ಧವ್ ಠಾಕ್ರೆ ಅವರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಎರಡನೇ ಬಾರಿ ಆಗ್ರಹಿಸಿದ್ದಾರೆ.

ತನ್ನ ಸೈದ್ದಾಂತಿಕ ವಿರೋಧಿ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿಕೊಂಡು ಸರ್ಕಾರ ರಚನೆ ಬಳಿಕ ಮಹಾರಾಷ್ಟ್ರದಲ್ಲಿ ಶಿವಸೇನೆಯ ಆರ್ಭಟ ಕಡಿಮೆಯಾಗಿದೆ. ಹಾಗೆಯೇ ಅಲ್ಲಿ ಜನ ಬೆಂಬಲವನ್ನೂ ಶಿವಸೇನೆ ಕಳೆದುಕೊಳ್ಳುತ್ತಿದೆ. ಹೀಗಾಗಿ ಕರ್ನಾಟಕದೊಂದಿಗಿನ ಗಡಿ ಜಗಳವನ್ನು ಆಗಾಗ ಪ್ರಸ್ತಾಪಿಸುವ ಮೂಲಕ ಮಹಾರಾಷ್ಟ್ರದ ಜನರ ಗಮನವನ್ನು ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜನರ ಗಮನವನ್ನು ಸೆಳಯುವಲ್ಲಿ ಉದ್ಧವ್ ಠಾಕ್ರೆ ಅವರು ಸಂಪೂರ್ಣ ಸಫಲರಾಗದಿದ್ದರೂ ಗಡಿ ಕಿಡಿಯಲ್ಲಿ ತಮ್ಮ ಸರ್ಕಾರವನ್ನು ರಕ್ಷಣೆ ಮಾಡಿಕೊಳ್ಳುತ್ತಿರುವುದಂತೂ ನಿಜ.

ಗಡಿ ತಂಟೆಗೆ ಬಂದರೆ ಎಚ್ಚರ: ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ ಶಾಸಕಿ ರೂಪಾಲಿ ಗಡಿ ತಂಟೆಗೆ ಬಂದರೆ ಎಚ್ಚರ: ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ ಶಾಸಕಿ ರೂಪಾಲಿ

ಬಿಜೆಪಿಯೊಂದಿಗಿನ ತನ್ನ ಮೈತ್ರಿಯನ್ನು ಮುರಿದುಕೊಳ್ಳುವ ಮೂಲಕ ಹಿಂದುತ್ವದ ಬಗ್ಗೆ ಮಾತನಾಡುವ ಅಧಿಕಾರ ಕಳೆದುಕೊಂಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು, ಕರ್ನಾಟಕದೊಂದಿಗಿನ ಗಡಿ ತಂಟೆಯನ್ನು ಪ್ರಸ್ತಾಪಿಸುವ ಮೂಲಕ ಮರಾಠಿಗರ ಮೇಲೆ ಭಾವನಾತ್ಮಕವಾಗಿ ಪರಿಣಾಮ ಬೀರಲು ಪ್ರಯತ್ನ ನಡೆಸಿದ್ದಾರೆ. ಒಂದೊಮ್ಮೆ ಉಪ ಚುನಾವಣೆ ಎದುರಿಸಬೇಕಾಗಿ ಬಂದಲ್ಲಿ ಇಂತಹ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುವುದು ಶಿವಸೇನೆಯ ಉದ್ಧೇಶ.

ಕಳೆದ ಭಾನುವಾರ (ಜ.17) ಮರಾಠ ಹುತಾತ್ಮರ ದಿನದಂದು ವಿವಾದದ ಟ್ವೀಟ್ ಮಾಡಿರುವ ಸಿಎಂ ಉದ್ಧವ್ ಠಾಕ್ರೆ ಅವರು, ಮರಾಠಿ ಭಾಷಿಕರು ಬಹುಸಂಖ್ಯಾತರಾಗಿರುವ ಕರ್ನಾಟಕದ ಬೆಳಗಾವಿ ಹಾಗೂ ಇತರ ಪ್ರದೇಶಗಳು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು. ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆ ಕರ್ನಾಟಕಕ್ಕೆ ಸೇರ್ಪಡೆಯಾಗಿರುವ ಪ್ರದೇಶಗಳನ್ನು ಮರಳಿ ಪಡೆಯುವುದೇ ಮರಾಠಾ ಹುತಾತ್ಮರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದ್ದಾರೆ. ಆ ಮೂಲಕ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮತ್ತೆ ಬೆಂಕಿ ಹೊತ್ತಿಕೊಳ್ಳುವಂತೆ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸ್ವಾಗತಿಸಿದ ಡಿಸಿಎಂ ಡಾ. ಅಶ್ವಥ್ ನಾರಾಯಣ!ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸ್ವಾಗತಿಸಿದ ಡಿಸಿಎಂ ಡಾ. ಅಶ್ವಥ್ ನಾರಾಯಣ!

