ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್: ಕರ್ನಾಟಕದ ನಿರೀಕ್ಷೆಯ ಹಳಿ ಮೇಲೆ ಜೇಟ್ಲಿ ರೈಲು ಓಡಿಸುವರೇ?

By Mahesh
|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಪೂರ್ಣ ಪ್ರಮಾಣದ ರೈಲ್ವೆ ಬಜೆಟ್ ನಲ್ಲಿ ಅಂದಿನ ರೈಲ್ವೆ ಸುರೇಶ್ 'ಪ್ರಭು' ದಯೆ ಕರ್ನಾಟಕಕ್ಕೆ ಸಿಕ್ಕಿರಲಿಲ್ಲ. ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ, ಸದಾನಂದ ಗೌಡ ಅವರು ಕೇಂದ್ರ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದಷ್ಟು ಕೊಡುಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಘೋಷಿಸಿದ್ದರು.

ಆದರೆ, ಕಳೆದ ಬಾರಿ ಹೊಸ ಮಾರ್ಗಗಳ ಘೋಷಣೆಗೆ ಕಡಿವಾಣ ಹಾಕಿಕೊಂಡ ಸಚಿವರು, ಹಳೆಯ ಯೋಜನೆಗಳ ಮುಕ್ತಾಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಿದ್ದರು.

ರೈಲ್ವೆ ಬಜೆಟ್‌ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?ರೈಲ್ವೆ ಬಜೆಟ್‌ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?

ಆದರೆ, ಈಗ ರೈಲ್ವೆ ಖಾತೆ ಇದ್ದರೂ, ಪ್ರತ್ಯೇಕ ರೈಲ್ವೆ ಬಜೆಟ್ ಪದ್ಧತಿ ಇಲ್ಲ. ಸುಮಾರು 92 ವರ್ಷಗಳ ಈ ವಿಧಾನಕ್ಕೆ ಅರುಣ್ ಜೇಟ್ಲಿ ಅವರು ತಿಲಾಂಜಲಿ ಹಾಕಿದ್ದಾರೆ. ಕೇಂದ್ರ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನವಾಗಿಬಿಟ್ಟಿದೆ.

ಈ ಬಾರಿಯೂ ಕೂಡಾ ಕನ್ನಡಿಗರು ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಾಲನೆಗೊಂಡಿರುವ ಸಬ್ ಅರ್ಬನ್, ನಮ್ಮ ಮೇಟ್ರೋ ಕಾರ್ಯಪ್ರಗತಿ ತ್ವರಿತಗತಿಯಲ್ಲಿ ಆಗಲಿ ಎಂದು ಬಯಸಿದ್ದಾರೆ.

ರೈಲ್ವೆ ಬಜೆಟ್ ಪ್ರಮುಖ ಅಂಶಗಳುರೈಲ್ವೆ ಬಜೆಟ್ ಪ್ರಮುಖ ಅಂಶಗಳು

ಪಕ್ಕದ ರಾಜ್ಯ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಭರ್ಜರಿ ಗಿಫ್ಟ್ ಸಿಕ್ಕರೆ ಅದರಲ್ಲಿ ಸ್ವಲ್ಪ ಪಾಲು ಗಡಿಭಾಗದ ಕರ್ನಾಟಕಕ್ಕೂ ಸಿಗಲಿದೆ ಎಂಬ ಪರೋಕ್ಷ ಕನಸು ಕಾಣುವ ಅಸಹಾಯಕ ಸ್ಥಿತಿ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ಮೇಲಿದೆ. ಕರ್ನಾಟಕದ ಈ ಬಾರಿಯ ಬೇಡಿಕೆಗಳನ್ನು ವಲಯವಾರು ರೀತಿಯಲ್ಲಿ ಮುಂದೆ ನೋಡಿ...

