ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪಾಸಿಟಿವ್ ಇದ್ದವರು ಏನು ಮಾಡಬಾರದು? ಇಲ್ಲಿದೆ ವೈದ್ಯರ ಸಲಹೆ

|
Google Oneindia Kannada News

ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ತೀವ್ರವಾಗಿ ಹರಿದಾಡುತ್ತಿದೆ. ಸತತವಾಗಿ ಸೋಂಕಿತರ ಸಂಖ್ಯೆ ಏರುತ್ತಿರುವುದು ಒಂದು ಕಡೆಯಾದರೆ, ನೋವಿನ ವಿಚಾರವೇನಂದರೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿರುವುದು.

ರಾಜಧಾನಿ ಬೆಂಗಳೂರಿನಿಂದ ರಾಜ್ಯದ ಇತರ ನಗರಗಳಿಗೂ ಕೊರೊನಾ ಹರಡುತ್ತಿರುವುದು ಚಿಂತಿಸಬೇಕಾದ ವಿಚಾರವಾಗಿದೆ. ಐಸಿಯು, ಬೆಡ್ ಸಮಸ್ಯೆ, ಅಂಬುಲೆನ್ಸ್ ಅಭಾವ ರಾಜ್ಯದ ಇತರ ಭಾಗಗಳಲ್ಲೂ ಆರಂಭವಾಗಿದೆ.

ಕೊರೊನಾ ನಾಗಾಲೋಟ: ಕೈಮುಗಿದು ನಿಮ್ಹಾನ್ಸ್ ವೈದ್ಯರ ಮನವಿಕೊರೊನಾ ನಾಗಾಲೋಟ: ಕೈಮುಗಿದು ನಿಮ್ಹಾನ್ಸ್ ವೈದ್ಯರ ಮನವಿ

ಕೊರೊನಾ ಪಾಸಿಟಿವ್ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಿಲ್ಲ ಎಂದು ವೈದ್ಯಲೋಕ ಹೇಳುತ್ತಿದ್ದರೂ, ಸೋಂಕಿತರು ಆಸ್ಪತ್ರೆ ಬಾಗಿಲು ಬಡಿಯುತ್ತಿದ್ದಾರೆ. ಹಾಗಾಗಿ, ಬೆಡ್ ಸಿಗಬೇಕಾದವರಿಗೆ ಬೆಡ್ ಸಿಗುತ್ತಿಲ್ಲ.

ಕೂರೊನಾ ಜ್ಯೋತಿಷ್ಯ ಭವಿಷ್ಯ: ಕೇವಲ 20 ದಿನ ಜಾಗ್ರತೆಯಿಂದ ಇರಿಕೂರೊನಾ ಜ್ಯೋತಿಷ್ಯ ಭವಿಷ್ಯ: ಕೇವಲ 20 ದಿನ ಜಾಗ್ರತೆಯಿಂದ ಇರಿ

ಇನ್ನು ಹೋಮ್ ಐಶೋಲೇಶನ್ ನಲ್ಲಿ ಇರುವವರು ಈ ಅವಧಿಯಲ್ಲಿ ಏನು ಮಾಡಬಾರದು ಎಂದು ರಾಜೂಸ್ ಹೆಲ್ತಿ ಇಂಡಿಯಾದ ವೈದ್ಯರಾದಂತಹ ಡಾ.ರಾಜು ಕೃಷ್ಣಮೂರ್ತಿಯವರು ವಿವರಿಸಿದ್ದಾರೆ. ಅದು ಹೀಗಿದೆ

