ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆ ಏರಿಕೆ ಬಿಸಿ ನಡುವೆ ಕರೆಂಟ್ ಶಾಕ್: ದರ ಏರಿಕೆಗೆ ಕಾರಣಗಳೇನು?

|
Google Oneindia Kannada News

ಬೆಂಗಳೂರು, ಏ.4: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೈರಾಣಾಗಿದ್ದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಕರೆಂಟ್ ಶಾಕ್ ಕೊಡಲಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್, ಅಡುಗೆ ಎಣ್ಣೆ ಹೀಗೆ ಅಗತ್ಯವಸ್ತುಗಳ ಮೇಲಿನ ಬೆಲೆ ಏರಿಕೆ ಗ್ರಾಹಕರ ಕೈ ಸುಡುತ್ತಿದೆ. ಹೀಗಿರುವಾಗ ವಿದ್ಯುತ್ ದರ ಕೂಡ ಹೆಚ್ಚಳ ಮಾಡಲಾಗಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಇದೀಗ ರಾಜ್ಯದ ಜನರಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರತಿ ಯೂನಿಟ್‌ಗೆ 5 ಪೈಸೆ ಏರಿಕೆ ಮಾಡಿದೆ. ಏಪ್ರಿಲ್ 1 ರಿಂದಲೇ ದರ ಏರಿಕೆ ಜಾರಿ ಮಾಡಿರೋದಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಚೆಸ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿ ಬಾರಿಯಂತೆ ಈ ವರ್ಷವೂ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಕಳೆದ ಬಾರಿ 1 ರೂಪಾಯಿ 39 ಪೈಸೆ ಹೆಚ್ಚಳಕ್ಕೆ ಪ್ರಸ್ತಾಪ ಇಡಲಾಗಿತ್ತು, KERC ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು ಕೇವಲ 30 ಪೈಸೆ ಮಾತ್ರ ಈ ಬಾರಿ ಪ್ರತಿ ಯೂನಿಟ್‌ಗೆ ಒಂದು ರೂಪಾಯಿ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ಆಧಾರದ ಮೇಲೆ ಬೆಲೆ ಏರಿಕೆ ಮಾಡಲಾಗಿದೆ.

Breaking; ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ, ಏ. 1ರಿಂದಲೇ ಜಾರಿ Breaking; ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ, ಏ. 1ರಿಂದಲೇ ಜಾರಿ

ರಾಜ್ಯದಲ್ಲಿ ವಿದ್ಯುಚ್ಛಕ್ತಿ ದರ ಏರಿಕೆ ಕಾರಣಗಳೇನು?

1.ರಾಜ್ಯದಲ್ಲಿ ವಿದ್ಯುಚ್ಛಕ್ತಿ ದರ ಏರಿಕೆಗೆ ಮೊದಲನೇ ಕಾರಣ 2022-2023ರಲ್ಲಿ ಉಂಟಾದ ಆದಾಯದ ಕೊರತೆ. 2022-2023ರ ಆರ್ಥಿಕ ವರ್ಷದಲ್ಲಿ ಆದಾಯ ಕೊರತೆಯ ಮೊತ್ತ ರೂ 2159.48 ಕೋಟಿಗಳನ್ನು ಮರುಪಡೆಯಲು ದರ ಹೆಚ್ಚಳ ಮಾಡಲಾಗಿದೆ. ಆರ್ಥಿಕ ವರ್ಷ 2020-21ರ ಕೊರತೆಯ ಮೊತ್ತ ರೂ. 1700.49 ಕೋಟಿಗಳಷ್ಟಾಗಿದೆ.

What Are the Reasons Behind Rise in Electricity Prices in Karnataka

2.ಆರ್ಥಿಕ ವರ್ಷ 2020-21ರ ಆಯವ್ಯವ ಲೆಕ್ಕ ಪತ್ರವನ್ನು ಪರಿಶೋಧಿಸಿದಾಗ, ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಕ್ರೋಢಿಕೃತ ಆದಾಯ ಕೊರತೆಯು ರೂ .3143.16 ಕೋಟಿಗಳಾಗಿರುತ್ತದೆ. ಆರ್ಥಿಕ ವರ್ಷ 22 ಮತ್ತು 23 ರಲ್ಲಿ ಮರುಪಡೆಯಲು ಅನುಮತಿಸಲಾದ ನಿಯಂತ್ರಿತ ಸ್ವತ್ತಿನ ಮೊತ್ತವನ್ನು ಕಡಿತಗೊಳಿಸಿದ ನಂತರ ಆರ್ಥಿಕ ವರ್ಷ 2020-21ರ ನಿವ್ವಳ ಕೊರತೆಯು ರೂ.1700.49 ಕೋಟಿಗಳಾಗಿರುತ್ತದೆ. ಸದರಿ ಮೊತ್ತವನ್ನು ಆರ್ಥಿಕ ವರ್ಷ 2022-23 ರ ವಾರ್ಷಿಕ ಕಂದಾಯ ಬೇಡಿಕೆ (ARR) ಯಲ್ಲಿ ಮರುಪಡೆಯಲು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