ಆದರೆ ಮಹಾರಾಷ್ಟ್ರ ಹೀಗೆ ಗಡಿ ಕುರಿತು ಖ್ಯಾತೆ ತೆಗೆಯುತ್ತಿರುವುದು ಇದೇ ಮೊದಲಲ್ಲ. ಹಾಗೆ ಇದು ಕೊನೆಯೂ ಅಲ್ಲ ಎಂಬುದು ಕೂಡ ಸತ್ಯ. ವಾಣಿಜ್ಯ ನಗರಿ ಬೆಳಗಾವಿ ಮೇಲೆ ಕಣ್ಣಿಟ್ಟಿರುವ ಮಹಾರಾಷ್ಟ್ರ ಬೆಳಗಾವಿ ತಮಗೆ ಸೇರಿದಬೇಕು ಎಂಬ ತನ್ನ ಮೊಂಡು ವಾದವನ್ನು ಆಗಾಗ ಮಂಡಿಸುತ್ತಲೇ ಇದೆ. ಬೆಳಗಾವಿಯನ್ನು ತನ್ನ ವಶಕ್ಕೆ ಪಡೆಯಲು ಮಹಾರಾಷ್ಟ್ರ ಆಗಾಗ ಖ್ಯಾತೆ ತೆಗೆಯುತ್ತಲೇ ಇದೆ. ಈ ಗಡಿ ವಿವಾದ ಶುರುವಾಗಿದ್ದು ಯಾವಾಗ? ಮಹಾರಾಷ್ಟ್ರ ಎಷ್ಟು ಬಾರಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖಭಂಗ ಅನುಭವಿಸಿದೆ? ಎಲ್ಲದರ ಸಂಪೂರ್ಣ ಚಿತ್ರಣ ಇಲ್ಲಿದೆ.

Recommended Video

Special Report :Karnataka-Maharashtra ಗಡಿವಿವಾದ ಬೂದಿ ಮುಚ್ಚಿದ ಕೆಂಡ- ಇದು ಇಂದು ನಿನ್ನೆಯ ವಿವಾದವಲ್ಲ..!
ಗಡಿ ವಿವಾದದ ಆರಂಭ

ಗಡಿ ವಿವಾದದ ಆರಂಭ

ಬೆಳಗಾವಿ ನಗರ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಮೊಂಡು ವಾದವನ್ನು ಮಹಾರಾಷ್ಟ್ರ ಶುರು ಮಾಡಿದ್ದು 1948ರಲ್ಲಿ. ಆಗಿನ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಈಗಿನ ಕರ್ನಾಟಕದ ಜಿಲ್ಲೆಗಳಾದ ವಿಜಯಪುರ, ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿದ್ದವು. ಆಗ 1948 ರಲ್ಲಿ ಬೆಳಗಾವಿ ಪುರಸಭೆಯು ಮೊದಲ ಬಾರಿ ಬೆಳಗಾವಿ ಜಿಲ್ಲೆಯನ್ನು ಉದ್ದೇಶಿತ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಬೇಕೆಂದು ಠರಾವು ಮಾಡಿತ್ತಂತೆ.


ಆದರೆ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ಮರು ಸಂಘಟನೆ ಆದಾಗ ಬೆಳಗಾವಿ ಸೇರಿದಂತೆ ಮತ್ತು ಬಾಂಬೆ ಪ್ರೆಸಿಡೆನ್ಸಿಯ 10 ತಾಲ್ಲೂಕುಗಳು ಅಂದಿನ ಮೈಸೂರು ರಾಜ್ಯಕ್ಕೆ ಸೇರಿದವು. ಹೀಗಾಗಿ ತನ್ನ ಪ್ರಭಾವ ಬೀರುವ ಮೂಲಕ ಮಹಾರಾಷ್ಟ್ರ ರಾಜ್ಯ 1948ರಲ್ಲಿಯೇ ಮೊದಲ ಬಾರಿ ಖ್ಯಾತೆ ತೆಗೆದಿದೆ.

