ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರ ರಾಜೀನಾಮೆ ಅಂಗೀಕಾರ ಆಗುತ್ತದೆಯೋ? ಇಲ್ಲವೋ? ಸ್ಪೀಕರ್ ನಡೆ ಏನು?

|
Google Oneindia Kannada News

Recommended Video

ಶಾಸಕರ ರಾಜೀನಾಮೆ ಅಂಗೀಕಾರ ಆಗುತ್ತದೆಯೋ? ಇಲ್ಲವೋ? ಸ್ಪೀಕರ್ ನಡೆ ಏನು? | K. R. Ramesh Kumar

ಬೆಂಗಳೂರು, ಜುಲೈ 08: ಬರೋಬ್ಬರಿ 13 ಶಾಸಕರು ಈಗಾಗಲೇ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ, ಇಬ್ಬರು ಪಕ್ಷೇತರರು ತಮ್ಮ ಬೆಂಬಲ ವಾಪಸ್ ಪಡೆದಿದ್ದಾರೆ, ಸರ್ಕಾರ ಪತನದ ಹಾದಿ ಹಿಡಿದಂತೆ ಗೋಚರವಾಗುತ್ತಿದೆ, ಆದರೆ ಎಲ್ಲದಕ್ಕೂ ನಾಳೆ ಉತ್ತರ ಸಿಗಲಿದೆ.

ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕಿರುವ ಸ್ಪೀಕರ್ ರಮೇಶ್ ಕುಮಾರ್ ಅವರು ತಮಿಳುನಾಡಿನ ವೆಲ್ಲೂರಿಗೆ ತೆರಳಿದ್ದು, ನಾಳೆ ವಿಧಾನಸೌಧಕ್ಕೆ ಬರಲಿದ್ದಾರೆ. ಅವರು ಬಂದ ನಂತರ ಶಾಸಕರ ರಾಜೀನಾಮೆ ಪರಿಶೀಲನೆ ನಡೆಯಲಿದೆ.

ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಭವಿಷ್ಯಸ್ಪೀಕರ್ ರಮೇಶ್ ಕುಮಾರ್ ಕೈಲಿದೆ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಭವಿಷ್ಯ

ರಮೇಶ್ ಕುಮಾರ್ ಅವರು ಬಂದ ಕೂಡಲೇ ರಾಜೀನಾಮೆಯನ್ನು ಅಂಗೀಕರಿಸಿಬಿಡುತ್ತಾರೆ ಎಂದೇನೂ ಇಲ್ಲ. ನಿಯಮದ ಪ್ರಕಾರ ರಮೇಶ್ ಕುಮಾರ್ ಅವರು ಶಾಸಕರನ್ನು ರಾಜೀನಾಮೆಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಲಿದ್ದಾರೆ, ಮೊದಲು ರಾಜೀನಾಮೆ ಸಲ್ಲಿಸಿದ ಆನಂದ್ ಸಿಂಗ್‌ಗೆ ಇಂದು ನೊಟೀಸ್ ನೀಡಲಾಗಿದೆ.

ಶಾಸಕರು ರಾಜೀನಾಮೆಗೆ ಸಮಂಜಸವಾದ ಕಾರಣ ನೀಡಬೇಕಾಗುತ್ತದೆ. ರಮೇಶ್ ಕುಮಾರ್ ಅವರು ರಾಜೀನಾಮೆ ನೀಡಿರುವ ಶಾಸಕರನ್ನು ಕರೆದು ಕಾರಣ ಕೇಳುತ್ತಾರೆ, ಅಷ್ಟೆ ಅಲ್ಲದೆ, ತಮ್ಮ ನಿರ್ಣಯವನ್ನು ಪುನರ್‌ ಪರಿಶೀಲನೆ ಮಾಡಿಕೊಳ್ಳಲು ಸಮಯ ಸಹ ನೀಡುತ್ತಾರೆ.

ಶಾಸಕ ಸ್ಥಾನ ಅನರ್ಹಗೊಳಿಸುವ ಅಧಿಕಾರವಿದೆ

ಶಾಸಕ ಸ್ಥಾನ ಅನರ್ಹಗೊಳಿಸುವ ಅಧಿಕಾರವಿದೆ

ಪಕ್ಷಾಂತರ ಉದ್ದೇಶದಿಂದ ರಾಜೀನಾಮೆ ಅಥವಾ ಆಮೀಷ ಕಾರಣ ಎಂದು ಅಕಸ್ಮಾತ್ ಸ್ಪೀಕರ್‌ಗೆ ಮನದಟ್ಟಾದರೆ, ಶಾಸಕ ಸ್ಥಾನ ಅನರ್ಹಗೊಳಿಸುವ ಅಧಿಕಾರವೂ ಅವರಿಗೆ ಇದೆ, ತಮಿಳುನಾಡಿನಲ್ಲಿ ಹೀಗೆಯೇ ನಡೆದಿದೆ, ರಾಜೀನಾಮೆ ಸಲ್ಲಿಸಿದ್ದ 18 ಶಾಸಕರನ್ನು ಅನರ್ಹಗೊಳಿಸಿದ್ದರು ಅಲ್ಲಿನ ಸ್ಪೀಕರ್.