 ಕೊರೊನಾ ಗುಣಲಕ್ಷಣಗಳು ಇದ್ದಾಗ ಏನು ಮಾಡಬಾರದು ಎನ್ನುವುದು ಕೂಡಾ ಅಷ್ಟೇ ಮುಖ್ಯ

ಕೊರೊನಾ ಗುಣಲಕ್ಷಣಗಳು ಇದ್ದಾಗ ಏನು ಮಾಡಬಾರದು ಎನ್ನುವುದು ಕೂಡಾ ಅಷ್ಟೇ ಮುಖ್ಯ

> ಕೊರೊನಾ ಗುಣಲಕ್ಷಣಗಳು ಇದ್ದಾಗ ಏನು ಮಾಡಬಾರದು ಎನ್ನುವುದು ಕೂಡಾ ಅಷ್ಟೇ ಮುಖ್ಯವಾಗುತ್ತದೆ. ಮನೆಯಲ್ಲಿ ಪಾಸಿಟಿವ್ ಯಾರಿಗಾದರೂ ಇದ್ದರೆ, ಮನೆಯಲ್ಲಿರುವ ಇತರರಿಗೆ ಗುಣಲಕ್ಷಗಳು ಏನೂ ಇಲ್ಲದಿದ್ದರೆ, ಮುಂಜಾಗ್ರತಾ ಕ್ರಮವೆಂದು ಯಾವ ಗುಳಿಗೆಯನ್ನೂ ತೆಗೆದುಕೊಳ್ಳಲು ಹೋಗಬೇಡಿ. ಇದರಿಂದ ವೀಕ್ನೆಸ್ ಬರುತ್ತದೆ.

> ತಲೆಭಾರ ಇದ್ದರೆ ಮಾತ್ರ ಸ್ಟೀಮ್ ತೆಗೆದುಕೊಳ್ಳಬೇಕು. ಕೆಮ್ಮು, ಕಫವಿದ್ದರೆ ಸ್ಟೀಮ್ ತೆಗೆದುಕೊಳ್ಳಲು ಹೋಗಬೇಡಿ. ಇದರಿಂದ ಕೆಮ್ಮು ಜಾಸ್ತಿ ಆಗಿ ಆಮ್ಲಜನಕದ ರೇಟ್ (saturation) ಕಮ್ಮಿಯಾಗುತ್ತದೆ.

> ಕೆಮ್ಮು ಇದ್ದಾಗ ಪ್ರಾಣಾಯಾಮ ಕೂಡಾ ಮಾಡಬಾರದು. ಇನ್ನು, ಈ ವೇಳೆಯಲ್ಲಿ ಬಾಯಾರಿಕೆ ಜಾಸ್ತಿಯಿರುತ್ತದೆ, ಬಿಸಿನೀರು ಕುಡಿದರೆ ಬಾಯಾರಿಕೆ ಹೋಗುವುದಿಲ್ಲ. ಹಾಗಾಗಿ, ತಣ್ಣೀರು (ಫ್ರಿಜ್ಡ್ ನೀರಲ್ಲ) ಕುಡಿಯಿರಿ.

 ನಿಂಬೆಹಣ್ಣು ರಸವನ್ನು ಮೂಗಿಗೆ ಹಾಕಿದರೆ, ಕೆಮ್ಮು ಜಾಸ್ತಿಯಾಗುತ್ತದೆ

ನಿಂಬೆಹಣ್ಣು ರಸವನ್ನು ಮೂಗಿಗೆ ಹಾಕಿದರೆ, ಕೆಮ್ಮು ಜಾಸ್ತಿಯಾಗುತ್ತದೆ

> ನಿಂಬೆಹಣ್ಣು ರಸವನ್ನು ಮೂಗಿಗೆ ಹಾಕಿದರೆ, ಕೆಮ್ಮು ಜಾಸ್ತಿಯಾಗುತ್ತದೆ. ಸಿಟಿ ಸ್ಕ್ಯಾನ್ ಮುಂತಾದವು ಅನಾವಶ್ಯಕ ಎನ್ನುವುದು ನನ್ನ ಅಭಿಪ್ರಾಯ.

> ಒಂದು ವೇಳೆ ಮನೆಯಲ್ಲಿ ಯಾರಿಗಾದರೂ ಕೊರೊನಾ ಗುಣಲಕ್ಷಣವಿದ್ದರೆ ಅದನ್ನು ಮುಚ್ಚಿಡಕ್ಕೆ ಹೋಗಬೇಡಿ ಮತ್ತು ಕಾಯೋಕೆ ಹೋಗದೆ ವೈದ್ಯರ ಬಳಿಗೆ ಹೋಗಿ.

> ಬಿಸಿನೀರು ಸ್ನಾನ ಮಾಡುವುದನ್ನು ಕಮ್ಮಿ ಮಾಡುವುದು ಒಳ್ಳೆಯದು. ಯಾಕೆಂದರೆ, ಹಬೆ ಹೆಚ್ಚಾಗಿ ಬರುವುದರಿಂದ ಆಮ್ಲಜನಕದ ರೇಟ್ ಕಮ್ಮಿಯಾಗುವ ಸಾಧ್ಯತೆಯಿದೆ.

