Oneindia explainer: ಜಲ್ಲಿಕಟ್ಟು ಏನು, ಎತ್ತ? ಸ್ವಾರಸ್ಯಕರ ಸಂಗತಿ!

By: ಎಚ್.ಸಿ.ಮಧುಸೂದನ್
Subscribe to Oneindia Kannada

ಬೆಂಗಳೂರು, ಜನವರಿ 19 : ತಮಿಳುನಾಡಿನಲ್ಲಿ ಎಲ್ಲೆಲ್ಲೂ ಪ್ರತಿಭಟನೆ. ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಲ್ಲಿಕಟ್ಟು ನಿಷೇಧ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಏನಿದು ಜಲ್ಲಿಕಟ್ಟು, ಏನಿದರ ವಿಶೇಷ ಎಂಬ ಬಗ್ಗೆ ಪ್ರಶ್ನೋತ್ತರ ಮಾದರಿಯಲ್ಲಿ ಆಸಕ್ತಿಕರ ಅಂಶಗಳು ಇಲ್ಲಿವೆ.

ಏನಿದು ಜಲ್ಲಿಕಟ್ಟು?
ತುಂಬ ಸರಳ ಹಾಗೂ ಸಲೀಸಾಗಿ ಅರ್ಥವಾಗುವಂತೆ ಹೇಳುವುದಾದರೆ-ಉತ್ತರ ತಳಿಯ ಹೋರಿಗಳನ್ನು ಗುರುತಿಸುವ ವಿಧಾನ ಅದು. ನಮ್ಮ ಪೂರ್ವಿಕರ ಅವೈಜ್ಞಾನಿಕ ವಿಧಾನ ನಮಗೆ ಅಥವಾಗುವುದು ಕಷ್ಟ. ಆದರೆ ಸಂಖ್ಯೆಗಳು ಅದರ ಮಹತ್ವವನ್ನು ಖಾತ್ರಿಪಡಿಸಿವೆ. ನಮ್ಮ ಹಿರಿಯರು ಕೃಷಿಗೆ ಸೂಕ್ತವಾದ ಭೂಮಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹಸು ಮತ್ತು ಕೋಳಿಯನ್ನು ಬಳಸುತ್ತಿದ್ದರು.[ಬೀರೂರು ಜಾನುವಾರು ಜಾತ್ರೆಯಲ್ಲಿ 1,34,400ಕ್ಕೆ ಜೋಡಿ ಕರು ಸೇಲ್!]

What is jallikattu, details and importance of jallikattu

ನೀವು ಈ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ಇಂಟರ್ ನೆಟ್ ನಲ್ಲಿ ಹುಡುಕಬಹುದು. ನಮ್ಮ ಸಂಪ್ರದಾಯದ ಹಿಂದೆ ವಿಜ್ಞಾನವಿದೆ. ಹೋರಿಗಳ ಗುಂಪೊಂದರ ಮೇಲೆ ಸಿಂಹಗಳು ದಾಳಿ ಮಾಡಿದಾಗ, ಎದುರುಬಿದ್ದು ಅವುಗಳಿಂದ ತಪ್ಪಿಸಿಕೊಳ್ಳುವುದೇ ತುಂಬ ತಾಕತ್ತಿನದಾಗುತ್ತದೆ. ಅದರ ತಳಿ ಉತ್ತಮವಾದದ್ದು ಎನಿಸಿಕೊಳ್ಳುತ್ತದೆ.[ಗ್ಯಾಲರಿ : ಜಲ್ಲಿಕಟ್ಟುಗಾಗಿ ಪ್ರತಿಭಟನೆ, ತಮಿಳರ ಅರ್ಭಟ]