ಅಂದು ಎಂಇಎಸ್‌ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ, ಇಂದು ಉದ್ಧವ್ ಠಾಕ್ರೆ ಬಾಲ ಬಿಚ್ಚುತ್ತಿರಲಿಲ್ಲಅಂದು ಎಂಇಎಸ್‌ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ, ಇಂದು ಉದ್ಧವ್ ಠಾಕ್ರೆ ಬಾಲ ಬಿಚ್ಚುತ್ತಿರಲಿಲ್ಲ

ಕರ್ನಾಟಕದ ಏಕೀಕರಣ

ಕರ್ನಾಟಕದ ಏಕೀಕರಣ

ಸ್ವಾತಂತ್ರ್ಯ ಪೂರ್ವದಲ್ಲಿ ಆಂಧ್ರ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಹರಿದು ಹಂಚಿಹೋಗಿದ್ದ ರಾಜ್ಯದ ಭಾಗಗಳನ್ನು ಸೇರಿಸಿ 1956ರಲ್ಲಿ ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು. ಮುಂದೆ 1973 ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಇತಿಹಾಸ.


ಕನ್ನಡ ಮಾತಾಡುವ ಪ್ರದೇಶಗಳನ್ನೆಲ್ಲ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಬಾಂಬೆ ಪ್ರಸಿಡೆನ್ಸಿಯ ಕೆಲ ಪ್ರದೇಶಗಳೂ ಕರ್ನಾಟಕಕ್ಕೆ ಸೇರಿದವು. ಆದರೆ ಮೈಸೂರು ರಾಜ್ಯಕ್ಕೆ ಸೇರಬೇಕಾಗಿದ್ದ ಹೊಸೂರು, ಕೃಷ್ಣಗಿರಿ ತಮಿಳುನಾಡಿನಲ್ಲಿಯೇ ಉಳಿದವು. ಅನಂತಪುರ, ರಾಮದುರ್ಗ, ಅದೋಣಿ, ಮಂತ್ರಾಲಯಗಳು ಆಂಧ್ರದಲ್ಲಿ ಉಳಿದವು. ಕಾಸರಗೋಡು ಕೇರಳದ ಪಾಲಾಯಿತು. ಅಕ್ಕಲಕೋಟೆ, ಜತ್ತ, ಸೊಲ್ಲಾಪುರ, ಸಾಂಗ್ಲಿ ಮಹಾರಾಷ್ಟ್ರದಲ್ಲಿ ಉಳಿದವು. ಇದಷ್ಟೇ ಅಲ್ಲದೇ ಕರ್ನಾಟಕದ ಭಾಗವಾಗಿದ್ದ ಮತ್ತಷ್ಟು ಪ್ರದೇಶಗಳ ಮೇಲೆ ನೆರೆ ರಾಜ್ಯಗಳು ಹಕ್ಕು ಮಂಡಿಸತೊಡಗಿದವು. ಬೆಳಗಾವಿ ಜಿಲ್ಲೆ, ಬೀದರ್, ಕಾರವಾರ ಜಿಲ್ಲೆಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹಾಕಲಾರಂಭಿಸಿತು. ಅಲ್ಲಿಂದ ಬೆಳಗಾವಿ ಗಡಿ ವಿವಾದ ಆರಂಭವಾಯಿತು.

