ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂದಿ ಜ್ವರ ಆಯ್ತು ಈಗ ಎಲ್ಲೆಲ್ಲೂ ಕಾಗೆ ಜ್ವರದ ಆತಂಕ, ಕೇರಳದಲ್ಲಿ ಮೊದಲ ಬಲಿ

|
Google Oneindia Kannada News

ಬೆಂಗಳೂರು, ಮಾರ್ಚ್ 20: ಮಂಗನ ಕಾಯಿಲೆ, ಕೋಳಿ ಜ್ವರ, ಹಂದಿ ಜ್ವರದಿಂದ ಕರ್ನಾಟಕ ಸೇರಿ ದೇಶಾದ್ಯಂತ ಹಲವು ಮಂದಿ ಮೃತಪಟ್ಟಿದ್ದಾರೆ. ಇದೀಗ ಅದೇ ಮಾದರಿಯ ಕಾಗೆ ಜ್ವರ ಎನ್ನುವ ಹೊಸ ರೋಗ ಕಂಡುಬಂದಿದೆ.

ಈ ಜ್ವರಕ್ಕೆ ಕೇರಳದಲ್ಲಿ ಆರು ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ. ಇದು ಮಾರಣಾಂತಿಕ ರೋಗವೆನಿಸಿಕೊಂಡಿದೆ. ಕಾಗೆ ಸೇರಿದಂತೆ ಪಕ್ಷಿಗಳು ಹಾಗೂ ಸೊಳ್ಳೆಗಳಿಂದ ಹರಡುವ ಈ ಕಾಯಿಲೆಗೆ ಈಗ ಆತಂಕ ಸೃಷ್ಟಿಯಾಗಿದೆ.

ಮಲೆನಾಡಲ್ಲಿ ಮಂಗನ ಕಾಯಿಲೆ ಸವಾಲು: 43 ಮಂದಿಯಲ್ಲಿ ಸೋಂಕಿನ ಶಂಕೆ ಮಲೆನಾಡಲ್ಲಿ ಮಂಗನ ಕಾಯಿಲೆ ಸವಾಲು: 43 ಮಂದಿಯಲ್ಲಿ ಸೋಂಕಿನ ಶಂಕೆ

ವೆಸ್ಟ್ ನೈಲ್ ವೈರಸ್ ಎಂಬುದು ಫ್ಲೆವಿ ವೈರಸ್ ವರ್ಗಕ್ಕೆ ಸೇರಿದ ವೈರಸ್, ಈ ವೈರಸ್ ಸಾಮಾನ್ಯವಾಗಿ ಪಕ್ಷಿಗಳಲ್ಲಿ ಕಂಡು ಬರುತ್ತದೆ. ಈ ವೈರಾಣುಗಳು ಕಾಗೆ ಜಾತಿಗೆ ಸೇರಿದ ಪಕ್ಷಿಗಳಿಂದ ಹರಡುವುದರಿಂದ ಕಾಗೆ ಜ್ವರ ಎಂದೂ ಕರೆಯಲಾಗುತ್ತದೆ.

west nile fever high alert in Karnataka

ಈ ಸೋಂಕು ತಗುಲಿದ ವ್ಯಕ್ತಿಗೆ ಸೋಂಕು ನಿವಾರಣೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಸೋಂಕಿನಿಂದ ಉಂಟಾಗುವ ಜ್ವರ, ತಲೆನೋವು, ನರಗಳ ಊದಿಕೊಳ್ಳುವಿಕೆಯಂತಹ ಸಮಸ್ಯೆಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡು ಹತೋಟಿಗೆ ತರಬೇಕಾಗುತ್ತದೆ.

ಮಂಗನ ಕಾಯಿಲೆಯ ಮಾಹಿತಿ ವಿನಿಮಯಕ್ಕೆ ವಾಟ್ಸಪ್ ಗ್ರೂಪ್ ಮಂಗನ ಕಾಯಿಲೆಯ ಮಾಹಿತಿ ವಿನಿಮಯಕ್ಕೆ ವಾಟ್ಸಪ್ ಗ್ರೂಪ್

ಹೀಗಾಗಿ ರೋಗದ ಗುಣಲಕ್ಷಣಗಳು ಮೊದಲೇ ಗೊತ್ತಾದರೆ ಮಾತ್ರ ಬದುಕುಳಿಯುವ ಸಾಧ್ಯತೆ ಇರುತ್ತದೆ. 1937 ಉಗಾಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ವೆಸ್ಟ್ ನೈಲ್ ವೈರಾಣು 1999ರಿಂದ ಉತ್ತರ ಅಮೆರಿಕದಲ್ಲಿ ತೀವ್ರವಾಗಿ ಕಾಣಿಸಿಕೊಂಡಿತ್ತು. ಇಂತಹ ವೈರಾಣು ದಾಳಿಗೆ ದೇಶದಲ್ಲೇ ಮೊದಲ ಬಲಿಯಾಗಿದೆ.

English summary
west nile fever disease found in Kerala. state health department announced to take atmost precautions to prevent from disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X