ಅಂಥ ಸನ್ನಿವೇಶದ ಬದಲಾಗಿ ನಮ್ಮ ಸಂಸ್ಕೃತಿಯಲ್ಲಿ ನಡೆದು ಬಂದಿರುವುದು ಜಲ್ಲಿಕಟ್ಟು. ಹೋರಿಯ ಮೇಲೆ ಯಾವುದೇ ಆಯುಧ ಬಳಸದೆ, ಅವುಗಳನ್ನು ಕೊಲ್ಲಲು ಯತ್ನಿಸದೆ, ಜನರು ಅದು ಮುಂದಕ್ಕೆ ಹೋಗದಂತೆ ತಡೆಯುತ್ತಾರೆ ಅಷ್ಟೆ. ಯಾವುದು ಮುಂದೆ ಸಾಗಲು ವಿಫಲವಾಗುತ್ತದೋ ಅದರ ವಂಶವಾಹಿ ಮುಂದುವರಿಯಲು ಅರ್ಹವಲ್ಲ, ಅದು ದುರ್ಬಲ ಎಂದು ನಿರ್ಧರಿಸಲಾಗುತ್ತದೆ.[ಜಲ್ಲಿಕಟ್ಟು: ಸದ್ಯದಲ್ಲೇ ಸಿಹಿಸುದ್ದಿ ನಿರೀಕ್ಷಿಸಿ-ಪನ್ನೀರ್ ಸೆಲ್ವಂ]

What is jallikattu, details and importance of jallikattu

ಜಲ್ಲಿಕಟ್ಟು ನಿಷೇಧಿಸಿದರೆ ಏನಾಗುತ್ತದೆ?
ರೈತರು ಹಾಲಿಗಾಗಿ ಹಸುವನ್ನಷ್ಟೇ ಖರೀದಿಸುತ್ತಾರೆ. ಯಾವುದೇ ಆರ್ಥಿಕ ಲಾಭ ಇಲ್ಲವಾದ್ದರಿಂದ ಹೋರಿಯನ್ನು ಯಾಕೆ ಖರೀದಿ ಮಾಡ್ತಾರೆ, ಅದರಿಂದ ಏನು ಅನುಕೂಲ? ಅದಕ್ಕೆ ಮೂರು ಕಾರಣಗಳಿವೆ, ಹೆಚ್ಚಿನ ತಾಕತ್ತಿರುವ ಹೋರಿಗಳನ್ನು ಉಳುಮೆಗೆ ಬಳಸಬಹುದು. ಆದರೆ ಆ ಜಾಗವನ್ನು ಟ್ರ್ಯಾಕ್ಟರ್ ಆಕ್ರಮಿಸಿಕೊಂಡಿದೆ. ಇನ್ನು ಸಂಚಾರಕ್ಕೆ ಬಳಸಬಹುದು. ಆ ಜಾಗದಲ್ಲಿ ಮೋಟಾರ್ ಗಾಡಿಗಳು ಬಂದಿವೆ.

ಎತ್ತಿನ ಓಟ ಹಾಗೂ ಜಲ್ಲಿಕಟ್ಟು ಸ್ಪರ್ಧೆಗಳಿಗೆ ಬಳಸಬಹುದು. ಈಚೆಗೆ ಓಟದ ಸ್ಪರ್ಧೆಗಳು ಕಡಿಮೆಯಾಗಿವೆ. ಜಲ್ಲಿಕಟ್ಟು ಇನ್ನೂ ಚಾಲ್ತಿಯಲ್ಲಿದೆ. ಈ ಸ್ಪರ್ಧೆಯನ್ನು ತಮಿಳರು ನಂಬುತ್ತಾರೆ. ಉತ್ತಮ ತಳಿಯ ಹೋರಿಗಳನ್ನು ಗುರುತಿಸುವುದಕ್ಕೆ ಉತ್ತಮ ವಿಧಾನ ಎಂದು ಅವರು ಅನುಸರಿಸುತ್ತಾರೆ. ಆ ನಂತರ ಶಕ್ತಿಯುತವಾದ ಹೋರಿಗಳಿಂದ ಗರ್ಭಧಾರಣೆ ಮಾಡಿಸುತ್ತಾರೆ.[ಜಲ್ಲಿಕಟ್ಟು ದೀಪಾವಳಿಗಿಂತ ದೊಡ್ಡ ಹಬ್ಬ : ಶ್ರೀಶ್ರೀ ರವಿಶಂಕರ್ ಗುರೂಜಿ]