ಕರ್ನಾಟಕದ ಏಕೀಕರಣ ಹೋರಾಟ

ಕರ್ನಾಟಕದ ಏಕೀಕರಣ ಹೋರಾಟ

ಕರ್ನಾಟಕದ ಏಕೀಕರಣ ಹೋರಾಟಕ್ಕೆ ಮುನ್ನುಡಿಯಾಗುವಲ್ಲಿ ಮಹಾರಾಷ್ಟ್ರದ ಆಗಾಗ ತೆಗೆಯುತ್ತಿದ್ದ ಖ್ಯಾತೆ ಮೊದಲ ಕಾರಣ. ಯಾಕೆಂದರೆ 1956ಕ್ಕಿಂತ ಮೊದಲು ಲೋಕಸಭೆಯಲ್ಲಿ ಚಂದಗಡ ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳು ಕರ್ನಾಟಕ್ಕೆ ಸೇರಿದ್ದು ಎಂದು ಗೋಷಣೆ ಮಾಡಲಾಗಿತ್ತು. ನಮ್ಮ ಪ್ರದೇಶಗಳನ್ನು ಕಳೆದುಕೊಂಡಿದ್ದರೂ ಕರ್ನಾಟಕ ಶಾಂತಿಯುತವಾಗಿ ಸಮಸ್ಯೆ ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಮಹಾರಾಷ್ಟ್ರದ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಮಹಾರಾಷ್ಟ್ರ ಹಾಗೂ ಕರ್ನಾಟಕದ ತಲಾ ಇಬ್ಬರನ್ನೊಳಗೊಂಡ ಸಮಿತಿಯನ್ನು 1960ರ ಜೂನ್ 5 ರಂದು ರಚನೆ ಮಾಡಿತು.


ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮೇಹರ್ ಚಂದ್ ಮಹಾಜನ್ ಹಾಗೂ ಇತರೆ ಪರಿಣಿತರ ತಂಡ ಗಡಿ ಭಾಗದ ಅಧ್ಯಯನ ನಡೆಸಿ ಕನ್ನಡ ಭಾಷಿಕರು ಹೆಚ್ಚಿರುವ ಆಧಾರದಲ್ಲಿ ಬೆಳಗಾವಿಯು ಕರ್ನಾಟಕದಲ್ಲೇ ಉಳಿಯಬೇಕೆಂಬ ವರದಿ ನೀಡಿತು. ಆಗ ಎರಡನೇ ಬಾರಿ ಮಹಾರಾಷ್ಟ್ರಕ್ಕೆ ಮುಖಭಂಗವಾಗಿತ್ತು.

ನ್ಯಾ. ಮೆಹರ್‌ಚಂದ್ ಮಹಾಜನ್ ಸಮಿತಿ

ನ್ಯಾ. ಮೆಹರ್‌ಚಂದ್ ಮಹಾಜನ್ ಸಮಿತಿ

1960ರಲ್ಲಿ ನೇಮಕ ಮಾಡಿದ್ದ ನಾಲ್ಕು ಜನರ ಆಯೋಗ ನೀಡಿದ ವದರಿಯನ್ನು ಮಹಾರಾಷ್ಟ್ರ ಒಪ್ಪಲಿಲ್ಲ. ಕರ್ನಾಟಕದೊಂದಿಗಿನ ಗಡಿ ವಿವಾದ ಪರಿಹರಿಸಲು ಸ್ವತಂತ್ರ ಸಮಿತಿ ರಚಿಸುವಂತೆ ಮಹಾರಾಷ್ಟ್ರದ ಆಗಿನ ನಾಯಕ ಸೇನಾಪತಿ ಬಾಪಟ್ ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹೀಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1966 ಅಕ್ಟೋಬರ್‌ 25ರಂದು ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾ. ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದರು.

ಅದು ಮುಂದೆ ಮಹಾಜನ್ ಸಮಿತಿ ಎಂದು ಹೆಸರಾಯಿತು. ನ್ಯಾ. ಮಹಾಜನ್ ಸಮಿತಿಯಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ಮರಾಠಿ ಭಾಷಿಕರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಹೀಗಾಗಿ ಸಮಿತಿ ಸಮತೋಲನದಿಂದ ಕೂಡಿತ್ತು. ಆ ಸಮಿತಿ ಗಡಿಭಾಗದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಂಘ ಸಂಸ್ಥೆಗಳ, ಜನಸಾಮಾನ್ಯರ ಅಭಿಪ್ರಾಯವನ್ನು ಸಂಗ್ರಹಿಸಿದರು. ಒಟ್ಟು 2,240 ಮನವಿಗಳನ್ನು ಸ್ವೀಕರಿಸಿ ಸಮಗ್ರ ವರದಿಯನ್ನು ನ್ಯಾ. ಮಹಾಜನ್ ಸಮಿತಿ ಸರ್ಕಾರಕ್ಕೆ ಸಲ್ಲಿಸಿತು.