 ಮನೆಯಲ್ಲಿ ಕೊರೊನಾ ಬಗ್ಗೆ ಹೆಚ್ಚು ಮಾತಾಡದೇ ಇರುವುದು ಒಳ್ಳೆಯದು

ಮನೆಯಲ್ಲಿ ಕೊರೊನಾ ಬಗ್ಗೆ ಹೆಚ್ಚು ಮಾತಾಡದೇ ಇರುವುದು ಒಳ್ಳೆಯದು

> ಬಾತ್ ರೂಂಗೆ ಹೋಗುವುದನ್ನೂ ಕಮ್ಮಿ ಮಾಡಿ, ಡೈಪರ್ ಅಥವಾ ಬೆಡ್ ಪ್ಯಾನ್ ಬಳಸಿದರೆ ಉತ್ತಮ.

> ಪಾಸಿಟಿವ್ ಇರುವವರ ಮೈಂಡ್ ಅನ್ನು ಬದಲಾಯಿಸಬೇಕು, ಕೊರೊನಾ ಬಗ್ಗೆ ಹೆಚ್ಚು ಮಾತಾಡದೇ ಇರುವುದು ಒಳ್ಳೆಯದು. ಆದಷ್ಟು ಬೆಡ್ ರೆಸ್ಟ್ ನಲ್ಲಿದ್ದು, ಹೆಚ್ಚು ಮಾತನಾಡಲು ಬಿಡಬೇಡಿ.

> ಮನೆಯಲ್ಲಿ ಮಾಸ್ಕ್ ಹಾಕಿಕೊಳ್ಳಲು ಹೋಗಬೇಡಿ.

Recommended Video

ಬೆಡ್ ಬ್ಲಾಕಿಂಗ್ ಒಂದೇ ಅಲ್ಲ ಇನ್ನೂ ಇವೆ ಹಲವಾರು ದಂಧೆಗಳು | Oneindia Kannada
ರೆಮ್‌ಡೆಸಿವಿರ್ ಲಸಿಕೆಯಿಂದ ಏನೂ ಪ್ರಯೋಜನವಿಲ್ಲ, ಅದರ ಬದಲು ವೈದ್ಯರು ಹೇಳುವುದನ್ನು ಪಾಲಿಸಿ

ರೆಮ್‌ಡೆಸಿವಿರ್ ಲಸಿಕೆಯಿಂದ ಏನೂ ಪ್ರಯೋಜನವಿಲ್ಲ, ಅದರ ಬದಲು ವೈದ್ಯರು ಹೇಳುವುದನ್ನು ಪಾಲಿಸಿ

> ಮನೆಯಲ್ಲಿ ಪಾಸಿಟಿವ್ ಕೇಸ್ ರೋಗಿ ಇದ್ದಾರೆಂದು ಮನೆಯನ್ನು ಸ್ಯಾನಿಟೈಸ್ ಮಾಡೋಕೆ ಹೋಗಬೇಡಿ, ಇದು ತುಂಬಾ ಡೇಂಜರ್.

> ರೋಗಿಯನ್ನು ಒಂದು ರೂಂನಲ್ಲಿ ಕೂಡಿಹಾಕುವ ಬದಲು, ಗಾಳಿ ಜಾಸ್ತಿ ಬರುವ ಜಾಗದಲ್ಲಿ ಕೂರಿಸಿದರೆ ಉತ್ತಮ.

>ರೆಮ್‌ಡೆಸಿವಿರ್ ಲಸಿಕೆಯಿಂದ ಏನೂ ಪ್ರಯೋಜನವಿಲ್ಲ, ಅದರ ಬದಲು ವೈದ್ಯರು ಹೇಳುವುದನ್ನು ಪಾಲಿಸಿಕೊಂಡು ಬನ್ನಿ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ, ನೆಗೆಟೀವ್ ಚಿಂತನೆ ಬಿಟ್ಟುಬಿಡಿ, ನಗುನಗುತ್ತಾ ಇರಿ, ಅಷ್ಟೇ ಸಾಕು.

English summary
What Corona Positive Patient Should Not Do, Important Tips From Dr. Raju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X