ಈ ವರೆಗೆ ರೈತರು ಹೋರಿಗಳನ್ನು ಸಾಕುವುದಕ್ಕೆ ಇದೇ ಮುಖ್ಯ ಕಾರಣ. ಒಂದು ವೇಳೆ ಜಲ್ಲಿಕಟ್ಟು ನಿಷೇಧ ಮಾಡಿದರೆ ಅವರೇಕೆ ಹೋರಿಯನ್ನು ಸಾಕ್ತಾರೆ? ಮಾಂಸ ರಫ್ತು ಮಾಡುವುದಕ್ಕಾ? ಒಂದು ಅಥವಾ ಎರಡು ಹೋರಿಗಳನ್ನು ಸಾಕುವುದರಿಂದ ಏನು ಪ್ರಯೋಜನ? ಕೆಲ ಕಂಪನಿಗಳು ಮಾತ್ರ ಗರ್ಭಧಾರಣೆ ಹಾಗೂ ಮಾಂಸ ರಫ್ತಿಗೆ ಹೋರಿಗಳನ್ನು ನಿರ್ದಿಷ್ಟ ವಾತಾವರಣದಲ್ಲಿ ಬೆಳೆಸುತ್ತವೆ. ಅದರಿಂದ ನಿಧಾನವಾಗಿ ಆ ತಳಿಯು ಶಕ್ತಿ ಕಳೆದುಕೊಳ್ಳುತ್ತದೆ ಮತ್ತು ಹಾಲು ಉತ್ಪಾದನೆಯ ಗುಣಮಟ್ಟದಲ್ಲೂ ರಾಜಿಯಾದಂತಾಗುತ್ತದೆ.

What is jallikattu, details and importance of jallikattu

ನಮ್ಮ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಹೋರಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ದನದ ಮಾಂಸ ರಫ್ತು ಮಾಡುವ ಅತಿ ದೊಡ್ಡ ದೇಶವಾಗಿದೆ ಭಾರತ. ಹೀಗೇ ಆದರೆ ಹಾಲು ಉತ್ಪಾದನೆಯಲ್ಲಿ ದೇಶ ಉನ್ನತ ಸ್ಥಾನವನ್ನು ಕಳೆದುಕೊಳ್ಳುತ್ತದೆ. ಹಾಲಿನ ಗುಣಮಟ್ಟ ಎ2ಯಿಂದ ಎ1 ಆಗುತ್ತದೆ. ಹಾಲಿನಲ್ಲಿ ಎ1 ಇದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಿಂದ ಮೂಳೆ ದುರ್ಬಲವಾಗುತ್ತದೆ. ಹಲವು ರೋಗಗಳು ಬರುತ್ತವೆ ಎಂಬುದನ್ನು ಅಮೆರಿಕ ದೇಶ ಖಾತ್ರಿಪಡಿಸಿದೆ.

ಈ ವಿಷಯ ಕಾರ್ಪೊರೇಟ್ ಕಂಪನಿಗಳಿಗೆ ಗೊತ್ತಿದೆ. ಆ ಕಾರಣಕ್ಕೆ ಬೇರಿನ ಮಟ್ಟದಲ್ಲೇ ನಮ್ಮನ್ನು ತಡೆದು ನಮ್ಮ ಆರ್ಥಿಕತೆಗೆ ನಿಧಾನ ವಿಷ ಉಣಿಸುತ್ತಿವೆ. ಇದು ತಮಿಳುನಾಡಿನ ಆರ್ಥಿಕತೆ ಮೇಲೆ ಮಾತ್ರವಲ್ಲ, ಇಡೀ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಭವಿಷ್ಯದಲ್ಲಿ ಪರಿಣಾಮ ಬೀರುತ್ತದೆ.