ಬೆಳಗಾವಿ ಕುರಿತು ಮಹತ್ವದ ಶಿಫಾರಸು

ಬೆಳಗಾವಿ ಕುರಿತು ಮಹತ್ವದ ಶಿಫಾರಸು

ನ್ಯಾ. ಮಹಾಜನ್‌ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಬೆಳಗಾವಿ ಕರ್ನಾಟಕ ರಾಜ್ಯದಲ್ಲಿಯೇ ಇರಬೇಕು ಎಂದು ಶಿಫಾರಸು ಮಾಡಲಾಗುತ್ತು. ಜೊತೆಗೆ ಜತ್ತ, ಅಕ್ಕಲಕೋಟೆ, ಸೊಲ್ಲಾಪುರ ಸೇರಿದಂತೆ ಒಟ್ಟು 247 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು. ನಂದಗಡ, ನಿಪ್ಪಾಣಿ, ಖಾನಾಪುರ ಸೇರಿದಂತೆ 264 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಶಿಫಾರಸು ಮಾಡಲಾಗಿತ್ತು.


ನ್ಯಾ. ಮಹಾಜನ್‌ ವರದಿಯನ್ನು ಕರ್ನಾಟಕ ಸ್ವೀಕರಿಸಿತು. ಆದರೆ 1951ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಟು ಮಹಾರಾಷ್ಟ್ರವು ವರದಿಯ ಶಿಫಾರಸ್ಸನ್ನು ತಿರಸ್ಕರಿಸಿತು. ಜತಗೆ ರಾಜ್ಯಗಳ ಮರುವಿಂಗಡಣಾ ಕಾಯಿದೆ. 1956ರನ್ನು ಶಿಫಾರಸುಗಳು ಉಲ್ಲಂಘಿಸಿವೆ ಎಂಬ ಕಾರಣ ನೀಡಿತು. ಬೆಳಗಾವಿಯಲ್ಲಿ ಶೇ.60ರಷ್ಟು ಜನ ಮರಾಠಿ ಭಾಷಿಕರಿದ್ದಾರೆ. ಹೀಗಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಕ್ಯಾತೆ ತೆಗೆಯಿತು. ಹೀಗಾಗಿ 1967ರಲ್ಲಿಯೇ ವರದಿ ಸಲ್ಲಿಕೆಯಾಗಿದ್ದರೂ ಇಂದಿಗೂ ಅದು ಜಾರಿಯಾಗಿಲ್ಲ. ನ್ಯಾ. ಮೇಹರ್‌ಚಂದ್ ಮಹಾಜನ್‌ ವರದಿ ಶಿಫಾರಸುಗಳನ್ನು ಅನುಷ್ಠಾನ ಮಾಡಬೇಕೆಂದು ಕರ್ನಾಟಕದ ಒತ್ತಾಯ ಹಾಗೆಯೇ ಇದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ

ಮಹಾರಾಷ್ಟ್ರ ಏಕೀಕರಣ ಸಮಿತಿ

ಮುಂದೆ ವರದಿ ನೀಡಿದ ನಾಲ್ಕೈದು ಆಯೋಗಗಳು ಕೂಡ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ತಿಳಿಸಿವೆ. ಗಡಿ ವಿಚಾರವನ್ನೇ ಪ್ರಮುಖವಾಗಿ ಇಟ್ಟುಕೊಂಡಿರುವ ಎಂಇಎಸ್ ಪುಂಡಾಟ ಮಾಡುತ್ತಲೇ ಮಹಾರಾಷ್ಟ್ರದಲ್ಲಿ ಒಂದು ಶಕ್ತಿಯಾಗಿ ಬೆಳೆದಿದೆ.

1983ರಲ್ಲಿ ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಂಇಎಸ್ ಸದಸ್ಯರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಬೇಡಿ ಇಟ್ಟಿದ್ದರು. 1986ರಲ್ಲಿ ಖಾನಾಪುರ ಸೇರಿದಂತೆ ಕೆಲವಡೆ ಎಂಇಎಸ್ ಪ್ರಾಬಲ್ಯವುಳ್ಳ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ವಿವಾದಿತ ಠರಾವನ್ನು ಅಂಗೀಕರಿಸಿದ್ದರು. ಎಂಇಎಸ್ ಸದಸ್ಯರ ನಿಲುವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಲು ಆರಂಭಿಸಿದವು. ಈ ಹೋರಾಟದ ಕಾವು 1990, 1996ರ ಅವಧಿಯಲ್ಲಿ ಉಗ್ರ ರೂಪ ಪಡೆಯಿತು. ಗಡಿ ವಿಚಾರವಾಗಿ ಆರಂಭವಾದ ಹಿಂಸಾಚಾರ 9 ಜನರನ್ನು ಬಲಿ ತೆಗೆದುಕೊಂಡಿತ್ತು.

