ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರಾವತಿ 'ಭೂಗರ್ಭ ಜಲವಿದ್ಯುತ್ ಯೋಜನೆ' ವಿರೋಧಿಸಲು ಕಾರಣಗಳೇನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24:ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆಯನ್ನು ಶರಾವತಿ ನದು ಉಳಿಸಿ ಹೋರಾಟ ಒಕ್ಕೂಟವು ವಿರೋಧಿಸುವುದಲ್ಲದೆ ಕಾರಣಗಳನ್ನು ಕೂಡ ತಿಳಿಸಿದೆ.

ಭೂಗರ್ಭ ಜಲವಿದ್ಯುತ್ ಯೋಜನೆಯೊಂದನ್ನು ಆರಂಭಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಸೆಪ್ಟೆಂಬರ್ 24ರಂದು ರಾಜ್ಯ ವನ್ಯಜೀವಿ ಮಂಡಳಿಯ 12ನೇ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಶರಾವತಿ ಸಿಂಗಳೀಕ ಅಭಯಾರಣ್ಯದ ಸುಮಾರು 900 ಎಕರೆ ಪ್ರದೇಶದಲ್ಲಿ 15 ನೆಲಕಿಂಡಿಗಳನ್ನು ಕೊರೆಯಲು ಅನುಮತಿ ಕೇಳಲಾಗಿತ್ತು.

Recommended Video

Jog Falls Top View in Monsoon Season, Shivamogga, Karnataka

ಶಿವಮೊಗ್ಗದ ಶರಾವತಿ ಒಡಲಲ್ಲಿ ಶೀಘ್ರ ಮತ್ತೊಂದು ಯೋಜನೆಶಿವಮೊಗ್ಗದ ಶರಾವತಿ ಒಡಲಲ್ಲಿ ಶೀಘ್ರ ಮತ್ತೊಂದು ಯೋಜನೆ

ಒಂದು ಬಾರಿ ವಿದ್ಯುತ್ ಉತ್ಪಾದನೆಯಾಗಿ ಗೇರುಸೊಪ್ಪ ಅಣೆಕಟ್ಟಿನಿಂದ ಶರಾವತಿ ನದಿಯ ಮೂಲಕ ಅರಬ್ಬಿ ಸಮುದ್ರ ಸೇರುವ ನೀರನ್ನು ಅಲ್ಲೇ ತಡೆಹಿಡಿದು ಮತ್ತೆ ತಲಕಳಲೆಯ ಸಂತುಲನ ಅಣೆಕಟ್ಟಿಗೆ ತಂದು ಸುರಿಯುವುದು, ಹೀಗೆ ಗುರುತ್ವಾಕರ್ಷಣ ಶಕ್ತಿಗೆ ವಿರುದ್ಧವಾಗಿ ಗೇರುಸೊಪ್ಪ ಅಣೆಕಟ್ಟಿನಿಂದ ತಲಕಳಲೆ ಅಣೆಕಟ್ಟಿಗೆ ನೀರನ್ನು ಮೇಲೆತ್ತುವ ಹಂತದಲ್ಲಿ ಆರು ಕಿ.ಮೀ ದೂರ ಬೃಹತ್ ಪಂಪ್‌ಗಳನ್ನು ಅಳವಡಿಸಲಾಗುವುದು.

ಹೀಗೆ 450 ಮೀಟರ್ ಎತ್ತರಕ್ಕೆ ನೀರೆತ್ತಲು ಗೇರುಸೊಪ್ಪದಲ್ಲಿ ಬೃಹತ್ ಪಂಪ್‌ಗಳನ್ನು ಅಳವಡಿಸಲಾಗುವುದು. ಒಟ್ಟಾರೆ 2 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಮತ್ತು ಇದಕ್ಕಾಗಿ 2500 ಮೆ.ವ್ಯಾ ವಿದ್ಯುತ್ ಅಗತ್ಯವಿದೆ ಎಂದು ತಮ್ಮ ವರದಿಯಲ್ಲೇ ಕೆಪಿಸಿಯವರು ಉಲ್ಲೇಖಿಸಿಕೊಂಡಿದ್ದಾರೆ ಎಂದು ಡಾ. ನಾ.ಡಿಸೋಜ ತಿಳಿಸಿದ್ದಾರೆ.

ಯೋಜನೆ ವಿರೊಧ ಏಕೆ?

ಯೋಜನೆ ವಿರೊಧ ಏಕೆ?