3.ಕೋವಿಡ್ -19 ಸಾಂಕ್ರಾಮಿಕ ರೋಗ ಹಾಗೂ ಇತರೆ ಕಾರಣಗಳಿಂದಾಗಿ ಆಯೋಗವು ಆರ್ಥಿಕ ವರ್ಷ 2021 ರ ದರ ಪರಿಷ್ಕರಣೆ ಆದೇಶವನ್ನು ದಿನಾಂಕ 04.11.2020 ರಂದು ಜಾರಿಗೊಳಿಸಿರುತ್ತದೆ. ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳದ ಹೊರೆಯನ್ನು ತಪ್ಪಿಸಲು ಆಯೋಗವು ರೂ. 1442.70 ಕೋಟಿಗಳ ನಿಯಂತ್ರಕ ಸ್ವತ್ತನ್ನು ರಚಿಸಿ, ಪರಿಷ್ಕೃತ ದರವನ್ನು ದಿನಾಂಕ 01.11.2020 ರಿಂದ ಅನ್ವಯಗೊಳಿಸಿರುತ್ತದೆ.

What Are the Reasons Behind Rise in Electricity Prices in Karnataka

4.ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ವರ್ಷ 2021 ರಲ್ಲಿ ವಿದ್ಯು ತ್ ಸರಬರಾಜು ಕಂಪನಿಗಳು ವಿದ್ಯುಚ್ಛಕ್ತಿಯ ಮಾರಾಟವು 7228.65MU ಗಳಷ್ಟು ಗಣನೀಯವಾಗಿ ಇಳಿಕೆ ಆಗಿರುತ್ತದೆ. ಇದರ ಪರಿಣಾಮವಾಗಿ ಅನ್ನಮೋದಿಸಿದ ಮತ್ತಕ್ಕಿಂತ ರೂ.6182.84 ಕೋಟಿಗಳಷ್ಟು ಆದಾಯದ ಕೊರತೆಯುಂಟಾಗಿರುತ್ತದೆ. ಆರ್ಥಿಕ ವರ್ಷ 2021ರಲ್ಲಿ ವಿದ್ಯುಚ್ಛಕ್ತಿ ಉಪಯೋಗಿಸಿದ್ದರೂ, ಶಾಖೋತ್ಪನ್ನ ಕೇಂದ್ರಗಳಿಗೆ ನಿಗದಿತ ಶುಲ್ಕ ಪಾವತಿಯಿಂದಾಗಿ ಸಹಾ ಪ್ರತಿಯೂನಿಟ್ ವಿದ್ಯುತ್ ಖರೀದಿ ವೆಚ್ಚವು 31 ಪೈಸೆಗಳಷ್ಟು ಹೆಚ್ಚಾಗಿದೆ.

5.ಆರ್ಥಿಕ ವರ್ಷ 21ರ ಆದಾಯ ಕೊರತೆಯು ಪ್ರತಿ ಯೂನಿಟ್ ಗೆ 27 ಪೈಸೆಯಷ್ಟು ದರ ಹೆಚ್ಚಳಕ್ಕೆ ಕಾರಣವಾಗಿರುತ್ತದೆ. ಆರ್ಥಿಕ ವರ್ಷ 2023ರಲ್ಲಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳ ವಿದ್ಯುತ್ ಖರೀದಿಯ ವೆಚ್ಚ, ಕಾರ್ಯ ಮತ್ತು ನಿರ್ವಹಣೆ ವೆಚ್ಚ ಹಾಗೂ ಪಡೆಯುವ ಸಾಲಗಳು ಉಳಿದ ಹೆಚ್ಚಳಕ್ಕೆ (ಪ್ರತಿಯೂನಿಟ್ಗೆ 8 ಪೈಸೆ) ಕಾರಣವಾಗಿರುತ್ತದೆ. ಸಮಾಜದ ಮೂಲಭೂತ ಅಗತ್ಯವಾಗಿರುವ ವಿದ್ಯು ತ್ ಪೂರೈಕೆಯ ವ್ಯವಹಾರವನ್ನು ವಿದ್ಯುತ್ ಸರಬರಾಜು ಕಂಪನಿಗಳು ಸುಲಲಿತವಾಗಿ ನಡೆಸಲು ಅನುವು ಮಾಡಿಕೊಡುವ ಸಲುವಾಗಿ, ವಿದ್ಯುತ್ ಪೂರೈಕೆ ದರದ ಹೆಚ್ಚಳ ಅನಿವಾರ್ಯವಾಗಿದೆ.

Recommended Video

Basavaraj Bommai ನಿವಾಸಕ್ಕೆ ಭೇಟಿ ನೀಡಿದ Smriti Irani | Oneindia Kannada

English summary
Electricity prices have risen amid rising prices of essential commodities in the state. What are the reasons for the increase in electricity tariff in Karnataka? Learn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X