ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಷ್ಟಕ್ಕೂ ಸವಾರರು ಹೆಲ್ಮೆಟ್ ಯಾಕೆ ಧರಿಸಬೇಕು?

|
Google Oneindia Kannada News

ಬೆಂಗಳೂರು, ಜನವರಿ, 12: ಹೆಲ್ಮೆಟ್ ಬಗ್ಗೆ ಪರ-ವಿರೋಧಧ ಮಾತುಗಳು ಏನೇ ಇರಲಿ. ಹೆಲ್ಮೆಟ್ ಯಾಕೆ ಧರಿಸಬೇಕು? ಅದು ಮುಂಬದಿ ಸವಾರ ಇರಲಿ ಅಥವಾ ಹಿಂಬದಿ ಸವಾರ ಇರಲಿ.. ಹೆಲ್ಮೆಟ್ ಧರಿಸುವುದು ಎಲ್ಲ ರೀತಿಯಿಂದ ಒಳ್ಳೆಯದು.

ಹೆಲ್ಮೆಟ್ ಇಲ್ಲದೇ ತಲೆಗೆ ಪೆಟ್ಟು ಬಿದ್ದು ಅದೆಷ್ಟೋ ಜನರ ಜೀವನವೆ ಬಲಿಯಾಗಿದೆ. ರಸ್ತೆ ಗುಂಡಿಯಾಗಿದೆ, ಹಂಪ್ ಸರಿ ಇಲ್ಲ, ಸಿಗ್ನಲ್ ಸರಿ ಇಲ್ಲ ಎಂಬುದು ಒಪ್ಪಿಕೊಳ್ಳಬೇಕಾದ ಸಂಗತಿ ಆಗಿದ್ದರೂ ನಮ್ಮ ಸುರಕ್ಷತೆಗೆ ಹೆಲ್ಮೆಟ್ ಧರಿಸಿದರೆ ಯಾವ ನಷ್ಟವೂ ಇಲ್ಲ.[ಹೆಲ್ಮೆಟ್ ರೂಲಿಗೆ 'ಠೇಂಗಾ' ಅಂದ ಹಿಂಬದಿ ಸವಾರ!]

hemet

ಬೆಂಗಳೂರು ಸಾಗರ್ ಆಸ್ಪತ್ರೆಯ ವೈದ್ಯರು ಹೆಲ್ಮೆಟ್ ಯಾಕೆ ಹಾಕಿಕೊಳ್ಳಬೇಕು ಎಂಬುದರ ಬಗ್ಗೆ ಸಮಗ್ರ ವಿವರಣೆ ನೀಡುತ್ತಾರೆ. ನ್ಯೂರೊಸರ್ಜನ್ ಡಾ. ಮಧುಸೂದನ್, ಭವಾನಿ ಅನಂತ್ ಮತ್ತು ಡಾ. ಮೋಹನ್ ವಿವರಣೆ ನೀಡುತ್ತಾರೆ.[ಹೆಲ್ಮೆಟ್ ಕಡ್ಡಾಯ: ಬೆಂಗಳೂರಿಗರಿಗೆ ಜನವರಿ 20 ಅಂತಿಮ ಗಡುವು]

ಹೆಲ್ಮೆಟ್ ಯಾಕೆ ಧರಿಸಬೇಕು? ಎಂಬುದಕ್ಕೆ ಉತ್ತರ ಇಲ್ಲಿದೆ
* ಅಪಘಾತ ಸಂದರ್ಭ ಹೆಲ್ಮೆಟ್ ತಲೆಗೆ ಮತ್ತು ಮೆದುಳಿಗೆ ಗಂಭೀರ ಏಟಾಗುವುದನ್ನು ತಡೆಯುತ್ತದೆ.
* ತಲೆಬುರುಡೆ ಆಕಾರ ಕಳೆದುಕೊಳ್ಳುವುದನ್ನು ತಪ್ಪಿಸಬಹುದು.
* ಕಿವಿ ಮತ್ತು ಕಣ್ಣಿಗೂ ಸಂರಕ್ಷಣೆ ಒದಗಿಸುತ್ತದೆ.
* ಮೆದುಳಿಗೆ ಅಥವಾ ತಲೆಗೆ ಸಂಬಂಧಿಸಿದ ಚಿಕಿತ್ಸೆಗೆ ಅತಿ ಹೆಚ್ಚಿನ ವೆಚ್ಚ ತಗಲುತ್ತದೆ. ಇದೊಂದು ಮುಂಜಾಗೃತಾ ಕ್ರಮ ಅನುಸರಿಸಿದರೆ ಯಾರಿಗೂ ಸಮಸ್ಯೆ ಉಂಟಾಗಲ್ಲ.[ಹೆಲ್ಮೆಟ್ ಕಡ್ಡಾಯ: ಜನರ ಪ್ರಶ್ನೆಗೆ ಸರ್ಕಾರ ಏನು ಹೇಳುತ್ತೆ?]
* ಮೆದುಳು ಕಸಿ ಮಾಡುವ ವಿಧಾನ ಇನ್ನು ಕಂಡುಹಿಡಿದಿಲ್ಲ!
* ಹೆಲ್ಮೆಟ್ ಹಾಕಿದರೆ ಕೂದಲು ಉದುರುತ್ತದೆ ಎಂಬುದು ಸಮಸ್ಯೆಯೇ ಅಲ್ಲ. ಅದಕ್ಕೆ ಪರ್ಯಾಯ ಪರಿಹಾರ ಮಾರ್ಗ ಅನುಸರಿಸಬಹುದು.
* ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಸಂಬಂಧಿತ ಅಪಘಾತದಿಂದ ಪ್ರತಿನಿತ್ಯ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿದ್ದಾನೆ.
* ದ್ವಿಚಕ್ರ ವಾಹನದ ಅಪಘಾತದಿಂದ ಮರಣಿಸುವ ನಾಲ್ವರಲ್ಲಿ ಒಬ್ಬರು ಹಿಂಬದಿ ಸವಾರರಾಗಿರುತ್ತಾರೆ.
* ಪ್ರತಿವರ್ಷ 1.2 ಮಿಲಿಯನ್ ಜನರು ರಸ್ತೆ ಅಪಘಾತಗಳಲ್ಲಿ ಮರಣಿಸುತ್ತಾರೆ ಮತ್ತು ಲಕ್ಷಾಂತರ ಮಂದಿ ಗಾಯಗೊಳ್ಳುತ್ತಾರೆ ಮತ್ತು ವಿಕಲತೆ ಹೊಂದುತ್ತಾರೆ.
* ಬೆಂಗಳೂರಿನಲ್ಲಿ 41 ಲಕ್ಷ ದ್ವಿಚಕ್ರ ವಾಹನ ಸವಾರರಿದ್ದಾರೆ.
* 2015ರಲ್ಲಿ 17.7 ಲಕ್ಷ ಬೈಕರ್‍ಗಳಿಗೆ ಹೆಲ್ಮೆಟ್ ಧರಿಸದೇ ಇದ್ದುದಕ್ಕೆ ದಂಡ ವಿಧಿಸಲಾಗಿದೆ.

English summary
The State Government already said that Helmets mandatory for bike pillion riders. What are the advantages of wearing a helmet? Here is a list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X