ಈ ಬಾರಿಯೂ ಕೂಡಾ ಕನ್ನಡಿಗರಿಗೆ ಹೆಚ್ಚಿನ ನಿರೀಕ್ಷೆ

ಈ ಬಾರಿಯೂ ಕೂಡಾ ಕನ್ನಡಿಗರಿಗೆ ಹೆಚ್ಚಿನ ನಿರೀಕ್ಷೆ

ಈ ಬಾರಿಯೂ ಕೂಡಾ ಕನ್ನಡಿಗರು ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಾಲನೆಗೊಂಡಿರುವ ಸಬ್ ಅರ್ಬನ್, ನಮ್ಮ ಮೇಟ್ರೋ ಕಾರ್ಯಪ್ರಗತಿ ತ್ವರಿತಗತಿಯಲ್ಲಿ ಆಗಲಿ ಎಂದು ಬಯಸಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಚುನಾವಣೆ ಇರುವುದರಿಂದ ಹೊಸ ರೈಲುಗಳ ಘೋಷಣೆ ನಿರೀಕ್ಷಿಸಬಹುದು. ಈ ಮೂಲಕ ಕರ್ನಾಟಕದ ಬಿಜೆಪಿಗೆ ಪ್ರಚಾರಕ್ಕೆ ದೊಡ್ಡ ಬಲ ನೀಡಿ, ಮತದಾರರನ್ನು ಸೆಳೆಯುವ ಸಾಧ್ಯತೆಯಿದೆ.

ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆ

ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆ

* ಬಾಗಲಕೋಟೆ-ಕುಡಚಿಗೆ ಹೊಸ ಮಾರ್ಗದ ನಿರೀಕ್ಷೆಯಿದೆ.
* ಬಳ್ಳಾರಿ-ಹೊಸಪೇಟೆ ಟು ಬೆಂಗಳೂರು ಇಂಟರ್‍ಸಿಟಿ ರೈಲು ಓಡಾಡಿದ್ರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
* ಗುಂತಕಲ್, ಬಿಜಾಪುರ-ಬಳ್ಳಾರಿ ಇಂಟರ್‍ಸಿಟಿ ರೈಲು ಹಾಗೇ ಬೀದರ್ ಗುಲ್ಬರ್ಗಾ ನಡುವೆ ರೈಲು ಮಾರ್ಗ ಬೇಕಿದೆ.
* ರಾಯಚೂರಿನಲ್ಲಿ ರೈಲು ವಿಭಾಗದ ಕಚೇರಿ ಸ್ಥಾಪನೆಯಾಗಲಿ ಅನ್ನೋ ಬೇಡಿಕೆ ಉತ್ತರ ಕರ್ನಾಟಕ ಭಾಗದ ಜನರಲ್ಲಿದೆ.
* ಬೆಳಗಾವಿಯಿಂದ ಬೆಂಗಳೂರಿನ ತನಕ ಯಾತ್ರಾ ಸ್ಥಳಗಳು, ಪ್ರವಾಸಿ ತಾಣ ಸಂಪರ್ಕಕ್ಕಾಗಿ ವಿಶೇಷ ರೈಲಿನ ಬೇಡಿಕೆಯಿದೆ.