ಮರಾಠಿ ಬದಲು ಕನ್ನಡ ಆಂದೋಲನ

ಮರಾಠಿ ಬದಲು ಕನ್ನಡ ಆಂದೋಲನ

ನಂತರದ ದಿನಗಳಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕನ್ನಡ ಚಳವಳಿಗಾರರ ಸಂಘ ಅಸ್ತಿತ್ವಕ್ಕೆ ಬಂದಿತು. ಬೆಳಗಾವಿ ನಗರದ ಎಲ್ಲ ಸರಕಾರಿ ಕಚೇರಿ ಹಾಗೂ ಅಂಗಡಿಗಳ ಮೇಲೆ ಮರಾಠಿ ಹೆಸರು ಬದಲು ಕನ್ನಡ ಹೆಸರನ್ನು ಬರೆಸಬೇಕು ಎಂದು ಈ ಸಂಘ ಸರಕಾರವನ್ನು ಆಗ್ರಹಿಸಿತು. ಅಲ್ಲದೇ ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರಿಗೂ ಮನವಿ ಸಲ್ಲಿಸಲಾಯಿತು. ಇದಕ್ಕೆ ರಾಜ್ಯ ಸರಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿತು. ಇದಕ್ಕೆ ಮರಾಠಿ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. ಹೀಗೆ ಗಡಿ ವಿಚಾರವಾಗಿ ಒಂದಲ್ಲಾ ಒಂದು ಘಟನೆಗೆ ಬೆಳಗಾವಿ ಸಾಕ್ಷಿಯಾಯಿತು. ನಂತರ ಈ ಪ್ರಕರಣ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

ಗಡಿ ತಂಟೆ ಪರಿಹಾರಕ್ಕೆ ನಡೆದ ಅಧ್ಯಯನಗಳು

ಗಡಿ ತಂಟೆ ಪರಿಹಾರಕ್ಕೆ ನಡೆದ ಅಧ್ಯಯನಗಳು

ಉಳಿದೆಲ್ಲ ರಾಜ್ಯಗಳ ಗಡಿ ವ್ಯಾಜ್ಯ ಒಂದಾದರೆ ಮಹಾರಾಷ್ಟ್ರದೊಂದಿಗಿನ ವ್ಯಾಜ್ಯ ಒಂದು ರೀತಿ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಈ 4 ಪ್ರತ್ಯೇಕ ಅಧ್ಯಯನಗಳು ನಡೆದಿವೆ. ಕಳೆದ 2000ದಲ್ಲಿ ಡಾ. ಡಿ.ಎಂ.ನಂಜುಂಡಪ್ಪ ಅವರು ಗಡಿನಾಡು ವರದಿ ಸಲ್ಲಿಸಿದ್ದರು. ನಂತರ ಅದೇ ವರ್ಷ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಗಡಿನಾಡು ಮಧ್ಯಂತರ ವರದಿಯನ್ನು ಸಲ್ಲಿಸಿದ್ದರು. ಮುಂದೆ 2002ರಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಗಡಿನಾಡು ಅಧ್ಯಯನ ವರದಿಯನ್ನು ಸಲ್ಲಿಸಿದ್ದರು. 2006ರಲ್ಲಿ ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಗಡಿ ಕನ್ನಡಿಗರ ಕಥೆ-ವ್ಯಥೆ ಎಂಬ ವರದಿ ಸಲ್ಲಿಸಿದ್ದರು. ಒಟ್ಟು ನಾಲ್ಕು ಪ್ರತ್ಯೇಕ ಅಧ್ಯಯನಗಳು ಗಡಿ ವಿವಾದದ ಕುರಿತು ನಡೆದಿವೆ.

ಸುಪ್ರೀಕೋರ್ಟ್ ಮೊರೆ ಹೋಗಿರುವ ಮಹಾರಾಷ್ಟ್ರ

ಸುಪ್ರೀಕೋರ್ಟ್ ಮೊರೆ ಹೋಗಿರುವ ಮಹಾರಾಷ್ಟ್ರ

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದ ಆರ್.ಎಂ. ಲೋಧಾ ಅವರು ಎರಡೂ ರಾಜ್ಯಗಳ ಗಡಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ಅಹವಾಲು ಕೇಳಲು ಹಾಗೂ ಜನರ ಅಭಿಪ್ರಾಯ ಪಡೆಯಲು, ಸರಕಾರಗಳ ಇರುವ ದಾಖಲೆ, ಸಾಕ್ಷ್ಯಗಳನ್ನು ಸಂಗ್ರಹಿಸಲು ನ್ಯಾ. ಮನೋಹರ್ ಸರೀನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿದ್ದರು.