ಕಾಂಗ್ರೆಸ್ ನಾಯಕರಿಗೆ 24 ಗಂಟೆಯ ಗಡುವು ಕೊಟ್ಟ ಕುಮಾರಣ್ಣ! ಕಾಂಗ್ರೆಸ್ ನಾಯಕರಿಗೆ 24 ಗಂಟೆಯ ಗಡುವು ಕೊಟ್ಟ ಕುಮಾರಣ್ಣ!

ಎಲ್ಲ ಶಾಸಕರ ಭೇಟಿಗೆ ಕರೆಯಬಹುದು

ಎಲ್ಲ ಶಾಸಕರ ಭೇಟಿಗೆ ಕರೆಯಬಹುದು

ರಾಜೀನಾಮೆ ನೀಡಿರುವ ಎಲ್ಲ ಶಾಸಕರನ್ನೂ ಸ್ಪೀಕರ್ ಅವರು ನಾಳೆ ಭೇಟಿಗೆ ಕರೆಯಬಹುದು, ಕರೆದು ಮಾತನಾಡಿ, ದೂರುಗಳನ್ನು ಕೇಳಿ ರಾಜೀನಾಮೆ ನಿರ್ಧಾರ ಬದಲಿಸುವ ಮನವಿ ಮಾಡಬಹುದು, ಇದು ನಿಯಮವೂ ಹೌದು, ಆದರೆ ಶಾಸಕರು ಸ್ಪೀಕರ್ ಮನವಿಗೆ ಒಪ್ಪುವ ಸಾಧ್ಯತೆ ಅತ್ಯಂತ ಕಡಿಮೆ.

ರಾಜಕೀಯ ಬೆಳವಣಿಗೆ ಬಗ್ಗೆ ಸಿಎಂ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆರಾಜಕೀಯ ಬೆಳವಣಿಗೆ ಬಗ್ಗೆ ಸಿಎಂ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ

ರಾಜೀನಾಮೆ ನಿರಾಕರಿಸುವ ಸಾಧ್ಯತೆ ಇಲ್ಲ

ರಾಜೀನಾಮೆ ನಿರಾಕರಿಸುವ ಸಾಧ್ಯತೆ ಇಲ್ಲ

ರಾಜೀನಾಮೆ ಅಂಗೀಕಾರ ಮಾಡುವಲ್ಲಿ ಸ್ಪೀಕರ್ ಅವರು ತಡ ಮಾಡಬಹುದೇ ವಿನಃ ರಾಜೀನಾಮೆ ಸ್ವೀಕರಿಸದೇ ನಿರಾಕರಿಸುವ ಅವಕಾಶ ಅತ್ಯಂತ ಕಡಿಮೆ. ಜೊತೆಗೆ ನಾಳೆಯೇ ಎಲ್ಲ ಶಾಸಕರ ರಾಜೀನಾಮೆ ಅಂಗೀಕಾರವಾಗುವ ಸಾಧ್ಯತೆಯೂ ಕಡಿಮೆ ಇದೆ.

ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?

ನಿಯಮ ಪಾಲಿಸುತ್ತಾರೆ ರಮೇಶ್ ಕುಮಾರ್‌

ನಿಯಮ ಪಾಲಿಸುತ್ತಾರೆ ರಮೇಶ್ ಕುಮಾರ್‌

ಸ್ಪೀಕರ್ ರಮೇಶ್ ಕುಮಾರ್ ಅವರು, ನಿಯಮಗಳನ್ನು ಪಾಲಿಸುವಲ್ಲಿ, ಸ್ಪೀಕರ್ ಹುದ್ದೆಯಲ್ಲಿದ್ದಾಗ ಪಕ್ಷಪಾತವಿಲ್ಲದೆ ನಿರ್ಣಯಗಳನ್ನು ತೆಗೆದುಕೊಳ್ಳಲು ಗುರುತಿಸಿಕೊಂಡಿರುವವರು. ಸಂವಿಧಾನಬದ್ಧವಾಗಿ, ನಿಯಮದ ಅಡಿಯಲ್ಲಿ, ಜನಪರವಾಗಿ ರಮೇಶ್ ಕುಮಾರ್ ಅವರು ನಾಳೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ.

ಕರ್ನಾಟಕ ವಿಧಾನಸಭೆಯಲ್ಲಿ ನಂಬರ್ ಗೇಮ್, ಬಲಾಬಲ ಎಷ್ಟಿದೆ?ಕರ್ನಾಟಕ ವಿಧಾನಸಭೆಯಲ್ಲಿ ನಂಬರ್ ಗೇಮ್, ಬಲಾಬಲ ಎಷ್ಟಿದೆ?

English summary
What are the options in front of speaker Ramesh Kumar, Is he going to accept 13 MLAs resignation or he going to cancel the resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X