-ಭಾರತದ ಶೇ.4ರಷ್ಟು ಪ್ರದೇಶದಲ್ಲಿ ರಾಷ್ಟ್ರೀಯ ಅಭಯಾರಣ್ಯಗಳು ಹಾಗೂ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ.ಕರ್ನಾಟಕದ ಒಟ್ಟು ಭೌಗೋಳಿಕ ಪ್ರದೇಶದ ಶೇ. 6.5ರಷ್ಟು ಪ್ರದೇಶದಲ್ಲಿ ಇವುಗಳ ವ್ಯಾಪ್ತಿ ಇದ್ದು ಇದರಲ್ಲಿ ಅನೇಕ ಅಳಿವಿನಂಚಿನ ಪ್ರಬೇಧ ದೀರ್ಘಕಾಲದಲ್ಲಿ ಬದುಕುಳಿಯುವಲ್ಲಿ ಸಹಾಯ ಮಾಡುತ್ತವೆ.
-ಶರಾವತಿ ಸಿಂಗಳೀಕ ಅಭಯಾರಣ್ಯವು ಸಮಶೀತೋಷ್ಣ ನಿತ್ಯ ಹರಿದ್ವರ್ಣ ಪ್ರದೇಶದ ಮತ್ತು ಪಶ್ಚಿಮಘಟ್ಟಗಳಲ್ಲಿಯೇ ಒಂದು ಅತ್ಯಮೂಲ್ಯ ರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಪ್ರಪಂಚದಲ್ಲೇ ಎಂಟು ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಬೇರೆ ಬೇರೆ ಕಾರಣಕ್ಕಾಗಿ ತುಂಡಾಗುವ ಅರಣ್ಯ ಪ್ರದೇಶಗಳು ಜೀವವೈವಿಧ್ಯಕ್ಕೆ ಮಾರಕವಾಗುತ್ತದೆ. ಈ ಹಂತದಲ್ಲಿ ಶರಾವತಿ ಸಿಂಗಳೀಕ ಅಭಯಾರಣ್ಯವು ತನ್ನ ವ್ಯಾಪ್ತಿ ಮತ್ತು ಗಾತ್ರದಲ್ಲಿ ಅತ್ಯಂತ ಹೆಚ್ಚಿನ ಜೀವವೈವಿದ್ಯವನ್ನು ಪೊರೆಯುವ ತಾಣವಾಗಿದೆ.

ಜಗತ್ತಿನ ಜೀವವೈವಿದ್ಯದ ತೊಟ್ಟಿಲು

ಜಗತ್ತಿನ ಜೀವವೈವಿದ್ಯದ ತೊಟ್ಟಿಲು

-ಶರಾವತಿ ಕೊಳ್ಳ ಅಂದರೆ ಯೋಜಿತ ಭೂಗರ್ಭ ಜಲವಿದ್ಯುತ್ ಜಲವಿದ್ಯುತ್ ಯೋಜನೆಯ ಸ್ಥಳವು ಜೀವವೈವಿದ್ಯದ ತೊಟ್ಟಿಲಾಗಿದೆ. ಇಲ್ಲಿ ಅಡಗಿರುವ ಬಹಳಷ್ಟು ಪ್ರಬೇಧಗಳು ಇನ್ನು ಹೊರ ಪ್ರಪಂಚದ ಅರಿವಿಗೆ ಬಂದಿಲ್ಲ. ಮನುಷ್ಯ ಕಾಲಿಡದ ಜೀವವೈವಿಧ್ಯ ಅಬೇಧ್ಯ ಕೋಟಿಯಂತಿರುವ ಈ ಪ್ರದೇಶವು ಪಶ್ಚಿಮಘಟ್ಟಕ್ಕೆ ಮಾತ್ರ ಸೀಮಿತವಾಗಿರುವ ಸಿಂಹಬಾಲದ ಸಿಂಗಳಿಕ ಮತ್ತೊ ದೊಡ್ಡ ಮಂಗಟ್ಟೆ ಹಕ್ಕಿಯ ತವರಾಗಿದೆ.
-ವ್ಯಾಪ್‌ಕೋಸ್ ತಯಾರಿಸಿದ ಯೋಜನಾ ಪೂರ್ವ ವರದಿಯ ಪ್ರಕಾರ ಭೂಗರ್ಭ ಜಲವಿದ್ಯುತ್ ಯೋಜನೆಗೆ ಶರಾವತಿ ಸಿಂಗಳಿಕ ಅಭಯಾರಣ್ಯ ಅತಿಸೂಕ್ಷ್ಮ ಪ್ರದೇಶದ 150 ಹೆಕ್ಟೇರ್ ದಟ್ಟಾರಣ್ಯದ ಅವಶ್ಯಕತೆ ಇದೆ. ಇದಕ್ಕೆ ಒಂದೊಮ್ಮೆ ಅನುಮತಿ ಸಿಕ್ಕಿದರೆ , ಯೋಜನಾ ಜಾರಿ ಪೂರ್ವ ತಯಾರಿಯ ಹೆಸರಿನಲ್ಲಿ ಸಾವಿರಾರು ಸಾವಿರಾರು ಎಕರೆ ದಟ್ಟಾರಣ್ಯ ಮಣ್ಣಿನಡಿಯಾಗುತ್ತದೆ ಜೊತೆಗೆ ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಸಾಗಾಣಿಕೆಗಾಗಿ ಮತ್ತಷ್ಟು ಅರಣ್ಯ ನಾಶವಾಗುತ್ತದೆ.