ಸಾಕ್ಷ್ಯ ಸಂಗ್ರಹಿಸುವ ಆಯೋಗ ರಚಿಸಲು ಸಾಂವಿಧಾನಿಕವಾಗಿ ಅವಕಾಶವಿಲ್ಲ, ಆಯೋಗದ ರಚನೆಯೇ ಸಮಂಜಸವಲ್ಲ ಎಂದು ಪ್ರತಿಪಾದಿಸಿದ ಕರ್ನಾಟಕ ಸರಕಾರ ಸುಪ್ರೀಂಕೋರ್ಟ್‌ನ ಮುಂದೆ ಆಕ್ಷೇಪಣೆ ಸಲ್ಲಿಸಿತು. ಅಲ್ಲದೇ ಆಯೋಗದ ಮುಂದೆ ಅಹವಾಲು ಸಲ್ಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಒಂದು ವೇಳೆ ಆಯೋಗವು, ಸಂಸತ್ತಿನಲ್ಲಿಯೇ ಇದು ತೀರ್ಮಾನವಾಗಲಿ ಎಂದು ಹೇಳಿದಲ್ಲಿ ಕರ್ನಾಟಕ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆ ಕಾರಣದಿಂದಾಗಿ ಆಯೋಗದ ಮುಂದೆ ಸಾಕ್ಷ್ಯ ನುಡಿಯುವುದಿಲ್ಲ ಎಂಬುದು ಕರ್ನಾಟಕದ ನಿಲುವು.

ಸದ್ಯದ ಪರಿಸ್ಥಿತಿ

ಸದ್ಯದ ಪರಿಸ್ಥಿತಿ

ಬೆಳಗಾವಿ ಜತೆಗೆ ಅಚ್ಚ ಕನ್ನಡ ಮಾತಾಡುವ 814 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಹಸ್ತಾಂತರಿಸಬೇಕೆಂದು 2004ರಲ್ಲಿ ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅಂದು ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು, ಎಚ್.ಬಿ. ದಾತಾರ್ ಅವರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಿದ್ದರು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ದಾತಾರ್ ಅವರ ಸಮಿತಿ ಸಲಹೆ ನೀಡುತ್ತಿತ್ತು.

2009ರಲ್ಲಿ ದಾತಾರ್ ನಿಧನರಾದಾಗ ಅಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನ್ಯಾ. ವಿ.ಎಸ್. ಮಳೀಮಠ ಅವರಿಗೆ ಸಲಹಾ ಸಮಿತಿಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಎರಡು ತಿಂಗಳ ಬಳಿಕ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದ ರಾಮಕೃಷ್ಣ ಅವರನ್ನು ಸಲಹಾ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸರಕಾರ ನೇಮಿಸಿತ್ತು.

ಜೊತೆಗೆ 2001 ಹಾಗೂ 2011ರಲ್ಲಿ ಗಡಿ ಭಾಷೆಯ ಗಣತಿಯಲ್ಲಿಯೂ ಕೂಡ ಬೆಳಗಾವಿಯಲ್ಲಿ ಕನ್ನಡ ಮಾತನಾಡುವ ಜನರೆ ಹೆಚ್ಚಿಗೆ ಇದ್ದಾರೆ ಎಂಬುದು ಪತ್ತೆಯಾಗಿದೆ. ಬೆಳಗಾವಿಯ ಪ್ರದೇಶದ ಗಡಿ ಭಾಷಾ ಗಣತಿ ಪ್ರಕಾರ ಕೆಲವೇ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಕನ್ನಡಿಗರೇ ಹೆಚ್ಚಿಗೆ ವಾಸಿಸುವ ಜನರಿದ್ದಾರೆ ಎಂಬುದು ತಿಳಿದು ಬಂದಿದೆ.

English summary
What is Maharashtra-Karnataka border dispute over Belagavi all about? Explained in Kannada. Know here everything about Maharashtra-Karnataka border dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X