What is jallikattu, details and importance of jallikattu

ಜಲ್ಲಿಕಟ್ಟು ಕ್ರೀಡೆ ಹೋರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಎಂದು ವಾದಿಸುವ ಮೊದಲು, ಅದರ ಹಿಂದಿನ ರಾಜಕೀಯದ ಬಗ್ಗೆ ಆಲೋಚಿಸಬೇಕು. ಆರ್ ಜೆ ಬಾಲಾಜಿ ಹೇಳಿದ ಹಾಗೆ, ದೇವಸ್ಥಾನಗಳಲ್ಲಿ ಆನೆ ಇರುವುದಕ್ಕೆ ಯಾರ ತಕರಾರು ಇಲ್ಲ. ಒಂಟೆಗಳನ್ನು ಸಂಚಾರಕ್ಕೆ ಬಳಸಿದರೆ ಆಕ್ಷೇಪವಿಲ್ಲ. ಅಮಾಯಕ ಪ್ರಾಣಿಗಳನ್ನು ಕೊಲ್ಲುತ್ತಿದ್ದರೂ ಕೇಳೋರಿಲ್ಲ. ಜಲ್ಲಿಕಟ್ಟಿನಲ್ಲಿ ಯವ ಹೋರಿಗೂ ತೊಂದರೆಯಾಗಲ್ಲ. ಹಾಗೆ ನೋಡಿದರೆ ಜನರಿಗೆ ಗಾಯವಾಗುತ್ತೆ.ಬಸವ, ಗೋ ಮಾತೆ ಅಂತ ಪೂಜಿಸುವ ನಾವೇನೂ ಮೂರ್ಖರಲ್ಲ.[ಮೋದಿ-ಪನ್ನೀರ್ ಸೆಲ್ವಂ ಭೇಟಿ; ಜಲ್ಲಿಕಟ್ಟು ನಿಷೇಧ ವಾಪಸ್ಗೆ ಆಗ್ರಹ]

ಅವುಗಳಿಂದ ಈಗಲೂ ನಮ್ಮ ಜೀವನ ನಡೆಯುತ್ತಿದೆ. ನಾವು ಅವುಗಳ ಪೂಜೆ ಮಾಡೋದು, ಅವುಗಳಿಗಾಗಿ ಹಬ್ಬ ಮಾಡೋದು-ಇವೆಲ್ಲ ನಮಗೆ ಅವುಗಳ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತೆ. ಇಷ್ಟು ಸಾಕಲ್ಲವೇ ನಾವೇನೋ ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡ್ತೀವಿ ಎಂದು ವಾದ ಮಾಡುವವರ ಮಾತು ನಿಲ್ಲಿಸುವುದಕ್ಕೆ.

What is jallikattu, details and importance of jallikattu

ಈ ಎಲ್ಲ ಮಾಹಿತಿಗಳು ನನ್ನ ಅರಿವಿನ ವ್ಯಾಪ್ತಿಯಲ್ಲಿ, ಇಂಟರ್ ನೆಟ್ ಮೂಲಕ ದೊರೆತ ಮಾಹಿತಿಯಿಂದ ತಿಳಿದುಕೊಂಡಿದ್ದು. ಒಂದು ವೇಳೆ ನನ್ನದೇ ತಪ್ಪಿದ್ದಲ್ಲಿ, ನನ್ನ ಮಾತುಗಳ ಬಗ್ಗೆ ಆಕ್ಷೇಪವಿದ್ದಲ್ಲಿ ಆಧಾರಸಹಿತವಾದ ಚರ್ಚೆಗಳು ನಡೆಯಲಿ. ಕನಿಷ್ಠ ಪಕ್ಷ ಈ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ. ಕಿರಣ್ ಬೇಡಿ ಅವರ ಥರ ಕಣ್ಣಪಟ್ಟಿ ಕಟ್ಟಿಕೊಂಡು, ಟಿವಿ ನೋಡಿ, ತೀರ್ಪು ಕೊಡೋದು ಬೇಡ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jallikattu, a tradition sports in Tamilnadu at the time of Pongal. Supreme court bans this sport. There is a huge protest against ban. Here is an explainer article about Jallikattu by HC Madhusudan.
Please Wait while comments are loading...