ವಿನಾಶವಾಗುವ ಅರಣ್ಯ ಅನೇಕ ಅವಘಡಗಳಿಗೆ ಕಾರಣ

ವಿನಾಶವಾಗುವ ಅರಣ್ಯ ಅನೇಕ ಅವಘಡಗಳಿಗೆ ಕಾರಣ

-ಮರು ರಿಪೇರಿ ಮಾಡಲಾಗದಂತೆ ಶರಾವತಿ ಕಣಿವೆಯಲ್ಲಿ ವಿನಾಶವಾಗುವ ನೂರಾರು ಎಕರೆ ದಟ್ಟಾರಣ್ಯಗಳು ಮುಂದೆ ನಡೆಯುವ ಅನೇಕ ಅವಘಡಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಧಾರುಣ ಸಾಮರ್ಥ್ಯವನ್ನೇ ಕಳೆದುಕೊಳ್ಳುವ ಗುಡ್ಡಗಳು ಮಳೆಗಾಲದಲ್ಲಿ ಜಾರಿ ಶರಾವತಿ ನದಿಯ ಅಸ್ತಿತ್ವವನ್ನೇ ನುಂಗಿ ಹಾಕುತ್ತಿದೆ.
-ಸಾಮಾನ್ಯವಾಗಿ ಭೂಗರ್ಭ ಜಲವಿದ್ಯುತ್ ಯೋಜನೆ ಎಂದರೆ ನದಿಯ ಅಥವಾ ಅಣೆಕಟ್ಟಿನ ಕೆಳಭಾಗದಲ್ಲಿ ಹರಿದುಹೋಗುವ ಅಥವಾ ಸಂಗ್ರಹವಾಗುವ ನೀರನ್ನು ವಿದ್ಯುತ್ ಬೇಡಿಕೆ ಕಡಿಮೆ ಇರುವ ಟರ್ಬೈನ್ ಮೂಲಕ ಹರಿಸಿ ಮರು ವಿದ್ಯುತ್ ಉತ್ಪಾದಿಸಲಾಗುವುದು. ದುರದೃಷ್ಟಕರವೆಂದರೆ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಯಾವಾಗಲೂ ಹೆಚ್ಚಿನ ವಿದ್ಯುತ್ ಉತ್ಪಾದನೆಯೇ ಆಗಿರುವುದಿಲ್ಲ. ರೈತರಿಗೆ ನಿರಂತರ ವಿದ್ಯುತ್ ಇನ್ನೂ ಮರೀಚಿಕೆಯಾಗಿದೆ.

ವಿದ್ಯುತ್ ಬಲ್ಬ್ ಉಪಕರಣ ನವೀಕರಣ

ವಿದ್ಯುತ್ ಬಲ್ಬ್ ಉಪಕರಣ ನವೀಕರಣ

-ಜೀವವೈವಿಧ್ಯವನ್ನು ನಾಶ ಮಾಡದೇ ಅಥವಾ ಒಂದು ಮರವನ್ನು ಕಡಿಯದಂತೆ ಅಥವಾ ಅರಣ್ಯ ನಾಶವಾಗದಂತಹ ಹಲವು ಪರಿಹಾರ ಮಾರ್ಗೋಪಾಯಗಳಿವೆ. ಉದಾಹರಣೆಗೆ, ಈಗಿರುವ ಹಳೆಯ ,ಮಾದರಿಯ ವಿದ್ಯುತ್ ಬಲ್ಬ್ ಮತ್ತು ಉಪಕರಣಗಳನ್ನು ನವೀಕರಣಗೊಳಸಲಾಗುವುದು, ಹಾಲಿ ಇರುವ ಶೇ. 18ರಷ್ಟು ಸೋರಿಕೆಯನ್ನು ಕಡಿಮೆಗೊಳಿಸಿ ಕೇವಲ ಶೇ.8ರಷ್ಟು ಇಳಿಸುವುದು.
-ವನ್ಯಜೀವಿ ಸಂರಕ್ಷಣಾ ಕಾಯ್ದೆ(1972)ಯ ಪರಿಚ್ಛೇದ 29ರಂತೆ ವನ್ಯಜೀವಿಗಳಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸಲು ಮಾತ್ರ ಅವಕಾಶವಿರುತ್ತದೆ ಹೊರತು ವನ್ಯಜೀವಿಗಳಿಗೆ ಸಂಬಂಧವಿಲ್ಲದ ಈ ತರಹದ ಪರಿಸರ ವಿರೋಧಿ ಯೋಜನೆಗಳಿಗೆ ಅವಕಾಶವಿರುವುದಿಲ್ಲ ಎಂದಿದ್ದಾರೆ.

English summary
The Struggle Alliance has stated the reasons for the Sharavathi underground hydroelectric project in Sharavati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X