ಮಲೆನಾಡು ಭಾಗದ ನಿರೀಕ್ಷೆ

ಮಲೆನಾಡು ಭಾಗದ ನಿರೀಕ್ಷೆ

* ಶಿವಮೊಗ್ಗ-ಹೊನ್ನಾವರ ಮಾರ್ಗ
* ಶಿವಮೊಗ್ಗ-ಹರಿಹರ ಮಾರ್ಗ ಸಮೀಕ್ಷೆ ನಂತರ ಕಾಮಗಾರಿ ಕುಂಠಿತ
* ಶಿವಮೊಗ್ಗ-ಬೆಂಗಳೂರಿಗೆ ಹೆಚ್ಚುವರಿ ರೈಲು, ಒಂದು ಏಕ್ಸ್ ಪ್ರೆಸ್ ಬೇಡಿಕೆ.
* ಶಿವಮೊಗ್ಗ-ಅರಸೀಕೆರೆ ಮಾರ್ಗ ಡಬ್ಲಿಂಗ್
* ಶಿವಮೊಗ್ಗ ಕಡೂರು ಚಿಕ್ಕಮಗಳೂರು ರೈಲು ಹಾಸನದವರೆಗೂ ವಿಸ್ತರಣೆ
* ಚಿಕ್ಕಮಗಳೂರು -ಯಶವಂತಪುರ ರೈಲು- ಬೆಂಗಳೂರು ನಿಲ್ದಾಣಕ್ಕೆ ವಿಸ್ತರಣೆ,
* ಚಿಕ್ಕಮಗಳೂರಿನಿಂದ ಸಕಲೇಶಪುರಕ್ಕೆ ರೈಲು ಮಾರ್ಗ ವಿಸ್ತರಣೆ.
* ತಲಶ್ಶೇರಿ-ಮೈಸೂರು ರೈಲು ಮಾರ್ಗಕ್ಕೆ ವಿರೋಧ, ಕೊಡಗಿನ ವೀರಾಜಪೇಟೆಯ ಅರಣ್ಯ ಭೂಮಿ ನಾಶದ ಭೀತಿ ಎದುರಾಗಿದೆ. ಹೀಗಾಗಿ ಬಜೆಟ್ ನಲ್ಲಿ ಈ ಯೋಜನೆ ಘೋಷಿಸದಂತೆ ಒತ್ತಡ.

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆ

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆ

* ಹೈದರಾಬಾದ್- ಚಿತ್ರದುರ್ಗ- ಮೈಸೂರು ರೈಲು ಬೇಡಿಕೆ.
* ಯಶವಂತಪುರ- ಜೋಧಪುರ ರೈಲು ಮಾರ್ಗವನ್ನು ಖಾಯಂಗೊಳಿಸಬೇಕು.
* ಚಿತ್ರದುರ್ಗ ರೈಲು ನಿಲ್ದಾಣವನ್ನು "ಡಿ" ದರ್ಜೆಯಿಂದ "ಬಿ" ದರ್ಜೆಗೆ ಏರಿಸಬೇಕು
* ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ಎಲ್ಲ ರೈಲುಗಳನ್ನು ಧಾರವಾಡ ಮೂಲಕ ಸಾಗಲಿ.
* ಚಿಕ್ಕಜಾಜೂರು ಜಂಕ್ಷನ್ ಗೆ ಹೆಚ್ಚಿನ ಅನುದಾನದ ಕೋರಿಕೆ.

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆ?

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆ?

* ಮೈಸೂರು-ದೆಹಲಿ ಸ್ವರ್ಣ ಜಯಂತಿ ಏಕ್ಸ್ ‍ಪ್ರೆಸ್ (ವಾರಕೊಮ್ಮೆ ಇರುವ ರೈಲು ವಾರಕ್ಕೆ 2 ಬಾರಿ ಬರಲಿ)
* ಬೆಂಗಳೂರು-ಮುಂಬೈ ಉದ್ಯಾನ್ ಏಕ್ಸ್ ಪ್ರೆಸ್ ಮೈಸೂರಿಗೆ ವಿಸ್ತರಣೆಯಾಗಲಿ
* ಮೈಸೂರಿನಿಂದ ವಾರಣಾಸಿಗೆ ಹೊಸ ರೈಲು ಓಡಾಡಬೇಕಿದೆ.
* ಹಾಸನ-ಬೆಂಗಳೂರು ರೈಲ್ವೆ ಮಾರ್ಗ ಶ್ರವಣ ಬೆಳೆಗೊಳ ಮಾರ್ಗದಿಂದ ಹೆಚ್ಚುವರಿ ರೈಲಿಗೆ ಬೇಡಿಕೆ.
* ಚನ್ನಪಟ್ಟಣ, ಹಾಸನ ರೇಲ್ವೆ ಗೇಟ್, ಸ್ಟೇಷನ್ ನವೀಕರಣ
* ಚಿಕ್ಕಬಳ್ಳಾಪುರದಿಂದ ಪುಟ್ಟಪರ್ತಿ, ಗೌರಿಬಿದನೂರಿಗೆ ನೂತನ ಮಾರ್ಗ.
* ಬೆಂಗಳೂರು-ಮಾರಿಕುಪ್ಪಂಗೆ ಹೆಚ್ಚುವರಿ ರೈಲು ಹಾಕಬೇಕು, ಪುಷ್ಪುಲ್​ ರೈಲಿನ ಬದಲಾಗಿ ಸ್ವರ್ಣ ರೈಲು ಓಡಿಸುವುದು ನಿಲ್ಲಿಸಲಿ, ರೈಲ್ವೆ ವೇಳಾಪಟ್ಟಿ ಬದಲಾಯಿಸಬಾರದು.
* ಬಂಗಾರಪೇಟೆ-ಬೆಂಗಳೂರಿಗೆ ಹೆಚ್ಚುವರಿ ರೈಲು ಓಡಾಡಬೇಕು

