ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಣ್ಯದಲ್ಲಿ ಗಣಿಗಾರಿಕೆ, ವಿದ್ಯುತ್ ಯೋಜನೆಗೆ ಬ್ರೇಕ್

By Mahesh
|
Google Oneindia Kannada News

ಬೆಂಗಳೂರು, ಅ.17: ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಚಾಚಿಕೊಂಡಿರುವ ಪಶ್ಚಿಮ ಘಟ್ಟದ 60 ಸಾವಿರ ಚದರ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಬೆಚ್ಚಿರುವ ಕೇರಳ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆದಿದೆ. ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡದೆ ತೆಪ್ಪಗಿದೆ.

ಗಣಿಗಾರಿಕೆ, ಕ್ವಾರಿ, ಉಷ್ಣ ವಿದ್ಯುತ್ ಯೋಜನೆಗಳು, ಮಾಲಿನ್ಯಕಾರಕ ಉದ್ದಿಮೆಗಳನ್ನು ಸ್ಥಾಪಿಸುವುದನ್ನು ನಿಷೇಧಿಸಲಾಗಿದೆ. ಇನ್ನು ಇತರ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾದರೆ ಆಯಾ ಗ್ರಾಮ ಪಂಚಾಯ್ತಿಗಳ ಅನುಮತಿ ಕಡ್ಡಾಯವಾಗಿರುತ್ತದೆ. ಕೇಂದ್ರ ಸರ್ಕಾರದ ಈ ನಿರ್ಣಯವು ಕರ್ನಾಟಕ ಪಶ್ಚಿಮ ಘಟ್ಟದ ಹಲವಾರು ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಘಟ್ಟದ ತಪ್ಪಲ್ಲಿನ ರಾಜ್ಯಗಳಲ್ಲಿ ರಾಜಕೀಯ ಲಾಭ, ಪರಿಸರ ಸಂರಕ್ಷಣೆ ನಡುವಿನ ತಿಕ್ಕಾಟ ಮತ್ತೆ ಅರಂಭಗೊಂಡಿದೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಯೋಜನಾ ಆಯೋಗದ ಸದಸ್ಯ ಕೆ. ಕಸ್ತೂರಿರಂಗನ್ ಮತ್ತು ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗಿಳ್ ಸಮಿತಿ ನೀಡಿರುವ ಎರಡು ಪ್ರತ್ಯೇಕ ವರದಿಗಳನ್ನು ಪರಿಗಣಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವೆ ಜಯಂತಿ ನಟರಾಜನ್ ಈ ನಿರ್ಧಾರ ಕೈಗೊಂಡಿದ್ದಾರೆ. ಇದರ ಅನುಸಾರ ಸುಮಾರು ಶೇ.37ರಷ್ಟು ಪಶ್ಚಿಮ ಘಟ್ಟ ಅರಣ್ಯವು ಸಂರಕ್ಷಿತ ವ್ಯಾಪ್ತಿಗೆ ಒಳಪಡಲಿದೆ.

Western Ghats report: Oommen Chandy seeks political consensus

ಕೇರಳದಲ್ಲಿ ಮಾಧವ ಗಾಡ್ಗಿಳ್ ಸಮಿತಿ ವರದಿ ಬಗ್ಗೆ ಒಲವಿದೆ. ಆದರೆ, ಇಡುಕ್ಕಿ ಹಾಗೂ ವಾಯನಾಡ್ ಪ್ರದೇಶಗಳಲ್ಲಿ ತಲೆತಲಾಂತರದಿಂದ ವಾಸಿಸುತ್ತಾ ಬಂದಿರುವ ಜನಾಂಗ ಈಗ ಊರು ಕೇರಿ ಬಿಟ್ಟು ಬೀದಿಗೆ ಬೀಳಬೇಕಾಗಿದೆ. ಇದನ್ನು ಖಂಡಿಸಿ ಎಡಪಕ್ಷಗಳು ಅಹೋರಾತ್ರಿ ಧರಣಿಗೆ ಮುಂದಾಗಿವೆ.

ಕ್ಯಾಥೋಲಿಕ್ ಚರ್ಚ್, ರೈತ ಸಂಘಟನೆಗಳು ಒಟ್ಟಾಗಿ ಮಾಧವ್ ಗಾಡ್ಗಿಳ್ ಹಾಗೂ ಕಸ್ತೂರಿರಂಗನ್ ವರದಿ ಅನುಷ್ಠಾನ ಮಾಡದಂತೆ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಕರ್ನಾಟಕದಲ್ಲಿ ಈ ಬಗ್ಗೆ ಇನ್ನೂ ಯಾವುದೇ ಸಂಘಟನೆಗಳಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಗುಂಡ್ಯದಲ್ಲಿನ 400 ಮೆಗಾವ್ಯಾಟ್ ಮತ್ತು ಕೇರಳದ ಅದಿರಪಿಲ್ಲಿ ಎಂಬಲ್ಲಿನ 400 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆ ಬಗ್ಗೆ ಹೊಸದಾಗಿ ಪ್ರತಿಕ್ರಿಯೆ ಬಯಸಿ ಕೇಂದ್ರ ಪರಿಸರ ಸಚಿವಾಲಯವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡುವ ಸಾಧ್ಯತೆಗಳಿವೆ. ಬಳಿಕ ಈ ಯೋಜನೆಗಳ ಹಣೆಬರಹ ನಿರ್ಧಾರವಾಗುವ ಸಾಧ್ಯತೆ ಇದೆ.

English summary
Concerned over the difficulties that implementation of the Kasturirangan report on protection of the Western Ghats would pose to Kerala, Chief Minister Oommen Chandy has called an all-party meet on October 21 to work out a political consensus on the issue. But, Karnataka government yet to act on this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X