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ

* 16515/16 ಕಾರವಾರ- ಯಶವಂತಪುರ ಎಕ್ಸ್ ಪ್ರೆಸ್ ಪ್ರತಿದಿನ ಸಂಚಾರಕ್ಕೆ ಮನವಿ (ಸದ್ಯಕ್ಕೆ ವಾರಕ್ಕೆ ಮೂರಾವರ್ತಿ ಇದೆ)

* ಮಂಗಳೂರು- ಜಮ್ಮು ಥಾವಿ ನವ್ ಯುಗ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ

* ಮಂಗಳೂರು- ಹೌರಾ ವಿವೇಕ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ

* ಕಾರೈಕಲ್-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಯಾ TPJ

* ಕೊಯಮತ್ತೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ಪ್ರತಿದಿನ ವಯಾ ಯಶವಂತಪುರಮಂಗಳೂರು- ಹೌರಾ ವಯಾ ಮಡಗಾಂವ್- ಹುಬ್ಬಳ್ಳಿ
* ಕೊಯಮತ್ತೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ಪ್ರತಿದಿನ ವಯಾ ಯಶವಂತಪುರ
* ಡೀಸೆಲ್ ಲೋಕೋಮೋಟಿವ್ ಘಟಕ, ಮಂಗಳೂರು

ಮಂಗಳೂರು ಹಾಗೂ ಉತ್ತರ ಕರ್ನಾಟಕದಲ್ಲಿ ಬೇಡಿಕೆ ಹೆಚ್ಚು

ಮಂಗಳೂರು ಹಾಗೂ ಉತ್ತರ ಕರ್ನಾಟಕದಲ್ಲಿ ಬೇಡಿಕೆ ಹೆಚ್ಚು

* ಅಹಮದಾಬಾದ್- ಮಂಗಳೂರು ಸೆಂಟ್ರಲ್ (ರಜೆ ಸಮಯದ ರೈಲು ನಿರಂತರಗೊಳಿಸಲು ಮನವಿ)

* ವಾಸ್ಕೋ-ಮಂಗಳೂರು ಸೆಂಟ್ರಲ್ ಇಂಟರ್ ಸಿಟಿ
* ಹುಬ್ಬಳ್ಳಿ- ಮಂಗಳೂರು ಸೆಂಟ್ರಲ್ ( ವಯಾ ಹಾಸನ-ಅರಸೀಕೆರೆ) ರಾತ್ರಿ ಎಕ್ಸ್ ಪ್ರೆಸ್
* ಭಟ್ಕಳ-ಮಂಗಳೂರು ಸೆಂಟ್ರಲ್ ಡಿಎಂಯು
* ವಾಸ್ಕೋ-ಮಂಗಳೂರು- ತಿರುಪತಿ * ನವದೆಹಲಿ- ಸುಬ್ರಮಣ್ಯ ರಸ್ತೆ (ವಯಾ MAO-MAJN)

English summary
Union Finance Minister Arun Jaitley set to present the Budget for 2018-19 on Feb 01, 2018. which includes Railway Budget also. What will be the Karnataka's share in the budget. What are the expectations, Here are the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X